ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ಸಂಚಿಕೆ ೨೪/೬ ರಲ್ಲಿ ಮುದ್ರಣವಾದ ಲೇಖನದಲ್ಲಿ ನಾವು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಪೂ. ದೀಪಾಲಿ ಮತಕರ ಇವರಲ್ಲಿ ನಡೆದ ಸಂಭಾಷಣೆಯಲ್ಲಿ ‘ಪೂ. ದೀಪಾಲಿ ಮತಕರ ಇವರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರೊಂದಿಗಾಗಿರುವ ಏಕರೂಪತೆ ಮತ್ತು ಪೂ. ದೀಪಾಲಿ ಅಕ್ಕನವರ ಭಾವಸ್ಥಿತಿ, ಈ ಅಂಶಗಳನ್ನು ನೋಡಿದೆವು. ಈ ವಾರ ನಾವು ಅವರ ಸಂಭಾಷಣೆಯಲ್ಲಿ ‘ಸೊಲ್ಲಾಪುರ ಸೇವಾಕೇಂದ್ರದಲ್ಲಿ ಅರಿವಾದ ಬದಲಾವಣೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಪೂ. ದೀಪಾಲಿ ಅಕ್ಕನವರಿಗೆ ಮಾಡಿದ ಅಮೂಲ್ಯ ಮಾರ್ಗದರ್ಶನ ಈ ಅಂಶಗಳನ್ನು ನೋಡಲಿದ್ದೇವೆ. (ಭಾಗ ೨)
೫. ಪೂ. ದೀಪಾಲಿ ಮತಕರ ಇವರಿಗೆ ಸೊಲ್ಲಾಪುರ ಸೇವಾಕೇಂದ್ರದಲ್ಲಿ ಅರಿವಾದ ಬದಲಾವಣೆ
೫ ಅ. ಸೊಲ್ಲಾಪುರ ಸೇವಾಕೇಂದ್ರದಲ್ಲಿ ಎಲ್ಲ ವಸ್ತುಗಳು ಬಹಳ ಆನಂದದಲ್ಲಿರುವುದರ ಅರಿವಾಗುವುದು ಮತ್ತು ಆ ವಸ್ತುಗಳನ್ನು ಸ್ಪರ್ಶಿಸುವಾಗ ತಮ್ಮ ಕೈಗಳ ಜಾಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕೈ ಕಾಣಿಸುವುದು
ಪೂ. ದೀಪಾಲಿ ಮತಕರ : ‘ಸೇವಾಕೇಂದ್ರದಲ್ಲಿ ಎಲ್ಲ ವಸ್ತುಗಳು ಬಹಳ ಆನಂದದಲ್ಲಿವೆ ಎಂದು ನನಗೆ ಅರಿವಾಗುತ್ತದೆ. ಆದುದರಿಂದ ಅವುಗಳನ್ನು ಸ್ಪರ್ಶಿಸುವಾಗ ನನಗೂ ಬಹಳ ಆನಂದವಾಗುತ್ತದೆ. ‘ಆ ವಸ್ತುಗಳನ್ನು ಬಹಳ ಪ್ರೀತಿಸಬೇಕು’ ಎಂದು ನನಗೆ ಅನಿಸುತ್ತದೆ. ಸೇವಾಕೇಂದ್ರದ ಪ್ರತಿಯೊಂದು ವಸ್ತುವೇ ನನ್ನೊಂದಿಗೆ ಮಾತನಾಡುತ್ತದೆ. ಅಕ್ಕ, ಆ ವಸ್ತುಗಳನ್ನು ಸ್ಪರ್ಶಿಸುವಾಗ ನನಗೆ ನನ್ನ ಕೈಯ ಜಾಗದಲ್ಲಿ ನಿಮ್ಮ ಕೈಗಳೇ ಕಾಣಿಸುತ್ತವೆ.
