ಭೂಮಿ ಜಿಹಾದ್‌ಗೆ ಬಲಿ

ಡಾ. ಕೃಷ್ಣಮೂರ್ತಿ ಸರಪಂಗಲಾ ಇವರ ಹತ್ಯೆಗೆ ಭೂಮಿ (‘ಲ್ಯಾಂಡ್’) ಜಿಹಾದ್ ಇದುವೇ ಮೂಲ ಕಾರಣವಾಗಿದೆ.

ಕಳೆದ ೩೦ ವರ್ಷಗಳಿಂದ ಕೇರಳದ ಕಾಸರಗೋಡ ಜಿಲ್ಲೆಯಲ್ಲಿ ದಂತಚಿಕಿತ್ಸಕರೆಂದು ವ್ಯವಸಾಯ ಮಾಡುವ ಡಾ. ಕೃಷ್ಣಮೂರ್ತಿ ಸರಪಂಗಲಾ (ವಯಸ್ಸು ೫೭ ವರ್ಷಗಳು) ಇವರನ್ನು ಇಸ್ಲಾಮ್‌ವಾದಿಗಳು ಕೊಲೆ ಮಾಡಿದರು. ಅವರ ಮೃತದೇಹ ಹತ್ತಿಯಂಗಡಿಯ ರೈಲ್ವೆಹಳಿಯ ಬಳಿ ಸಿಕ್ಕಿತು. ಅವರು ನಾಪತ್ತೆಯಾದ ಬಗ್ಗೆ ಅವರ ಪತ್ನಿಯವರು ದೂರು ಸಲ್ಲಿಸಿದ್ದರು. ಅನಂತರ ಪತ್ತೆ ಹಚ್ಚುವಾಗ ಮೇಲಿನ ಆಘಾತಕಾರಿ ಸತ್ಯ ಬಯಲಾಯಿತು. ಕೇವಲ ಅವರ ಹತ್ಯೆ ಮಾಡದೇ, ಅವರ ಮೃತದೇಹವನ್ನು ವಿಕೃತ ಮಾಡಲಾಗಿತ್ತು. ಅವರ ತಲೆಯನ್ನು ಜಜ್ಜಲಾಗಿತ್ತು. ಈ ಹತ್ಯೆ ಪ್ರಕರಣದಲ್ಲಿ ‘ಇಂಡಿಯನ್ ಯುನಿಯನ್ ಮುಸ್ಲಿಮ್ ಲೀಗ್’ನ ಕುಂಬದಾಜೆ ಪಂಚಾಯತದ ಕಾರ್ಯದರ್ಶಿ ಮತ್ತು ಅಡಿಕೆ ವ್ಯಾಪಾರಿ ಅಲಿ ಥುಪ್ಪಕಲ್ಲೂ, ಬದಿಯಡ್ಕ ಪಂಚಾಯತ ಪದಾಧಿಕಾರಿ ಮಹಮ್ಮದ ಹನಿಫ್, ಅಂದರೆ ಅನ್ವರ್, ಕುಂಬದಾಜೆ ನಿವಾಸಿ ಅಶ್ರಫ್, ಅಡ್ಯನಡ್ಕ ನಿವಾಸಿ ಮಹಮ್ಮದ ಶಿಯಾಬುದ್ದೀನ್ ಮತ್ತು ವಿದ್ಯಾಗಿರಿ ಮುನಿಯುರೂ ನಿವಾಸಿ ಉಮಾರುಲ್ ಫಾರುಕ್ ಇವರನ್ನು ಬಂಧಿಸಲಾಗಿದೆ. ಅಲಿ ಮತ್ತು ಅನ್ವರ ಇವರ ನೇತೃತ್ವದಲ್ಲಿ ಇವೆಲ್ಲ ಆರೋಪಿಗಳು ಸೇರಿ ಈ ಕೃತ್ಯವೆಸಗಿದ್ದಾರೆ. ಡಾ. ಕೃಷ್ಣಮೂರ್ತಿ ಸರಪಂಗಲಾ ಇವರ ಹತ್ಯೆಗೆ ಭೂಮಿ (‘ಲ್ಯಾಂಡ್’) ಜಿಹಾದ್ ಇದುವೇ ಮೂಲ ಕಾರಣವಾಗಿದೆ. ಅವರ ದಂತಚಿಕಿತ್ಸಾಲಯದ ವ್ಯವಸಾಯ ಬಹಳ ಉತ್ತಮವಾಗಿ ನಡೆಯುತ್ತಿತ್ತು. ಸಹಜವಾಗಿಯೇ ಇದರಿಂದ ಮತಾಂಧರ ಕಣ್ಣು ಕುಕ್ಕುತ್ತಿತ್ತು ! ಆದುದರಿಂದ ಮುಸ್ಲಿಮ್ ಲೀಗ್‌ನ ಕೆಲವು