‘ದಿ ಕೇರಳ ಸ್ಟೋರಿ’ ಚಲನಚಿತ್ರದ ಮೇಲೆ ನಿಷೇಧ ಹೇರಬೇಕು !’ (ಅಂತೆ)

  • ಕೇರಳದಲ್ಲಿ ಧಾರ್ಮಿಕ ದ್ವೇಷ ನಿರ್ಮಾಣವಾಗುವ ಸಾಧ್ಯತೆಯಿಂದ ಕಾಂಗ್ರೆಸ್‌ನ ಒತ್ತಾಯ

  • ಪೋಲಿಸ ಮಹಾಸಂಚಾಲಕರ ಆದೇಶದ ನಂತರ ಚಲನಚಿತ್ರದ ವಿರುದ್ಧ ದೂರು ದಾಖಲು !

  • ಚಲನಚಿತ್ರದಲ್ಲಿ ಕೇರಳದಲ್ಲಿನ ೩೨ ಸಾವಿರ ಹಿಂದೂ ಮತ್ತು ಕ್ರೈಸ್ತ ಯುವತಿಯರನ್ನು ಮತಾಂತರ ಗೊಳಿಸಿ ಅವರನ್ನು ಭಯೋತ್ಪಾದಕರನ್ನಾಗಿ ಮಾಡಿರುವ ದಾವೆ !

ತಿರುವನಂತಪುರಂ (ಕೇರಳ) – ನಿರ್ದೇಶಕ ಸುದೀಪ್ತೋ ಸೇನ್ ಇವರ ಮುಂಬರುವ ‘ದಿ ಕೇರಳ ಸ್ಟೋರಿ’ ಈ ಚಲನಚಿತ್ರವನ್ನು ರಾಜ್ಯದ ಕಾಂಗ್ರೆಸ್‌ನಿಂದ ನಿಷೇಧ ಹೇಳಲು ಒತ್ತಾಯಿಸಲಾಗುತ್ತಿದೆ. ಈ ಮೊದಲು ಕೇರಳದ ಪೊಲೀಸ್ ಮಹಾಸಂಚಾಲಕರು ತಿರುವನಂತಪುರಂ ನಗರದ ಪೊಲೀಸ್ ಆಯುಕ್ತರಿಗೆ ಈ ಚಲನಚಿತ್ರದ ವಿರುದ್ಧ ದೂರು ದಾಖಲಿಸುವ ಆದೇಶ ನೀಡಿದ್ದರು. ಚಲನಚಿತ್ರದಲ್ಲಿ ಕೇರಳದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಿರುವುದು ತೋರಿಸಲಾಗಿರುವುದರಿಂದ ಈ ಆದೇಶ ನೀಡಲಾಗಿತ್ತು. ಅದರ ನಂತರ ಚಲನಚಿತ್ರಕ್ಕೆ ಸಂಬಂಧಪಟ್ಟವರ ಮೇಲೆ ಕಲಂ ೧೫೩ ಅ ಮತ್ತು ಬ’ ನ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ನವಂಬರ್ ೩ ರಂದು ಚಲನಚಿತ್ರದ ಸಂಕ್ಷಿಪ್ತ ಭಾಗ (ಟೀಸರ್) ಬಿಡುಗಡೆ ಮಾಡಲಾಯಿತು. ಅದರಲ್ಲಿ, ಕೇರಳದಲ್ಲಿ ೩೨ ಸಾವಿರ ಹಿಂದೂ ಮತ್ತು ಕ್ರೈಸ್ತ ಯುವತಿಯರನ್ನು ಮತಾಂತರಗೊಳಿಸಿ ಭಯೋತ್ಪಾದಕರನ್ನಾಗಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

೩೨ ಸಾವಿರ ಯುವತಿಯರ ಬಗ್ಗೆ ಕೇಂದ್ರ ಇಲಾಖೆಯಲ್ಲಿ ಮಾಹಿತಿ ಇದ್ದರೆ, ಅದನ್ನು ಬಹಿರಂಗಪಡಿಸಬೇಕು ! – ಕಾಂಗ್ರೆಸ್

