ಕಚ್ಚಾ ತೈಲಬೆಲೆ ಭಾರತದಂತೆ ಶೇಕಡ ೪೦ ರಷ್ಟು ವಿನಾಯತಿ ನೀಡುವುದರ ಪಾಕಿಸ್ತಾನದ ಬೇಡಿಕೆ ರಷ್ಯಾದಿಂದ ತಿರಸ್ಕಾರ

ಮಾಸ್ಕೋ /ಇಸ್ಲಾಮಾಬಾದ್ – ರಷ್ಯಾದಿಂದ ಪಾಕಿಸ್ತಾನಕ್ಕೆ ಶೇಕಡಾ ೪೦ ರಷ್ಟು ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ಪೂರೈಕೆ ಮಾಡಲು ನಿರಾಕರಿಸಿದೆ. ಪಾಕಿಸ್ತಾನದ ವಾರ್ತಾಪತ್ರಿಕೆ `ದ ನ್ಯೂಸ್’ ಈ ವಿಷಯದ ಬಗ್ಗೆ ವಾರ್ತೆ ಪ್ರಸಾರ ಮಾಡಿದೆ. ರಷ್ಯಾವು, `ನಮಗೆ ಪೂರೈಕೆ ಮಾಡುವ ನಿಯೋಜನೆ ಆಗಿದೆ ಹಾಗೂ ನಾವು ಭಾರತದ ಹಾಗೆ ದೊಡ್ಡ ಖರೀದಿದಾರರಿಗೆ ಅಸಮಧಾನ ಗೊಳಿಸಲು ಸಾಧ್ಯವಿಲ್ಲ’, ಎಂದು ಸ್ಪಷ್ಟಪಡಿಸಿದೆ.

ರಷ್ಯಾದಿಂದ ಪ್ರಸ್ತುತ ಭಾರತಕ್ಕೆ ಶೇಕಡ ೪೦ ರಷ್ಟು ಕಡಿಮೆ ಬೆಲೆಯಲ್ಲಿ ಈ ತೈಲ ಪೂರೈಕೆ ಮಾಡಲಾಗುತ್ತಿದೆ. ಭಾರತಕ್ಕೆ ಯಾವ ರೀತಿ ವಿನಾಯತಿ ನೀಡಲಾಗುತ್ತದೆ, ಅದೇ ರೀತಿ ವಿನಾಯತಿ ನಮಗೆ ನೀಡಬೇಕೆಂದು ಪಾಕಿಸ್ತಾನದ ನಿಯೋಗ ಕಳೆದ ೨ ತಿಂಗಳಲ್ಲಿ ೨ ಸಲ ರಷ್ಯಾಗೆ ಭೇಟಿ ನೀಡಿತ್ತು. ಈ ಹಿಂದೆ ಫೆಬ್ರವರಿಯಲ್ಲಿ ಪಾಕಿಸ್ತಾನದ ಆಗಿನ ಪ್ರಧಾನಿ ಇಮ್ರಾನ್ ಖಾನ್ ಮಾಸ್ಕೋಗೆ ಭೇಟಿ ನೀಡಿದ್ದರು ಮತ್ತು ಆಗಲು ಕೂಡ ಅವರು ರಾಷ್ಟ್ರ ಅಧ್ಯಕ್ಷ ಬ್ಲಾದೀಮೀರ್ ಪುತಿನ್ ಇವರ ಬಳಿ ಪಾಕಿಸ್ತಾನಕ್ಕೆ ಕಡಿಮೆ ಬೆಲೆಯಲ್ಲಿ ತೈಲ ಪೂರೈಕೆ ಮಾಡುವ ಬೇಡಿಕೆ ಸಲ್ಲಿಸಿದರು. ಆಗಲೂ ಕೂಡ ಪುತಿನ ಅವರು ಈ ಬೇಡಿಕೆ ತಿರಸ್ಕರಿಸಿದ್ದರು.