ಮುಖಂಡರು ಮತ್ತು ಇಸ್ಲಾಮ್‌ವಾದಿಗಳು ಅವರನ್ನು ಬೆದರಿಸಲಾರಂಭಿಸಿದರು. ಘಟನೆಯ ಇನ್ನೂ ಆಳಕ್ಕೆ ಹೋದಾಗ, ಆ ನಗರದಲ್ಲಿ ಮುಸಲ್ಮಾನರ ಒಂದು ಹೊಸ ದಂತಚಿಕಿತ್ಸಾಲಯವನ್ನು ಆರಂಭಿಸಲಾಗಿತ್ತು; ಆದರೆ ಡಾ. ಕೃಷ್ಣಮೂರ್ತಿಯವರು ಆ ಪರಿಸರದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರಿಂದ ಹೊಸ ದಂತಚಿಕಿತ್ಸಾಲಯಕ್ಕೆ ಅಷ್ಟು ಪ್ರಸಿದ್ಧಿ ಸಿಗುತ್ತಿರಲಿಲ್ಲ.

ಡಾ. ಕೃಷ್ಣಮೂರ್ತಿಯವರು ತಮ್ಮ ವ್ಯವಸಾಯವನ್ನು ನಿಲ್ಲಿಸಿದರೆ ಮಾತ್ರ, ಹೊಸ ದಂತಚಿಕಿತ್ಸಾಲಯ ಉತ್ತಮವಾಗಿ ನಡೆಯುವುದಿತ್ತು. ಇದು ಗಮನಕ್ಕೆ ಬಂದ ನಂತರ ಎಲ್ಲ ಮತಾಂಧರು ಡಾ. ಕೃಷ್ಣಮೂರ್ತಿಯವರನ್ನು ವಿರೋಧಿಸತೊಡಗಿದರು ಮತ್ತು ಕೊನೆಗೆ ಅವರ ಹತ್ಯೆ ಮಾಡಿದರು. ಇದೆಲ್ಲದರ ಮೂಲವು ಕಟ್ಟರ ಹಿಂದೂದ್ವೇಷವೇ ಆಗಿದೆ. ಈ ಹಿಂದೂದ್ವೇಷಕ್ಕಾಗಿಯೇ ಅವರು ಕೃಷ್ಣಮೂರ್ತಿಯವರಿಗೆ ಆಸ್ಪತ್ರೆಯನ್ನು ಮುಚ್ಚದಿದ್ದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುವುದು ಎಂದು ಬೆದರಿಕೆಯೊಡ್ಡಿದ್ದರು. ಅವರು ಇಷ್ಟಕ್ಕೇ ಸುಮ್ಮನಾಗದೇ, ೩೨ ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಅವರ ಮೇಲೆ ಆರೋಪ ಹೊರಿಸಿ ಅವರ ಹೆಸರನ್ನು ಕೆಡಿಸಲು ಪ್ರಯತ್ನಿಸಿದರು. ಲೈಂಗಿಕ ದುರ್ವರ್ತನೆಯ ಆರೋಪದಿಂದ ತಮ್ಮ ಮಾನವನ್ನು ಕಾಪಾಡಿಕೊಳ್ಳಲಾದರೂ ಅವರು ತಮ್ಮ ವ್ಯವಸಾಯವನ್ನು ನಿಲ್ಲಿಸಬಹುದು ಎಂದು ಮತಾಂಧರ ವಿಚಾರವಿತ್ತು. ತಮ್ಮ ಧರ್ಮ ಮತ್ತು ಧರ್ಮದ ವ್ಯಕ್ತಿಗಳ ಉತ್ಕರ್ಷಕ್ಕಾಗಿ ಮತಾಂಧರು ಯಾವ ಮಟ್ಟಕ್ಕೂ ಹೋಗಬಹುದು ಎಂಬುದನ್ನು ಹಿಂದೂಗಳು ಈ ಘಟನೆಯಿಂದ ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಸಕಾಲದಲ್ಲಿ ಜಾಗರೂಕರಾಗಿರಬೇಕು. ಕಳೆದ ೩೦ ವರ್ಷ ಖ್ಯಾತ ವೈದ್ಯರೆಂದು ವ್ಯವಸಾಯ ಮಾಡುವವರನ್ನು ಬೆದರಿಸುವ ಮತಾಂಧರ ಉದ್ಧಟತನ ಇದರಿಂದ ಬೆಳಕಿಗೆ ಬರುತ್ತದೆ. ಈಗ ಡಾ. ಕೃಷ್ಣಮೂರ್ತಿ ಇಲ್ಲದಿರುವುದರಿಂದ ಅಲ್ಲಿನ ಹೊಸ ದಂತಚಿಕಿತ್ಸಾಲಯಕ್ಕೆ ಪ್ರಚಾರ ಸಿಗಬಹುದು; ಆದರೆ ಇನ್ನು ಮುಂದೆ ಅಲ್ಲಿನ ಮತಾಂಧರ ಉದ್ಧಟತನ ಹೆಚ್ಚಾಗಿ ಅವರು ಇನ್ನಷ್ಟು ಹಿಂದೂಗಳ ವ್ಯಾಪಾರ-ವ್ಯವಸಾಯಗಳನ್ನು ಕಸಿದುಕೊಳ್ಳುವರು ಎಂಬುದು ಮಾತ್ರ ನಿಶ್ಚಿತ ! ಭಾರತದಲ್ಲಿನ ಅಲ್ಪಸಂಖ್ಯಾತರು ಬಹುಸಂಖ್ಯಾತ ಹಿಂದೂಗಳನ್ನು ಬೆದರಿಸುತ್ತಾರೆ, ಅವರನ್ನು ತಮ್ಮ ಊರಿನಿಂದ, ರಾಜ್ಯದಿಂದ ಹೊರಗೆ ಹಾಕುತ್ತಾರೆ, ಇದು ಭಾರತಕ್ಕೆ ತಲೆತಗ್ಗಿಸುವಂತಹ ವಿಷಯವಾಗಿದೆ. ಇದರಲ್ಲಿ ಪ್ರತಿ ಬಾರಿ ಹಿಂದೂಗಳೇ ಬಲಿಯಾಗುತ್ತಾರೆ ! ಇಂತಹ ಹೆಚ್ಚುತ್ತಿರುವ ಘಟನೆಗಳನ್ನು ನೋಡಿದಾಗ ಕೇಂದ್ರ ಸರಕಾರ ಯಾವಾಗ ಎಚ್ಚೆತ್ತುಕೊಳ್ಳುವುದು ? ಎಂದೆನಿಸುತ್ತದೆ.

ಕಾಶ್ಮೀರಿ ಹಿಂದೂಗಳ ಸ್ಥಳಾಂತರದ ಮರುಅನುಭವ !

ಯಾವ ರೀತಿ ಕಾಶ್ಮೀರಿ ಹಿಂದೂಗಳ ಸ್ಥಳಾಂತರವನ್ನು ಮಾಡಲಾಯಿತೋ, ಅದೇ ರೀತಿಯ ಘಟನೆಗಳು ಇಂದು ದೇಶದಲ್ಲಿ ಎಲ್ಲೆಡೆ ಘಟಿಸುತ್ತಿವೆ. ಡಾ. ಕೃಷ್ಣಮೂರ್ತಿಯವರ ಉದಾಹರಣೆಯೂ ಇದರದ್ದೇ ಅನುಭವವಾಗಿದೆ. ಯಾವುದು ೧೯೯೦ ರಲ್ಲಿ ಕಾಶ್ಮೀರದಲ್ಲಿ ಘಟಿಸಿತೋ, ಅದು ಭಾರತದ ಇತರ ರಾಜ್ಯಗಳಲ್ಲಿ ಘಟಿಸಲು ಸಮಯ ತಗಲಾರದು. ನಾವು ಅದರ ದಾರಿ ಕಾಯುತ್ತಾ ಕುಳಿತುಕೊಳ್ಳಬೇಕೇ ? ಇಂದು ಕೇರಳದಲ್ಲಿ ಘಟಿಸಿದ ಪ್ರಕರಣವನ್ನು ನೋಡಿ, ಅಲ್ಲಿನ ಇತರ ಹಿಂದೂ ಆಧುನಿಕ ವೈದ್ಯರಿಗೆ, ನಮಗೂ ಇಲ್ಲಿಂದ ಕಾಲ್ಕೀಳಬೇಕಾಗಬಹುದೋ ಏನೋ ?

