ತಮಿಳುನಾಡಿನಲ್ಲಿ ಇಡೀ ಗ್ರಾಮವೇ ವಕ್ಫ್ ಬೋರ್ಡ್ ವಶದಲ್ಲಿ !
೧. ತಮಿಳುನಾಡಿನಲ್ಲಿ ೧ ಸಾವಿರದ ೫೦೦ ವರ್ಷ ಪುರಾತನ ದೇವಸ್ಥಾನ ಸಹಿತ ಸಂಪೂರ್ಣ ಗ್ರಾಮವೇ ತನ್ನದೆನ್ನುತ್ತಿರುವ ವಕ್ಫ್ ಬೋರ್ಡ್ !
ಯಾರ ಭೂಮಿಯೋ ಅವರ ದೇಶ’ ಎಂಬ ಒಂದು ಮಾತಿದೆ. ತಮಿಳುನಾಡಿನಲ್ಲಿ ಅದೇ ರೀತಿ ಆಗುತ್ತಿರುವುದು ಕಾಣಿಸುತ್ತಿದೆ. ಈ ರಾಜ್ಯದಲ್ಲಿ ತಿರುಚಿರಾಪಲ್ಲಿ ಎಂಬ ಹೆಸರಿನ ಒಂದು ಗ್ರಾಮವಿದೆ. ಈ ಗ್ರಾಮದ ಓರ್ವ ಬಡ ರೈತ ರಾಜಗೋಪಾಲ ಎಂಬವರು ತನ್ನ ಮಗಳ ಮದುವೆಗಾಗಿ ತನ್ನ ಭೂಮಿಯನ್ನು ಮಾರಾಟ ಮಾಡುವ ಸಂದರ್ಭದಲ್ಲಿ ತಹಶೀಲ್ದಾರರ ಕಾರ್ಯಾಲಯಕ್ಕೆ ಹೋಗಿದ್ದನು. ಅಲ್ಲಿ ಹೋದ ಮೇಲೆ ಅವನಿಗೆ ಈಗ ತನ್ನ ಭೂಮಿ ತನ್ನದಾಗಿ ಉಳಿದಿಲ್ಲ, ಅಷ್ಟು ಮಾತ್ರವಲ್ಲ ಸಂಪೂರ್ಣ ಗ್ರಾಮದಲ್ಲಿನ ಎಲ್ಲ ಭೂಮಿಯು ವಕ್ಫ್ ಬೋರ್ಡಿನ ಸ್ವಾಧೀನವಾಗಿದೆ, ಎಂಬುದು ಅವನಿಗೆ ತಿಳಿಯಿತು. ಆಶ್ಚರ್ಯದ ಸಂಗತಿಯೆಂದರೆ, ಈ ಗ್ರಾಮದಲ್ಲಿ ೧ ಸಾವಿರದ ೫೦೦ ವರ್ಷ ಪುರಾತನ ದೇವಸ್ಥಾನವಿದೆ. ಆ ದೇವಸ್ಥಾನದ ಭೂಮಿಯೂ ವಕ್ಫ್ ಬೋರ್ಡ್ಗೆ ಸೇರಿದೆ ಎಂಬುದು ಅವರ ಹೇಳಿಕೆಯಾಗಿದೆ. ಇಸ್ಲಾಮ್ ಸ್ಥಾಪನೆಯಾಗಿ ಸುಮಾರು ೧ ಸಾವಿರದ ೪೦೦ ವರ್ಷಗಳಾಗಿವೆ ಮತ್ತು ಇಸ್ಲಾಮ್ ಭಾರತಕ್ಕೆ ಬಂದು ಸುಮಾರು ೧ ಸಾವಿರ ವರ್ಷಗಳಾಗಿರಬಹುದು; ಆದರೆ ೧ ಸಾವಿರದ ೫೦೦ ವರ್ಷ ಪುರಾತನ ದೇವಸ್ಥಾನವೂ ಈಗ ವಕ್ಫ್ ಬೋರ್ಡಿನ ಆಸ್ತಿಯಾಗಿದೆ. ಈ ವಿಷಯ ಕೇವಲ ಒಂದು ಗ್ರಾಮಕ್ಕೆ ಮಾತ್ರ ಸೀಮಿತವಾಗಿಲ್ಲ. ತ್ರಿಚಿ ಜಿಲ್ಲೆಯಲ್ಲಿ ಇಂತಹ ೬ ಗ್ರಾಮಗಳನ್ನು ವಕ್ಫ್ ಬೋರ್ಡ್ ತನ್ನ ಆಸ್ತಿಯೆಂದು ಘೋಷಿಸಿದೆ.
