ನವದೆಹಲಿ : ಭೂಮಿಯ ಶಕ್ತಿಯನ್ನು ಬಳಸಿಕೊಂಡು ಶೇ. ೧೦೦ ರಷ್ಟು ವಿದ್ಯುತ್ ಉತ್ಪಾದಿಸಲು ಸಾಧ್ಯವಿಲ್ಲ; ಆದರೆ, ಚಂದ್ರನ ಮೇಲೆ ಶಕ್ತಿಯನ್ನು ಸಂಗ್ರಹಿಸದೆ ಶೇ. ೧೦೦ ರಷ್ಟು ವಿದ್ಯುತ್ ಉತ್ಪಾದಿಸಬಹುದು ಎಂದು ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಹೇಳಿಕೊಂಡಿದೆ. ಸೌರಶಕ್ತಿಯೇ ಇದಕ್ಕೆ ಮುಖ್ಯ ಮೂಲವಾಗಿದೆ. ಚಂದ್ರನ ಮೇಲೆ ಮಾನವನ ವಾಸಿಸುವ ಯೋಜನೆಗಳನ್ನು ರೂಪಿಸಲಾಗುವ ಹಿನ್ನೆಲೆಯಲ್ಲಿ ಅದನ್ನು ನೋಡಲಾಗುತ್ತಿದೆ.
ಸೌರ ಶಕ್ತಿಯ ಮೂಲಕ ದೊಡ್ಡ ಪ್ರಮಾಣದಲ್ಲಿ ಆಮ್ಲಜನಕವನ್ನೂ ಉತ್ಪಾದಿಸಲು ಸಾಧ್ಯವಾಗುತ್ತದೆ. ಮಾನವನು ಉಸಿರಾಡಲು ಮತ್ತು ಇಂಧನ ಹಾಗೂ ವಿದ್ಯುಚ್ಛಕ್ತಿಗೆ ಬಳಸಬಹುದಾಗಿದೆ.