೫ ಆ. ಸೇವಾಕೇಂದ್ರದ ಅಕ್ಕಪಕ್ಕದಲ್ಲಿರುವ ಗಿಡಗಳು ಸೇವಾ ಕೇಂದ್ರದತ್ತ ವಾಲಿದ್ದು ‘ಅವು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಲೀನವಾಗುತ್ತಿವೆ’ ಎಂದು ಅರಿವಾಗುವುದು : ಸೇವಾಕೇಂದ್ರದ ಅಕ್ಕಪಕ್ಕದ ಗಿಡಗಳೂ ಸೇವಾಕೇಂದ್ರದತ್ತ ವಾಲುತ್ತಿವೆ. ಸೇವಾಕೇಂದ್ರದ ಧ್ಯಾನಮಂದಿರದ ಕಾಲುದಾರಿಯ ಎದುರಿಗೆ ಕಹಿಬೇವಿನ ಮರವಿದೆ. ಆ ಮರದ ಕೊಂಬೆಗಳು ಸೇವಾಕೇಂದ್ರದ ಕಾಲುದಾರಿಯ ಕಡೆಗೆ ವಾಲಿವೆ. ‘ಧ್ಯಾನ ಮಂದಿರದಲ್ಲಿರುವ ಗುರುದೇವರ ಛಾಯಾಚಿತ್ರದ ದರ್ಶನವನ್ನು ಪಡೆಯಲು ಮತ್ತು ಗುರುದೇವರ ಚರಣಗಳಲ್ಲಿ ಲೀನವಾಗಲು ಆ ಮರವು ಒಳಗೆ ವಾಲಿದೆ’ ಎಂಬಂತೆ ನನಗೆ ಅನಿಸುತ್ತದೆ.
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಈ ನಿಸರ್ಗವು ನಮಗೆ ನಮ್ಮ ಭಾವಕ್ಕನುಸಾರ ಸತತ ಆಶೀರ್ವಾದ ನೀಡುತ್ತಿರುತ್ತದೆ. ನಿನ್ನೆ ಇಲ್ಲಿ (ರಾಮನಾಥಿಯ ಸನಾತನದ ಆಶ್ರಮದಲ್ಲಿ) ಸತ್ಯನಾರಾಯಣ ಪೂಜೆಯಾಯಿತು. ಆ ಪೂಜೆಗಾಗಿ ಕಟ್ಟಿದ ಬಾಳೆಯ ಕಂಬಗಳು ೪ ದಿನಗಳ ನಂತರವೂ ಹಾಗೆ ತಾಜಾ ಇವೆ. ಈಗ ನಮ್ಮ ನಡುವೆ ನಡೆದ ಮಾತುಗಳನ್ನು ಕೇಳಿ ಅವುಗಳಿಗೂ ಆನಂದವಾಗಿದೆ. ಅವು ಸಹ ಆನಂದದಿಂದ ಅಲುಗಾಡುತ್ತಿವೆ.
ನಾನು (ಪೂ. ದೀಪಾಲಿ ಮತಕರ) : ಇಲ್ಲಿನ ಮರಗಳೂ ತುಂಬಾ ಆನಂದದಿಂದ ಅಲುಗಾಡುತ್ತಿವೆ. ‘ಅವು ಸಹ ನಿಮ್ಮ ಮಾತುಗಳನ್ನು ಕೇಳುತ್ತಿವೆ’, ಎಂದು ನನಗನಿಸುತ್ತದೆ. ಅಕ್ಕ, ಈಗ ನನಗೆ ಎಲ್ಲ ಸಾಧಕರ ಬಗ್ಗೆ ಬಹಳ ಕೃತಜ್ಞತೆ ಮತ್ತು ಪ್ರೀತಿ ಅನಿಸುತ್ತದೆ.
೬. ರಾಮನಾಥಿ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸೇವೆ ಮಾಡುತ್ತಿರುವ ಕೋಣೆಯಲ್ಲಿ ಶ್ರೀಕೃಷ್ಣನ ಮೂರ್ತಿಯು ಆನಂದದಲ್ಲಿ ಮತ್ತು ನಗುತ್ತಿರುವಂತೆ ಕಾಣಿಸುವುದು
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ರಾಮನಾಥಿ ಆಶ್ರಮದಲ್ಲಿ ನಾನು ಸೇವೆ ಮಾಡುವ ಕೋಣೆಯಲ್ಲಿ ಶ್ರೀಕೃಷ್ಣನ ಮೂರ್ತಿಯಿದೆ. ಅದರ ಮುಖ ಬಹಳ ಆನಂದದಲ್ಲಿದೆ. ‘ಅದು ಬಹಳ ಆನಂದದಿಂದ ಮಧುರವಾಗಿ ನಗುತ್ತಿವೆ’, ಎಂದು ಅನಿಸುತ್ತದೆ.
ಪೂ. ದೀಪಾಲಿ ಮತಕರ : ನೀವು ಮಾತನಾಡುವಾಗ ನನಗೂ ಆ ಕೃಷ್ಣನ ಮೂರ್ತಿ ಆನಂದದಿಂದ ನಗುತ್ತಿರುವುದು ಕಾಣಿಸುತ್ತಿದೆ.
