೧ ಸಾವಿರ ೫೦೦ ವರ್ಷಗಳ ಹಿಂದೆಯೇ ಪೃಥ್ವಿಯ ವ್ಯಾಸವನ್ನು ಹೇಳಿದ್ದ ಆರ್ಯಭಟ್ಟರು !

ಗುಜರಾತನಲ್ಲಿನ ಸೋಮನಾಥ ಮಂದಿರದ ರಹಸ್ಯಮಯ ‘ಬಾಣಸ್ತಂಭವು ಪ್ರಾಚೀನ ಭಾರತೀಯ ಸಂಸ್ಕೃತಿಯ ಸಾಕ್ಷಿದಾರ !

(ದಿ.) ಶಿರೀಷ ದೇಶಮುಖ

ಗುಜರಾತದ ಸಮುದ್ರ ತೀರದ ವೆರಾವಳದಲ್ಲಿರುವ ಸೋಮನಾಥ ಮಂದಿರವು ಹಿಂದೂಗಳ ಎಲ್ಲ ಕ್ಕಿಂತ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾ ಗಿದೆ. ಅನೇಕ ಪರಕೀಯ ಆಕ್ರಮಣ ಕಾರರು ಪುನಃ ಪುನಃ ಅದನ್ನು ಧ್ವಂಸ ಗೊಳಿಸಿದರೂ, ಅದರ ಪುನರ್ ನಿರ್ಮಾಣವನ್ನು ಮಾಡಲಾಯಿತು. ಸೋಮನಾಥ ಮಂದಿರದ ಪರಿಸರದಲ್ಲಿ ‘ಬಾಣಸ್ತಂಭ’ ಎಂಬ ಹೆಸರಿನ ಒಂದು ಸ್ತಂಭವಿದ್ದು ಅದರ ಸುತ್ತ ಅನೇಕ ರಹಸ್ಯಗಳಿವೆ. ಈ ಸ್ತಂಭವನ್ನು ಯಾವಾಗ ಕಟ್ಟಲಾಯಿತು, ಎಂಬುದರ ನಿಶ್ಚಿತ ಪುರಾವೆಗಳಿಲ್ಲ. ಆದರೂ ಕೆಲವು ಪುರಾತತ್ತ್ವ ತಜ್ಞರ ಪ್ರಕಾರ ಅದನ್ನು ೬ ನೇ ಶತಮಾನದಲ್ಲಿ ಕಟ್ಟಿರಬಹುದು. ಮಹತ್ವದ ವಿಷಯವೆಂದರೆ, ಈ ಸ್ತಂಭ ಹಾಗೇನು ವಿಶೇಷವಾಗಿಲ್ಲ, ಆದರೆ ಅದರ ಮೇಲಿರುವ ಸಂಸ್ಕೃತ ಶಿಲಾಲೇಖವು ಆಶ್ಚರ್ಯಕರವಾಗಿದೆ. ಈ ಶಿಲಾಲೇಖವು ಸಂಸ್ಕೃತ ಭಾಷೆಯಲ್ಲಿದ್ದು ಅದರ ಅರ್ಥ ‘ಈ ಬಿಂದುವಿನಿಂದ ದಕ್ಷಿಣ ಧ್ರುವದವರೆಗಿನ ನೇರ ರೇಖೆಯಲ್ಲಿ ಯಾವುದೇ ಅಡತಡೆ(ಭೂಮಿ)ಯಿಲ್ಲ’, ಎಂದಾಗಿದೆ.

೧. ಸೋಮನಾಥ ಮಂದಿರದಿಂದ ದಕ್ಷಿಣ ಧ್ರುವದ ವರೆಗಿನ ರೇಖೆಯಲ್ಲಿ ಯಾವುದೇ ಭೂಖಂಡ ಸಿಗಲಿಲ್ಲ ಹಾಗೂ ‘ಬಾಣಸ್ತಂಭವು ಕೇವಲ ದಕ್ಷಿಣ ಧ್ರುವದ ಕಡೆಗೇ ನಿರ್ದೇಶವನ್ನು ಮಾಡುವುದು