ಹಾಗೆ ಮಾಡದಿದ್ದರೆ ನಾವು ಸಹ ಡಾ.ಕೃಷ್ಣಮೂರ್ತಿಯವರಂತೆ ಜಿಹಾದಿಗಳಿಗೆ ಗುರಿಯಾಗಬೇಕಾಗುವುದು ಎಂಬ ವಿಚಾರದಿಂದ ಭಯಭೀತರಾಗಿರಬಹುದು. ಇನ್ನೆಷ್ಟು ಕಾಲ ಹಿಂದೂಗಳು ಮತಾಂಧರ ಭೂಮಿ ಜಿಹಾದ್‌ಗೆ ಬಲಿಯಾಗಬೇಕು ? ಈಗ ‘ವಕ್ಫ್ ಬೋರ್ಡ್’ ಸಹ ಇದರಲ್ಲಿ ಧುಮುಕಿದೆ. ಇದರಿಂದ ಹಿಂದೂಗಳ ಭೂಮಿಯ ಮೇಲೆ ಅಧಿಕಾರ ಮತ್ತು ವರ್ಚಸ್ಸನ್ನು ನಿರ್ಮಿಸುತ್ತಾ ಮತಾಂಧರು ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಕಬಳಿಸುತ್ತಿದ್ದಾರೆ. ಇದು ಭಾರತೀಯರಿಗೆ ಅಪಾಯಕಾರಿಯಲ್ಲವೇ ? ಆದರೆ ಯಾರು ಕಾಳಜಿ ಮಾಡುತ್ತಾರೆ ? ‘ನಾನು ಮತ್ತು ನನ್ನ ಕುಟುಂಬ’ ಎಂಬ ಸಂಕುಚಿತ ಮಾನಸಿಕತೆಯ ನಿದ್ರೆಯಲ್ಲಿರುವ ಹಿಂದೂಗಳೇ ದೇಶದ ಈ ಸ್ಥಿತಿಗೆ ಕಾರಣರಾಗಿದ್ದಾರೆ. ೩೦ ವರ್ಷಗಳ ವರೆಗೆ ಯಾವುದಾದರೊಂದು ಸ್ಥಳದಲ್ಲಿ ದಂತಚಿಕಿತ್ಸಕರೆಂದು ವ್ಯವಸಾಯ ಮಾಡುವ ವೈದ್ಯರಿಗೆ ಸ್ಥಳೀಯ ಹಿಂದೂಗಳು ಸಹ ಬೆಂಬಲ ನೀಡಲಿಲ್ಲ. ಹಿಂದೂಗಳ ಸಂಘಟನೆಗಳು ನಿಷ್ಕ್ರಿಯ ವಾಗಿರುವುದರಿಂದ ಅದರ ದುರ್ಲಾಭವನ್ನು ಮತಾಂಧರು ಪಡೆದರೆಂದು ಇಲ್ಲಿ ಹೇಳಬಹುದು. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಎಲ್ಲ ವ್ಯವಹಾರಗಳನ್ನು ಮತ್ತು ವ್ಯಾಪಾರಗಳನ್ನು ಹಿಂದೂಗಳೇ ಮಾಡುತ್ತಿದ್ದರು. ಈಗ ಅವರ ಜಾಗವನ್ನು ಪರರಾಜ್ಯದವರು  ತೆಗೆದುಕೊಂಡಿದ್ದಾರೆ; ಅದರಲ್ಲಿಯೂ ಹೆಚ್ಚಿನವರು ಮುಸಲ್ಮಾನರೇ ಆಗಿದ್ದಾರೆ. ಈ ಬಹಿರಂಗ ಸತ್ಯವು ಹಿಂದೂಗಳಿಗೂ ಗೊತ್ತಿದೆ. ಈ ಪ್ರಮಾಣವು ಈಗ ಹೆಚ್ಚುತ್ತಲೇ ಹೋಗುವುದು. ಭಾರತವನ್ನು ಇಸ್ಲಾಮಿಸ್ತಾನ್ ಆಗಲು ಬಿಡಬೇಕೋ ಅಥವಾ ಬಿಡಬಾರದೋ ? ಇದು ಹಿಂದೂಗಳ ಮೇಲೆಯೇ ಅವಲಂಬಿಸಿದೆ. ಕೇರಳದಲ್ಲಿನ ಭೂಮಿಜಿಹಾದ್‌ನಲ್ಲಿ ಡಾ. ಕೃಷ್ಣಮೂರ್ತಿ ಬಲಿಯಾದರು. ಇನ್ನೆಷ್ಟು ಜನರು ಬಲಿಯಾಗುವರು, ಎಂಬುದು ಗೊತ್ತಿಲ್ಲ. ಹಿಂದೂಗಳು ಈಗ ಎಚ್ಚೆತ್ತುಕೊಳ್ಳದಿದ್ದರೆ, ಸಮಯವು ಕೈತಪ್ಪಿ ಹೋಗುವುದು !

