ದೇವಸ್ಥಾನದಲ್ಲಿ ಶುಚಿತ್ವ ಮತ್ತು ಪಾವಿತ್ರ್ಯವನ್ನು ಕಾಪಾಡುವುದಕ್ಕಾಗಿ ಸಂಚಾರ ವಾಣಿಯ ಮೇಲೆ ನಿಷೇಧ !

ಮದ್ರಾಸ್ ಉಚ್ಚ ನ್ಯಾಯಾಲಯದ ಶ್ಲಾಘನೀಯ ಆದೇಶ !

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ನ್ಯಾಯ ಪೀಠವು ಸಂಪೂರ್ಣ ತಮಿಳುನಾಡು ರಾಜ್ಯದ ದೇವಸ್ಥಾನಗಳಲ್ಲಿ ಸಂಚಾರವಾಣಿ ಉಪಯೋಗದ ಮೇಲೆ ನಿಷೇಧ ಹೇರುವಂತೆ ಆದೇಶ ನೀಡಿದೆ. ಹಾಗೂ ಭಕ್ತರಿಗೆ ತೊಂದರೆಯಾಗದಿರಲು ದೇವಸ್ಥಾನದ ಹೊರಗೆ ಸಂಚಾರ ವಾಣಿ ಇರಿಸಲು `ಲಾಕರ್ಸ್’ನ ವ್ಯವಸ್ಥೆ ಮಾಡಬೇಕೆಂದು ಕೂಡ ನ್ಯಾಯಾಲಯ ಆದೇಶ ನೀಡಿದೆ. ದೇವಸ್ಥಾನದಲ್ಲಿ ಶುಚಿತ್ವ ಮತ್ತು ಪಾವಿತ್ರ್ಯ ಕಾಪಾಡುವುದಕ್ಕಾಗಿ ಈ ಆದೇಶ ನೀಡಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ತಿರುಚೆಂದೂರ್ ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪಕರಿಂದ ಇದಕ್ಕೆ ಸಂಬಂಧಪಟ್ಟ ಅರ್ಜಿ ದಾಖಲಿಸಿತ್ತು. ಇದರ ಬಗ್ಗೆ ನಡೆದ ಆಲಿಕೆಯ ನಂತರ ನ್ಯಾಯಾಲಯ ರಾಜ್ಯ ಸರಕಾರಕ್ಕೆ ಈ ಆದೇಶ ನೀಡಿದೆ. ವಿಶೇಷವೆಂದರೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪಕರಿಂದ ದೇವಸ್ಥಾನದಲ್ಲಿ ಸಂಚಾರ ವಾಣಿಯನ್ನು ನಿಷೇಧಿಸಲು ಒತ್ತಾಯಿಸಿತ್ತು.

ಕಳೆದ ತಿಂಗಳು ದೇವಸ್ಥಾನ ವ್ಯವಸ್ಥಾಪಕರಿಂದ ಈ ಅರ್ಜಿ ದಾಖಲಿಸಲಾಗಿತ್ತು. ಅದರಲ್ಲಿ, ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಇದು ಒಂದು ಪ್ರಾಚೀನ ದೇವಸ್ಥಾನವಾಗಿದೆ. ದೇವಸ್ಥಾನದ ವ್ಯವಸ್ಥೆಯಲ್ಲಿ `ಆಗಮ’ (ಶಾಸ್ತ್ರ ಜ್ಞಾನ, ಅದರಿಂದ ವೇದಗಳ ಯೋಗ್ಯ ಅರ್ಥ ತಿಳಿಯಲು ಸಾಧ್ಯವಾಗುತ್ತದೆ) ನಿಯಮಾವಳಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಇದರ ಪ್ರಕಾರ ಸಂಚಾರವಾಣಿ, ಕ್ಯಾಮೆರಾ ಅಥವಾ ಛಾಯಾಚಿತ್ರ ಸೆರೆಹಿಡಿಯುವುದು ಇದನ್ನು ನಿಷೇಧಿಸಲಾಗಿತ್ತು. ಪ್ರಸ್ತುತ ಸಂಚಾರವಾಣಿಯಿಂದ ಛಾಯಾಚಿತ್ರ ಮತ್ತು ಚಿತ್ರೀಕರಣ ಮಾಡಲಾಗುತ್ತಿತ್ತು. ಮೂರ್ತಿ ಮತ್ತು ಪೂಜಾ ವಿಧಿ ಇದರ ಛಾಯಾಚಿತ್ರ ಸೆರೆಹಿಡಿಯಲಾಗುತ್ತಿತ್ತು. ಆದ್ದರಿಂದ ಬೇರೆ ಭಕ್ತರಿಗೂ ಕೂಡ ಇದರಿಂದ ತೊಂದರೆ ಆಗುತ್ತಿತ್ತು. ಸಂಚಾರವಾಣಿ ಮತ್ತು ಕ್ಯಾಮರಾ ಇದರ ಉಪಯೋಗ ಮಾಡಬಾರದೆಂದು ನೋಟಿಸ್ ಬೋರ್ಡ್ ಮೇಲೆ ಸೂಚನೆ ಬರೆಯಲಾಗಿದೆ, ಹಾಗೂ ದೇವಸ್ಥಾನಕ್ಕೆ ಬರುವ ಭಕ್ತರು ಯೋಗ್ಯವಾದ ಉಡುಪನ್ನು ಧರಿಸಿ ಬರುವುದು ಅವಶ್ಯಕವಾಗಿದೆ. ಎಂದು ಹೇಳಿದೆ.

ಸಂಪಾದಕೀಯ ನಿಲುವು

ಈ ನಿಯಮ ಸಂಪೂರ್ಣ ದೇಶದಲ್ಲಿರುವ ದೇವಸ್ಥಾನಗಳು ಮತ್ತು ತೀರ್ಥಕ್ಷೇತ್ರಗಳಲ್ಲಿ ಮಾಡುವುದು ಅವಶ್ಯಕವಾಗಿದೆ !