ದೇಹದ ವಿವಿಧ ಅವಯವಗಳಿಗನುಸಾರ ವರ್ಣವ್ಯವಸ್ಥೆ !

‘ಜಾತಿಪಾತಿಗಳಿಂದ ಯಾವುದೇ ವರ್ಣವನ್ನು ಪ್ರತ್ಯೇಕಿಸಬಾರದು; ಏಕೆಂದರೆ ಇದೊಂದು ಸಾಮಾಜಿಕ ನಿಯಮವಾಗಿದೆ ಮತ್ತು ಅದು ಪ್ರತಿಯೊಬ್ಬರ ಗುಣ ಮತ್ತು ಕರ್ಮಗಳ ವ್ಯತ್ಯಾಸವನ್ನಾಧರಿಸಿದೆ.

೧. ಬ್ರಾಹ್ಮಣ ವರ್ಣದ ಸ್ವರೂಪ

ಶರೀರದ ಕುತ್ತಿಗೆಯ ವರೆಗಿನ ಭಾಗವೆಂದರೆ ಈಶ್ವರನ ಚಿಂತನ ಯೋಗ ! ಶರೀರದ ಎಲ್ಲ ಅವಯವಗಳ ಸಂಚಲನೆಯೆಂದರೆ ಶರೀರರೂಪಿ ಸಮಾಜವನ್ನು ನಿರ್ವಹಿಸುವುದು.

೨. ಕ್ಷತ್ರಿಯ ವರ್ಣದ ಸ್ವರೂಪ

ಕೈ ಮತ್ತು ಹೆಗಲುಗಳು, ಅಂದರೆ ರಕ್ಷಣೆಯ ಜವಾಬ್ದಾರಿ ! ಪ್ರತಿಯೊಂದು ಭಾರವನ್ನು ಸಹಿಸಿಕೊಳ್ಳುವುದು ಮತ್ತು ಪ್ರತಿ ಯೊಂದು ಕಾರ್ಯವನ್ನು ಸಂಪಾದನೆ ಮಾಡುವುದು.

೩. ವೈಶ್ಯ ವರ್ಣದ ಸ್ವರೂಪ 

ಹೊಟ್ಟೆ ಎಂದರೆ ಕೊಡು-ಕೊಳ್ಳುವುದು ಇವುಗಳ ಕಾರ್ಯ ! ಶರೀರಕ್ಕಾಗಿ ಭೋಜನವನ್ನು ಪಚನ ಮಾಡುವುದು ಮತ್ತು ಶಕ್ತಿ ಯನ್ನು ದೊರಕಿಸುವುದು.

೪. ಶೂದ್ರ ವರ್ಣದ ಸ್ವರೂಪ 

ಮನುಷ್ಯನ ದಿನನಿತ್ಯದ ಜೀವನಕ್ರಮ ! ಎಲ್ಲವನ್ನು ಸಮರ್ಪಿಸಿ ಕೊಳ್ಳುವುದು ಅಂದರೆ ಸತತವಾಗಿ ಕಾರ್ಯನಿರತವಾಗಿರುವುದು, ಇದು ಅವನ ಕಾರ್ಯವಾಗಿರುತ್ತದೆ. ರಸ್ತೆ ಇರಲಿ, ಕೆಸರು ಇರಲಿ ಅಥವಾ ಬೆಟ್ಟವಿರಲಿ. ದಾರಿಯಲ್ಲಿ ಏನೇ ಬಂದರೂ. ನಿಲ್ಲಬಾರದು.

