

‘ನನಗೆ ರಾಮನಾಥಿಯ (ಗೋವಾ) ಸನಾತನದ ಆಶ್ರಮದಲ್ಲಿ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಗಾಗಿ ಪ್ರಕ್ರಿಯೆಯನ್ನು ನಡೆಸುವ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರ ಇವರು ವ್ಯಷ್ಟಿ ಸಾಧನೆಯ ವರದಿಯಲ್ಲಿ ನೀಡಿದ ದೃಷ್ಟಿಕೋನವನ್ನು ಮುಂದೆ ಕೊಡಲಾಗಿದೆ.
೧. ‘ಅಂತರ್ಮುಖತೆ’, ಎಂದರೆ ಸತತ ಕಲಿಯುತ್ತಿರುವುದು !
೨. ಸಮಷ್ಟಿಯಲ್ಲಿರುವ ಲಾಭ
ಅ. ಸಮಷ್ಟಿಯು ಕನ್ನಡಿಯಾಗಿದ್ದು ನಮ್ಮ ಮನಸ್ಸಿನ ಸ್ಥಿತಿಯು ಸಮಷ್ಟಿಯ ಮಾಧ್ಯಮದಿಂದ ಸ್ಪಷ್ಟವಾಗಿ ಗಮನಕ್ಕೆ ಬರುತ್ತದೆ.
ಆ. ಸಮಷ್ಟಿ ಎಂದರೆ ನಮ್ಮ ಅಂತರ್ಮನಸ್ಸು !
ಇ. ಸಮಷ್ಟಿಯು ನಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂನ ಅಂಶಗಳನ್ನು ತೋರಿಸಿದರೆ ನಾವು ವಿಚಲಿತರಾಗಬಾರದು. ನಾವು ಪರಿಸ್ಥಿತಿಯನ್ನು ಸ್ವೀಕರಿಸಬೇಕು ಮತ್ತು ಅದರಿಂದ ಕಲಿಯಬೇಕು.
ಈ. ‘ನಮ್ಮ ಸಾಧನೆಯು ಯೋಗ್ಯ ರೀತಿಯಿಂದಾಗಲು ಈಶ್ವರನು ಇದೆಲ್ಲವನ್ನು ತೋರಿಸಿದ್ದಾನೆ, ಎಂಬುದನ್ನು ಗಾಂಭೀರ್ಯದಿಂದ ಸ್ವೀಕರಿಸಿ ಕೃತಜ್ಞತಾಭಾವದಲ್ಲಿರುವುದು’, ಇದು ಮೊದಲನೇ ಹಂತದ ಅಂತರ್ಮಖತೆ !
ಉ. ನಾವು ಪ್ರಾಮಾಣಿಕವಾಗಿ ಅಂತರ್ಮನಸ್ಸಿನಿಂದ ಚಿಂತನೆಯನ್ನು ಮಾಡಿದರೆ ನಮಗೆ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗಿ ನಮ್ಮ ವ್ಯಷ್ಟಿ ಸಾಧನೆಯ ಪ್ರಯತ್ನಗಳು ಮನಃಪೂರ್ವಕವಾಗಿ ಆಗುತ್ತವೆ.
೩. ವ್ಯಷ್ಟಿ ಸಾಧನೆಯು ಮನಸ್ಸಿನ ಪ್ರಕ್ರಿಯೆಯಾಗಿದೆ ! : ವ್ಯಷ್ಟಿ ಸಾಧನೆಯು ಮನಸ್ಸಿನ ಪ್ರಕ್ರಿಯೆ ಆಗಿದೆ. ಶಾರೀರಿಕ ಕ್ಷಮತೆಯೊಂದಿಗೆ ಅದರ ಯಾವ ಸಂಬಂಧವೂ ಇಲ್ಲ.
‘ಶಾರೀರಿಕ ಅಡಚಣೆಗಳಿಂದ ವ್ಯಷ್ಟಿ ಸಾಧನೆಯಾಗುವುದಿಲ್ಲ, ಎಂದು ಹೇಳುವುದು’, ಎಂದರೆ ಸಹಾನುಭೂತಿಯನ್ನು ಪಡೆಯುವುದು, ಹಾಗೆಯೇ ರಿಯಾಯತಿಯನ್ನು ತೆಗೆದುಕೊಳ್ಳುವುದಾಗಿದೆ. ಏನೇ ಅಡಚಣೆಗಳಿದ್ದರೂ, ಅದನ್ನು ವ್ಯಷ್ಟಿ ಸಾಧನೆಯ ವರದಿಯಲ್ಲಿ ಹೇಳಿ ಅದರಲ್ಲಿ ಹೇಳಿದಂತೆ ಪ್ರಯತ್ನಗಳನ್ನು ಮಾಡಬೇಕು.’
– ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೫.೪.೨೦೨೨)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು