ರಾಮನಾಥಿ (ಗೋವಾ)ಯ ಸನಾತನ ಆಶ್ರಮದಲ್ಲಿ ಮರಾಠಿ ಭಾಷೆಯ ಲೇಖನಗಳನ್ನು ಆಂಗ್ಲ ಭಾಷೆಗೆ ಅನುವಾದದ ಸೇವೆ ಮಾಡುವ ಮತ್ತು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕ ಶಿರೀಷ ದೇಶಮುಖ (೭೬ ವರ್ಷ) ಇವರು ದೀರ್ಘ ಅನಾರೋಗ್ಯದಿಂದ ೨೭ ಅಕ್ಟೋಬರ್ ೨೦೨೨ ರಂದು ನಿಧನರಾದರು. |
ಮೂಲತಃ ಮಹಾರಾಷ್ಟ್ರದ ಸಂಭಾಜಿ ನಗರದವರಾದ ಶ್ರೀ. ಶಿರೀಷ ದೇಶಮುಖ ಇವರು ಉನ್ನತ ಶಿಕ್ಷಣ ಪಡೆದವರಾಗಿದ್ದು ಆರಂಭದಲ್ಲಿ ಅವರು ‘ಮಹಾರಾಷ್ಟ್ರ ರಾಜ್ಯ ವಿದ್ಯುತ್ ಮಂಡಳ’ದಲ್ಲಿ ಮತ್ತು ಅನಂತರ ದೈನಿಕ ‘ಲೋಕಮತ’ದಲ್ಲಿ ‘ಮುಖ್ಯ ವ್ಯವಸ್ಥಾಪಕ’ರೆಂದು ನೌಕರಿ ಮಾಡಿದರು. ಅನಂತರ ಪತ್ರಿಕೋದ್ಯಮದಲ್ಲಿ ಶಿಕ್ಷಣ ಪಡೆದು ಅವರು ೧೯೯೨ ರಲ್ಲಿ ‘ಗೋರಜ ವಾರ್ತಾ’ ಹೆಸರಿನ ತಮ್ಮದೇ ಸಂಜೆ ದಿನಪತ್ರಿಕೆಯನ್ನು ಆರಂಭಿಸಿದರು. ನೇತೃತ್ವಗುಣವುಳ್ಳ ಶ್ರೀ. ದೇಶಮುಖ ಇವರು ಕೆಲವು ಸಮಯ ರಾಜಕಾರಣದಲ್ಲಿಯೂ ತೊಡಗಿದರು. ಅಧ್ಯಾತ್ಮದ ಆಸಕ್ತಿ ಇರುವ ಶ್ರೀ. ದೇಶಮುಖ ಇವರು ವಿವಿಧ ಆಧ್ಯಾತ್ಮಿಕ ಸಂಸ್ಥೆಗಳ ಅಧ್ಯಯನ ಮಾಡಿದರು. ಅನಂತರ ಅವರು ಜನವರಿ ೧೯೯೮ ರಲ್ಲಿ ಸನಾತನದ ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ ಈ ಗ್ರಂಥವನ್ನು ಓದಿ ಪ್ರಭಾವಿತರಾದರು ಮತ್ತು ಅವರು ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಆರಂಭಿಸಿದರು. ‘ವ್ಯವಸಾಯಕ್ಕಿಂತ ಸೇವೆಯಲ್ಲಿ ಹೆಚ್ಚು ಆನಂದ ಸಿಗುತ್ತದೆ’, ಎಂಬ ಅನುಭೂತಿ ಬಂದಿದುದರಿಂದ ಅವರು ೧೯೯೮ ರಿಂದ ೨೦೦೦ ಈ ಅವಧಿಯಲ್ಲಿ ಸನಾತನದ ಮಾರ್ಗದರ್ಶನಕ್ಕನುಸಾರ ಮರಾಠವಾಡಾ ಮತ್ತು ವಿದರ್ಭದಲ್ಲಿ ಅಧ್ಯಾತ್ಮ ಪ್ರಸಾರದ ಸೇವೆ ಮಾಡಿದರು. ೨೦೧೨ ರ ವರೆಗೆ ಅವರು ‘ಧರ್ಮಕ್ಕಾರ್ಯಕ್ಕಾಗಿ ಜಾಹೀರಾತು ಪಡೆಯುವುದು, ಗುರುಪೂರ್ಣಿಮೆ ಉತ್ಸವದ ಆಯೋಜನೆ ಮಾಡುವುದು ಇತ್ಯಾದಿ ಸೇವೆಗಳನ್ನು ಮಾಡಿದರು. ನವೆಂಬರ್ ೨೦೧೩ ರಿಂದ ಅವರು ರಾಮನಾಥಿ (ಗೋವಾ) ಇಲ್ಲಿನ ಸನಾತನದ ಆಶ್ರಮದಲ್ಲಿ ಪೂರ್ಣವೇಳೆ ಇದ್ದು ಮುಖ್ಯವಾಗಿ ಸನಾತನದ ಜಾಲತಾಣದಲ್ಲಿನ ಮರಾಠಿ ಭಾಷೆಯ ಲೇಖನಗಳನ್ನು ಆಂಗ್ಲ ಭಾಷೆಗೆ ಅನುವಾದಿಸುವ ಸೇವೆ ಮಾಡುತ್ತಿದ್ದರು. ‘ಜಿಗುಟುತನ ಮತ್ತು ಸಾಧನೆಯಲ್ಲಿ ಪ್ರಗತಿಯಾಗಲು ಕಷ್ಟಪಡುವ ಸಿದ್ಧತೆ’, ಈ ಗುಣಗಳಿಂದಾಗಿ ಅಶ್ರಮಕ್ಕೆ ಬಂದ ನಂತರ ಅವರು ತಮ್ಮಲ್ಲಿ ಅನೇಕ ಒಳ್ಳೆಯ ಬದಲಾವಣೆಗಳನ್ನು ಮಾಡಿಕೊಂಡರು.
ಶ್ರೀ. ಶಿರೀಷ ದೇಶಮುಖ ಇವರು ಸಪ್ಟೆಂಬರ್ ೨೦೨೧ ರಿಂದ ‘ಎರಡೂ ಮೂತ್ರಪಿಂಡ ನಿಷ್ಕ್ರಿಯವಾಗುವುದು’ ಎಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಪ್ರಕೃತಿ ಜ್ಞಾನಮಾರ್ಗವಾಗಿತ್ತು. ಜ್ಞಾನಯೋಗದ ಬಗ್ಗೆ ಜಿಜ್ಞಾಸೆಯಿಂದ ಅವರು ಸನಾತನವು ಪ್ರಕಾಶಿಸಿದ ಪೂ. ಅನಂತ ಆಠವಲೆಯವರು ಬರೆದ ‘ಗೀತಾಜ್ಞಾನದರ್ಶನ’ ಮತ್ತು ‘ಅಧ್ಯಾತ್ಮದ ವಿವಿಧ ಅಂಗಗಳ ಬೋಧನೆ’ ಎಂಬ ಜ್ಞಾನಯೋಗ ಆಧಾರಿತ ಗ್ರಂಥದ ಅಧ್ಯಯನ ಮಾಡಿದರು. ಸನಾತನವು ಹೇಳುತ್ತಿದ್ದ ಗುರುಕೃಪಾಯೋಗದಲ್ಲಿ ಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಯೋಗ ಈ ಮೂರೂ ಯೋಗಗಳ ಸುಯೋಗ್ಯ ಸಮನ್ವಯ ಸಾಧಿಸಲಾಗಿದೆ. ಆದುದರಿಂದ ಅನಾರೋಗ್ಯದಲ್ಲಿ ಶ್ರೀ. ದೇಶಮುಖ ಇವರಿಂದ ಜ್ಞಾನಯೋಗದ ಜೊತೆಗೆ ಕರ್ಮ ಮತ್ತು ಭಕ್ತಿ ಈ ಯೋಗಗಳಿಗನುಸಾರವೂ ಸಾಧನೆಯಾಯಿತು ಮತ್ತು ಅವರು ೯.೨.೨೦೨೨ ರಂದು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು. ಅವರಿಗೆ ಜ್ಞಾನಯೋಗದ ಬಗ್ಗೆ ವಿಷಯಗಳು ಒಳಗಿನಿಂದ ಹೊಳೆಯುತ್ತಿದ್ದವು. ‘ಸನಾತನದ ಜ್ಞಾನಯೋಗಿ ಸಾಧಕ ಶ್ರೀ. ಶಿರೀಷ ದೇಶಮುಖ’ ಎಂಬ ಸನಾತನದ ಗ್ರಂಥದಲ್ಲಿ ಈ ಅಂಶಗಳನ್ನು ಸೇರಿಸಲಾಗಿದೆ.