೫. ಕಾರ್ಯಕ್ಕನುಸಾರ ವ್ಯಕ್ತಿಗೆ

‘ಇಂತಹ ಸಮಾಜ’ದವನು ಎಂದು ನಂಬಲಾಗುತ್ತದೆ; ಹೀಗಿರುವಾಗ ಭೇದಭಾವವನ್ನು ಏಕೆ ಮಾಡಬೇಕು ? ಕೃಷಿಗೆ ಸಂಬಂಧಪಟ್ಟಿರುವ ಕಾರ್ಯವನ್ನು ಮಾಡುವವರಿಗೆ ‘ರೈತ’, ಎಂದು ಕರೆಯಲಾಗುತ್ತದೆ. ಉತ್ಪಾದನೆಯನ್ನು ಮಾಡು ವವರು ಕಾರಖಾನೆಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ಮಾಡುತ್ತಾರೆ, ಅವರಿಗೆ ಅಭಿಯಂತ (ಇಂಜಿನಿಯರ್) ಎಂದು ಗುರುತಿಸಲಾಗುತ್ತದೆ. ಅದೇ ರೀತಿ ಯಾವುದಾದರೊಬ್ಬ ವ್ಯಕ್ತಿಯು ಯಾವ ಕಾರ್ಯವನ್ನು ಮಾಡುತ್ತಾನೆಯೋ, ಅವನು ಆ ಸಮಾಜದೊಂದಿಗೆ ಸಂಬಂಧಿಸಿದ್ದಾನೆ ಎಂದು ಹೇಳಲಾಗುತ್ತದೆ. (ಅಂದರೆ ಕಾರ್ಯಕ್ಕನುಸಾರ ವ್ಯಕ್ತಿಗೆ ‘ಇಂತಹ ಸಮಾಜ’ದವನು ಎಂದು ಹೇಳಲಾಗುತ್ತದೆ) ಹೀಗಿರುವಾಗ ಏಕೆ ಭೇದಭಾವ ಮಾಡಬೇಕು ?

೬. ನಿಸರ್ಗದಿಂದ ಅಭಿವೃದ್ಧಿ ಹೊಂದಿದ ರೂಢಿ ಮತ್ತು ಪರಂಪರೆ ! 

‘ಜಗತ್ತಿನಲ್ಲಿ ೩೩ ಕೋಟಿ ಕಾರ್ಯಗಳಿವೆ. ಅದಕ್ಕಾಗಿ ೩೩ ಕೋಟಿ ದೇವತೆಗಳಿದ್ದಾರೆ’, ಎಂದು ನಂಬಲಾಗುತ್ತದೆ. ಕಲ್ಲು, ಮನೆ, ಗಿಡಗಳು, ಹಣ್ಣುಗಳು, ಹೂವುಗಳು, ನೀರು, ಜೀವನ, ಪೃಥ್ವಿ, ಆಹಾರ ಮತ್ತು ವಾಸಿಸುವ ವ್ಯವಸ್ಥೆ, ಅಗ್ನಿ ಮತ್ತು ಆಕಾಶ ಇವುಗಳು ಸಹ ಜೀವನಕ್ಕಾಗಿ ಅತ್ಯಂತ ಉಪಯುಕ್ತವಾಗಿರುವ ತತ್ತ್ವಗಳಿವೆ. ಅವರಿಂದ ಜೀವನ ನಡೆಯುತ್ತದೆ. ಅವರಿಂದಾಗುವ ಅಥವಾ ಅವರ ಸಹಾಯದಿಂದಾಗುವ ಎಲ್ಲ ಕಾರ್ಯಗಳಿಗೆ ನಾವು (ಹಿಂದೂಗಳು) ದೇವತೆಗಳೆಂದು ನಂಬಿದ್ದೇವೆ; ಏಕೆಂದರೆ ಅವರು ನಮಗೆ ಸತತವಾಗಿ ಏನಾದರೊಂದು ಕೊಡುತ್ತಿರುತ್ತಾರೆ. ನಮ್ಮಿಂದ ಏನೂ ತೆಗೆದುಕೊಳ್ಳುವುದಿಲ್ಲ. ಈ ಕೊಡು-ಕೊಳ್ಳುವುದು ವೈಜ್ಞಾನಿಕ ಆಧಾರದಿಂದಲೇ ಆಗುತ್ತದೆ. ಆದುದರಿಂದ ನಿಸರ್ಗದಿಂದ ಅಭಿವೃದ್ಧಿಗೊಂಡಿರುವ ರೂಢಿ ಮತ್ತು ಪರಂಪರೆಗಳು ಪ್ರಾಚೀನಕಾಲದಿಂದಲೂ ಬಂದಿರುತ್ತವೆ. ಇದನ್ನೇ ಜಗತ್ತು ‘ಸನಾತನ’ ಎಂದು ಕರೆಯುತ್ತದೆ. ಇದಕ್ಕೆ ನಾವು ಧರ್ಮಾಂಧತೆ ಅಥವಾ ರೂಢಿವಾದ ಅಥವಾ ಅಪ್ರಗತಿಶೀಲತೆ ಎಂದು ಹೇಗೆ ನಂಬಬೇಕು ? ಅರೆ, ಈ ನಿಸರ್ಗ ಇಲ್ಲದಿದ್ದರೆ ಅಥವಾ ನಾವು ಅದಕ್ಕೆ ಸಹಕಾರ್ಯವನ್ನು ಮಾಡದಿದ್ದರೆ, ಹೇಗೆ ಜೀವನ ನಡೆಸುವುದು ?’  – ರಾಮಗೋಪಾಲ

