ಗುರುಮಂತ್ರದ ಮಹತ್ವವನ್ನು ಗಮನದಲ್ಲಿಡದೇ ಗುರುಗಳ ದೇಹದ ಹೆಸರಿನಲ್ಲಿ ಸಿಲುಕುವ ಶಿಷ್ಯರು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಗುರುಗಳು ಶಿಷ್ಯನ ಉದ್ಧಾರಕ್ಕಾಗಿ ಶಿಷ್ಯನ ಅವಶ್ಯಕತೆಗನುಸಾರ ಗುರುಮಂತ್ರವೆಂದು ಯಾವುದಾದರೊಂದು ದೇವತೆಯ ನಾಮ ಜಪವನ್ನು ಮಾಡಲು ಹೇಳುತ್ತಾರೆ. ಈ ನಾಮಜಪವು ಆ ಸಾಧಕನ ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರುತ್ತದೆ, ಹಾಗೆಯೇ ಆ ಜಪದ ಹಿಂದೆ ಗುರುಗಳ ಸಂಕಲ್ಪವೂ ಕಾರ್ಯನಿರತವಾಗಿರುತ್ತದೆ.

ಗುರುಮಂತ್ರಕ್ಕೆ ಇಷ್ಟು ಅಸಾಧಾರಣ ಮಹತ್ವವಿರುವಾಗ ಹೆಚ್ಚಿನ ಶಿಷ್ಯರು ಗುರುಮಂತ್ರವನ್ನು ದುರ್ಲಕ್ಷಿಸಿ ಗುರು ಗಳ ಹೆಸರನ್ನೇ ಉಚ್ಚರಿಸುವುದು ಕಾಣಿಸುತ್ತದೆ. ಇದರಿಂದ ಆ ಶಿಷ್ಯನ ಪ್ರಗತಿ ಯಾಗುವ ವೇಗ ಕಡಿಮೆಯಾಗುವುದರೊಂದಿಗೆ ಅವನು ಗುರುಗಳ ಸಗುಣ ರೂಪದಲ್ಲಿ ಸಿಲುಕುತ್ತಾನೆ. ಎಲ್ಲಕ್ಕಿಂತ ಮಹತ್ವದ್ದೆಂದರೆ ಗುರುಗಳು ಆ ಗುರುಮಂತ್ರಕ್ಕಾಗಿ ಮಾಡಿದ ಸಂಕಲ್ಪವು ವ್ಯರ್ಥವಾಗುತ್ತದೆ.’ – (ಪರಾತ್ಪರ ಗುರು) ಡಾ. ಆಠವಲೆ (೧೦.೯.೨೦೨೧)