ಬ್ರಿಟನಿನಲ್ಲಿ ಕ್ರೈಸ್ತರ ಜನಸಂಖ್ಯೆಯಲ್ಲಿ ಇಳಿತ ಹಾಗೂ ಮುಸಲ್ಮಾನರ ಜನಸಂಖ್ಯೆಯಲ್ಲಿ ಹೆಚ್ಚಳ !

ಪ್ರತೀಕಾತ್ಮಕ ಛಾಯಾಚಿತ್ರ

ಲಂಡನ (ಬ್ರಿಟನ) – ಬ್ರಿಟನಿನಲ್ಲಿ ಕ್ರೈಸ್ತರ ಜನಸಂಖ್ಯೆ ವೇಗವಾಗಿ ಕಡಿಮೆ ಆಗುತ್ತಿದೆ ಮತ್ತು ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿದೆ. ಜನಸಂಖ್ಯೆಯ ಅಂಕಿ ಅಂಶಗಳು ಬಹಿರಂಗವಾದ ನಂತರ ಇದು ಗಮನಕ್ಕೆ ಬಂದಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಇಲ್ಲಿ ಕ್ರೈಸ್ತರ ಜನಸಂಖ್ಯೆ ಶೇಕಡ ೫೦ ರಷ್ಟು ಕಡಿಮೆ ಆಗಿದೆ. ಈ ಪ್ರಕರಣದಲ್ಲಿ ಯಾರ್ಕನ ಆರ್ಚಬಿಷಪ್ (ಉನ್ನತ ಮಟ್ಟದ ಪಾದ್ರಿಗೆ ನೀಡಿರುವ ಸ್ಥಾನ) ಸ್ಟೀಫನ್ ಕಂಟ್ರಿಲ್ ಇವರು, ಕ್ರೈಸ್ತರ ಜನಸಂಖ್ಯೆ ತೀವ್ರವಾಗಿ ಕಡಿಮೆ ಆಗುತ್ತಿದೆ, ಇದು ಆಶ್ವರ್ಯಕಾರಕವಾಗಿದೆ ಎಂದು ಹೇಳಿದರು.

`ಆಫೀಸ್ ಫಾರ್ ನ್ಯಾಷನಲ್ ಸ್ಟಾಟಿಸ್ಟಿಕ್ಸ್’ನ ಇದರ ಅಂಕೆ ಅಂಶಗಳ ಪ್ರಕಾರ ಬ್ರೀಟನಿನಲ್ಲಿ ಕ್ರೈಸ್ತರ ಜನಸಂಖ್ಯೆ ಶೇಕಡ ೧೩.೧ ರಷ್ಟು ಕಡಿಮೆ ಆಗಿದೆ ಹಾಗೂ ಮುಸಲ್ಮಾನರ ಜನಸಂಖ್ಯೆ ಶೇಕಡ ೪.೯ ರಷ್ಟು ಹೆಚ್ಚಾಗಿ ಅದು ೬.೫ ರಷ್ಟು(೩೯ ಲಕ್ಷ) ಆಗಿದೆ. ಬ್ರಿಟನಿನಲ್ಲಿ ಕ್ರೈಸ್ತರ ಜನಸಂಖ್ಯೆ ಶೇಕಡಾ ೪೬.೨ ರಷ್ಟು ಇದೆ. ಇದರ ನಂತರ ಯಾವುದೇ ಧರ್ಮ ನಂಬದೇ ಇರುವ ಜನರ ಶೇಕಡಾವಾರು ೩೭.೨(೨ ಕೋಟಿ ೨೨ ಲಕ್ಷ) ರಷ್ಟು ಇದೆ. ಹಿಂದೂಗಳ ಜನಸಂಖ್ಯೆ ೧೦ ಲಕ್ಷ ಇದೆ ಹಾಗೂ ಸಿಖ್ಕರ ಜನಸಂಖ್ಯೆ ೫ ಲಕ್ಷ ೨೪ ಸಾವಿರ ರಷ್ಟು ಇದೆ.

ಸಂಪಾದಕೀಯ ನಿಲುವು

ಬ್ರಿಟನ್ನಿನಲ್ಲಿ ಕೂಡ `ಜನಸಂಖ್ಯಾ ಜಿಹಾದ್’ ನಡೆಸಲಾಗುತ್ತಿದೆ, ಎಂದು ಯಾರಾದರೂ ಹೇಳಿದರೆ, ತಪ್ಪಾಗಲಾರದು ?