ಕಾಂಗ್ರೆಸ್‌ನ ನಾಯಕ ಮತ್ತು ವಿರೋಧಿ ಪಕ್ಷದ ನಾಯಕ ವಿ.ಡಿ. ಸತಿಸನ್ ಇವರು, ಈ ಚಲನಚಿತ್ರದ ಮೂಲಕ ತಪ್ಪು ಮಾಹಿತಿ ಪ್ರಸಾರ ಮಾಡಲಾಗುತ್ತಿದೆ. ಆದ್ದರಿಂದ ಅದನ್ನು ನಿಷೇಧಿಸಬೇಕು. ನಾನು ಈ ಚಲನಚಿತ್ರದ ‘ಟೀಸರ್’ ನೋಡಿದ್ದೇನೆ. ಕೇರಳದಲ್ಲಿ ಈ ರೀತಿ ಏನು ನಡೆದಿಲ್ಲ. ಕೇರಳ ರಾಜ್ಯದ ಪ್ರತಿಮೆ ಬೇರೆ ರಾಜ್ಯಗಳೆದುರು ಕಲಂಕೀತಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಮೂಲಕ ದ್ವೇಷ ಪಸರಿಸಲಾಗುವುದರಿಂದ ಈ ಚಲನಚಿತ್ರ ನಿಷೇಧಿಸಬೇಕು ಎಂದು ಹೇಳಿದರು. ಯಾವುದೇ ಚಲನಚಿತ್ರ ನಿಷೇಧಿಸುವುದರ ಬಗ್ಗೆ ನಾವು ಯಾವಾಗಲೂ ವಿರೋಧಿಸುತ್ತೇವೆ. ಆದರೆ ಈ ಚಲನಚಿತ್ರದಲ್ಲಿ ತಪ್ಪು ಮಾಹಿತಿ ನೀಡಲಾಗಿದ್ದು ಧಾರ್ಮಿಕ ಒತ್ತಡ ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದಲ್ಲಿನ ಪೊಲೀಸರ ಹತ್ತಿರ ೩೨ ಸಾವಿರ ಯುವತಿಯರ ಬಗ್ಗೆ ಈ ರೀತಿಯ ಯಾವುದೇ ಮಾಹಿತಿ ಇಲ್ಲ. ಕೇಂದ್ರದ ಗುಪ್ತಚರ ಇಲಾಖೆಯ ಹತ್ತಿರ ಏನಾದರೂ ಕೇರಳದಲ್ಲಿ ನಡೆಯುವತಿಯರು ಭಯೋತ್ಪಾದಕ ಸಂಘಟನೆಯಲ್ಲಿ ಸೇರಿರುವ ಮಾಹಿತಿ ಏನಾದರೂ ಇದ್ದರೆ, ಯುವತಿಯರ ನೋಂದಣಿ ಇದ್ದರೆ ಅಥವಾ ವಿಳಾಸ ಇದ್ದರೆ ಆಗ ಆ ಮಾಹಿತಿ ಅವರು ಬಹಿರಂಗಗೊಳಿಸಬೇಕು ಎಂದು ಹೇಳಿದರು.

‘ಟಿಸರ’ನಲ್ಲಿ ಏನು ತೋರಿಸಲಾಗಿದೆ ?