ಮಾರ್ಚ್ ೨೦೨೨ ರಲ್ಲಿ ‘ವಕ್ಫ್ ಬೋರ್ಡ್’ನ ಭೂಮಿಯ ವರದಿಯ ಸವಿಸ್ತಾರ ಮಾಹಿತಿಯನ್ನು ‘ಆನ್‌ಲೈನ್’ ಪದ್ಧತಿಯಿಂದ ಸಾರ್ವಜನಿಕಗೊಳಿಸಬೇಕು’, ಎಂದು ಭಾಜಪದ ಸಂಸದರಾದ ನಾಯಬಸಿಂಹ ಸೈನಿ ಇವರು ಆಗ್ರಹಿಸಿದ್ದರು, ಅದೇ ರೀತಿ ಅವರು ೧೯೯೫ ರ ವಕ್ಫ್ ಕಾನೂನು ಮತ್ತು ೨೦೧೩ ರಲ್ಲಿನ ಸುಧಾರಣೆ ಕಾನೂನಿನ ಕಡೆಗೂ ಗಮನ ಕೊಡಬೇಕು ಎಂದು ಶಿಫಾರಸ್ಸು ಮಾಡಿದ್ದರು. ಆ ಸಮಯದಲ್ಲಿ ‘ಸೈನ್ಯ ಮತ್ತು ರೈಲ್ವೆ ಇಲಾಖೆಗಳ ನಂತರ ದೇಶದಲ್ಲಿ ವಕ್ಫ್ ಬೋರ್ಡಿನ ಸಂಪತ್ತು ಮೂರನೇ ಸ್ಥಾನದಲ್ಲಿದೆ’, ಎಂದೂ ಸೈನಿಯವರು ಹೇಳಿದ್ದರು, ಆದರೆ ದುರ್ಭಾಗ್ಯದಿಂದ ಸೈನಿಯವರ ಹೇಳಿಕೆಯನ್ನು ದುರ್ಲಕ್ಷಿಸಲಾಯಿತು.
೨. ಆಗಿನ ಕಾಂಗ್ರೆಸ್ ಸರಕಾರ ರೂಪಿಸಿದ ೧೯೯೫ ರ ವಕ್ಫ್ ಕಾನೂನು ಮತ್ತು ೨೦೧೩ ರ ಸುಧಾರಣೆಯಿಂದ ದೇಶದ ಹೆಚ್ಚೆಚ್ಚು ಭೂಮಿಯನ್ನು ವಶಪಡಿಸಿಕೊಂಡ ವಕ್ಫ್ !
