‘ರಾಮಾಯಣ’ ಮಾಲಿಕೆಯಲ್ಲಿ ರಾವಣನ, ಅಂದರೆ ಖಳನಾಯಕನ ಪಾತ್ರವನ್ನು ಸಾಕಾರಗೊಳಿಸಿದರೂ ಹೃದಯಮಂದಿರದಲ್ಲಿನ ಶ್ರೀರಾಮಭಕ್ತಿಯಿಂದ ನಿಜ ಜೀವನದಲ್ಲಿ ‘ಮಹಾನಾಯಕ’ ಅನಿಸಿಕೊಂಡ (ದಿ.) ಅರವಿಂದ ತ್ರಿವೇದಿ !

ರಾವಣನ ಪಾತ್ರದಲ್ಲಿ ಅರವಿಂದ ತ್ರಿವೇದಿ

 

(ದಿ.) ಅರವಿಂದ ತ್ರಿವೇದಿ

ರಾವಣನ ಪಾತ್ರದಲ್ಲಿನ ಅರವಿಂದ ತ್ರಿವೇದಿ ಮೊದಲು ಚಲನಚಿತ್ರ, ನಾಟಕ ಮತ್ತು ಲೋಕಗೀತೆಗಳಿಂದ ಜನರ ಮುಂದೆ ನಾಯಕನ ಆದರ್ಶ ವ್ಯಕ್ತಿತ್ವವನ್ನು ಇಡುತ್ತಿದ್ದರು; ಇಂದಿನ ಅನೇಕ ಚಲನಚಿತ್ರಗಳನ್ನು ನೋಡಿದರೆ, ‘ಜನರಿಗೆ ‘ನಾಯಕನಿಗಿಂತ ‘ಖಳ ನಾಯಕ’ನೇ ಹೆಚ್ಚು ಇಷ್ಟವಾಗುವುದು’ ಕಂಡುಬರುತ್ತದೆ. ಇತ್ತೀಚೆಗೆ ಚಲನಚಿತ್ರಗಳಲ್ಲಿ ಖಳ ನಾಯಕನನ್ನೇ ಹೆಚ್ಚು ವೈಭವೀಕರಿಸಲಾಗುತ್ತದೆ. ಈಗ ‘ಆದಿಪುರುಷ’ ಎಂಬ ಪ್ರಭು ಶ್ರೀರಾಮನ ಮೇಲಾಧಾರಿತ ಚಲನಚಿತ್ರ ಬರುತ್ತಿದೆ. ಅದರಲ್ಲಿ ಸಾಕಾರಗೊಳಿಸಿದ ರಾವಣನ ಪಾತ್ರವು ಪರಕೀಯ ದಾಳಿಕೋರ ಅಲ್ಲಾ ಉದ್ದೀನ ಖಿಲ್ಜೀಯ ಹಾಗೆ ಕಾಣಿಸುತ್ತದೆ. ಇದರಿಂದ ಹಿಂದೂಗಳಲ್ಲಿ ಈ ಚಲನಚಿತ್ರದ ವಿರುದ್ಧ ರೋಷವಿದೆ. ಈ ಮೊದಲು ಪರಿಸ್ಥಿತಿ ಬೇರೆ ಇತ್ತು. ಹಿಂದಿನ ಪೀಳಿಗೆಯ ಕಲಾವಿದರು ನಾಯಕನ ಪಾತ್ರದ ಹಾಗೆಯೆ ಖಳನಾಯಕನ ಪಾತ್ರವನ್ನೂ ಭಕ್ತಿಭಾವದಿಂದ ಮಾಡುತ್ತಿದ್ದರು. ಇದರಲ್ಲಿ ಅಗ್ರಸ್ಥಾನದಲ್ಲಿರುವ ಉದಾಹರಣೆ ಎಂದರೆ ದಿ. ರಾಮಾನಂದ ಸಾಗರ ನಿರ್ಮಿತ ‘ರಾಮಾಯಣ’ ಈ ಮಾಲಿಕೆಯಲ್ಲಿ ರಾವಣನ ಪಾತ್ರವನ್ನು ಸಾಕಾರಗೊಳಿಸಿರುವ ದಿ. ಅರವಿಂದ ತ್ರಿವೇದಿ ! ‘ಬೆಟ್ಟದಂತಹ ಶರೀರ, ದೊಡ್ಡ ಧ್ವನಿ ಮತ್ತು ಪ್ರಭಾವಶಾಲಿ ಸಂವಾದದಿಂದ ಅವರು ಪ್ರೇಕ್ಷಕರ ಮನಸ್ಸನ್ನು ಗೆದ್ದರು. ಅವರು ರಾವಣನ ಪಾತ್ರವನ್ನು ಸಾಕಾರಗೊಳಿಸಿದರೂ ಅವರ ಮನಸ್ಸಿನಲ್ಲಿ ಪ್ರಭುರಾಮಚಂದ್ರರ ಬಗ್ಗೆ ಅಪಾರ ಭಕ್ತಿ ಇತ್ತು. ಇಂದಿನ ಕಲಾವಿದರು ಅವರ ಅನುಕರಣೆ ಮಾಡಿ ಪಾತ್ರವನ್ನು ಸಾಕಾರಗೊಳಿಸಬಹುದೇ ?