‘ದಿ ಕೇರಳ ಸ್ಟೋರಿ’ ಯನ್ನು ಬಿಡುಗಡೆ ಗೊಳಿಸಿರುವ ‘ಟೀಸರ್’ನಲ್ಲಿ ಒಬ್ಬ ಯುವತಿಗೆ ಬುರ್ಖಾದಲ್ಲಿ ತೋರಿಸಲಾಗಿದೆ. ಆಕೆ, “ನನ್ನ ಹೆಸರು ಶಾಲಿನಿ ಉನ್ನಿಕೃಷ್ಣನ್ ಆಗಿತ್ತು. ನನಗೆ ನರ್ಸ್ ಆಗಿ ಜನರ ಸೇವೆ ಮಾಡುವುದಿತ್ತು. ಈಗ ನಾನು ಫಾತಿಮಾ ಆಗಿದ್ದೇನೆ. ನಾನು ಒಬ್ಬ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕೀ ಆಗಿದ್ದು ಈಗ ನಾನು ಅಪಘಾನಿಸ್ತಾನದ ಕಾರಾಗೃಹದಲ್ಲಿ ಇದ್ದೇನೆ. ನಾನು ಒಬ್ಬಳೇ ಇಲ್ಲದೆ ಈ ಮೊದಲು ನನ್ನ ಹಾಗೆ ಮತಾಂತರವಾಗಿರುವ ೩೨ ಸಾವಿರ ಯುವತಿಯರನ್ನು ಸಿರಿಯಾ ಮತ್ತು ಯೆಮನ್ ಈ ದೇಶದಲ್ಲಿನ ಮರುಳಗಾಡಿನಲ್ಲಿ ಹುಗಿಯಲಾಗಿದೆ. ಒಬ್ಬ ಸಾಮಾನ್ಯ ಹುಡುಗಿಗೆ ಭಯೋತ್ಪಾದಕ ಮಾಡುವ ಅಪಾಯದ ಆಟ ಕೇರಳದಲ್ಲಿ ನಡೆಯುತ್ತಿದೆ ಮತ್ತು ಅದು ಕೂಡ ಬಹಿರಂಗವಾಗಿ ನಡೆಯುತ್ತಿದೆ. ಅದು ಯಾರಾದರೂ ನಿಲ್ಲಿಸುವರೇ ? ಇದು ನನ್ನ ಕಥೆಯಾಗಿದೆ. ಇದು ಆ ೩೨ ಸಾವಿರ ಯುವತಿಯರ ಕಥೆಯಾಗಿದೆ. ಅದೇ ‘ದಿ ಕೇರಳ ಸ್ಟೋರಿ.” ಆಗಿರುವುದು.

ಸೌಜನ್ಯ : Sunshine Pictures

ಸಂಪಾದಕೀಯ ನಿಲುವು

ಕೇರಳದಲ್ಲಿನ ಹಿಂದೂ ಮತ್ತು ಕ್ರೈಸ್ತ ಯುವತಿಯರನ್ನು ‘ಲವ್ ಜಿಹಾದ್’ ಮೂಲಕ ಬಲೆಗೆ ಸಿಲುಕಿಸಿ ಅವರನ್ನು ಮತಾಂತರಗೊಳಿಸಿ ಇಸ್ಲಾಮಿಕ್ ಸ್ಟೇಟ್‌ನಲ್ಲಿ ನೇಮಿಸುವುದು ಈ ಮೊದಲೇ ಬಹಿರಂಗವಾಗಿದೆ. ಇದರ ಬಗ್ಗೆ ಕಾಂಗ್ರೆಸ್‌ನವರು ಇಲ್ಲಿಯವರೆಗೆ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ ?, ಅದು ಈಗಲಾದರೂ ಹೇಳುವುದೇ ?

ಹಿಂದೂಗಳು ಹಿಂದೂ ವಿರೋಧಿ ಚಲನಚಿತ್ರಗಳ ಮೇಲೆ ನಿಷೇಧ ಹೇರಲು ಒತ್ತಾಯಿಸಿದರೆ, ಆಗ ವ್ಯಕ್ತಿ ಸ್ವಾತಂತ್ರ್ಯದ ನೆನಪಾಗುವ ಕಾಂಗ್ರೆಸ್‌ಗೆ ಈಗ ಮುಸಲ್ಮಾನರಿಗಾಗಿ ಅದೇ ವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲಾಗುತ್ತಿದೆ, ಇದನ್ನು ಅರಿತುಕೊಳ್ಳಬೇಕು !