೨೮ ಡಿಸೆಂಬರ್ ೨೦೨೧ ರಂದು ಮಥುರಾದಲ್ಲಿನ ಭಗವಾನ ಶ್ರೀಕೃಷ್ಣನ ಭೂಮಿಯ ಮೇಲೆ ವಕ್ಫ್ ಬೋರ್ಡ್ ತನ್ನ ಅಧಿಕಾರವನ್ನು ಹೇಳಿತ್ತು. ಆಗ ಪ್ರತಿವಾದ ಮಾಡುವಾಗ ವೈ.ಎಸ್.ಆರ್. ಕಾಂಗ್ರೆಸ್ಸಿನ ರಾಜ್ಯಸಭಾ ಸಂಸದ ಪರಿಮಲ್ ನಥವಾನಿ ಇವರು ‘ವಕ್ಫ್ ಬೋರ್ಡ್ ಶ್ರೀಕೃಷ್ಣನ ಭೂಮಿಯ ಮೇಲೆ ತನ್ನ ಹಕ್ಕನ್ನು ಹೇಗೆ ಹೇಳುತ್ತದೆ ?’, ಎಂದು ಪ್ರಶ್ನಿಸಿದ್ದರು. ‘ವಕ್ಫ್ ಬೋರ್ಡ್ ಮ್ಯಾನೇಜಮೆಂಟ ಸಿಸ್ಟಮ್ ಆಫ್ ಇಂಡಿಯಾ’ದ ಅಂಕಿಅಂಶಗಳಿಗನುಸಾರ ಸದ್ಯ ವಕ್ಫ್ ಬೋರ್ಡ್ ಬಳಿ ೮ ಲಕ್ಷ ೫೪ ಸಾವಿರ ೫೦೯ ನೊಂದಣೀಕೃತ ಸಂಪತ್ತುಗಳಿವೆ ಮತ್ತು ಅವರ ಕಡೆ ೮ ಲಕ್ಷ ಎಕರೆ ಭೂಮಿಯೂ ಇದೆ. ಭಾರತದ ವಿಭಜನೆಯ ನಂತರ ದೇಶದಲ್ಲಿ ಎಷ್ಟು ಭೂಮಿ ಇತ್ತೋ, ಈಗಲೂ ಅಷ್ಟೇ ಭೂಮಿ ಇದೆ. ಹೀಗಿರುವಾಗ ‘ವಕ್ಫ್ ಬೋರ್ಡಿನ ಭೂಮಿ ಪ್ರತಿದಿನ ಹೇಗೆ ಹೆಚ್ಚಾಗುತ್ತಿದೆ ?’, ಈ ಪ್ರಶ್ನೆ ಎಲ್ಲರಿಗಿದೆ. ಕೇಂದ್ರ ಸರಕಾರ ಯಾವ ರೀತಿಯಲ್ಲಿ ತ್ವರಿತಗತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುತ್ತಿದೆಯೋ, ಅಷ್ಟೇ ತ್ವರಿತಗತಿಯಲ್ಲಿ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಮಜಾರ್‌ಗಳು ನಿರ್ಮಾಣವಾಗುತ್ತಿವೆ. ಅಂದರೆ ಗೋರಿಗಳು ತಯಾರಾಗುತ್ತಿವೆ, ಈ ರೀತಿಯಲ್ಲಿ ಕಳೆದ ೭ ವರ್ಷಗಳಲ್ಲಿ ದೇಶಾದ್ಯಂತ ಸುಮಾರು ೨ ಲಕ್ಷ ಹೊಸ ಮಜಾರಗಳನ್ನು (ಮುಸಲ್ಮಾನರ ಧಾರ್ಮಿಕ ಸ್ಥಳಗಳನ್ನು) ನಿರ್ಮಿಸಲಾಗಿದೆ. ೨೦೨೪ ರ ವರೆಗೆ ಅದರಲ್ಲಿ ೨ ಲಕ್ಷ ಮಜಾರಗಳು ಹೆಚ್ಚಾಗುವ ಸಾಧ್ಯತೆಯಿದೆ. ಯಾವುದಾದರೊಬ್ಬ ಮುಸಲ್ಮಾನನು ಸರಕಾರಿ ಅಥವಾ ಖಾಸಗಿ ಭೂಮಿಯಲ್ಲಿ ಮಜಾರ ಅಥವಾ ಮಸೀದಿಯನ್ನು ನಿರ್ಮಿಸಿದರೆ, ಕಾಲಾಂತರದಲ್ಲಿ ಆ ಸ್ಥಾನ ಅಧಿಕೃತವಾಗುತ್ತದೆ. ಇವೆಲ್ಲವೂ ೧೯೯೫ ರ ವಕ್ಫ್ ಬೋರ್ಡ್ ಕಾನೂನು ಮತ್ತು ಅದರಲ್ಲಿ ೨೦೧೩ ರಲ್ಲಿ ಮಾಡಿರುವ ಸುಧಾರಣೆಯ ದುಷ್ಫಲವಾಗಿದೆೆ. ಆದ್ದರಿಂದ ಯಾರಾದರೊಬ್ಬ ಮುಸಲ್ಮಾನನು ಎಲ್ಲಿಯೂ ಮಜಾರ ಅಥವಾ ಮಸೀದಿಯನ್ನು ಕಟ್ಟಿ ಕಾಲಾಂತರದಲ್ಲಿ ಅವನು ವಕ್ಫ್ ಬೋರ್ಡ್ಗೆ ಒಂದು ಅರ್ಜಿ ಯನ್ನು ನೀಡಿದರೆ ಮುಂದಿನ ಕಾರ್ಯವನ್ನು ವಕ್ಫ್ ಬೋರ್ಡ್ ಮಾಡುತ್ತದೆ. ಇದರಿಂದ ಸಂಪೂರ್ಣ ಭಾರತದಲ್ಲಿ ಅನಧಿಕೃತ ಮಸೀದಿ ಮತ್ತು ಮಜಾರಗಳು ಅನಾಯಾಸವಾಗಿ ನಿರ್ಮಿತಿಯಾಗುತ್ತಿವೆ. ಈ ನಿರ್ಮಾಣಕಾರ್ಯವು ಒಂದು ಷಡ್ಯಂತ್ರವನ್ನು ಯಶಸ್ವಿಗೊಳಿಸಲು ನಡೆಯುತ್ತಿದೆ. ಅವರಿಗೆ ಭಾರತದ ಹೆಚ್ಚೆಚ್ಚು ಭೂಮಿಯನ್ನು ವಶಪಡಿಸಲಿಕ್ಕಿದೆ. ಏಕೆಂದರೆ, ‘ಯಾರ ಭೂಮಿಯೋ ಅವನ ದೇಶ !’ ಎಂಬುದು ಇದರ ಹಿಂದಿನ ಷಡ್ಯಂತ್ರವಾಗಿದೆ.
೩. ದೇಶದಲ್ಲಿ ಅನೇಕ ಸ್ಥಳಗಳಲ್ಲಿರುವ ಧಾರ್ಮಿಕ ಮತ್ತು ಖಾಸಗಿ ಜಾಗಗಳ ಮೇಲೆ ವಕ್ಫ್ ಬೋರ್ಡ್ ತನ್ನ ಅಧಿಕಾರವನ್ನು ಹೇಳುತ್ತಿದೆ
೩ ಅ. ಲಕ್ಷ್ಮಣಪುರಿಯಲ್ಲಿ (ಲಖ್ನೌನಲ್ಲಿ) ಹಿಂದೂ ಮಂದಿರದ ಮೇಲೆ ತಮ್ಮ ಹಕ್ಕನ್ನು ಹೇಳುವುದು : ಜುಲೈ ೨೦೨೨ ರಲ್ಲಿ ಒಂದು ವಾರ್ತೆ ಪ್ರಕಟವಾಗಿತ್ತು. ಅದರಲ್ಲಿ ಉತ್ತರಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ರಹಸ್ಯಾಲೋಚನೆಯಿಂದ ಲಕ್ಷ್ಮಣಪುರಿಯಲ್ಲಿನ ಒಂದು ಶಿವಾಲಯವನ್ನು ವಕ್ಫನ ಸಂಪತ್ತು ಎಂದು ನೋಂದಾಯಿಸಿತ್ತು. ೧೮೬೨ ರ ನೊಂದಣೀಕೃತ ಕಾಗದಪತ್ರಗಳಲ್ಲಿ ಅದು ಹಿಂದೂ ಶಿವಾಲಯ’ ಎಂದು ನೋಂದಣಿಯಿದೆ.
