ಟಿಪ್ಪು ಸುಲ್ತಾನನ ಪುತ್ಥಳಿ ಸ್ಥಾಪಿಸಿದರೆ ಕಿತ್ತೆಸೆಯುತ್ತೇವೆ ! – ಪ್ರಮೋದ ಮುತಾಲಿಕರ ಎಚ್ಚರಿಕೆ

ಶ್ರೀ. ಪ್ರಮೋದ ಮುತಾಲಿಕ

ಹುಬ್ಬಳ್ಳಿ – ಕಾಂಗ್ರೆಸ್ ಶಾಸಕ ತನ್ವೀರ ಸೇಠ ಇವರು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಕ್ರೂರಕರ್ಮಿ ಟಿಪ್ಪು ಸುಲ್ತಾನನ ೧೦೦ ಅಡಿ ಎತ್ತರದ ಪುತ್ಥಳಿಯನ್ನು ಸ್ಥಾಪಿಸುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಇವರು ‘ಟಿಪ್ಪು ಸುಲ್ತಾನನ ಪುತ್ಥಳಿ ಸ್ಥಾಪಿಸಿದರೆ ನಾವು ಅದನ್ನು ಕಿತ್ತೆಸೆಯುತ್ತೇವೆ. ಅಯೋಧ್ಯೆಯಲ್ಲಿ ಬಾಬರಿಯನ್ನು ಕೆಡವಿದಂತೆ ಆ ಪ್ರತಿಮೆಯನ್ನು ಕೂಡ ಕೆಡವಲಾಗುವುದು’, ಎಂದು ಎಚ್ಚರಿಕೆಯನ್ನು ನೀಡಿದರು. (ಕಾಂಗ್ರೆಸ್‌ನ ಒಬ್ಬ ಮುಸಲ್ಮಾನ ಮುಖಂಡನಾದರೂ ಎಂದಾದರೂ ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ ಮುಂತಾದ ರಾಷ್ಟ್ರಪುರುಷರ ಪುತ್ಥಳಿಯನ್ನು ಸ್ಥಾಪಿಸುವ ಆಗ್ರಹ ಮಾಡಿದ್ದಾರೆಯೇ ? – ಸಂಪಾದಕರು)