ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ತಬಲಾವಾದನದ ವಿಷಯದಲ್ಲಿ ಮಾಡಿರುವ ಸಂಶೋಧನಾತ್ಮಕ ಪ್ರಯೋಗದ ಮುಖ್ಯಾಂಶಗಳು !

ಸುಶ್ರೀ (ಕು.) ತೇಜಲ ಪಾತ್ರಿಕರ

ಮಹಾರಾಷ್ಟ್ರದ ಡೊಂಬಿವಿಲಿ(ಠಾಣೆ)ಯ ತಬಲಾವಾದಕ ಶ್ರೀ. ಯೋಗೇಶ ಸೋವನೀ (ಸಂಗೀತ ಅಲಂಕಾರ (ತಬಲಾ)) ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಗಿರಿಜಯ ಪ್ರಭು ದೇಸಾಯಿ (ಸಂಗೀತ ವಿಶಾರದ (ತಬಲಾ)) ಇವರು ತಬಲಾದ ಮೇಲೆ ಝಪತಾಳದಲ್ಲಿನ ‘ಪೇಶಕಾರ’ (ಟಿಪ್ಪಣಿ ೧) ಈ ವಿಧವನ್ನು ಪ್ರಸ್ತುತ ಪಡಿಸಿದ ನಂತರ ಅರಿವಾದ ಅಂಶಗಳು

ಟಿಪ್ಪಣಿ ೧ – ತಬಲಾವಾದನದಲ್ಲಿ ಸಾಧಾರಣ ಎಲ್ಲ ಧ್ವನಿಗಳ ಸಹಾಯದಿಂದ ವಿವಿಧ ಲಯಗಳ ಮತ್ತು ವಜನಗಳ (ನಿರ್ಧಿಷ್ಟ ಲಯದಲ್ಲಿ ಮಾಡಿದ ಆಘಾತ) ಆಧಾರದಲ್ಲಿ ವಾದಕನ ಪ್ರತಿಭೆಯಿಂದ ಅರಳುತ್ತಾ ಹೋಗುವ ತಾಳಬದ್ಧ ಮತ್ತು ತಬಲಾವಾದನದಲ್ಲಿ ಪ್ರಾರಂಭದಲ್ಲಿ ಬಾರಿಸುವ ವಿಧಾನವೆಂದರೆ ಪೇಶಕಾರ

ತಬಲಾ ಬಾರಿಸುತ್ತಿರುವ ಎಡದಿಂದ ಶ್ರೀ. ಗಿರಿಜಯ ಪ್ರಭುದೇಸಾಯಿ ಮತ್ತು ಶ್ರೀ. ಯೋಗೇಶ ಸೋವನಿ
ಶ್ರೀ. ಗಿರಿಜಯ ಪ್ರಭುದೇಸಾಯಿ

 

ಶ್ರೀ. ಯೋಗೇಶ ಸೋವನಿ

೨೪.೩.೨೦೨೨ ರಂದು ‘ಡೊಂಬಿವಿಲಿಯ ತಬಲಾವಾದಕರಾದ ಶ್ರೀ. ಯೋಗೇಶ ಸೋವನೀ (ಸಂಗೀತ ಅಲಂಕಾರ (ತಬಲಾ)) ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಗಿರಿಜಯ ಪ್ರಭುದೇಸಾಯಿ (ಸಂಗೀತ ವಿಶಾರದ (ತಬಲಾ)) ಇವರು ಮಾಡಿದ ತಬಲಾವಾದನದಿಂದ ಸಂತರು, ಸಾಧಕರು ಮತ್ತು ವನಸ್ಪತಿಗಳ ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದನ್ನು ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ಒಂದು ಸಂಶೋಧನಾತ್ಮಕ ಪ್ರಯೋಗವನ್ನು ಮಾಡಲಾಯಿತು. ಈ ಪ್ರಯೋಗದ ಸಮಯದಲ್ಲಿ ತುಳಸಿ, ಗುಲಾಬಿ ಮತ್ತು ಕ್ಯಾಕ್ಟಸ್, ಈ ಮೂರು ವನಸ್ಪತಿಗಳನ್ನು ಇಡಲಾಗಿತ್ತು. ಈ ಪ್ರಯೋಗದಲ್ಲಿ ಕಪ್ಪು ಎರಡು ಸ್ವರಪಟ್ಟಿಯಲ್ಲಿನ ತಬಲಾಗಳನ್ನು (ಢಾಲಾ ತಬಲಾಗಳನ್ನು) ಉಪಯೋಗಿಸಲಾಯಿತು.