ಕು. ರೇಣುಕಾ ಕುಲಕರ್ಣಿ

 

ಕು. ಮೃಣ್ಮಯಿ ಕೇಳಶೀಕರ

೧. ಅರವಿಂದ ತ್ರಿವೇದಿಯವರ ಪರಿಚಯ

ಅರವಿಂದ ತ್ರಿವೇದಿಯವರು ೮.೧೧.೧೯೩೭ ರಂದು ಇಂದೂರಿನಲ್ಲಿ (ಮಧ್ಯಪ್ರದೇಶ) ಜನಿಸಿದರು. ಅವರಿಗೆ ಚಿಕ್ಕಂದಿನಿಂದಲೇ ನಟನೆಯ ಆಸಕ್ತಿ ಇತ್ತು. ಅವರು ೩೦೦ ಕ್ಕಿಂತಲೂ ಹೆಚ್ಚು ಹಿಂದಿ ಹಾಗೂ ಗುಜರಾತಿ ಚಲನಚಿತ್ರಗಳಲ್ಲಿ ಮತ್ತು ರಂಗಭೂಮಿಯಲ್ಲಿ ನಟಿಸಿದ್ದಾರೆ. ಅವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾಗಿ ಲೋಕಸಭೆಯ ಚುನಾವಣೆಯನ್ನು ಎದುರಿಸಿ ಸಂಸದರಾದರು. ಅನಂತರ ಮಾತ್ರ ಅವರು ವಿಶೇಷ ಯಾವುದೇ ಪಾತ್ರವನ್ನು ಮಾಡಲಿಲ್ಲ. ಅವರು ರಾಮಭಕ್ತಿಗೆ ತಮ್ಮ ಜೀವನವನ್ನು ಸಮರ್ಪಿಸಿದ್ದರು. ೫.೧೦.೨೦೨೧ ರಂದು ಹೃದಯಾಘಾತದಿಂದ ಅವರ ನಿಧನವಾಯಿತು. ಮರಣದ ಸಮಯದಲ್ಲಿ ಅವರಿಗೆ ೮೩ ವರ್ಷ ವಯಸ್ಸಾಗಿತ್ತು.

೨. ರಾಮಾನಂದ ಸಾಗರ ಇವರ ‘ರಾಮಾಯಣ’ ಮಾಲಿಕೆಯಲ್ಲಿ ಅರವಿಂದ ತ್ರಿವೇದಿಯವರು ಸಾಕಾರಗೊಳಿಸಿದ ರಾವಣನ ಪಾತ್ರ

೨ ಅ. ‘ರಾಮಾಯಣ’ ಮಾಲಿಕೆಯಲ್ಲಿ ಪ್ರಭು ರಾಮಚಂದ್ರರನ್ನು ನದಿದಾಟಿಸುವ ನಾವಿಕನ ಪಾತ್ರ ಸಿಗಬೇಕೆಂದು’, ಅರವಿಂದ ತ್ರಿವೇದಿಯವರ ಇಚ್ಛೆಯಿತ್ತು : ೧೯೮೬ ರ ಸಮಯದಲ್ಲಿ ರಾಮಾನಂದ ಸಾಗರ ಇವರು ‘ರಾಮಾಯಣ’ ಮಾಲಿಕೆಗಾಗಿ ಪಾತ್ರಧಾರಿಗಳ ಆಯ್ಕೆಯನ್ನು ಆರಂಭಿಸಿದ್ದರು. ಅರವಿಂದ ತ್ರಿವೇದಿ ಇವರಿಗೆ ಈ ವಿಷಯ ತಿಳಿದಾಗ ಅವರಿಗೆ ಈ ಮಾಲಿಕೆಯಲ್ಲಿ ಸಣ್ಣ ಪಾತ್ರವನ್ನು ಮಾಡುವ ಇಚ್ಛೆ ಆಯಿತು. ಆ ದೃಷ್ಟಿಯಿಂದ ಅವರು ಚಿತ್ರೀಕರಣ ಮಾಡುವ ಸ್ಥಳಕ್ಕೆ ಹೋಗಿ ರಾಮಾನಂದ ಸಾಗರರನ್ನು ಭೇಟಿಯಾದರು. ಅವರು ರಾಮಾನಂದ ಸಾಗರರಿಗೆ, “ನನಗೆ ಪ್ರಭು ರಾಮಚಂದ್ರರನ್ನು ನದಿದಾಟಿಸುವ ನಾವಿಕನ ಪಾತ್ರವನ್ನು ಮಾಡುವ ಇಚ್ಛೆಯಿದೆ. ಈ ಪಾತ್ರದ ಮೂಲಕ ನನ್ನಿಂದ ಪ್ರಭು ರಾಮಚಂದ್ರರ ಸೇವೆಯಾಗುವುದು ಹಾಗೂ ನನ್ನ ಜೀವನ ಸಾರ್ಥಕವಾಗುವುದು. ಈ ನಾವಿಕನಿಗೆ ಪ್ರಭು ರಾಮಚಂದ್ರರ ಚರಣಸ್ಪರ್ಶ ಮಾಡುವ ಭಾಗ್ಯ ಲಭಿಸಿತ್ತು. ನಾನು ಕೂಡ ಪ್ರಭು ಶ್ರೀರಾಮರ ಪಾದ್ಯಪೂಜೆ ಮಾಡಿ ನನ್ನ ಭಕ್ತಿಯನ್ನು ಪ್ರಕಟಿಸಬಹುದು” ಎಂದು ಹೇಳಿದರು.

