ಹ್ಯೂಮಸ್ (ಫಲವತ್ತಾದ ಮಣ್ಣು)

ಸನಾತನದ ‘ಮನೆಮನೆಯಲ್ಲಿ ಕೈತೋಟದ’ ಅಭಿಯಾನ

ಸೌ. ರಾಘವಿ ಮಯೂರೇಶ

‘ಎಲೆಕಡ್ಡಿಗಳು, ಒಣಹುಲ್ಲು, ಸೊಪ್ಪು-ತರಕಾರಿಗಳ ಅವಶೇಷಗಳು, ಬೆಳೆಯ ಅವಶೇಷಗಳು, ಎರೆಹುಳ ಮತ್ತು ಕೀಟಗಳ ಮೃತಶರೀರ ಇಂತಹ ಘಟಕಗಳು ವಿವಿಧ ಜೀವಾಣುಗಳ ಸಹಾಯದಿಂದ ವಿಘಟನೆಯಾಗಿ ಕಪ್ಪು ಬಣ್ಣದ ಒಣ ‘ಫಲವತ್ತಾದ ಮಣ್ಣು’ ತಯಾರಾಗುತ್ತದೆ, ಅದನ್ನು ಆಂಗ್ಲ ಭಾಷೆಯಲ್ಲಿ ‘ಹ್ಯೂಮಸ್’ ಎನ್ನುತ್ತಾರೆ. ವಿವಿಧ ಪ್ರಕಾರದ ಅಸಂಖ್ಯಾತ ಸೂಕ್ಷ್ಮ ಜೀವಾಣುಗಳ ಮಾಧ್ಯಮದಿಂದ ನೈಸರ್ಗಿಕವಾಗಿ ಫಲವತ್ತಾದ ಮಣ್ಣು ತಯಾರಾಗುವ ಕಾರ್ಯವು ನಡೆದಿರುತ್ತದೆ. ಫಲವತ್ತಾದ ಮಣ್ಣು (ಹ್ಯೂಮಸ್) ಇದು ಗಿಡಗಳಿಗೆ ಅವಶ್ಯಕವಾಗಿರುವ ಎಲ್ಲ ಪ್ರಕಾರದ ಜೀವನದ್ರವ್ಯಗಳ ಪೂರೈಕೆ ಮಾಡುವ ಅಡಿಗೆ ಮನೆಯೇ ಆಗಿದೆ. ಒಳ್ಳೆಯ ವಿಧದ ಫಲವತ್ತಾದ (ಹ್ಯೂಮಸ್) ಮಣ್ಣು ತಯಾರಿಸಬೇಕಾದರೆ ನಿಯಮಿತವಾಗಿ ಆಚ್ಛಾದನೆ ಮಾಡುವುದು (ಒಣಗಿದ ಎಲೆಗಳಿಂದ ಗಿಡಗಳ ಸುತ್ತಮುತ್ತಲಿನ ಮಣ್ಣನ್ನು ಮುಚ್ಚುವುದು), ಜೀವಾಮೃತವನ್ನು ಬಳಸುವುದು ಮತ್ತು ದ್ವಿದಳ ಅಂತರಬೆಳೆ (ಸಹಾಯಕ ಬೆಳೆ) ಬೆಳೆಸುವುದು, ಈ ಮೂರು ಘಟಕಗಳು ಕೈಗೂಡುವುದು ಅವಶ್ಯಕವಾಗಿದೆ. ನೈಸರ್ಗಿಕ ಪದ್ಧತಿಯಿಂದ ಕೃಷಿ ಮಾಡುವಾಗ ಈ ಮೂರು ಘಟಕಗಳು ಸಿಗುತ್ತವೆ. ಇಲ್ಲಿ ಗಮನದಲ್ಲಿಡಬೇಕಾದ ಅಂಶವೆಂದರೆ, ಫಲವತ್ತಾದ ಮಣ್ಣಿನ ನಿರ್ಮಿತಿಯ ಪ್ರಕ್ರಿಯೆಯು ಪ್ರತ್ಯಕ್ಷವಾಗಿ ಕೈತೋಟದ ಸ್ಥಳದಲ್ಲಿ ಗಿಡಗಳ ಬೇರುಗಳ ಹತ್ತಿರ ಕಸಕಡ್ಡಿಗಳು, ಎಲೆಗಳು ಇತ್ಯಾದಿ ವಿಘಟನಾಶೀಲ ಪದಾರ್ಥಗಳು ಕೊಳೆತರೆ ಮಾತ್ರ ಆಗುತ್ತದೆ. ಈ ಪ್ರಕ್ರಿಯೆಯು ಕಸ ಕೊಳೆಯಿಸುವ ಡಬ್ಬಿಯಲ್ಲಿ ಅಥವಾ ತೆಗ್ಗಿನಲ್ಲಿ (ಕಂಪೋಸ್ಟ ಬಿನ್ನಿನಲ್ಲಿ) ಅಥವಾ ಗೊಬ್ಬರದ ಕಾರಖಾನೆಯಲ್ಲಿ ಆಗುವುದಿಲ್ಲ.’

– ಸೌ. ರಾಘವೀ ಮಯೂರೇಶ, ಢವಳಿ, ಫೋಂಡಾ, ಗೋವಾ. (೧೭.೯.೨೦೨೨)