ಬುರ್ಖಾದ ವಿರೋಧದಲ್ಲಿ ವಿದ್ಯಾಪೀಠದ ಹೊರಗೆ ಪ್ರತಿಭಟನೆ ಮಾಡುತ್ತಿದ್ದ ಹುಡುಗಿಯರಿಗೆ ತಾಲಿಬಾನಿ ಅಧಿಕಾರಿಗಳಿಂದ ಥಳಿತ

ಕಾಬುಲ (ಅಫಘಾನಿಸ್ತಾನ) – ಅಫಘಾನಿಸ್ತಾನದ ಪೂರ್ವ ಭಾಗದಲ್ಲಿ ಬದಖ್ಶಾನ್ ವಿದ್ಯಾಪೀಠದಲ್ಲಿ ಅಕ್ಟೋಬರ್ ೩೦ ರಂದು ಸರಕಾರದಿಂದ ಬುರ್ಖಾ ಧರಿಸದೆ ಬಂದಿರುವ ಹುಡುಗಿಯರನ್ನು ತರಗತಿಯಿಂದ ಹೊರ ಹೋಗಲು ಹೇಳಲಾಯಿತು. ಅದರ ನಂತರ ಹುಡುಗಿಯರು ಶಿಕ್ಷಣದ ಹಕ್ಕಿಗಾಗಿ ಪ್ರತಿಭಟನೆ ಮಾಡಿದರು. ಈ ಹುಡುಗಿಯರನ್ನು ತಾಲಿಬಾನ್‌ನ ದೂರಸಂಚಾರ ವಿಭಾಗದಲ್ಲಿನ ಒಬ್ಬ ಹಿರಿಯ ಅಧಿಕಾರಿಯು ಥಳಿಸಿದರು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

೧. ಅಫಘಾನಿಸ್ತಾನದಲ್ಲಿನ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಹುಡುಗಿಯರಿಗೆ ಮಹಾವಿದ್ಯಾಲಯಗಳಲ್ಲಿ ಪ್ರವೇಶ ನಿಷೇಧಿಸಲಾಗಿತ್ತು; ಆದರೆ ಫೆಬ್ರುವರಿ ೨೦೨೨ ರಿಂದ ಸರಕಾರದ ನಿಯಮದ ಪ್ರಕಾರ ಹುಡುಗಿಯರಿಗೆ ಮಹಾವಿದ್ಯಾಲಯದಲ್ಲಿ ಪ್ರವೇಶ ನೀಡಲು ಸಮ್ಮತಿ ನೀಡಿತ್ತು.

೨. ಮೇ ತಿಂಗಳಿನಲ್ಲಿ ತಾಲಿಬಾನ ಸರಕಾರವು ಒಂದು ಆದೇಶದಲ್ಲಿ, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾಧರಿಸಬೇಕು. ಮಹಿಳೆಯರು ಮನೆಯ ಹೊರಗೆ ತನ್ನ ಮುಖವನ್ನು ಮುಚ್ಚದೆ ಇದ್ದರೆ ಆಗ ಅವರ ತಂದೆ ಅಥವಾ ಹತ್ತಿರದ ಪುರುಷ ಸಂಬಂಧಿಕರಿಗೆ ಸೆರೆಮನೆಗೆ ಅಟ್ಟಲಾಗುವುದು. ಹಾಗೂ ಸರಕಾರಿ ಕೆಲಸದಿಂದ ವಜಾ ಮಾಡಲಾಗಬಹುದು ಎಂದು ಹೇಳಿದೆ.