(ಆಧಾರ : ಮಾಸಿಕ ‘ಅಕ್ಷರ ಪ್ರಭಾತ’, ಜನವರಿ ೨೦೨೦)

ಭಗವಾನ ಶ್ರೀಕೃಷ್ಣನಂತಿರುವ ಚತುರ ಮಾರ್ಗದರ್ಶಕನಿಗಾಗಿ ಭಾರತ ಭೂಮಿಯು ಸತತವಾಗಿ ತಳಮಳಿಸುತ್ತಿದೆ ! 

ಭಾರತ ಭೂಮಿಯು ಪ್ರತಿಯೊಂದು ಯುಗದಲ್ಲಿ ವೀರರಿಗೆ ಜನ್ಮ ನೀಡಿ ಶೌರ್ಯಶಕ್ತಿಯನ್ನು ಎಂದಿಗೂ ಕಡಿಮೆ ಮಾಡಲಿಲ್ಲ. ಹಾಗೆ ನೋಡಿದರೆ ಪ್ರತಿಯೊಂದು ಯುಗದಲ್ಲಿ ಎಂದಿನಂತೆ ಒಂದು ದೊಡ್ಡ ಯುದ್ಧವು ಆಗುತ್ತಲೇ ಇದೆ. ಸತ್ಯಯುಗದಲ್ಲಿ ದೇವ-ದಾನವ, ತ್ರೇತಾಯುಗದಲ್ಲಿ ರಾಮ-ರಾವಣರ ಯುದ್ಧ, ದ್ವಾಪಾರ ಯುಗದಲ್ಲಿ ಮಹಾ ಭಾರತ ಮತ್ತು ಕಲಿಯುಗದಲ್ಲಿಯೂ ಸಹ ಎರಡು ಮಹಾ ಯುದ್ಧಗಳಾಗಿವೆ. ಈ ಯುದ್ಧದಲ್ಲಿ ವೀರರು ತಮ್ಮತಮ್ಮ ಯೋಗ್ಯತೆಗನುಸಾರ ಶೌರ್ಯಶಕ್ತಿಯ ಉಪಯೋಗವನ್ನು ಉತ್ತಮವಾಗಿ ಮಾಡಿದ್ದಾರೆ; ಆದರೆ ದ್ವಾಪರಯುಗದಲ್ಲಿ ಮಹಾಭಾರತವು ಭಾರತ ಭೂಮಿಯಿಂದ ಶಸ್ತ್ರ ಮತ್ತು ಅಸ್ತ್ರಗಳನ್ನು ನಾಶಗೊಳಿಸಿದೆ. ಶ್ರೀಕೃಷ್ಣನು ಮಹಾಭಾರತದ ನಂತರ ಜಗತ್ತು ಪುನಃ ಸ್ಥಾಪಿಸಿದನು ಅವನು ತನ್ನ ಜೀವನ ದಲ್ಲಿನ ಸುಮಾರು ೮೦ ವರ್ಷಗಳವರೆಗೆ ಪೃಥ್ವಿಗೆ ಯಾವ ರೀತಿ ಶಸ್ತ್ರ ಮತ್ತು ಶಾಸ್ತ್ರಗಳಿಂದ ಸಜ್ಜಗೊಳಿಸಬೇಕು, ಎಂಬ ಕಾರ್ಯವನ್ನೇ ಕೈಗೊಂಡನು. ಶ್ರೀಕೃಷ್ಣನ ವಯಸ್ಸು ೧೨೭ ವರ್ಷಗಳಿದ್ದವು; ಆದರೆ ಅವನ ಅವತಾರೀ ಕಾರ್ಯದ ನಂತರ ಭಾರತಭೂಮಿಯು ಸತತವಾಗಿ ಒಬ್ಬ ಚತುರ ಮಾರ್ಗದರ್ಶಕನಿಗಾಗಿ ತಳಮಳಿಸುತ್ತಿದೆ. – ರಾಮಗೋಪಾಲ