ಮನುಷ್ಯನ ಮೆದುಳಿನಲ್ಲಿ ಚಿಪ್ ಅಳವಡಿಸಿ ಅದನ್ನು ಕಂಪ್ಯೂಟರ್ ಗೆ ಜೋಡಿಸಲಾಗುವುದು !

ಇಲಾನ್ ಮಸ್ಕ್ ಇವರ ಕಂಪನಿಯಿಂದ ಚಿಪ್ ತಯಾರಿಸಲಾಗಿದೆ, ಮಸ್ಕ ಇವರು ಸ್ವತಹ ಅದನ್ನು ಉಪಯೋಗಿಸಲಿದ್ದಾರೆ !

(ಚಿಪ್ ಎಂದರೆ ಒಂದು ರೀತಿಯ ಆಧುನಿಕ ಯಂತ್ರ)

ವಾಷಿಂಗ್ಟನ್ (ಅಮೇರಿಕಾ) – ಪ್ರಸಿದ್ಧ ಉದ್ಯಮಿ ಇಲಾನ್ ಮಸ್ಕ್ ಇವರ ಕಂಪನಿ(ನಿಗಮ) ಯಿಂದ ಒಂದು ಆಧುನಿಕ ಯಂತ್ರ (ಚಿಪ್) ತಯಾರಿಸಲಾಗಿದೆ. ಈ ಚಿಪ್ ಎಂದರೆ ಮೆದುಳನ್ನು  ಸಂಗಣಕಕ್ಕೆ ಜೋಡಿಸುವ ವಿಧಾನವಾಗಿದೆ. ಈ ಚಿಪ್ ಅನ್ನು ಕೋತಿಯ ಮೆದುಳಿನಲ್ಲಿ ಶಸ್ತ್ರಕ್ರಿಯೆ ನಡೆಸಿ ಅಳವಡಿಸಲಾಗಿತ್ತು. ಅದರ ಮೂಲಕ ಈ ಕೋತಿ ಮನುಷ್ಯರ ರೀತಿ ಕೃತಿ ಮಾಡುತ್ತಿರುವುದು ಪ್ರಯೋಗದಿಂದ ಬೆಳಕಿಗೆ ಬಂದಿತು. ಇದರಿಂದ ಮಸ್ಕ್ ಇವರು ಈ ರೀತಿಯ ಚಿಪ್ ಅನ್ನು ಮುಂದಿನ ೬ ತಿಂಗಳಲ್ಲಿ ಮನುಷ್ಯರ ಮೇಲೆ ಕೂಡ ಉಪಯೋಗಿಸಲಾಗುವುದು. ಇದರಿಂದ ಪಾರ್ಶ್ವವಾಯು(ಲಕ್ವಾ) ಆಗಿರುವ ರೋಗಿಗಳಿಗೆ ಮತ್ತು ಕುರುಡರಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.

೧. ಮಸ್ಕ್ ಇವರು, ನಮ್ಮ ಯಂತ್ರ ಪೂರ್ಣವಾಗಿ ಸಿದ್ಧವಾಗಿದೆ. ಈಗ ಕೇವಲ ಇದಕ್ಕೆ ಒಪ್ಪಿಗೆ ಸಿಗುವುದು ಬಾಕಿ ಇದೆ. ಒಪ್ಪಿಗೆ ಸಿಕ್ಕ ನಂತರ ನಾವು ಒಂದು ಪ್ರಯೋಗ ಮಾಡಿ ತೋರಿಸುವೆವು. ನಾನು ಸ್ವತಹ ಕೂಡ ಇದನ್ನು ಉಪಯೋಗಿಸುವೆನು ಎಂದು ಕೂಡ ಅವರು ಒಬ್ಬ ಪತ್ರಕರ್ತನ ಪ್ರಶ್ನೆಗೆ ಉತ್ತರ ನೀಡುವಾಗ ಸ್ಪಷ್ಟಪಡಿಸಿದರು.

೨. ಈ  ಯಂತ್ರವನ್ನು ಕುರಿ, ಹಂದಿ ಮತ್ತು ಕೋತಿ ಇವುಗಳ ಮೇಲೆ ಪ್ರಯೋಗ ಮಾಡಲಾಗಿದೆ. ಕೋತಿಯ ಮೆದುಳಿನಲ್ಲಿ ಈ ಚೀಪ್ ಅಳವಡಿಸಿದ ನಂತರ ಅದಕ್ಕೆ ವಿಡಿಯೋ ಗೇಮ್ ಆಡಲು ಕಲಿಸಲಾಯಿತು ಮತ್ತು ಅದು ನಂತರ ಆಡಲು ಪ್ರಾರಂಭಿಸಿತ್ತು.