೭. ಪೂ. ದೀಪಾಲಿ ಮತಕರ ಇವರು ಗೌರಿ-ಗಣಪತಿಯ ಕಾಲಾವಧಿಯಲ್ಲಿ ‘ಆನ್‌ಲೈನ್’ ಸತ್ಸಂಗದಲ್ಲಿ ಗೌರಿಯ ಭಾವಾರ್ಚನೆಯ ಮೂಲಕ ಸಾಧಕರಿಗೆ ಸಾಧನೆಯಲ್ಲಿ ನೀಡಿದ ಪ್ರೋತ್ಸಾಹ ಮತ್ತು ಸಾಧಕರಿಂದ ದೊರಕಿದ ಉತ್ತಮ ಬೆಂಬಲ !
ಪೂ. ದೀಪಾಲಿ ಮತಕರ : ಗಣೇಶೋತ್ಸವದ ಕಾಲಾವಧಿಯಲ್ಲಿ ಜಿಲ್ಲೆಯಲ್ಲಿನ ‘ಆನ್‌ಲೈನ್’ ಸತ್ಸಂಗದಲ್ಲಿ ಸಂಚಾರವಾಣಿಯ ಪರದೆಯ ಮೇಲೆ ನಿಮ್ಮ (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ) ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ದೈನಿಕ ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾದ ಛಾಯಾಚಿತ್ರವನ್ನು ಇಟ್ಟಿದ್ದರು. ಗೌರಿಯ ಭಾವಾರ್ಚನೆಯನ್ನು ಮಾಡಿ ನಾನು ಸಾಧಕರಿಗೆ, ‘ಎದುರಿಗೆ ಕಾಣಿಸುವ ‘ಸಮಷ್ಟಿ ಗೌರಿ’ (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳರು) ಏನು ಹೇಳುತ್ತಾರೆ ? ಎಂಬುದನ್ನು ಅನುಭವಿಸೋಣ’, ಎಂದೆನು. ನಾಮ, ಸತ್ಸಂಗ, ಪ್ರವಚನ ಮತ್ತು ಗ್ರಂಥ ಈ ಮಾಧ್ಯಮಗಳಿಂದ ಎಲ್ಲ ಕಡೆಗೆ ಚೈತನ್ಯವನ್ನು ಹರಡಬೇಕು’, ಎಂದು ಅವರು ಹೇಳುತ್ತಿದ್ದಾರಲ್ಲವೇ ?” ಎಂದು ಹೇಳಿದೆ. ಆಗ ಸಾಧಕರಿಗೆ ಬಹಳ ಆನಂದವಾಗಿ ಅವರಿಗೆ ಭಾವಜಾಗೃತಿಯಾಯಿತು. ಆದುದರಿಂದ ಹಬ್ಬಗಳ ಕಾಲಾವಧಿಯಲ್ಲಿಯೂ ಎಲ್ಲರೂ ಒಳ್ಳೆಯ ರೀತಿಯಲ್ಲಿ ಸಮಷ್ಟಿ ಸೇವೆಯನ್ನು ಮಾಡಿದರು.
ಸಾಮಾನ್ಯವಾಗಿ ‘ಗೌರಿ-ಗಣಪತಿಯ ಸಮಯದಲ್ಲಿ ಮನೆಯಲ್ಲಿ ಗಣಪತಿ ಮತ್ತು ಗೌರಿಯ ಅಲಂಕಾರ ಮತ್ತು ನೈವೇದ್ಯದಿಂದಾಗಿ ವ್ಯಷ್ಟಿ ಸಾಧನೆ ಮತ್ತು ಸಮಷ್ಟಿ ಸೇವೆಯು ಆಗಿಲ್ಲ’, ಎಂದು ಸಾಧಕರು ಹೇಳುತ್ತಿದ್ದರು; ಆದರೆ ಈ ಸಮಯದಲ್ಲಿ ಕೆಲವು ಸಾಧಕರು ರಾತ್ರಿ ಜಾಗರಣೆ ಮಾಡಿ ಮತ್ತು ಕೆಲವರು ಬೆಳಗ್ಗೆ ಬೇಗ ಎದ್ದು ಮನೆಯಲ್ಲಿ ಸ್ವಚ್ಛತೆ ಮತ್ತು ಅಲಂಕಾರದ ಸೇವೆಯನ್ನು ಮಾಡಿದರು. ಅದರೊಂದಿಗೆ ಅವರು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಪ್ರಯತ್ನವನ್ನೂ ಮುಂದುವರಿಸಿದರು.