೨ ಆ. ರಾಮಾನಂದ ಸಾಗರ ಇವರು ಅರವಿಂದ ತ್ರಿವೇದಿಯವರ ವ್ಯಕ್ತಿತ್ವ ಮತ್ತು ರಾಮಭಕ್ತಿಯನ್ನು ನೋಡಿ ಅವರನ್ನು ರಾವಣನ ಪಾತ್ರಕ್ಕೆ ಆಯ್ಕೆ ಮಾಡುವುದು : ಅವರ ಮಾತನ್ನು ಕೇಳಿ ರಾಮಾನಂದ ಸಾಗರರು ಅವರಿಗೆ ಕೆಲವು ಸಂವಾದಗಳನ್ನು ಹೇಳಲು ಹೇಳಿದರು. ಆಗ ಅರವಿಂದರ ವ್ಯಕ್ತಿತ್ವ, ಅವರ ನಡೆಯುವ ಪದ್ಧತಿ ಹಾಗೂ ಪ್ರಮುಖವಾಗಿ ಅವರ ರಾಮಭಕ್ತಿಯನ್ನು ನೋಡಿ ಅವರನ್ನು ರಾವಣನ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಆಗ ರಾಮಾನಂದ ಸಾಗರರು, “ನನಗೆ ಇಂತಹ ರಾವಣನೇ ಬೇಕಾಗಿದ್ದನು, ವ್ಯಕ್ತಿಯಲ್ಲಿ ‘ಶಕ್ತಿ’ಯೂ ಇರಬೇಕು ಮತ್ತು ‘ಭಕ್ತಿ’ಯೂ ಇರಬೇಕು |” (ರಾಮಾನಂದ ಸಾಗರರು ಕೇವಲ ವ್ಯಕ್ತಿತ್ವವನ್ನು ನೋಡದೆ ಅರವಿಂದ ತ್ರಿವೇದಿಯವರಲ್ಲಿನ ಭಕ್ತಿಭಾವದ ಆಧಾರದಲ್ಲಿ ಅವರನ್ನು ರಾವಣನ ಪಾತ್ರಕ್ಕೆ ಆಯ್ಕೆ ಮಾಡಿದರು. ಇದರಿಂದ ‘ಆ ಕಾಲದಲ್ಲಿ ಕಲಾವಿದರ ಆಯ್ಕೆಯನ್ನು ಎಷ್ಟು ಯೋಗ್ಯರೀತಿಯಲ್ಲಿ ಮಾಡಲಾಗುತ್ತಿತ್ತು !’, ಎಂಬುದು ಗಮನಕ್ಕೆ ಬರುತ್ತದೆ. – ಸಂಕಲನಕಾರರು)

೨ ಇ. ಅರವಿಂದ ತ್ರಿವೇದಿಯವರು ಪ್ರತಿಸಲ ಚಿತ್ರೀಕರಣದ ಮೊದಲು ಪ್ರಭು ಶ್ರೀರಾಮ ಮತ್ತು ಶಿವನ ಪೂಜೆಯನ್ನು ಮಾಡುವುದು, ಚಿತ್ರೀಕರಣದಂದು ದಿನವಿಡೀ ಉಪವಾಸ ಮಾಡುವುದು ಮತ್ತು ರಾತ್ರಿ ರಾವಣನ ಪೋಷಾಕು ಬದಲಿಸಿ ಭೋಜನ ಮಾಡುವುದು  :

