ಸರ್ವೋಚ್ಚ ನ್ಯಾಯಾಲಯವು ಮಾಜಿ ಪ್ರಧಾನಮಂತ್ರಿ ಹಾಗೂ ಕಾಂಗ್ರೆಸ್ಸಿನ ನಾಯಕ ರಾಜೀವ ಗಾಂಧಿಯವರ ಹಂತಕರನ್ನು ಮುಕ್ತಗೊಳಿಸಲು ಆದೇಶ ನೀಡಿತು. ಈ ಹತ್ಯೆಯಾಗಿ ೩೦ ವರ್ಷಗಳಿಗಿಂತಲೂ ಹೆಚ್ಚು ಕಾಲ ಕಳೆದ ನಂತರ ಈ ಆದೇಶ ಬಂದಿದೆ. ಇದರಲ್ಲಿ ‘ಸೆರೆಮನೆಯಲ್ಲಿ ೬ ಅಪರಾಧಿಗಳ ನಡತೆ ಚೆನ್ನಾಗಿತ್ತು’, ಎಂಬ ಕಾರಣ ಕೊಡಲಾಗಿದೆ, ಎಂದು ಈಗಂತೂ ಹಾಗೆ ಕಾಣಿಸುತ್ತಿದೆ.
೧. ತಮಿಳರ ಅಸ್ಮಿತೆಯು ಈ ೬ ಜನರನ್ನು ಹಂತಕರೆಂದು ಒಪ್ಪುತ್ತದೆಯೇ ?
ಈಗ ಈ ೬ ಜನರು ಹೊರಗೆ ಬರುವರು. ಅವರಲ್ಲಿ ಒಬ್ಬರು ನಳಿನಿ ಅಂದರೆ ಮಹಿಳೆಯಾಗಿದ್ದಾರೆ. ತಮಿಳುನಾಡು-ರಾಜೀವ ಗಾಂಧಿ-ಎಲ್‌ಟಿಟಿ ಈ ಇದೊಂದು ಹಳೆಯ ತ್ರಿಕೋನವಾಗಿತ್ತು. ಅದರ ಚರ್ಚೆ ಈಗ ಪುನಃ ಪುಟಿದೆದ್ದಿದೆ. ಈ ೬ ಜನರು ಬಿಡುಗಡೆಯಾದ ನಂತರ ಅವರು ಶಾಂತಿಯಿಂದ ತಮ್ಮ ಉಳಿದ ಜೀವನವನ್ನು ಕಳೆಯುವರು, ಎಂಬ ಸಾಧ್ಯತೆ ಎಷ್ಟಿದೆಯೊ, ಅಷ್ಟೇ ಇನ್ನೊಂದು ಸಾಧ್ಯತೆ ಹೇಗಿದೆಯೆಂದರೆ, ಇವರು ಮುಂಬರುವ ಕಾಲದಲ್ಲಿ ತಮಿಳರ ಅಸ್ಮಿತೆಯನ್ನು ಪ್ರತಿನಿಧಿಸುವರು ಅಥವಾ ಅವರಿಗೆ ಹಾಗೆ ಮಾಡುವಂತೆ ಉದ್ಯುಕ್ತಗೊಳಿಸಲಾಗುವುದು. ಮುಂಬರುವ ವಿಧಾನಸಭೆ ಹಾಗೂ ಲೋಕಸಭೆಯ ಚುನಾವಣೆಗೆ ಇವರಲ್ಲಿ ಯಾರಾದರೂ ಸ್ಪರ್ಧಿಸುವ ಸಾಧ್ಯತೆಯನ್ನು ನಿರಾಕರಿಸುವಂತಿಲ್ಲ.