೮. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಮಾಡಿದ ಅಮೂಲ್ಯ ಮಾರ್ಗದರ್ಶನ !
೮ ಅ. ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯೇ ಸಾಧಕರ ಉಸಿರಾಗಬೇಕು, ಅದರಿಂದ ಚೈತನ್ಯದ ಸ್ರೋತವು ಕಾರ್ಯನಿರತವಾಗುವುದು !
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ತುಂಬಾ ಸುಂದರವಾಗಿದೆ ! ನಮಗೆ ಈಗ ಸಮಷ್ಟಿ ಧ್ಯೇಯವನ್ನೇ ಇಡುವುದಿದೆ. ನಮ್ಮ ಶ್ರೀ ಗುರುಗಳಿಗೆ ಸಮಷ್ಟಿ ಎಂದರೆ ತುಂಬಾ ಪ್ರಿಯವಾಗಿದೆ. ‘ಸಮಾಜಕ್ಕಾಗಿ ಕಷ್ಟವನ್ನು ಪಡುತ್ತ ಸಮಷ್ಟಿ ಸಾಧನೆಯನ್ನು ಮಾಡುವುದು’, ಇದು ಗುರುಗಳಿಗೆ ತುಂಬಾ ಇಷ್ಟವಾಗುತ್ತದೆ. ಆದುದರಿಂದ ‘ಸಮಾಜಕ್ಕಾಗಿ ಶ್ರಮಿಸುವುದು’, ಇದೇ ನಮ್ಮ ಸಾಧನೆಯಾಗಿದೆ. ಈ ಸೇವೆ ಎಂದರೇ ನಮ್ಮ ಉಸಿರಾಗಬೇಕು. ಪ್ರಯತ್ನಿಸದಿದ್ದರೆ, ನಮಗೆ ‘ನನ್ನ ಉಸಿರಾಟವು ನಿಂತಿದೆಯೇ ?’ ಎಂದೆನಿಸಬೇಕು. ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಪ್ರಯತ್ನ ಮತ್ತು ಶ್ರಮಿಸುತ್ತಿರುವುದು, ತಪ್ಪುಗಳಾದರೂ ಅದರಿಂದ ಕಲಿಯುತ್ತಿರುವುದು. ‘ಸಾಧನೆಗಾಗಿ ಪರಿಶ್ರಮ ಮತ್ತು ಪ್ರಯತ್ನಗಳನ್ನು ಮಾಡುತ್ತಿದ್ದರೆ, ಉಸಿರಾಟವು ನಡೆಯುತ್ತಿರುತ್ತದೆ’, ಎಂಬುದನ್ನು ನಾವು ಅನುಭವಿಸುತ್ತೇವೆ. ಆ ಸಮಯದಲ್ಲಿ ನಾವು ಸಹಜವಾಗಿ ಮತ್ತು ಆಂತರ್ಯದಲ್ಲಿ ಭಗವಂತನ ಭಕ್ತಿಯನ್ನು ಅನುಭವಿಸುತ್ತೇವೆ. ಎಲ್ಲರೂ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಪ್ರಯತ್ನಗಳನ್ನು ಚೆನ್ನಾಗಿ ಮತ್ತು ಸಮರ್ಪಿಸಿಕೊಂಡು ಮಾಡಿರಿ. ಅದರಿಂದಲೇ ಚೈತನ್ಯದ ಸ್ರೋತವು ಎಲ್ಲೆಡೆ ಕಾರ್ಯನಿರತವಾಗುವುದು.
ಪೂ. (ಕು.) ದೀಪಾಲಿ ಮತಕರ : ಶ್ರೀಸತ್‌ಶಕ್ತಿ ಬಿಂದಾ ಅಕ್ಕ ನನಗೆ, ‘ನಿಮ್ಮ ಈ ಮಾತಿನಿಂದಲೇ ಚೈತನ್ಯದ ಸ್ರೋತವು ಕಾರ್ಯನಿರತವಾಗಿದೆ’, ಎಂದೆನಿಸಿತು.
