ಬರೇಲಿಯಲ್ಲಿ (ಉತ್ತರಪ್ರದೇಶ) ಯೇಸುಕ್ರಿಸ್ತನ ಪ್ರಾರ್ಥನೆಯ ಹೆಸರಿನಲ್ಲಿ ಹಿಂದೂಗಳ ಮತಾಂತರಕ್ಕೆ ಯತ್ನ

೬ ಜನರ ವಿರುದ್ಧ ಅಪರಾಧ ದಾಖಲು !

ಬರೇಲಿ (ಉತ್ತರಪ್ರದೇಶ) – ಇಲ್ಲಿ ಹಿಂದೂಗಳ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ೬ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದವು. ಕಳೆದ ೨೦ ವರ್ಷಗಳಿಂದ ಈ ಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರ ಮಾಡುವ ಪ್ರಯತ್ನಗಳು ನಡೆಯುತ್ತಿವೆ.

೧. ನವೆಂಬರ್ ೧೯ ರಂದು ಇಲ್ಲಿನ ಮೊಹಲ್ಲಾ ಬಂಶೀನಗಲಾದ ಮನೆಯೊಂದರಲ್ಲಿ ಜನರನ್ನು ಸೇರಿಸಲಾಗಿತ್ತು. ಮಹಿಳೆಯರ ಸಂಖ್ಯೆ ಹೆಚ್ಚು ಇತ್ತು. ಈ ವಿಷಯ ತಿಳಿದ ಹಿಂದೂ ಸಂಘಟನೆಗಳು ಅಲ್ಲಿಗೆ ತಲುಪಿದಾಗ ಅವರನ್ನು ಥಳಿಸಲು ಪ್ರಯತ್ನಿಸಲಾಯಿತು. ಈ ಮನೆಯಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗುತ್ತಿತ್ತು ಮತ್ತು ಯೇಸುಕ್ರಿಸ್ತನ ಪ್ರಾರ್ಥನೆಗಳನ್ನು ಮಾಡಲಾಗುತ್ತಿತ್ತು.

೨. ಭಗವಾನ ದಾಸ ಎಂಬ ವ್ಯಕ್ತಿಯು ಇಲ್ಲಿ ಪ್ರಾರ್ಥನೆಯನ್ನು ಆಯೋಜಿಸಿದ್ದನು. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿ ನಿಯಮಿತವಾದ ಪ್ರಾರ್ಥನೆಗಳು ನಡೆಯುತ್ತಿದ್ದವು ಎಂದು ಅವನು ಒಪ್ಪಿಕೊಂಡನು; ಆದರೆ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪವನ್ನು ಅಲ್ಲಗಳೆದನು. ಭಗವಾನ ದಾಸ ಅವನನ್ನು ಪೊಲೀಸರ ವಶದಿಂದ ಬಿಡಿಸಲು ಆತನ ಬೆಂಬಲಿಗರು ಪೊಲೀಸ ಠಾಣೆಯ ಹೊರಗೆ ಬಹು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.

ಸಂಪಾದಕೀಯ ನಿಲುವು

ದೇಶದಲ್ಲಿ ಕಠೋರ ಮತಾಂತರ ವಿರೋಧಿ ಕಾನೂನು ಯಾವಾಗ ?, ಎಂದು ಇಂತಹ ಘಟನೆಗಳಿಂದ ಪ್ರಶ್ನೆಯು ನಿರಂತರವಾಗಿ ಉದ್ಭವಿಸುತ್ತಿದೆ, ಎಂಬುದನ್ನು ಸರಕಾರವು ಗಮನದಲ್ಲಿಟ್ಟುಕೊಳ್ಳಬೇಕು !