ಸಿಂಧ (ಪಾಕಿಸ್ತಾನ ) ಇಲ್ಲಿಯ ಓರ್ವ ಹಿಂದೂ ಹುಡುಗಿಯನ್ನು ಬಲವಂತವಾಗಿ ಮತಾಂತರಗೊಳಿಸಿ ಆಕೆಯ ವಿವಾಹ ಮಾಡಿಸಲಾಯಿತು !

ಇಸ್ಲಾಮಿ ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂ ಸಮುದಾಯ !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ಇರುವ ಥಾರಪಾರಕರ ಇಲ್ಲಿಯ ಇಸ್ಲಾಮೋಟ್ ತಾಲೂಕಿನಲ್ಲಿರುವ ಗೊರಾನೋ ಗ್ರಾಮದಲ್ಲಿನ ಓರ್ವ ಹಿಂದೂ ಹುಡುಗಿಯನ್ನು ಅಪಹರಿಸಲಾಯಿತು. ಆಕೆಗೆ ಇಸ್ಲಾಂ ಧರ್ಮ ಸ್ವೀಕರಿಸಲು ಅನಿವಾರ್ಯಗೊಳಿಸಿ ಆಕೆಯ ವಿವಾಹ ಮಾಡಿಸಲಾಗಿದೆ. ಈ ವಿಷಯದ ಕುರಿತು ವಿಡಿಯೋವೊಂದು ಪಾಕಿಸ್ತಾನದಲ್ಲಿನ ‘ಹಿಂದೂ ಆರ್ಗನೈಸೇಷನ್ ಆಫ್ ಸಿಂಧ’ ಈ ಸಂಘಟನೆಯ ಸಂಸ್ಥಾಪಕ ಮತ್ತು ಮುಖ್ಯ ಸಂಘಟಕ ನಾರಾಯಣದಾಸ ಭಿಲ ಇವರು ಅವರ ಟ್ವಿಟರ್ ಖಾತೆಯ ಮೂಲಕ ಪ್ರಸಾರ ಮಾಡಿದ್ದಾರೆ. ಪಾಕಿಸ್ತಾನಿ ಹಿಂದೂಗಳ ಮೇಲೆ ‘ಅವರ ಹುಡುಗಿಯರು ಓಡಿ ಹೋಗುತ್ತಾರೆ’, ಎಂಬ ಆರೋಪ ಯಾವಾಗಲೂ ಮಾಡುತ್ತಾರೆ. ಆದ್ದರಿಂದ ಈ ವಿಡಿಯೋ ನೋಡಿ ಮತ್ತು ನಿರ್ಧರಿಸಿ, ಅದು (ಓಡಿ ಹೋಗುವುದು) ನಿಜವಾಗಿದೆ ಅಥವಾ ಬಲವಂತವಾಗಿ ಅವರನ್ನು ಅವಮಾನಿಸಲಾಗುತ್ತಿದೆ !’, ಎಂದು ನಾರಾಯಣದಾಸ ಭೀಲ ಇವರು ಟ್ವೀಟ್ ಮಾಡಿದ್ದಾರೆ.