ಒಂದು ವರ್ತಮಾನ ಪತ್ರಿಕೆಯಲ್ಲಿನ ಲೇಖನದಿಂದ ನಮ್ಮ ಗಮನಕ್ಕೆ ಬಂದುದೇನೆಂದರೆ, ಅರವಿಂದ ತ್ರಿವೇದಿ ಇವರು ರಾಮ ಮತ್ತು ಶಿವನ ಭಕ್ತರಾಗಿದ್ದರು. ಅರವಿಂದ ತ್ರಿವೇದಿ ಇವರಿಗೆ ಈ ಪಾತ್ರವನ್ನು ಮಾಡುವಾಗ ಪ್ರತಿದಿನ ಭಾರವಾದ ಅಲಂಕಾರ ಮತ್ತು ಕಿರೀಟವನ್ನು ಧರಿಸಬೇಕಾಗುತ್ತಿತ್ತು. ಅವರಿಗೆ ‘ರಾವಣನ ಪಾತ್ರವನ್ನು ಸಾಕಾರಗೊಳಿಸುವುದು’, ಒಂದು ದೊಡ್ಡ ಸವಾಲಾಗಿತ್ತು. ಈ ಲೇಖನದಲ್ಲಿ ಅನುಭವ ಕಥನವನ್ನು ಮಾಡುವಾಗ ಅವರು ಹೇಳುತ್ತಾರೆ, ‘ಚಿತ್ರೀಕರಣ ಮಾಡಲು ಹೋಗುವ ಮೊದಲು ನನಗೆ ಮನಸ್ಸಿನಲ್ಲಿ ಅಳು ಬರುತ್ತಿತ್ತು. ‘ಸಂಹಿತೆಗನುಸಾರ ನನ್ನ ಆರಾಧ್ಯ ದೇವರಾಗಿರುವ ಪ್ರಭು ಶ್ರೀರಾಮರ ವಿರುದ್ಧ ಮಾತನಾಡುವುದು ಹಾಗೂ ಶ್ರೀರಾಮರಿಗೆ ವಿರೋಧವನ್ನು ಮಾಡುವುದು’, ಇದರ ಹೊರತು ನನಗೆ ಬೇರೆ ಪರ್ಯಾಯವೇ ಇರಲಿಲ್ಲ. ಚಿತ್ರೀಕರಣದ ಮೊದಲು ನಾನು ಪ್ರಭು ಶ್ರೀರಾಮ ಮತ್ತು ಶಿವನ ಪೂಜೆಯನ್ನು ಮಾಡುತ್ತಿದ್ದೆ. ಚಿತ್ರೀಕರಣ ಇರುವಾಗ ನಾನು ಇಡೀ ದಿನ ಉಪವಾಸ ಮಾಡುತ್ತಿದ್ದೆ. ಚಿತ್ರೀಕರಣ ಮುಗಿದ ನಂತರ ರಾತ್ರಿ ರಾವಣನ ಪೋಷಾಕನ್ನು ಬದಲಾಯಿಸಿ ನಾನು ಉಪವಾಸವನ್ನು ಬಿಡುತ್ತಿದ್ದೆ ಹಾಗೂ ಭೋಜನ ಮಾಡುತ್ತಿದ್ದೆ.’ (‘ಮನಸ್ಸಿನಲ್ಲಿ ಶ್ರೀರಾಮನ ಬಗ್ಗೆ ಅಪಾರ ಭಕ್ತಿ ಇರುವ ಮಹಾನ ಕಲಾವಿದ ಅರವಿಂದ ತ್ರಿವೇದಿ !’ – ಸಂಕಲನಕಾರರು)

೩. ರಾವಣನ ಪಾತ್ರವನ್ನು ಸಾಕಾರಗೊಳಿಸಿದ್ದರಿಂದ ‘ರಾವಣ’ನೆಂದು ಗುರುತಿಸಲ್ಪಡುವ ಅರವಿಂದ ತ್ರಿವೇದಿಯವರಿಗೆ ಹನುಮಾನ ಮಂದಿರದ ಪುರೋಹಿತರು ಮಂದಿರದಲ್ಲಿ ಪ್ರವೇಶ ನೀಡದಿರುವುದು