ಮುಂಬರುವ ಕಾಲದಲ್ಲಿ ಇದಕ್ಕೆ ನಾವು ಹಲವಾರು ಅರ್ಥಗಳನ್ನು ಕಟ್ಟಬಹುದು. ಈಗ ನಿರ್ಣಯ ಬಂದು ಸ್ವಲ್ಪವೇ ಸಮಯವಾಗಿದೆ. ಇಷ್ಟರಲ್ಲಿಯೇ ಕಾಂಗ್ರೆಸ್ಸಿಗರ ಪ್ರತಿಕ್ರಿಯೆಗಳು ಬಂದಿವೆ. ಕಾಂಗ್ರೆಸ್ಸಿಗರಿಗೂ ಬಹಳಷ್ಟು ಅಳುವ ಪ್ರಶ್ನೆ ಇದಾಗಿದೆ; ಏಕೆಂದರೆ ಅವರಿಗೆ ಮುಂಬರುವ ಚುನಾವಣೆಯ ಸಂದರ್ಭವನ್ನೂ ಮುಂದಿಡಲಿಕ್ಕಿದೆ. ‘ತಮಿಳರ ಅಸ್ಮಿತೆಯು ಈ ೬ ಜನರನ್ನು ಹಂತಕರೆಂದು ಒಪ್ಪುತ್ತದೆಯೇ ?’, ಇದು ಅದರಲ್ಲಿನ ಒಂದು ಉಪಪ್ರಶ್ನೆಯಾಗಿದೆ. ಶ್ರೀಲಂಕಾದಲ್ಲಿನ ತಮಿಳರಿಗೆ ಸಹಾಯ ಮಾಡುವ ಬದಲು ‘ರಾಜೀವ ಗಾಂಧಿಯವರು ಅಲ್ಲಿಗೆ ಶಾಂತಿ ಸೇನೆಯನ್ನು ಕಳುಹಿಸಿದರು ಹಾಗೂ ಭಾರತೀಯರ ಅಶಾಂತಿ ಹೆಚ್ಚಾಯಿತು’, ಹೀಗೇನೋ ಚಿತ್ರಣ ಆ ಸಮಯದ್ದಾಗಿತ್ತು. ಅದರ ಸೇಡೆಂದು ರಾಜೀವ ಗಾಂಧಿಯವರ ಹತ್ಯೆಯಾಯಿತು. ವಿದೇಶ ನೀತಿಯು ವಿದೇಶಕ್ಕಾಗಿಯಷ್ಟೇ ಸೀಮಿತವಾಗಿರುವುದಿಲ್ಲ. ಅದು ದೇಶಾಂತರ್ಗತ ಹೇಗೆ ಪರಿಣಾಮವನ್ನು ಬೀರುತ್ತದೆ, ಎಂಬುದರ ಉದಾಹರಣೆ ಇದಾಗಿತ್ತು. ಇದುವರೆಗೂ ಭಾರತವು ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಸಾಕಷ್ಟು ಸಹಾಯ ಮಾಡುವುದಿಲ್ಲ. ಇದರಿಂದ ಅಷ್ಟೇನೂ ರೋಷವಿಲ್ಲ. ಸಮಾಜಕಾರಣ ಹಾಗೂ ರಾಜಕಾರಣ ಇದು ಒಂದಕ್ಕೊಂದು ಹೊಂದಿಕೊಂಡಿರುತ್ತವೆ. ರಾಜೀವ ಗಾಂಧಿಯವರ ಹತ್ಯೆಯಿಂದಾಗಿ ಅಪ್ರಿಯ ಹಾಗೂ ಅಮಾನ್ಯ ಎನಿಸುವ ಒಂದು ಪರ್ವ ಭಾರತದ ರಾಜಕಾರಣದಲ್ಲಿ ಆರಂಭವಾಯಿತು. ಈ ಬಿಡುಗಡೆಯಿಂದ ಮುಂದೇನು ಆಗುತ್ತದೆ ಎಂಬುದನ್ನು ನೋಡೋಣ !
೨. ದಾರಾಸಿಂಹನ ಬಿಡುಗಡೆಯ ಮಾರ್ಗ ಮುಕ್ತ ?
ಹಿಂದುತ್ವನಿಷ್ಠರ ದೃಷ್ಟಿಯಲ್ಲಿ ಕ್ರೈಸ್ತ ಮಿಶನರಿ ಸ್ಟೇನ್ಸ್ ಇವನ ಹತ್ಯೆಯ ಪ್ರಕರಣದಲ್ಲಿ ಒಡಿಶಾದಲ್ಲಿನ ಸೆರೆಮನೆಯಲ್ಲಿ ಕೊಳೆಯುತ್ತಿರುವ ದಾರಾಸಿಂಹನ ಬಿಡುಗಡೆಯ ಮಾರ್ಗ ಇದರಿಂದ ಮುಕ್ತವಾಗಬಹುದೇ ? ಎಂಬ ಆಶೆ ಇದೆ. ‘ಸೆರೆಮನೆಯಿಂದ ಶಿಕ್ಷೆಯನ್ನು ಅನುಭವಿಸಿ ಹೊರಗೆ ಬರುವುದು’, ಎಂದರೆ ‘ಧರ್ಮಶಾಸ್ತ್ರದ ದೃಷ್ಟಿಯಲ್ಲಿ ಅಂದರೆ ‘ಕರ್ಮಫಲನ್ಯಾಯಕ್ಕನುಸಾರ ಲೆಕ್ಕಾಚಾರ ಪೂರ್ಣವಾಯಿತು’, ಎನ್ನುವ ಹಾಗಿಲ್ಲ’, ಎಂಬುದನ್ನು ಕೂಡ ಗಮನಿಸುವ ಅವಶ್ಯಕತೆಯಿದೆ. ಭಾರತೀಯ ಸಮಾಜವ್ಯವಸ್ಥೆಯಲ್ಲಿ ಮಾತ್ರ ಶಿಕ್ಷೆಯನ್ನು ಅನುಭವಿಸಿದ ನಂತರ ಹಿಂದಿನ ವಿಷಯ ಸಂಪೂರ್ಣ ಮುಗಿಯಿತು, ಎಂದಾಗುತ್ತದೆ. ಇಲ್ಲಿ ಇವೆರಡರಲ್ಲಿ ಯೋಗ್ಯ ಯಾವುದು, ಎಂಬುದರ ವಿಮರ್ಶೆಯು ಬಹುಶಃ ಈ ಸಮಯದಲ್ಲಿ ಮಾಡಬೇಕಾಗುತ್ತದೆ.
– ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷದ್. (೧೧.೧೧.೨೦೨೨)