೧. ವನಸ್ಪತಿಗಳ ಸಂದರ್ಭದಲ್ಲಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಪಿ.ಎಸ್.)’ ಈ ಉಪಕರಣದ ಮೂಲಕ ಮಾಡಿದ ಪರೀಕ್ಷಣೆಯ ನಿಷ್ಕರ್ಷ

ತುಳಸಿಯಲ್ಲಿನ ನಕಾರಾತ್ಮಕ ಊರ್ಜೆ ದೂರವಾಗಿ ಅದರಲ್ಲಿನ ಸಕಾರಾತ್ಮಕ ಊರ್ಜೆಯು ೭ ಪಟ್ಟು ಹೆಚ್ಚಾಯಿತು. ಕ್ಯಾಕ್ಟಸ್ ಮತ್ತು ಗುಲಾಬಿ ಈ ವನಸ್ಪತಿಗಳಲ್ಲಿನ ನಕಾರಾತ್ಮಕ ಊರ್ಜೆಯು ಶೇ. ೭೫ ರಷ್ಟು ಕಡಿಮೆ ಆಯಿತು ಮತ್ತು ಅವುಗಳಲ್ಲಿ ಅನುಕ್ರಮವಾಗಿ ೨ ಮತ್ತು ೭ ಪಟ್ಟು ಸಕಾರಾತ್ಮಕ ಊರ್ಜೆಯು ನಿರ್ಮಾಣವಾಯಿತು.

೨. ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ಮೇಲಾದ ಪರಿಣಾಮ

೨ ಅ. ಸಾಧಕರಿಗೆ ಅರಿವಾದ ಅಂಶಗಳು

೧. ತಬಲಾವಾದನವನ್ನು ಆರಂಭಿಸಿದ ನಂತರ ತೊಂದರೆಯಿರುವ ಸಾಧಕರಿಗೆ ಅಸ್ವಸ್ಥವೆನಿಸಲು ಆರಂಭವಾಯಿತು. ಅವರಿಗೆ ವಾದನದ ಆನಂದವನ್ನು ಅನುಭವಿಸಿ ಸ್ಥಿರವಾಗಿರಲು ಸಾಧ್ಯವಾಗುತ್ತಿರಲಿಲ್ಲ. ಸಾಧಕರಿಗೆ ತೊಂದರೆಗಳನ್ನು ಕೊಡುವ ಕೆಟ್ಟ ಶಕ್ತಿಗಳ ಶಕ್ತಿ ಕಡಿಮೆಯಾಗಿರುವುದರಿಂದ ಅವರಿಗೆ ಪ್ರಯೋಗದ ಸಮಯದಲ್ಲಿ ಬೇಸರವಾಯಿತು.

೨. ‘ಪೇಶಕಾರ’ ಈ ವಿಧದಲ್ಲಿ ತಬಲಾವಾದನದ ವಿಲಂಬಿತ ಲಯದ ತುಲನೆಯಲ್ಲಿ ದ್ರುತ (ಶೀಘ್ರ) ಲಯದ ತಬಲಾವಾದನದಲ್ಲಿ ಮಾರಕ ತತ್ತ್ವ ಹೆಚ್ಚಿರುವುದರಿಂದ ತೊಂದರೆಯಿರುವ ಸಾಧಕರಿಗೆ ಹೆಚ್ಚು ತೊಂದರೆಯಾಯಿತು.

೩. ಓರ್ವ ಸಾಧಕಿಗೆ ವಾದನವನ್ನು ಕೇಳುವಾಗ ಇಡೀ ದೇಹಕ್ಕೆ ಸೂಕ್ಷ್ಮದಲ್ಲಿ ಏಟುಗಳು ಬೀಳುತ್ತಿವೆ ಎಂಬ ಅನುಭವ ಬಂದು ಅಸ್ವಸ್ಥವೆನಿಸುತ್ತಿತ್ತು. ಆದ್ದರಿಂದ ಪೂರ್ಣ ಪ್ರಯೋಗದಲ್ಲಿ ಅವಳು ಅಸ್ವಸ್ಥಳಾಗಿದ್ದಳು.

೩ ಆ. ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದಿಂದ ಮಾಡಿದ ಪರೀಕ್ಷಣೆಯ ನಿಷ್ಕರ್ಷ : ತೊಂದರೆಯಿರುವ ಸಾಧಕರಲ್ಲಿನ ನಕಾರಾತ್ಮಕ ಊರ್ಜೆಯು ಶೇ. ೫೦ ರಿಂದ ಶೇ. ೭೫ ರಷ್ಟು ಕಡಿಮೆಯಾಯಿತು ಹಾಗೂ ಸಕಾರಾತ್ಮಕ ಊರ್ಜೆಯು ಮೂರು ಪಟ್ಟು ಹೆಚ್ಚಾಯಿತು.

೩. ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕರು ಮತ್ತು ಸಂತರ ಮೇಲಾದ ಪರಿಣಾಮ

೩ ಅ. ಸಂತರು ಮತ್ತು ಸಾಧಕರಿಗೆ ಬಂದಿರುವ ಅನುಭೂತಿಗಳು

೧. ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಶ್ರೀ. ಸೋವನಿ ಇವರ ವಾದನ ಭಾವದ ಸ್ತರದಲ್ಲಿತ್ತು ಎಂದು ಅರಿವಾಯಿತು.

೨. ತಬಲಾವಾದನ ನಡೆದಿರುವಾಗ ಕು. ಅಪಾಲಾ ಔಂಧಕರ್ (೧೫ ವರ್ಷ, ನೃತ್ಯ ಅಭ್ಯಾಸಕಿ, ಆಧ್ಯಾತ್ಮಿಕ ಮಟ್ಟ ಶೇ. ೬೧) ಮತ್ತು ಕು. ಮ್ರಿಣ್ಮಯಿ ಕೇಳಶೀಕರ್ (ನಾಟ್ಯ ಅಭ್ಯಾಸಕಿ) ಇವರೊಂದಿಗೆ ಇತರ ೫ ಜನರಿಗೆ ‘ಶ್ರೀ. ಸೋವನಿಯವರಿಗೆ ಶಿವನ ಆಶೀರ್ವಾದವಿದೆ’, ಎಂದು ಅರಿವಾಗಿ ಭಗವಾನ ಶಿವನ ದರ್ಶನವಾಯಿತು.

೩. ಆಧುನಿಕ ಪಶುವೈದ್ಯ ಅಜಯ ಜೋಶಿ (೬೬ ವರ್ಷ, ಆಧ್ಯಾತ್ಮಿಕ ಮಟ್ಟ ಶೇ. ೬೮) ಮತ್ತು ಕು. ಅಪಾಲಾ ಔಂಧಕರ್ ಇವರಿಗೆ ತಬಲಾವಾದನ ಆರಂಭವಾದ ನಂತರ ಸುಗಂಧ ಬಂದು ಬಾಯಿಯಲ್ಲಿ ಸಿಹಿಯ ಅನುಭವ ಬಂದಿತು.

೪. ಕು. ಮೃಣಾಲಿನಿ ದೇವಘರೆ (ಭರತನಾಟ್ಯಮ್ ವಿಶಾರದೆ) ಮತ್ತು ಕು. ತೀರ್ಥಾ ದೇವಘರೆ (೧೭ ವರ್ಷ, ಭರತನಾಟ್ಯಮ್ ವಿಶಾರದೆ) ಇವರೊಂದಿಗೆ ಇತರ ಇಬ್ಬರು ಸಾಧಕರಿಗೆ ಆಜ್ಞಾಚಕ್ರ ಮತ್ತು ಸಹಸ್ರಾರಚಕ್ರದ ಮೇಲೆ ಒಳ್ಳೆಯ ಸಂವೇದನೆಗಳ ಅರಿವಾಗಿ ಹಳದಿಮಿಶ್ರಿತ ಬಿಳಿ ಪ್ರಕಾಶ ಕಾಣಿಸಿತು.

೩ ಆ. ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಉಪಕರಣದ ಮೂಲಕ ಮಾಡಿದ ಪರೀಕ್ಷಣೆಯ ನಿಷ್ಕರ್ಷ : ತೊಂದರೆಯಿರುವ ಸಾಧಕರ ನಕಾರಾತ್ಮಕ ಊರ್ಜೆಯು ಶೇ. ೫೦ ರಿಂದ ೭೦ ರಷ್ಟು ಕಡಿಮೆಯಾಗಿ ಸಕಾರಾತ್ಮಕ ಇಂಧನವು ಎರಡು ಪಟ್ಟು ಹೆಚ್ಚಾಯಿತು.

