ಹಿಂದೂ ಜನಜಾಗೃತಿ ಸಮಿತಿಯಿಂದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’
ಆನೇಕಲ್ (ಬೆಂಗಳೂರು) : ಇಂದು ಮತಾಂತರ ಪ್ರಮಾಣ ಹೆಚ್ಚಾಗಿದೆ. ಮತಾಂತರವು ಆಸ್ಪತ್ರೆ ಮತ್ತು ಶಾಲೆಗಳ ಮೂಲಕ ನಡೆಯುತ್ತಿದೆ. ಅಜ್ಞಾನದಿಂದಾಗಿ ಮತಾಂತರ ನಡೆಯುತ್ತಿದೆ. ಇದಕ್ಕಾಗಿ ಇವತ್ತು ಹಿಂದೂಗಳಿಗೆ ಧರ್ಮಶಿಕ್ಷಣ ಅವಶ್ಯಕತೆಯಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಇವರು ಕರೆ ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿಯಿಂದ ಆನೇಕಲ್ ತಾಲ್ಲೂಕಿನ ಶ್ರೀ ದಕ್ಷಿಣಾಭಿಮುಖ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ಬನಹಳ್ಳಿಯಲ್ಲಿ ಆಯೋಜಿಸಿದ್ದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಬನಹಳ್ಳಿ ಗ್ರಾಮದ ಭಾಜಪದ ಅಧ್ಯಕ್ಷರಾದ ಶ್ರೀ. ಬಿ.ಬಿ.ಐ ರಾಜು, ಗ್ರಾಮದ ಮುಖ್ಯಸ್ಥರಾದ ಶ್ರೀ. ಸೋಮಶೇಖರ್ ರೆಡ್ಡಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಇವರು ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ೧೫೦ ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು. ಶ್ರೀ. ಬಿಬಿಐ ರಾಜು ಇವರು ಮಾತನಾಡಿ, ಈ ರೀತಿಯ ಹಿಂದೂ ರಾಷ್ಟ್ರ-ಜಾಗೃತಿಯ ಸಭೆಗಳು ಪ್ರತಿಯೊಂದು ಗ್ರಾಮದಲ್ಲಿ ನಡೆಯಬೇಕು. ಇದಕ್ಕಾಗಿ ಎಲ್ಲಾ ಯುವಕರು, ಗ್ರಾಮಸ್ಥರು ಯಾವುದೇ ಜಾತಿ-ಭೇದವಿಲ್ಲದೇ ಒಂದಾಗಬೇಕು ಎಂದರು.