ಕರಾಚಿಯಲ್ಲಿ ಚೀನಾದ ನಾಗರಿಕರ ಮೇಲೆ ನಡೆದ ದಾಳಿಯ ಬಗ್ಗೆ ಚೀನಾ ಸ್ವತಃ ತನಿಖೆ ನಡೆಸಲಿದೆ !

ಕರಾಚಿ (ಪಾಕಿಸ್ತಾನ) – ಈ ವರ್ಷ ಏಪ್ರಿಲ್‌ನಲ್ಲಿ ಕರಾಚಿ ವಿಶ್ವವಿದ್ಯಾಲಯದಲ್ಲಿ ನಡೆದ ಬಾಂಬ್ ಸ್ಫೋಟದ ಬಗ್ಗೆ ಪಾಕಿಸ್ತಾನ ತನಿಖೆ ನಡೆಸುತ್ತಿರುವಾಗ ಚೀನಾವು ಪಾಕಿಸ್ತಾನದೊಂದಿಗೆ ಅಲ್ಲಿ ನಡೆದ ಆಕ್ರಮಣದ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿದೆ. ಪಾಕಿಸ್ತಾನದ ಮೇಲೆ ಆಕ್ರಮಣ ಮಾಡುವ ಮೂಲಕ ಚೀನಾದ ನಾಗರಿಕರನ್ನು ಗುರಿ ಮಾಡಲಾಗುತ್ತಿದೆ. ಚೀನಾದೊಂದಿಗಿನ ಪಾಕಿಸ್ತಾನದ ಸಂಬಂಧವನ್ನು ಹಾಳು ಮಾಡುವುದು ಮತ್ತು ಪಾಕಿಸ್ತಾನಕ್ಕೆ ಆರ್ಥಿಕ ಸಮಸ್ಯೆಗಳನ್ನು ಉಂಟು ಮಾಡುವುದು ಈ ದಾಳಿಯ ಉದ್ದೇಶವಾಗಿದೆ ಎಂದು ಹೇಳಲಾಗಿದೆ.

ಈ ಆಕ್ರಮಣವನ್ನು ಪಾಕಿಸ್ತಾನದ ಮಹಿಳಾ ಆತ್ಮಾಹುತಿ ದಾಳಿ ನಡೆಸಿದ್ದಳು. ಈ ದಾಳಿಯಲ್ಲಿ ಚೀನಾ ಮೂಲದ ಶಿಕ್ಷಕರೊಂದಿಗೆ ಸ್ಥಳೀಯ ಚಾಲಕ ಕೂಡ ಸಾವನ್ನಪ್ಪಿದ್ದನು. ಇದರ ನಂತರ ಇತರ ಅನೇಕ ಭಯೋತ್ಪಾದಕ ದಾಳಿಗಳು ನಡೆದವು. ಆಗಲೂ ಚೀನಾದ ನಾಗರಿಕರನ್ನು ಗುರಿಯಾಗಿಸಲಾಗಿದೆ. ನವೆಂಬರ ೨೦೧೮ ರಲ್ಲಿ ಕರಾಚಿಯಲ್ಲಿರುವ ಚೀನಾದ ರಾಯಭಾರ ಕಚೇರಿಯ ಮೇಲೆ ದಾಳಿ ನಡೆದಿತ್ತು. ಇದರ ನಂತರ ಜೂನ್ ೨೦೨೦ ರಲ್ಲಿ ಕರಾಚಿ ಸ್ಟಾಕ್ ಎಕ್ಸ್ಚೇಂಜ್ ಮೇಲೆ ದಾಳಿ ನಡೆಯಿತು.

ಚೀನಾದ ನಾಗರಿಕರ ಮೇಲಿನ ಆಕ್ರಮಣ ಹಿಂದೆ ಬಲೂಚಿಸ್ತಾನ್ ಮುಕ್ತಿ ಸೇನೆಯ ಕೈವಾಡ ಇದೆ ಎಂದು ಆರೋಪಿಸಲಾಗುತ್ತಿದೆ. ಬಲುಚಿಸ್ತಾನ್ ಮುಕ್ತಿ ಸೇನೆಯು ಚೀನಾವನ್ನು ಬಲೂಚಿಸ್ತಾನದಿಂದ ದೂರವಿರಲು ಎಚ್ಚರಿಕೆ ನೀಡಿದೆ.

ಸಂಪಾದಕೀಯ ನಿಲುವು

ಇದರಿಂದ ಚೀನಾಕ್ಕೆ ಪಾಕಿಸ್ತಾನದ ಮೇಲೆ ಎಳ್ಳಷ್ಟು ನಂಬಿಕೆ ಇಲ್ಲ ಎಂದು ಸಾಬೀತಾಗುತ್ತದೆ !