೩ ಆ. ರಾಜಸ್ಥಾನದಲ್ಲಿನ ಭೂಮಿಯನ್ನು ಉಳಿಸಲು ಜಿಂದಾಲ ಸಮೂಹಕ್ಕೆ ನ್ಯಾಯಾಲಯದ ಹೋರಾಟವನ್ನು ಮಾಡಬೇಕಾಯಿತು : ರಾಜಸ್ಥಾನದಲ್ಲಿ ‘ಜಿಂದಾಲ ಸಾ ಲಿಮಿಟೆಡ್’ಕ್ಕೆ ಗಣಿ ಕೆಲಸಕ್ಕಾಗಿ ಭೂಮಿಯನ್ನು ನೀಡಲಾಗಿತ್ತು. ಅಲ್ಲಿ ಒಂದು ಸಣ್ಣ ಪಾಳುಬಿದ್ದ ಕಟ್ಟಡವಿತ್ತು. ಅಲ್ಲಿ ಧಾರ್ಮಿಕ ಸ್ಥಳವಿದೆ ಎಂದು ರಾಜಸ್ಥಾನ ವಕ್ಫ್ ಬೋರ್ಡ್ವು ತನ್ನ ಅಧಿಕಾರವನ್ನು ಹೇಳಿತು. ಈ ಪ್ರಕರಣವು ನ್ಯಾಯಾಲಯಕ್ಕೆ ಹೋಯಿತು. ಆಗ ಸರ್ವೋಚ್ಚ ನ್ಯಾಯಾಲಯದ ಪೀಠವು ‘ಆ ಸ್ಥಳವನ್ನು ನಮಾಜು ಪಠಣ ಮಾಡಲು ಧಾರ್ಮಿಕ ಸ್ಥಳವೆಂದು ಮನ್ನಣೆ ಕೊಡಲು ಸಾಧ್ಯವಿಲ್ಲ’, ಎಂದು ಸ್ಪಷ್ಟಪಡಿಸುತ್ತಾ ವಕ್ಫ್ ಬೋರ್ಡಿನ ಅರ್ಜಿಯನ್ನು ತಳ್ಳಿಹಾಕಿತು ಮತ್ತು ಜಿಂದಾಲ ಸಮೂಹದ ಪರವಾಗಿ ನಿರ್ಣಯ ಕೊಟ್ಟಿತು. ಇದು ಸಾಧ್ಯವಾಗಲು ಕಾರಣವೆಂದರೆ, ವಕ್ಫ್ ಬೋರ್ಡಿನ ಎದುರಿಗೆ ಖಟ್ಲೆಯನ್ನು ನಡೆಸುತ್ತಿರುವುದು ಒಂದು ದೊಡ್ಡ ಉದ್ಯೋಗ ಸಮೂಹವಾಗಿತ್ತು. ವಕ್ಫ್ ಬೋರ್ಡ್ ಇದೇ ಹಕ್ಕನ್ನು ಯಾರಾದಾದರೂ ಬಡ ವ್ಯಕ್ತಿಯ ಭೂಮಿಯ ಮೇಲೆ ಮಾಡುತ್ತಿದ್ದರೆ, ಅವನಿಗೆ ಶ್ರೀಮಂತ ವಕ್ಫ್ ಬೋರ್ಡಿನ ಮುಂದೆ ಮೊಣಕಾಲೂರಬೇಕಾಗುತ್ತಿತ್ತು ಮತ್ತು ಸುಮ್ಮನೆ ಅವನ ಭೂಮಿಯನ್ನು ಅದಕ್ಕೆ ಬಿಟ್ಟುಕೊಡಬೇಕಾಗುತ್ತಿತ್ತು.