೪. ಇಬ್ಬರೂ ತಬಲಾವಾದಕರು (ಶ್ರೀ. ಯೋಗೇಶ ಸೋವನಿ ಮತ್ತು ಶ್ರೀ. ಗಿರಿಜಯ ಪ್ರಭುದೇಸಾಯಿ) ಮತ್ತು ಅವರ ವಾದ್ಯಗಳ (ತಬಲಾಗಳ) ಮೇಲಾದ ಪರಿಣಾಮ

ಇಬ್ಬರೂ ತಬಲಾವಾದಕರಲ್ಲಿನ ನಕಾರಾತ್ಮಕ ಊರ್ಜೆಯು ಶೇ. ೫೦ ರಿಂದ ೭೦ ರಷ್ಟು ಕಡಿಮೆಯಾಯಿತು ಮತ್ತು ಅವರಲ್ಲಿನ ಸಕಾರಾತ್ಮಕ ಊರ್ಜೆಯು ಮೂರು ಪಟ್ಟಿಗಿಂತಲೂ  ಹೆಚ್ಚಾಯಿತು. ಅವರ ವಾದ್ಯಗಳಲ್ಲಿನ ನಕಾರಾತ್ಮಕ ಊರ್ಜೆಯು ಶೇ. ೫೦ ರಿಂದ ೭೦ ರಷ್ಟು ಕಡಿಮೆಯಾಯಿತು ಹಾಗೂ ಸಕಾರಾತ್ಮಕ ಊರ್ಜೆಯು ೫ ರಿಂದ ೬ ಪಟ್ಟು ಹೆಚ್ಚಾಯಿತು.

೫. ನಿಷ್ಕರ್ಷ

ಈ ಪ್ರಯೋಗದಲ್ಲಿ ‘ಢಾಲಾ’ ತಬಲಾವನ್ನು ಬಾರಿಸಲಾಯಿತು. ಈ ತಬಲಾದ ವೈಶಿಷ್ಟ್ಯವೆಂದರೆ, ಈ ತಬಲಾದ ನಾದವು ಖರ್ಜಾಕಡೆ (ಟಿಪ್ಪಣಿ ೨) ಹೋಗುವುದಾಗಿರುವುದರಿಂದ ಅದು (ನಾದ) ಮೃದಂಗದಂತೆ ಅರಿವಾಯಿತು. ಇದರಿಂದ ಈ ನಾದದಿಂದ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯು ನಿರ್ಮಾಣವಾಗಿದ್ದರಿಂದ ತೊಂದರೆಯಿರುವ ಸಾಧಕರಿಗೆ ದೊಡ್ಡ ಪ್ರಮಾಣದಲ್ಲಿ ಚೈತನ್ಯ ದೊರೆತು ಅವರ ಸಕಾರಾತ್ಮಕ ಊರ್ಜೆಯು ಹೆಚ್ಚಾಗಿರುವುದು ನನ್ನ ಗಮನಕ್ಕೆ ಬಂದಿತು, ಹಾಗೆಯೇ ತೊಂದರೆಯಿಲ್ಲದ ಸಾಧಕರು, ವನಸ್ಪತಿ, ತಬಲಾ ಇತ್ಯಾದಿಗಳ ಮೇಲೆಯೂ ಈ ನಾದದಿಂದ ಹೆಚ್ಚು ಸಕಾರಾತ್ಮಕ ಪರಿಣಾಮವಾಗಿರುವುದು ಈ ಪ್ರಯೋಗದಿಂದ ಗಮನಕ್ಕೆ ಬಂದಿತು.

ಟಿಪ್ಪಣಿ ೨ – ಕೆಳಗಿನ ಹಂತದ ಧ್ವನಿ

– ಸುಶ್ರೀ (ಕುಮಾರಿ) ತೇಜಲ ಪಾತ್ರಿಕರ (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೨) ಸಂಗೀತ ವಿಶಾರದೆ, ಸಂಗೀತ ಸಮನ್ವಯಕಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೫.೩.೨೦೨೨)

ಆಧ್ಯಾತ್ಮಿಕ ತೊಂದರೆ

ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.