ವಿಶೇಷವೆಂದರೆ ಈಗ ಉಪಲಬ್ಧವಿರುವ ಆಧುನಿಕ ಉಪಕರಣಗಳಿಂದ ಈ ಮಾರ್ಗದ ಮೇಲೆ ಯಾವುದೇ ಭೂಮಿ ಇಲ್ಲವೆಂದು ತಿಳಿದು ಬಂದಿದೆ; ಆದರೆ ಗಮನಿಸಬೇಕಾದ ಮಹತ್ವದ ವಿಷಯ ವೇನೆಂದರೆ, ೧ ಸಾವಿರದ ೫೦೦ ವರ್ಷಗಳ ಹಿಂದೆ ಆ ಸ್ತಂಭದ ಮೇಲೆ ಅಂದರೆ ‘ಬಾಣಸ್ತಂಭದ ಮೇಲೆ ಅದನ್ನು ಬರೆಯಲಾಗಿತ್ತು, ಆಗ ‘ಗೂಗಲ್ ಅಥವಾ ಆಧುನಿಕ ಭೂ-ಮ್ಯಾಪಿಂಗ್ ಉಪಕರಣಗಳು, ಡ್ರೋನ್ ಅಥವಾ ಉಪಗ್ರಹಗಳಿರಲಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆ ಕಾಲದಲ್ಲಿ ಪೃಥ್ವಿ ಗೋಲಾಕಾರವಾಗಿದೆ, ಉತ್ತರ ಮತ್ತು ದಕ್ಷಿಣ ಧ್ರುವಗಳಿವೆ, ಎಂಬುದು ತಿಳಿದಿರುವ ಭಾರತೀಯ ವಿಜ್ಞಾನಿಗಳಿದ್ದರು. ‘ಆ ಕಾಲದಲ್ಲಿ ಭಾರತವು ಹಿಂದುಳಿದ ದೇಶವಾಗಿತ್ತು, ಅದರಲ್ಲಿ ತಥಾಕಥಿತ ಹಿಂದು ಳಿದ ತಾಂತ್ರಿಕ ವಿಜ್ಞಾನಿಗಳಿದ್ದರು, ಎಂದು ಇಂದಿನ ಭಾರತೀಯ ಬುದ್ಧಿವಾದಿಗಳು ಹೇಳುತ್ತಾರೆ; ಆದರೆ ಭಾರತದಲ್ಲಿ ಎಂತಹ ವಿದ್ವಾಂಸರಿದ್ದರು, ಎಂದರೆ ಅವರು ಸೋಮನಾಥ ಮಂದಿರದಿಂದ ದಕ್ಷಿಣ ಧ್ರುವದ ವರೆಗಿನ ರೇಖೆಯನ್ನು ನಡುವೆ ಎಲ್ಲಿಯೂ ಭೂಮಿ ಬರದಂತೆ ಚಾಚೂ ತಪ್ಪದೆ ತೋರಿಸ ಬಲ್ಲರು. ‘ಬಾಣಸ್ತಂಭವು ಕೇವಲ ದಕ್ಷಿಣ ಧ್ರುವದ ಕಡೆಗೇ ನಿರ್ದೇಶ ಮಾಡುವುದಲ್ಲ, ಅದು ಪ್ರಾಚೀನ ಭಾರತದಲ್ಲಿನ ಖಗೋಲಶಾಸ್ತ್ರ, ಭೂಗೋಲ, ಗಣಿತ ಮತ್ತು ಸಾಗರದ ಶಾಸ್ತ್ರದ ಜ್ಞಾನವನ್ನೂ ಸ್ಪಷ್ಟಪಡಿಸುತ್ತದೆ.

೨. ಆರ್ಯಭಟ್ಟರು ಕ್ರಿಸ್ತ ಶಕ ೫೦೦ ರಲ್ಲಿಯೇ ‘ಗೋಲಾಕಾರವಾಗಿರುವ ಪೃಥ್ವಿಯ ವ್ಯಾಸ ಸುಮಾರು ೪೦ ಸಾವಿರ ೧೬೮ ಕಿಲೋಮೀಟರ್ ಇದೆ, ಎಂದು ಹೇಳುವುದು

‘ವಿಶೇಷವೆಂದರೆ, ಪೃಥ್ವಿ ಗೋಲಾಕಾರವಾಗಿದೆ, ಎಂಬುದನ್ನು ಯುರೋಪ್‌ನಲ್ಲಿನ ವಿಜ್ಞಾನಿಗಳು ಮೊದಲು ಕಂಡುಹಿಡಿದರು, ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ, ಆದರೆ ಇದರ ವಾಸ್ತವಿಕತೆಯು ಭಾರತೀಯರಿಗೆ ಮೊದಲೇ ತಿಳಿದಿತ್ತು. ಆರ್ಯಭಟ್ಟರು ಕ್ರಿಸ್ತ ಶಕ ೫೦೦ ರಲ್ಲಿ ‘ಈ ಗೋಲಾಕಾರ ಪೃಥ್ವಿಯ ವ್ಯಾಸ ಸುಮಾರು ೪೦ ಸಾವಿರದ ೧೬೮ ಕಿಲೋಮೀಟರ್ ಇದೆ ಎಂಬುದರ ಅಳತೆಯನ್ನು ಮಾಡಿದ್ದರು. ಇಂದಿನ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಪೃಥ್ವಿಯ ವ್ಯಾಸ ೪೦ ಸಾವಿರ ೭೫ ಕಿಲೋ ಮೀಟರ್ ಎಂದು ಗ್ರಹಿಸಲಾಗಿದೆ, ಆಂದರೆ ಆರ್ಯಭಟ್ಟರ ಮೌಲ್ಯಾಂಕನದಲ್ಲಿ ಕೇವಲ ಶೇ. ೦.೨ ರಷ್ಟೇ ನಗಣ್ಯ ವ್ಯತ್ಯಾಸವಿತ್ತು. ಆದ್ದರಿಂದ ಸುಮಾರು ೧ ಸಾವಿರದ ೫೦೦ ವರ್ಷಗಳ ಹಿಂದೆ ಆರ್ಯಭಟ್ಟರು ಅದನ್ನು ಕಂಡು ಹಿಡಿದರು ಮತ್ತು ಅಂಟಾರ್ಕ್ಟಿಕದ ಕಡೆಗೆ ನಿರ್ದೇಶನ ಮಾಡುವ ಸೋಮನಾಥ ಮಂದಿರದಲ್ಲಿನ ‘ಬಾಣಸ್ತಂಭವು ಈ ಶೋಧದ ಸಾಕ್ಷಿಯಾಗಿದೆ. – ಶ್ರೀ. ಶಿರೀಷ ದೇಶಮುಖ (ಆಧ್ಯಾತ್ಮಿಕ ಮಟ್ಟ ಶೇ. ೬೨), ಸನಾತನ ಆಶ್ರಮ, ರಾಮನಾಥಿ ಗೋವಾ. (೧೩.೧೦.೨೦೨೨)
(ಆಧಾರ : ಶ್ರೀ. ರಾಮ ತಾಯಡೆ, ಬೆಂಗಳೂರು)