|
ಕರೀಮನಗರ (ತೆಲಂಗಾಣಾ) – ಇಲ್ಲಿನ ಕಾಶ್ಮೀರ ಗಡ್ಡಾದ ಬಳಿ ಇರುವ ಶಾಲಿಮಾರ ಫಂಕ್ಶನ ಹಾಲಿನಲ್ಲಿ ಅಕ್ಟೋಬರ ೩೦ರಂದು ಪೊಲೀಸರು ‘ಜಮಾತ-ಎ-ಇಸ್ಲಾಮೀ ಹಿಂದ’ಗೆ ಮುಸಲ್ಮಾನೇತರ ಯುವತಿ ಹಾಗೂ ಮಹಿಳೆಯರ ಭವ್ಯ ಸಮಾರಂಭವನ್ನು ಆಯೋಜಿಸಲು ಅನುಮತಿ ನೀಡಲಿಲ್ಲ, ಇದರಿಂದ ಸ್ವಲ್ಪ ಸಮಯ ಒತ್ತಡ ನಿರ್ಮಾಣವಾಯಿತು.
Telangana: Jamaat-e-Islami Hind organises get-together event for ‘non-Muslim’ girls, Police denies permission after VHP intervenes https://t.co/BnRqN9wyV0
— OpIndia.com (@OpIndia_com) October 31, 2022
೧. ‘ಜಮಾತ-ಎ-ಇಸ್ಲಾಮೀ ಹಿಂದ’ ಎಂಬ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಯ ಮಹಿಳಾ ಶಾಖೆಯು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ ಮುಸಲ್ಮಾನೇತರ ಯುವತಿಯರು ಹಾಗೂ ಮಹಿಳೆಯರಿಗೆ ಮದ್ಯಾಹ್ನದ ಊಟ ನೀಡಲಾಗುತ್ತಿತ್ತು; ಆದರೆ ವಿಶ್ವ ಹಿಂದೂ ಪರಿಷತ್ತು ಕರೀಮನಗರ ಪೊಲೀಸ ಆಯುಕ್ತರ ಬಳಿ ‘ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು’ ಎಂದು ವಿನಂತಿಸಿತ್ತು. ವಿಹಿಂಪವು ‘ಈ ಕಾರ್ಯಕ್ರಮ ನಡೆದರೆ ಗಂಭೀರವಾದ ಪರಿಣಾಮವನ್ನು ಭೋಗಿಸಬೇಕಾಗುವುದು’ ಎಂಬ ಎಚ್ಚರಿಕೆಯನ್ನೂ ನೀಡಿತ್ತು.
೨. ‘ಜಮಾತ-ಎ-ಇಸ್ಲಾಮೀ ಹಿಂದ’ನಂತಹ ಸಂಘಟನೆಗಳು ಹಿಂದೂ ಯುವತಿಯರನ್ನು ಲವ್ ಜಿಹಾದಿನಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿವೆ ಎಂದು ವಿಹಿಂಪದ ಗೋರಕ್ಷಾ ಶಾಖೆಯ ಅಧ್ಯಕ್ಷರಾದ ವುತುಕುರು ರಾಧಾಕೃಷ್ಣ ರೆಡ್ಡಿಯವರು ಆರೋಪಿಸಿದ್ದಾರೆ. ಆದುದರಿಂದ ಇಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನೇಮಿಸಲಾಗಿತ್ತು.
೩. ರೆಡ್ಡಿಯವರು ಮಾತನಾಡುತ್ತ, ಈ ಕಾರ್ಯಕ್ರಮದಿಂದಾಗಿ ಹಿಂದೂಗಳ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗಿದೆ. ‘ಜಮಾತ-ಎ-ಇಸ್ಲಾಮೀ ಹಿಂದ’ನ ಸದಸ್ಯರ ಮೇಲೆ ಪೊಲೀಸರು ಕಠೋರ ಕಾರ್ಯಾಚರಣೆಯನ್ನು ಮಾಡಬೇಕು, ಹಾಗೆಯೇ ಹಿಂದೂ ಯುವತಿಯರು ಇಂತಹ ಕಾರ್ಯಕ್ರಮಗಳಿಗೆ ಹೋಗಬಾರದು, ಎಂದು ಹೇಳಿದರು.