೧. ಆಧ್ಯಾತ್ಮಿಕ ಮಟ್ಟದ ಮಹತ್ವ ‘ಉಚ್ಚ ಆಧ್ಯಾತ್ಮಿಕ ಮಟ್ಟವಿದ್ದರೆ, ರಜ -ತಮಗಳ ಪರಿಣಾಮವಾಗುವುದಿಲ್ಲ. ಬದಲಾಗಿ ಉಚ್ಚ ಆಧ್ಯಾತ್ಮಿಕ ಮಟ್ಟದಿಂದ ನಿರ್ಮಾಣವಾದ ಚೈತನ್ಯದಿಂದ ರಜ-ತಮಗಳ ಮೇಲೆ ಪರಿಣಾಮ ವಾಗುತ್ತದೆ ಮತ್ತು ರಜ-ತಮ ಕಡಿಮೆಯಾಗುತ್ತವೆ.
೨. ನಮ್ಮ ಉಸಿರಾಟವೆಂದರೆ ನಮ್ಮ ‘ಗುರುಗಳು ಆಗಿದ್ದಾರೆ, ಅವರು ನಿರಂತರವಾಗಿ ನಮ್ಮ ಜೊತೆಯಲ್ಲಿರುತ್ತಾರೆ.
೩. ಆಧ್ಯಾತ್ಮಿಕ ಮಟ್ಟವು ಶೇ. ೭೦ ಕ್ಕಿಂತಲೂ ಮುಂದೆ ಹೋದರೆ, ಅಂದರೆ ಜೀವವು ಸಂತ ಪದವಿಗೆ ತಲುಪಿದರೆ, ಅವರ ಜೀವನದಲ್ಲಿನ ಪ್ರತಿಯೊಂದು ವಿಷಯವನ್ನು ದೇವರೇ ನಿರ್ಧರಿಸು
ತ್ತಾನೆ. ಮುಂದೆ ಅವರು ಕೇವಲ ದೇವರಲ್ಲಿಯೇ ಏಕರೂಪವಾಗುತ್ತಾರೆ. ಇದಕ್ಕೇ ‘ಸಂತರು ಎಂಬ ಉಪಮೆ ಕೊಡಲಾಗಿದೆ.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ (೨೦೧೮)