ಅಪಪ್ರಚಾರ : ‘ನೈಸರ್ಗಿಕ ಕೃಷಿಗಾಗಿ ಆವಶ್ಯಕವಿರುವ ದೇಶಿ ಹಸುವಿನ ಸೆಗಣಿ ಮತ್ತು ಗೋಮೂತ್ರ ಎಲ್ಲ ಕಡೆಗೆ ಸಿಗುವುದಿಲ್ಲ. ಆದುದರಿಂದ ನೈಸರ್ಗಿಕ ಪದ್ಧತಿಯಿಂದ ಕೃಷಿ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ.
ಖಂಡನೆ : ಅನೇಕ ದೊಡ್ಡ ನಗರಗಳಲ್ಲಿಯೂ ಗೋಶಾಲೆಗಳಿರುತ್ತವೆ. ಕೆಲವು ಗೋಶಾಲೆಗಳಲ್ಲಿ ಜೀವಾಮೃತ, ಘನಜೀವಾಮೃತ, ಗೋಮಯ, ಗೋಮೂತ್ರ ಇವುಗಳ ಮಾರಾಟವನ್ನೂ ಮಾಡಲಾಗುತ್ತದೆ. ದೇಶಿ ಗೋವುಗಳನ್ನು ಸಾಕುವ ಅನೇಕ ಜನರು ಇತರರಿಗೆ ಸೆಗಣಿ ಮತ್ತು ಗೋಮೂತ್ರವನ್ನು ಉಚಿತವಾಗಿ ಕೊಡುತ್ತಾರೆ.
ನೈಸರ್ಗಿಕ ಕೃಷಿಗಾಗಿ ೧೫ ದಿನಗಳಿಗೊಮ್ಮೆ ಜೀವಾಮೃತವನ್ನು ತಯಾರಿಸಬೇಕಾಗುತ್ತದೆ. ೧೦೦ ಚದರಡಿ ಕ್ಷೇತ್ರಕ್ಕಾಗಿ ಕೇವಲ ೫೦ ಗ್ರಾಮ್ ಸೆಗಣಿ ಮತ್ತು ೫೦ ಮಿ.ಲೀ. ಗೋಮೂತ್ರದ ಅವಶ್ಯಕತೆ ಇರುತ್ತದೆ. ಗೋಮೂತ್ರವು ಎಷ್ಟೇ ಹಳೆಯದಾಗಿದ್ದರೂ, ನಡೆಯುತ್ತದೆ. ಆದುದರಿಂದ ಅದನ್ನು ಒಂದೇ ಸಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತಂದಿಡಬಹುದು. ಸೆಗಣಿ ತಾಜಾ ಇರುವುದು ಆವಶ್ಯಕವಾಗಿದ್ದರೂ, ೭ ದಿನಗಳ ವರೆಗಿನ ಸೆಗಣಿಯನ್ನು ತಾಜಾ ಎಂದು ತಿಳಿಯಲಾಗುತ್ತದೆ. ಇದರಲ್ಲಿ ಯಾವುದೂ ಲಭ್ಯವಾಗದಿದ್ದರೆ ಜೀವಾಮೃತದ ಬದಲಾಗಿ ಘನಜೀವಾಮೃತವನ್ನು ಬಳಸಲು ಬರುತ್ತದೆ. ಒಮ್ಮೆ ತಯಾರಿಸಿದ ಘನಜೀವಾಮೃತವನ್ನು ಬಿಸಿಲಿನಲ್ಲಿ ಒಣಗಿಸಿ ವರ್ಷವಿಡಿ ಸಂಗ್ರಹಿಸಿಡಬಹುದಾಗಿದೆ, ತಮ್ಮ ಅಕ್ಕಪಕ್ಕದ ಪರಿಸರದಲ್ಲಿ ಮೇಲ್ಛಾವಣಿ ಕೃಷಿಯನ್ನು ಮಾಡುವ ಅಥವಾ ಹಾಲು ಮಾರುವವರನ್ನು ಕೇಳಿದರೆ, ‘ನಮ್ಮ ಪರಿಸರದಲ್ಲಿ ದೇಶಿ ಆಕಳುಗಳು ಎಲ್ಲಿವೆ ?’ ಎಂಬ ಬಗ್ಗೆ ಸಹಜವಾಗಿ ಮಾಹಿತಿ ಸಿಗುತ್ತದೆ. ಕೃಷಿಯನ್ನು ಮಾಡುವ ೪-೫ ಜನರು ಒಟ್ಟುಗೂಡಿ ಜೀವಾಮೃತವನ್ನು ತಯಾರಿಸಿ ಅದನ್ನು ಪರಸ್ಪರರಲ್ಲಿ ಹಂಚಿಕೊಳ್ಳಬಹುದು. ಆದುದರಿಂದ ‘ದೇಶಿ ಹಸುವಿನ ಸೆಗಣಿ ಮತ್ತು ಗೋಮೂತ್ರ ಸಿಗುವುದಿಲ್ಲ’ ಎಂಬ ತಪ್ಪುಕಲ್ಪನೆಯನ್ನು ಮೊದಲೇ ಮಾಡಿಕೊಳ್ಳದೇ ಅದನ್ನು ಲಭ್ಯಮಾಡಿಕೊಳ್ಳಲು ಕೃತಿಶೀಲರಾಗೋಣ !
