ನಲವತ್ತು ವಯಸ್ಸಾದ ನಂತರ ಮೊಣಕಾಲು ನೋವಾಗಬಾರದೆಂದು ಮೊಣಕಾಲುಗಳಿಗೆ ನಿಯಮಿತವಾಗಿ ಎಣ್ಣೆಯನ್ನು ಹಚ್ಚಿರಿ !

ವೈದ್ಯ ಮೇಘರಾಜ ಪರಾಡಕರ್

೪೦ ವರ್ಷ ವಯಸ್ಸಿನ ನಂತರ, ವಿವಿಧ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಅವರಲ್ಲಿ ಹಲವರು ಎದುರಿಸುವ ಸಮಸ್ಯೆ ಎಂದರೆ ‘ಮೊಣಕಾಲು ನೋವು’. ನಲವತ್ತು ದಾಟಿದ ಪ್ರತಿಯೊಬ್ಬರೂ ಮೊಣಕಾಲು ನೋವಾಗದಿರಲು ಅಥವಾ ಅದು ನೋವಾಗುತ್ತಿದ್ದರೆ ಅದನ್ನು ಎದುರಿಸಲು ದಿನಕ್ಕೆ ಒಮ್ಮೆಯಾದರೂ ಮೊಣಕಾಲಿಗೆ ಎಣ್ಣೆಯನ್ನು ಹಚ್ಚಬೇಕು. ಇದಕ್ಕಾಗಿ ಯಾವುದೇ ಖಾದ್ಯ ತೈಲ ಅಥವಾ ಔಷಧೀಯ ತೈಲವನ್ನು ಬಳಸಬಹುದು. ರಾತ್ರಿ ಮಲಗುವ ಮುನ್ನ ಅಥವಾ ಬೆಳಿಗ್ಗೆ ಎದ್ದ ನಂತರ ಸ್ನಾನ ಮಾಡುವ ಮೊದಲು ಎಣ್ಣೆಯನ್ನು ಹಚ್ಚಬೇಕು. ಮೊಣಕಾಲುಗಳಿಗೆ ಹಚ್ಚಿದ ತೈಲವು ಕನಿಷ್ಠ ೩೦ ನಿಮಿಷಗಳ ಕಾಲ ಉಳಿಯಬೇಕು. ಬಳಿಕ ತೊಳೆದರೆ ಆಗಬಹುದು.’
– ವೈದ್ಯ ಮೇಘರಾಜ ಮಾಧವ ಪರಾಡಕರ್, ಸನಾತನ ಆಶ್ರಮ, ರಾಮನಾಥಿ, ಗೋವಾ