ಗಂಭೀರ ಅನಾರೋಗ್ಯದಲ್ಲಿಯೂ ಗುರುಗಳ ಮೇಲಿನ ಭಾವ ಮತ್ತು ಶ್ರದ್ಧೆ ಇವುಗಳಿಂದಾಗಿ ಅವರು ಸತತ ಆನಂದದಲ್ಲಿದ್ದರು. ‘ತಮ್ಮ ದೇಹದತ್ತ ಸಾಕ್ಷಿಭಾವದಿಂದ ನೋಡುವುದು, ಮಾಯೆಯ ವಿಷಯಗಳ ಆಕರ್ಷಣೆ ಎನಿಸದಿರುವುದು, ‘ನಾನು ಪರಾಮಾತ್ಮನ ಅಂಶನಾಗಿದ್ದೇನೆ’, ಇದರ ಅರಿವಿರುವುದು’ ಇತ್ಯಾದಿಗಳನ್ನು ಅವರು ಅನುಭವಿಸುತ್ತಿದ್ದರು. ಶ್ರೀ. ದೇಶಮುಖ ಇವರ ಪತ್ನಿ (ದಿ.) ಸೌ. ಅರುಣಾ ಶಿರೀಷ ದೇಶಮುಖ ಇವರೂ ಮೃತ್ಯುವಿನ ಮೊದಲು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದರು. ಅವರ ಮಗ ಶ್ರೀ. ಜಗದೀಶ ದೇಶಮುಖ ಮತ್ತು ಸೊಸೆ ಸೌ. ವಂದನಾ ದೇಶಮುಖ ಇವರಿಬ್ಬರೂ ಸಾಧನೆಯನ್ನು ಮಾಡುತ್ತಿದ್ದಾರೆ.
೨೬.೧೦.೨೦೨೨ ರಂದು ದೀಪಾವಳಿ ಮುಗಿಯಿತು ಮತ್ತು ೨೭.೧೦.೨೦೨೨ ರಂದು ಅವರು ನಿಧನರಾದರು. ಅವರು ಸಾಧಕರಿಗೆ ದೀಪಾವಳಿಯ ಆನಂದ ಪಡೆಯಲು ನೀಡಿದರು ಮತ್ತು ಮರುದಿನ ದೇಹ ತ್ಯಜಿಸಿದರು. ಇದರಿಂದ ಅವರಲ್ಲಿ ‘ಮೃತ್ಯುವಿನ ಸಮಯದಲ್ಲಿಯೂ ಸಾಧಕರ ಆನಂದದ ಬಗ್ಗೆ ವಿಚಾರ ಮಾಡುವುದು ಮತ್ತು ‘ಪ್ರೇಮಭಾವ’ ಈ ಗುಣಗಳು ಗಮನಕ್ಕೆ ಬರುತ್ತದೆ.
‘(ದಿ.) ಶಿರೀಷ ದೇಶಮುಖ ಇವರ ಆಧ್ಯಾತ್ಮಿಕ ಪ್ರಗತಿಯೂ ಉತ್ತರೋತ್ತರ ಹೆಚ್ಚಾಗಲಿ’, ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೨೭.೧೦.೨೦೨೨)