– ಸೌ. ರಾಘವಿ ಮಯೂರೇಶ ಕೊನೆಕರ, ಢವಳಿ, ಫೋಂಡಾ, ಗೋವಾ. (೬.೮.೨೦೨೨)
ದೇಶಿ ಮತ್ತು ವಿದೇಶಿ ಎರೆಹುಳಗಳಲ್ಲಿ ವ್ಯತ್ಯಾಸ‘ಕೇವಲ ಭಾರತೀಯ ದೇಶಿ ಎರೆಹುಳವೇ ರೈತನ ನಿಜವಾದ ಸ್ನೇಹಿತನಾಗಿದೆ. ಸಾವಯವ ಕೃಷಿಯಲ್ಲಿ ಬಳಸುವ ಎರೆಹುಳ ಗೊಬ್ಬರವನ್ನು (Vermicompost) ತಯಾರಿಸುವುದಕ್ಕಾಗಿ ವಿದೇಶಿ ಎರೆಹುಳಗಳನ್ನು ಭಾರತಕ್ಕೆ ತರಲಾಯಿತು. ಈ ವಿದೇಶಿ ಎರೆಹುಳಗಳು ೧೬ ಅಂಶ ಸೆಲ್ಸಿಯಸ್‌ಗಿಂತ ಕಡಿಮೆ ಮತ್ತು ೨೮ ಅಂಶ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನದಲ್ಲಿ ಬದುಕುವುದಿಲ್ಲ. ಭಾರತೀಯ ಎರೆಹುಳಗಳು ಮಾತ್ರ ಹಿಮಚ್ಛಾದಿತ ಬೆಟ್ಟಗಳಿಂದ ಹಿಡಿದು ಮರಳುಗಾಡಿನ ತನಕ ಒಂದೇ ರೀತಿಯಾಗಿ ಕೆಲಸವನ್ನು ಮಾಡುತ್ತವೆ. ಈಗ ಸಂಶೋಧನೆಯಿಂದ ಸಿದ್ಧವಾದ ಅಂಶವೆಂದರೆ, ವಿದೇಶಿ ಎರೆಹುಳದ ಮಲದಲ್ಲಿ ‘ಆರ್ಸೇನಿಕ್, ಪಾದರಸ, ಸೀಸ ಇಂತಹ ವಿಷಕಾರಿ ಧಾತುಗಳ ಅಂಶವಿರುತ್ತದೆ ಮತ್ತು ಹೊಲದಲ್ಲಿ ‘ವರ್ಮಿಕಂಪೋಸ್ಟ್’ (ವಿದೇಶಿ ಎರೆಹುಳಗಳ ಮಲವಿರುವ ಗೊಬ್ಬರ) ಬಳಸುವುದರಿಂದ ಆ ವಿಷಕಾರಿ ಅಂಶವು ವನಸ್ಪತಿಗಳಿಂದ ಮಾನವನ ಶರೀರವನ್ನು ಸೇರಬಹುದು. ಆದುದರಿಂದ ಸಾವಯವ ಕೃಷಿಯ ಮೂಲಕ ‘ವರ್ಮೀಕಂಪೊಸ್ಟ’ನ್ನು ಹಾಕಿ ಬೆಳಸಿದ ಬೆಳೆಗಳು ‘ವಿಷಮುಕ್ತ’ ಇರುವುದಿಲ್ಲ. – ಸೌ. ರಾಘವೀ ಮಯೂರೇಶ ಕೋನೆಕರ, ಢವಳಿ, ಫೊಂಡಾ, ಗೋವಾ. (೨೧.೮.೨೦೨೨) |