‘ಹಿಂದೂ’ ಪದವು ಪರ್ಷಿಯನ್ ಆಗಿದೆ. ಇದು ತುಂಬಾ ಕೊಳಕು ಎಂದರ್ಥ. ಈ ವಿದೇಶಿ ಪದದ ಬಗ್ಗೆ ಕೆಲವರು ಯಾಕಿಷ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ಸಿನ ಸತೀಶ ಜಾರಕಿಹೊಳಿ ಹೇಳಿದ್ದಾರೆ.
೨. ಭಾರತದ ಮುಸಲ್ಮಾನ ಮಹಿಳೆಯರ ಧೈರ್ಯವನ್ನು ತಿಳಿಯಿರಿ !
ಕಲ್ಲಿಕೋಟೆಯಲ್ಲಿ (ಕೇರಳದಲ್ಲಿ) ಮುಸಲ್ಮಾನ ಮಹಿಳೆಯರ ಗುಂಪೊಂದು ಹಿಜಾಬಗಳನ್ನು ಸುಡುವ ಮೂಲಕ ಇರಾನ್‌ನಲ್ಲಿನ ಹಿಜಾಬ್ ವಿರೋಧಿ ಚಳುವಳಿಗೆ ಬೆಂಬಲ ಸೂಚಿಸಿದರು. ಇದು ಭಾರತದಲ್ಲಿ ಹಿಜಾಬ್ ಸುಟ್ಟ ಮೊದಲ ಘಟನೆಯಾಗಿದೆ.
೩. ‘ದಲಿತ-ಮುಸ್ಲಿಂ ಭಾಯಿ ಭಾಯಿ’ ಎನ್ನುವವರು ಈಗೆಲ್ಲಿದ್ದಾರೆ ?
ಜೋಧಪುರದ ಸುರಸಾಗರ ಪ್ರದೇಶದಲ್ಲಿನ ಸರಕಾರಿ ನೀರಿನ ಪಂಪ್‌ನಿಂದ ನೀರು ತೆಗೆದುಕೊಂಡಿದ್ದಕ್ಕಾಗಿ ಕಿಶನಲಾಲ್ ಭಿಲ್ ಎಂಬ ಹಿಂದುಳಿದ ವರ್ಗದ ವ್ಯಕ್ತಿಯನ್ನು ಮುಸಲ್ಮಾನ ಮತಾಂಧರು ಬರ್ಬರವಾಗಿ ಥಳಿಸಿದ್ದರಿಂದ ಆತ ಮೃತಪಟ್ಟಿದ್ದಾನೆ.
೪. ಇತರ ಕೋಟೆಗಳ ಮೇಲಿನ ಅಕ್ರಮ ಇಸ್ಲಾಮಿಕ್ ಕಟ್ಟಡಗಳನ್ನು ಸಹ ನೆಲಸಮಗೊಳಿಸಿ !
ನವೆಂಬರ್ ೧೦ ರ ಶಿವಪ್ರತಾಪದಿನದಂದು ಪ್ರತಾಪಗಡದ(ಮಹಾರಾಷ್ಟ್ರ) ತೊಪ್ಪಲಿನಲ್ಲಿರುವ ಅಫ್ಜಲ್‌ಖಾನನ ಗೋರಿಯ ಬಳಿಯ ಅನಧಿಕೃತ ಕಟ್ಟಡಗಳನ್ನು ಪೊಲೀಸ್ ಭದ್ರತೆಯಲ್ಲಿ ನಸುಕಿನ ವೇಳೆ ತೆರವುಗೊಳಿಸಲು ಪ್ರಾರಂಭಿಸಲಾಯಿತು.
೫. ನಿರಾಶ್ರಿತ ಹಿಂದೂಗಳಿಗೆ ನ್ಯಾಯಾಲಯಕ್ಕೆ ಏಕೆ ಹೋಗಬೇಕಾಗುತ್ತದೆ ?
‘ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬಂದು ದೆಹಲಿಯಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಹಿಂದೂಗಳಿಗೆ ಮುಂದಿನ ೩೦ ದಿನಗಳಲ್ಲಿ ವಿದ್ಯುತ್ ಪೂರೈಸುವಂತೆ ‘ಟಾಟಾ ಪವರ್’ ಸಂಸ್ಥೆಗೆ ದೆಹಲಿ ಉಚ್ಚ ನ್ಯಾಯಾಲಯ ಆದೇಶ ನೀಡಿದೆ.
೬. ಹಿಂದೂಗಳ ಆತ್ಮಘಾತಕ ಜಾತ್ಯತೀತತೆ !
ಅಯೋಧ್ಯೆಯಲ್ಲಿ ನ್ಯಾಯಾಲಯದ ಆದೇಶದಂತೆ ಶ್ರೀರಾಮಜನ್ಮಭೂಮಿ ಪ್ರಕರಣದಲ್ಲಿ ಮುಸ್ಲಿಂ ಪಕ್ಷ ಕಟ್ಟುತ್ತಿರುವ ಮಸೀದಿಗೆ ಶೇ.೪೦ ರಷ್ಟು ದೇಣಿಗೆಯನ್ನು ಹಿಂದೂಗಳು ನೀಡಿದ್ದರೆ, ಶೇ.೩೦ ರಷ್ಟು ದೇಣಿಗೆಯನ್ನು ಮುಸಲ್ಮಾನರು ನೀಡಿದ್ದಾರೆ.
೭. ಮುಸಲ್ಮಾನರು ದೇವಸ್ಥಾನದಲ್ಲಿನ ಇಫ್ತರ್ ಪಾರ್ಟಿ ಬಗ್ಗೆ ಹೇಗೆ ಒಪ್ಪುತ್ತಾರೆ ?
ಎನ್.ಡಿ.ಟಿ.ವಿ. ಈ ವಾರ್ತಾವಾಹಿನಿಯ ಪತ್ರಕರ್ತರಾದ ನಸೀಮ ಅಹಮ್ಮದ ಇವರು ಆಗ್ರಾದಲ್ಲಿನ ಮನಕಾಮೇಶ್ವರ ದೇವಸ್ಥಾನದಲ್ಲಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಹಣೆಯಲ್ಲಿ ತಿಲಕ ಹಚ್ಚಿಕೊಂಡಿದ್ದರು ಮತ್ತು ಭಗವಾ ಶಾಲು ಹೊದ್ದುಕೊಂಡಿದ್ದರು. ಇದರಿಂದಾಗಿ ಮತಾಂಧ ಮುಸಲ್ಮಾನರಿಂದ ನಸೀಮ್ ಇವರಿಗೆ ವಿರೋಧವಾಗುತ್ತಿದೆ.