‘ರಾಮಾಯಣ’ ಮಾಲಿಕೆಯು ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಪ್ರಸಿದ್ಧವಾಯಿತು. ಜನರು ಅರವಿಂದ ತ್ರಿವೇದಿಯವರನ್ನು ‘ರಾವಣ’ನ ರೂಪದಲ್ಲಿ ಗುರುತಿಸಲು ಆರಂಭಿಸಿದ್ದರು. ಈ ವಿಷಯದಲ್ಲಿ ಅವರಿಗೆ ಒಂದು ಕೆಟ್ಟ ಅನುಭವ ಕೂಡ ಬಂದಿತು. ಒಮ್ಮೆ ಅವರು ಹನುಮಾನಗಢೀ (ಅಯೋಧ್ಯೆ) ಯ ಮಂದಿರದಲ್ಲಿ ದರ್ಶನ ಪಡೆಯಲು ಹೋಗಿದ್ದರು. ಆಗ ಅಲ್ಲಿನ ಪುರೋಹಿತನು ಅವರನ್ನು ತಡೆದನು. ಪುರೋಹಿತನು ಅವರಿಗೆ, “ನೀವು ಪ್ರಭು ಶ್ರೀರಾಮಚಂದ್ರ ಮತ್ತು ಹನುಮಾನನ ವಿಷಯದಲ್ಲಿ ಅವಮಾನಕಾರಿ ಶಬ್ದಗಳನ್ನು ಉಪಯೋಗಿಸಿದ್ದೀರಿ. ನಿಮಗೆ ಮಂದಿರದಲ್ಲಿ ಪ್ರವೇಶವಿಲ್ಲ” ಎಂದನು. ತ್ರಿವೇದಿಯವರು ಅನೇಕ ಬಾರಿ ವಿನಂತಿಸಿದರೂ ಅವರಿಗೆ ಮಂದಿರದಲ್ಲಿ ಪ್ರವೇಶ ಸಿಗಲಿಲ್ಲ. (ಇದರಿಂದ ಆ ಕಾಲದಲ್ಲಿನ ಜನರ ಭಕ್ತಿಯೂ ಕಂಡುಬರುತ್ತದೆ. ಆಗ ‘ತ್ರಿವೇದಿಯವರಿಗೆ ಆ ಮಂದಿರದಲ್ಲಿ ಪ್ರವೇಶ ಸಿಗಲಿಲ್ಲ, ಇದು ದುರ್ಭಾಗ್ಯ !’ ಆದರೆ ‘ಖಳನಾಯಕನ ಪಾತ್ರವನ್ನು ಮಾಡಿಯೂ ಅವರ ಹೃದಯ ಮಂದಿರದಲ್ಲಿನ ಭಕ್ತಿಯಿಂದಾಗಿ ಅವರು ನಿಜ ಜೀವನದಲ್ಲಿ ‘ಮಹಾನಾಯಕ’ರಾದರು. – ಸಂಕಲನಕಾರರು)

– ಕು. ಮೃಣ್ಮಯಿ ಕೇಳಶೀಕರ್,  ಕು. ರೇಣುಕಾ ಕುಲಕರ್ಣಿ

(ಆಧಾರ : ಜಾಲತಾಣ) ಸಂಗ್ರಹ : ಕು. ರೇಣುಕಾ ಕುಲಕರ್ಣಿ ಮತ್ತು ಕು. ಮೃಣ್ಮಯಿ ಕೇಳಶೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೭.೧೦.೨೦೨೧)

ಹಿಂದೂ ರಾಷ್ಟ್ರ ನಿರ್ಮಿತಿಗಾಗಿ ಧರ್ಮಶಿಕ್ಷಣದ ಮಹತ್ವ ! : ಧರ್ಮಶಿಕ್ಷಣದಿಂದ ಕೃತಿ ಅಂದರೆ, ಸಾಧನೆಯಾಗುವುದು, ಸಾಧನೆಯಿಂದ ಅನುಭೂತಿ ಬರುವುದು, ಅನುಭೂತಿಯಿಂದ ಶ್ರದ್ಧೆ ಹೆಚ್ಚಾಗುತ್ತದೆ. ಶ್ರದ್ಧೆಯಿಂದ ಅಭಿಮಾನ ಹೆಚ್ಚಾಗುತ್ತದೆ, ಅಭಿಮಾನದಿಂದ ಸಂಘಟನೆ ಹೆಚ್ಚಾಗುವುದು, ಸಂಘಟನೆಯಿಂದ ಸಂರಕ್ಷಣೆ ನಿರ್ಮಾಣವಾಗುವುದು ಮತ್ತು ಅದರಿಂದಲೇ ಹಿಂದೂ ರಾಷ್ಟ್ರದ ನಿರ್ಮಿತಿ ಹಾಗೂ ಸಂವರ್ಧನೆಯಾಗುವುದು.