೩ ಇ. ದೆಹಲಿಯಲ್ಲಿ ಕೋಟ್ಯವಧಿ ರೂಪಾಯಿಗಳ ಖಾಸಗಿ ಭೂಮಿಯನ್ನು ವಕ್ಫ್ ವಶಪಡಿಸಿಕೊಳ್ಳಲು ಪ್ರಯತ್ನಿಸುವುದು : ಇದು ದೆಹಲಿಯ ಮೈಹರೋಲಿ ಭಾಗದ ಒಂದು ಘಟನೆ. ೧೯೮೭-೮೮ ರಲ್ಲಿ ಒಬ್ಬ ವ್ಯಕ್ತಿಯು ಒಬ್ಬ ಮುಸಲ್ಮಾನ ವ್ಯಕ್ತಿಯಿಂದ ಒಂದು ಭೂಮಿಯನ್ನು ಖರೀದಿಸಿದ್ದನು. ಇಂದು ಅದರ ಬೆಲೆ ಕೊಟ್ಯವಧಿ ರೂಪಾಯಿ ಆಗಿದೆ. ಇಷ್ಟು ದಿನಗಳ ನಂತರ ಆ ವ್ಯಕ್ತಿ ಈ ಭೂಮಿಯ ಸುತ್ತಲೂ ಬೇಲಿಯನ್ನು ಹಾಕಲು ಆರಂಭಿಸಿದನು. ಆಗ ದೆಹಲಿ ವಕ್ಫ್ ಬೋರ್ಡಿನ ಅಧ್ಯಕ್ಷ ಮತ್ತು ಆಮ್ ಆದಮಿ ಪಕ್ಷದ ಶಾಸಕ ಅಮಾನುಲ್ಲಾ ಖಾನ ಅದಕ್ಕೆ ಆಕ್ಷೇಪವನ್ನೆತ್ತಿದರು. ಅವರು ಆ ಭೂಮಿಯ ಒಂದು ಹಳೆಯ ಕಟ್ಟಡವನ್ನು ಧಾರ್ಮಿಕ ಸ್ಥಳವಾಗಿದೆ ಎಂದು ಹೇಳಲು ಆರಂಭಿಸಿದರು ಮತ್ತು ಮತಾಂಧರ ಗುಂಪನ್ನು ತಂದು ಆ ಭೂಮಿಯನ್ನು ಬಲವಂತದಿಂದ ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಈಗ ಈ ಪ್ರಕರಣ ದೆಹಲಿ ಉಚ್ಚ ನ್ಯಾಯಾಲಯದಲ್ಲಿದೆ.
೩ ಈ. ದೆಹಲಿಯ ಒಂದು ಖಾಸಗಿ ಮನೆಯ ಮೇಲೆ ವಕ್ಫ್ ಅಧಿಕಾರವನ್ನು ಹೇಳುವುದು : ಮೈರೋಲಿಯಲ್ಲಿನ ವಾರ್ಡ್ ಕ್ರಮಾಂಕ ೧ ರಲ್ಲಿನ ಮನಮೋಹನ ಮಲಿಕ್ ಎಂಬ ವ್ಯಕ್ತಿಯು ೨ ವರ್ಷಗಳ ಹಿಂದೆ ಹಳೆಯ ಮನೆಯನ್ನು ಕೆಡವಿ ಆ ಸ್ಥಳದಲ್ಲಿ ಹೊಸ ಮನೆಯನ್ನು ನಿರ್ಮಿಸಲು ಆರಂಭಿಸಿದಾಗ ಒಂದು ದಿನ ಮಹಮ್ಮದ ಇಕ್ರಾಮ ಎಂಬ ಹೇಳಿಕೊಂಡು ಬಂದ ಮೌಲ್ವಿ ‘ಮನೆಯ ಮಾಲೀಕರಿಗೆ, ‘ನೀವು ಯಾವ ಜಾಗದಲ್ಲಿ ಮನೆಯನ್ನು ನಿರ್ಮಿಸುತ್ತಿದ್ದೀರೋ, ಆ ಭೂಮಿಯು ವಕ್ಫ್ ಬೋರ್ಡಿನದ್ದಾಗಿದೆ’ ಎಂದು ಹೇಳಿದನು. ನಂತರ ಪೊಲೀಸರಲ್ಲಿ ದೂರು ನೀಡಲಾಯಿತು. ಈಗ ಈ ಪ್ರಕರಣವೂ ದೆಹಲಿ ಉಚ್ಚ ನ್ಯಾಯಾಲಯಕ್ಕೆ ಹೋಗಿದೆ.
