‘ಮಹಾಕುಂಭವು ‘ಮೃತ್ಯುಕುಂಭ’ವಾಗಿ ರೂಪಾಂತರಗೊಂಡಿದೆ ’ – ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕಾಲ್ತುಳಿತದ ಬಗ್ಗೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರಗಳನ್ನು ಟೀಕಿಸಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ನೀಡಿದ ಹೇಳಿಕೆ!

ಕೋಲಕಾತಾ (ಬಂಗಾಳ) – ಮಹಾಕುಂಭವು ‘ಮೃತ್ಯುಕುಂಭ’ವಾಗಿದೆ. ನಾನು ಮಹಾಕುಂಭ ಮತ್ತು ಗಂಗಾ ಮಾತೆಯನ್ನು ಗೌರವಿಸುತ್ತೇನೆ; ಆದರೆ ಸಾಮಾನ್ಯ ಜನರಿಗೆ ಯಾವುದೇ ಯೋಜನೆ ಇಲ್ಲ. ಶ್ರೀಮಂತರು ಮತ್ತು ಗಣ್ಯ ವ್ಯಕ್ತಿಗಳಿಗೆ 1 ಲಕ್ಷ ರೂಪಾಯಿವರೆಗಿನ ಡೇರೆಗಳು ಲಭ್ಯವಿದೆ; ಆದರೆ ಬಡವರಿಗೆ ಯಾವುದೇ ಸೌಲಭ್ಯವಿಲ್ಲ. ಜಾತ್ರೆಗಳಲ್ಲಿ ಕಾಲ್ತುಳಿತದ ಸಂದರ್ಭಗಳು ಸಾಮಾನ್ಯವಾಗಿದೆ; ಆದರೆ ಸರಿಯಾದ ನಿರ್ವಹಣೆ ಅಗತ್ಯ’, ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯ ವಿಧಾನಸಭೆಯಲ್ಲಿ ಮಾತನಾಡುತ್ತಾ ಕೇಂದ್ರ ಸರಕಾರ ಮತ್ತು ಉತ್ತರ ಪ್ರದೇಶ ಸರಕಾರವನ್ನು ಟೀಕಿಸಿದರು.

1. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಜಪ ವಿರುದ್ಧ ಆರೋಪ ಮಾಡುತ್ತಾ, ಈ ಪಕ್ಷವು ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸುತ್ತಿದೆ. ಭಾಜಪ ಶಾಸಕರು ದ್ವೇಷವನ್ನು ಹರಡುತ್ತಾರೆ ಮತ್ತು ಸಮಾಜದಲ್ಲಿ ಬಿರುಕು ಮೂಡಿಸುತ್ತದೆ, ಎಂದು ಹೇಳಿದರು.

2. ಬಾಂಗ್ಲಾದೇಶದ ಕಟ್ಟರವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಭಾಜಪ ಆರೋಪಕ್ಕೆ ಮುಖ್ಯಮಂತ್ರಿ ಬ್ಯಾನರ್ಜಿ ಪ್ರತ್ಯುತ್ತರ ನೀಡುತ್ತಾ, ನನಗೆ ಬಾಂಗ್ಲಾದೇಶದ ಕಟ್ಟರವಾದಿಗಳೊಂದಿಗೆ ಯಾವುದೇ ಸಂಪರ್ಕವಿದೆ ಎಂದು ಭಾಜಪ ಸಾಬೀತುಪಡಿಸಿದರೆ, ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅವರು ಹೇಳಿದರು. ಸುಳ್ಳು ಆರೋಪ ಮಾಡುತ್ತಿರುವ ಭಾಜಪ ಶಾಸಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಲಿದ್ದೇನೆ’, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಕಾಲ್ತುಳಿತದ ಘಟನೆಗಳು ನಡೆದಿರುವುದು ನಿಜವಾದರೂ, ಅದಕ್ಕೆ ಅಂತಹ ಪದಗಳನ್ನು ಬಳಸುವುದು ಅತ್ಯಂತ ಅನುಚಿತವಾಗಿದೆ. ಇದಕ್ಕಾಗಿ ಅವರು ಹಿಂದೂಗಳಲ್ಲಿ ಕ್ಷಮೆಯಾಚಿಸಬೇಕು !
  • ಮಮತಾ ಬ್ಯಾನರ್ಜಿಯವರ ಮನಸ್ಸಿನಲ್ಲಿ ಹಿಂದೂಗಳ ಧಾರ್ಮಿಕ ಕೃತಿಗಳ ಬಗ್ಗೆ ದ್ವೇಷವೇ ತುಂಬಿದ್ದರಿಂದ ತುಂಬಿದ್ದಾರೆ, ಅದೇ ಅವರ ಬಾಯಲ್ಲಿ ಬರುತ್ತಿದೆ !