ಜಿಯಾಉದ್ದೀನ್‌ನು ‘ರಾಜೇಶ’ ಎಂದು ಹೇಳಿ ೩ ಹಿಂದೂ ಮಕ್ಕಳ ತಾಯಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಆಕೆಯ ಜೊತೆ ಪಲಾಯನ ಮಾಡಿದ !

ಆಗ್ರಾ (ಉತ್ತರಪ್ರದೇಶ)ದಲ್ಲಿ ಲವ್ ಜಿಹಾದ್‌ನ ಘಟನೆ ಬೆಳಕಿಗೆ !

ಆಗ್ರಾ (ಉತ್ತರಪ್ರದೇಶ) – ಆಗ್ರಾದಲ್ಲಿನ ಜಿಯಾಉದ್ದಿನ್ ಇವನು ‘ರಾಜೇಶ’ ಎಂದು ಹೇಳಿ ೩ ಹಿಂದೂ ಮಕ್ಕಳ ತಾಯಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಪಲಾಯನ ಮಾಡಲು ಪ್ರಯತ್ನಿಸಿದನು. ಪೊಲೀಸರು ಅಕ್ಟೋಬರ್ ೨೫ ರಂದು ಜಿಯಾಉದ್ದಿನ್ ಇವನನ್ನು ವಶಕ್ಕೆ ಪಡೆದರು. ಸಂತ್ರಸ್ತ ಮಹಿಳೆಯನ್ನು ನಾರಿ ನಿಕೇತನಗೆ ಕಳುಹಿಸಲಾಗಿ, ಅದರ ಬಗ್ಗೆ ಆಕೆಯ ಕುಟುಂಬದವರಿಗೆ ತಿಳಿಸಲಾಗಿದೆ.

ಪ್ರಸಾರ ಮಾಧ್ಯಮಗಳು ನೀಡಿದ ವಾರ್ತೆಯ ಪ್ರಕಾರ ಬರಹಾನ ಪೊಲೀಸ ಠಾಣೆಯ ಗಡಿಯಲ್ಲಿ ಬಧನು ಗ್ರಾಮದಲ್ಲಿ ಒಬ್ಬನು ಅನುಮಾನಾಸ್ಪದವಾಗಿ ಮಹಿಳೆಯ ಜೊತೆ ವಾಸವಾಗಿದ್ದನು. ಸ್ಥಳೀಯರಿಗೆ ಅನುಮಾನ ಬಂದ ನಂತರ ಅವರು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರಿಗೆ ತಿಳಿಸಿದರು. ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ವಿಚಾರಣೆ ನಡೆಸುವಾಗ ಅವರಿಗೆ ಅನುಮಾನ ಬಂದಿತ್ತು. ಅವರು ಈ ವಿಷಯವಾಗಿ ಬರಹಾನ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ರಾಜೇಶ ಎಂದು ಗ್ರಾಮದಲ್ಲಿ ವಾಸಿಸುವ ವ್ಯಕ್ತಿ ಜೀಯಾಉದ್ದಿನ್ ಇರುವುದು ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿತು. ಪೊಲೀಸರು ಜಿಯಾಉದ್ದಿನನ್ನನ್ನು ಬಂಧಿಸಿದ್ದಾರೆ ಹಾಗೂ ಸಂತ್ರಸ್ತ ಮಹಿಳೆಯನ್ನು ನಾರಿ ನಿಕೇತನಗೆ ಕಳುಹಿಸಿದ್ದಾರೆ. ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.