ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ್, ಫೆ.1 (ಸುದ್ದಿ.) – ಸನಾತನ ಸಂಸ್ಥೆಯ ಕಕ್ಷೆಯನ್ನು ಹೊರಗಿನಿಂದ ಕಂಡ ನಂತರ ಈ ಕಕ್ಷೆಯನ್ನು ಒಮ್ಮೆಯಾದರೂ ನೋಡಬೇಕು ಎಂದು ನನ್ನ ಮನಸ್ಸಿಗೆ ಅನ್ನಿಸಿತು. ಅದರಂತೆ ನಾವೆಲ್ಲರೂ ಇಂದು ಪ್ರದರ್ಶನ ನೋಡಲು ಬಂದೆವು. ಬೆಳಿಗ್ಗೆಯಿಂದ ರಾತ್ರಿಯವರೆಗೆ ದಿನಚರಿ ಹೇಗಿರಬೇಕು? ಇದನ್ನು ಈ ಪ್ರದರ್ಶನದಲ್ಲಿ ಹೇಳಲಾಗಿದೆ. ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅನೇಕ ಸಾಧು-ಸಂತರನ್ನು ಭೇಟಿಯಾಗಿ ಅವರ ಮಾರ್ಗದರ್ಶನ ಪಡೆದರು. ಅವರೇ ಸ್ವತಃ ಗ್ರಂಥಗಳ ಸಂಕಲನ ಮಾಡಿದ್ದಾರೆ. ಅವರ ಗ್ರಂಥಗಳನ್ನು ಖಂಡಿತವಾಗಿಯೂ ಎಲ್ಲರೂ ಓದಬೇಕು, ಎಂದು ಇಲ್ಲಿನ ‘ಶ್ರೀದಿಗಂಬರ ವೇದ ವಿದ್ಯಾಲಯ’ದ ಅಧ್ಯಾಪಕರಾದ ಶ್ರೀ ವೇದಮೂರ್ತಿ ಶ್ರೀ ಮಹೇಶ ದುಬೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮಹೇಶ್ ದುಬೆ ಅವರು ಸೆಕ್ಟರ್ 9ರಲ್ಲಿರುವ ಸನಾತನ ಸಂಸ್ಥೆಯ ಪ್ರದರ್ಶನದ ಸಭಾಂಗಣಕ್ಕೆ ಭೇಟಿ ನೀಡಿದರು. ಶ್ರೀ ರಾಮ ಜನ್ಮಭೂಮಿ ನ್ಯಾಸದ ಖಜಾಂಚಿ ಸ್ವಾಮಿ ಗೋವಿಂದದೇವ ಗಿರಿ ಅವರ ಮಾರ್ಗದರ್ಶನದಲ್ಲಿ ‘ಶ್ರೀ ದಿಗಂಬರ ವೇದ ವಿದ್ಯಾಲಯ’ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಶ್ರೀ ದಿಗಂಬರ ವೇದ ವಿದ್ಯಾಲಯದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅವರಲ್ಲಿ ವಿದ್ಯಾರ್ಥಿಯೊಬ್ಬರು ತಮ್ಮ ಮನೋಗತ ವ್ಯಕ್ತಪಡಿಸುವಾಗ, ಹಿಂದೂ ಧರ್ಮ ಇದುವೇ ಏಕೈಕ ಧರ್ಮವಾಗಿದ್ದು ಉಳಿದೆಲ್ಲವೂ ಪಂಗಡಗಳು’, ಎಂದು ಹೇಳಿದರು. ಪ್ರತಿಯೊಬ್ಬರೂ ಧರ್ಮವನ್ನು ಪಾಲಿಸಬೇಕು. ಸನಾತನ ಸಂಸ್ಥೆ ಹಾಕಿರುವ ಪ್ರದರ್ಶನ ತುಂಬಾ ಸುಂದರವಾಗಿದೆ. ನಾನು ಅವರಿಗೆ ಆಭಾರಿಯಾಗಿದ್ದೇನೆ, ಎಂದರು.