-
ದೇವತೆಗಳ ಮೂರ್ತಿಯ ನಾಶ
-
ಹಿಂದುತ್ವನಿಷ್ಠ ಸಂಘಟನೆಯಿಂದ ಪ್ರತಿಭಟನೆ
ಮೇರಠ (ಉತ್ತರಪ್ರದೇಶ) – ಇಲ್ಲಿಯ ಶ್ರೀ ಶನಿದೇವರ ದೇವಸ್ಥಾನದಲ್ಲಿ ನುಗ್ಗಿ ದೇವಸ್ಥಾನದಲ್ಲಿ ವಿದ್ವಾಂಸಕೃತ್ಯ ಮಾಡಿ ಮೂರ್ತಿಗಳನ್ನು ಭಗ್ನಗೊಳಿಸಿದ ಆರೋಪಿಯನ್ನು ಪೊಲೀಸರು ಬಂದಿಸಿದ್ದರೆ. ನವಂಬರ್ ೨೩ ರಂದು ಈ ಘಟನೆ ನಡೆದಿದೆ. ಪೊಲೀಸರು ಅವನನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ದೇವಸ್ಥಾನದ ಅರ್ಚಕರು ನವಂಬರ್ ೨೩ ರಂದು ಬೆಳಿಗ್ಗೆ ೬ ಗಂಟೆಗೆ ದೇವಸ್ಥಾನಕ್ಕೆ ಹೋದಾಗ ಅಲ್ಲಿಯ ವಸ್ತುಗಳು ಅಸ್ತಾವ್ಯಸ್ತವಾಗಿ ಬಿದ್ದಿರುವುದು ಹಾಗೂ ದೇವಸ್ಥಾನದಲ್ಲಿನ ಶ್ರೀ ಶನಿ ದೇವರ ಸಹಿತ ಶ್ರೀ ಗಣಪತಿ ಹಾಗೂ ಇತರ ದೇವತೆಯ ಮೂರ್ತಿಗಳು ಭಗ್ನಗೊಳಿಸಿರುವುದು ಕಂಡು ಬಂದಿದೆ. ಈ ಮೂರ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡ ನಂತರ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ದೇವಸ್ಥಾನದ ಹತ್ತಿರ ಸೇರಿ ಎಲ್ಲರೂ ಆರೋಪಿಯನ್ನು ಬಂಧಿಸಲು ಒತ್ತಾಯಿಸಿದರು. ಈ ಘಟನೆಯ ಮಾಹಿತಿ ದೊರೆಯುತ್ತಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರಿಗೆ ಶಾಂತಿ ಕಾಪಾಡಲು ಕರೆ ನೀಡಿದರು.
#मेरठ में 30 साल पुराने मन्दिर की मूर्तियों को तोड़ा गया। #meerut के #डिग्गीक्षेत्र के शनि मंदिर में खंडित की गई मूर्तियां, #बजरंगदल व हिंदुओ में आक्रोश #medicalthana @meerutpolice @DainikBhaskar pic.twitter.com/I6lzbE9GYx
— shalu agrawal (@shaluagrawal3) November 23, 2022
ಆರೋಪಿಯು ನಶೆಯಲ್ಲಿದ್ದಾಗ ಈ ಕೃತ್ಯ ಮಾಡಿದ್ದಾನೆ!’ (ಅಂತೆ) – ಪೊಲೀಸ ಅಧಿಕಾರಿಇದರ ನಂತರ ಮೇರಠದ ಪೋಲಿಸ್ ಅಧಿಕಾರಿ ಪಿಯೂಷ್ ಸಿಂಹ ಇವರು ಈ ಪ್ರಕರಣದಲ್ಲಿ ಒಬ್ಬ ಸಂದೇಹಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ಹಿಂದುತ್ವನಿಷ್ಠರಿಗೆ ಮಾಹಿತಿ ನೀಡುತ್ತಾ ಅವನು ಈ ಕೃತ್ಯ ನಶೆಯಲ್ಲಿದ್ದು ಮಾಡಿದ್ದಾನೆ ಎಂದು ಹೇಳಿದರು. (`ನಶೆಯಲ್ಲಿ ಕೇವಲ ಹಿಂದುಗಳ ದೇವಸ್ಥಾನದ ವಿದ್ವಾಂಸ ಹೇಗೆ ನಡೆಯುತ್ತದೆ ?’, ಹೇಗೆ ಎಂದು ಪೊಲೀಸರು ಹೇಳಬಹುದೇ ? ಪೊಲೀಸರು ಹೀಗೆ ಹೇಳಿ ಘಟನೆಯ ಗಾಂಭೀರ್ಯ ಕಡಿಮೆ ಮಾಡುತ್ತಿದ್ದಾರೆ, ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನು ಇಲ್ಲ ! – ಸಂಪಾದಕರು) ಆತನ ವಿರುದ್ಧ ದೂರು ದಾಖಲಿಸಿ ತನಖೆ ನಡೆಸಿ ದೇವಸ್ಥಾನದಲ್ಲಿ ಹೊಸ ಮೂರ್ತಿಗಳು ಸ್ಥಾಪಿಸುವ ಆಶ್ವಾಸನೆ ಕೂಡ ಸಿಂಹ ಅವರು ನೀಡಿದರು. |
ಸಂಪಾದಕೀಯ ನಿಲುವು
|