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ನನ್ನಿಂದಲ್ಲ. ನಿಮ್ಮಲ್ಲಿನ ಭಾವಭಕ್ತಿಯಿಂದ ಅದು ಕಾರ್ಯನಿರತವಾಗುವುದು. ನೀವೆಲ್ಲರೂ ಸಮಷ್ಟಿಯ ಗೌರಿಯ ಉಪಾಸನೆಯನ್ನು ಮಾಡಿದ್ದೀರಲ್ಲವೇ, ಅದನ್ನು ಬರೆದು ಕಳುಹಿಸಿ. ತುಂಬಾ ಒಳ್ಳೆಯ ಪ್ರಯತ್ನಗಳಿವೆ.
೮ ಆ. ಭಾವ, ಭಕ್ತಿ, ತಳಮಳ ಮತ್ತು ಪ್ರೀತಿಯೇ ಸಾಧನೆಯಲ್ಲಿನ ನಿಜವಾದ ಶ್ರೀಮಂತಿಕೆ !
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ನಿಜವಾದ ಶ್ರೀಮಂತಿಕೆ, ಎಂದರೆ ಸಾಧನೆಯಲ್ಲಿನ ಪ್ರಗತಿ ! ಆಧ್ಯಾತ್ಮಿಕ ಮಟ್ಟವು ಅನೇಕ ವಿಷಯಗಳ ಮೇಲೆ ಅವಲಂಬಿಸಿರುತ್ತದೆ. ದೇವರು ‘ಯಾರು ಎಷ್ಟು ಶ್ರಮಪಡುತ್ತಾರೆ ? ಯಾರು ಎಷ್ಟು ಕಷ್ಟಪಡುತ್ತಾರೆ ? ಯಾರು ರಿಯಾಯಿತಿಯನ್ನು ಪಡೆಯುವುದಿಲ್ಲ ?’ ಎಂದು ನೋಡುತ್ತಾರೆ. ಪ್ರಗತಿಯು ತೊಂದರೆ, ಪ್ರಾರಬ್ಧ ಮತ್ತು ಇತರ ಅನೇಕ ವಿಷಯಗಳ ಮೇಲೆ ಅವಲಂಬಿಸಿರುತ್ತದೆ. ನಾವು ಶ್ರಮಪಟ್ಟರೆ ಈ ಎಲ್ಲ ವಿಷಯಗಳನ್ನು ಎದುರಿಸಿ ಮುಂದೆ ಹೋಗುತ್ತೇವೆ. ಸಾಧನೆಯ ದೃಷ್ಟಿಯಿಂದ ನಿಜವಾದ ಶ್ರೀಮಂತಿಕೆ ಎಂದರೆ ರತ್ನ, ವಜ್ರ ಇತ್ಯಾದಿಗಳು ಆಗದೇ ನಮ್ಮಲ್ಲಿನ ಭಾವ, ಭಕ್ತಿ, ತಳಮಳ ಮತ್ತು ಪ್ರೀತಿಯಲ್ಲಿದೆ ! ತಳಮಳ ಮತ್ತು ಸಮಷ್ಟಿ ಸಾಧನೆಯಿಂದಲೇ ಸಾಧನೆಯಲ್ಲಿ ಪರಿಪೂರ್ಣತೆ ಬರುತ್ತದೆ.
೯. ಕೃತಜ್ಞತೆ
‘ಹೇ ಪರಮಪ್ರಿಯ ಶ್ರೀಕೃಷ್ಣಾ, ಕೃಪಾಳು ಗುರುದೇವಾ, ‘ತಮ್ಮ ಕೃಪೆಯಿಂದಲೇ ನನಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೈವೀ ಮತ್ತು ಚೈತನ್ಯದಾಯಿ ಸತ್ಸಂಗವು ಲಭಿಸಿತು’, ಅದಕ್ಕಾಗಿ ನನ್ನ ಮನಸ್ಸಿನಲ್ಲಿ ನಿರಂತರ ಕೃತಜ್ಞತೆಯ ಭಾವವಿರಲಿ. ನನಗೆ ಈ ಸತ್ಸಂಗದ ಲಾಭವನ್ನು ತಳಮಳದಿಂದ ಮಾಡಿಕೊಳ್ಳುವಂತಾಗಲಿ’, ಇದೇ ತಮ್ಮ ಪಾವನ ಚರಣಗಳಲ್ಲಿ ಪ್ರಾರ್ಥನೆ !’ (ಮುಕ್ತಾಯ)
– (ಪೂ.) ಕು. ದೀಪಾಲಿ ಮತಕರ, ಸೊಲ್ಲಾಪುರ (೩೦.೧೧.೨೦೨೧)