ಸಾಮಾನ್ಯವಾಗಿ ಅಲ್ಪಸಂಖ್ಯಾತರ ವಿಷಯದಲ್ಲಿ ಎಲ್ಲಿ ಯಾದರೂ ಸಣ್ಣಪುಟ್ಟ ಪ್ರಸಂಗಗಳು ಘಟಿಸಿದರೂ ತಥಾಕಥಿತ ಅಭಿವ್ಯಕ್ತಿಸ್ವಾತಂತ್ರ್ಯವಾದಿಗಳು, ಮಾನವಹಕ್ಕುಗಳ ಕಾರ್ಯಕರ್ತರು, ಪ್ರಗತಿ(ಅಧೋಗತಿ)ಪರರು ತಕ್ಷಣವೇ ಧ್ವನಿ ಎತ್ತುತ್ತಾರೆ ಮತ್ತು ಎಲ್ಲ ದೋಷವನ್ನು ಮಾತ್ರ ಹಿಂದೂಗಳ ಮೇಲೆಯೇ ಹಾಕುತ್ತಾರೆ. ಈಗ ಡಾ. ಕೃಷ್ಣಮೂರ್ತಿ ಇವರ ಬೆಂಬಲಕ್ಕೆ ಇವರಲ್ಲಿನ ಯಾರಾದರೂ ಬಂದರೇ ? ಯಾರೂ ಬರಲಿಲ್ಲ. ಹಿಂದೂಬಹುಸಂಖ್ಯಾತ ದೇಶದಲ್ಲಿಯೇ ಹಿಂದೂಗಳಿಗೆ ಯಾರೂ ರಕ್ಷಕರಿಲ್ಲ, ಇದುವೇ ನಿಜ ! ಹಿಂದೂಗಳ ಇಂತಹ ಕ್ರೂರ ಹತ್ಯಾಕಾಂಡಗಳು ನಡೆಯಬಾರದೆಂದು ಪೊಲೀಸರು ಮತ್ತು ಸರಕಾರ ಸಶಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಭೂಮಿ ಜಿಹಾದ್‌ಅನ್ನು ತಡೆಗಟ್ಟಿ !

ಹಿಂದೂಗಳೇ, ಈ ಜಿಹಾದ್‌ರೂಪಿ ರಾಕ್ಷಸನು ನಿಮ್ಮನ್ನು ದುರ್ಬಲಗೊಳಿಸುತ್ತಿದ್ದಾನೆ, ನಿಮ್ಮ ಮೇಲೆ ಒತ್ತಡವನ್ನು ಹೇರುತ್ತಿದ್ದಾನೆ ಮತ್ತು ನಿಮ್ಮನ್ನು ಮುಗಿಸುವ ದೊಡ್ಡ ಷಡ್ಯಂತ್ರವನ್ನೂ ರಚಿಸುತ್ತಿದ್ದಾನೆ. ಅದರ ವಿರುದ್ಧ ಹೋರಾಡಲು ನಾವು ಸಂಘಟಿತರಾಗಬೇಕು. ಡಾ. ಕೃಷ್ಣಮೂರ್ತಿಯವರ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಲು ನ್ಯಾಯಯುತವಾಗಿ ಹೋರಾಡಬೇಕು. ಹಾಗೆ ಮಾಡಿದರೆ ಮಾತ್ರ ಹೆಚ್ಚುತ್ತಿರುವ ಭೂಮಿ ಜಿಹಾದ್ ನಿಲ್ಲುವುದು.