೪. ಐತಿಹಾಸಿಕ ಸ್ಥಳಗಳಲ್ಲಿ ನಮಾಜುಪಠಣ ಮಾಡಿ ಅವುಗಳನ್ನು ವಶಪಡಿಸಿಕೊಳ್ಳುವ ಷಡ್ಯಂತ್ರ
ಇಷ್ಟು ಮಾತ್ರವಲ್ಲ, ಅವರು ಒಂದು ವಿಶೇಷ ಷಡ್ಯಂತ್ರದ ಅಂತರ್ಗತ ಐತಿಹಾಸಿಕ ಸ್ಥಳಗಳ ಪರಿಸರದಲ್ಲಿ ನಮಾಜುಪಠಣ ಮಾಡಲು ಆರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ ಪಾರ್ಕ್ (ತೋಟ) ಮತ್ತು ಮೈದಾನದಲ್ಲಿ ನಮಾಜುಪಠಣ ಮಾಡಲಾಯಿತು, ಇದನ್ನು ನೀವು ಓದಿರಬಹುದು. ಈಗ ವಕ್ಫ್ ಆ ಭೂಮಿಯ ಮೇಲೆಯೂ ತನ್ನ ಹಕ್ಕನ್ನು ಹೇಳಬಹುದು. ಇದೇ ಕಾರಣಕ್ಕಾಗಿ ಭಾರತೀಯ ಪುರಾತತ್ತ್ವ ಸರ್ವೇಕ್ಷಣ ವಿಭಾಗದ ನಿಯಂತ್ರಣದಲ್ಲಿರುವ ಕುತುಬಮಿನಾರ್‌ನ ಜಾಗದಲ್ಲಿಯೂ ಮತಾಂಧರು ನಮಾಜುಪಠಣ ಮಾಡಲು ಆರಂಭಿಸಿದ್ದಾರೆ.
೫. ಕಾಂಗ್ರೆಸ್ಸಿನ ಅಂದಿನ ಮನಮೋಹನ ಸಿಂಹ ಸರಕಾರ ವಕ್ಫ್ ಕಾನೂನಿನಲ್ಲಿ ಸುಧಾರಣೆ ಮಾಡಿ ಬೋರ್ಡ್ಗೆ ಅಸ್ಸೀಮ ಹಕ್ಕು ನೀಡುವುದು
ಇದರಲ್ಲಿ ಶಿಯಾ ವಕ್ಫ್ ಬೋರ್ಡ್ ಮತ್ತು ಸುನ್ನಿ ವಕ್ಫ್ ಬೋರ್ಡ್ ಹೀಗೆ ಎರಡು ವಿಧಗಳಿವೆ. ಶಿಯಾ ವಕ್ಫ್ ಬೋರ್ಡ್ ಮತ್ತು ಸುನ್ನಿ ವಕ್ಫ್ ಬೋರ್ಡಿನ ಮತಪೆಟ್ಟಿಗೆಯ ಬೇರೆ ಬೇರೆ ರಾಜಕಾರಣಗಳಿವೆ. ಇಬ್ಬರೂ ತಮ್ಮ ಪದ್ದತಿಯಲ್ಲಿ ಸಾರ್ವಜನಿಕ ಅಥವಾ ಖಾಸಗಿ ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಸರಕಾರ ವಕ್ಫ್ ಬೋರ್ಡ್ಗೆ ಎಷ್ಟು ಶಕ್ತಿಯನ್ನು ಕೊಟ್ಟಿದೆ ಎಂದರೆ, ಭೂಮಿಯನ್ನು ಕಬಳಿಸಲು ಅದೊಂದು ಮಾಧ್ಯಮವಾಗಿದೆ. ೨೦೧೩ ರಲ್ಲಿ ಕಾಂಗ್ರೆಸ್ಸಿನ ಅಂದಿನ ಮನಮೋಹನ ಸಿಂಹ ಸರಕಾರ ‘ವಕ್ಫ್ ಕಾನೂನು ೧೯೯೫’ರಲ್ಲಿ ಸುಧಾರಣೆಯನ್ನು ಮಾಡಿ ಅವರಿಗೆ ಅಸೀಮ ಅಧಿಕಾರವನ್ನು ನೀಡಿದೆ. ಅದ್ದರಿಂದ ಭಾರತ ಇಸ್ಲಾಮಿಸ್ಥಾನವಾಗುವ ದಿಕ್ಕಿನಲ್ಲಿ ರಭಸದಿಂದ ಮುಂದುವರಿಯುತ್ತಿದೆ. ಈ ಕಾನೂನಿನ ೪೦ ನೇ ಕಲಮ್‌ನಲ್ಲಿನ ವ್ಯವಸ್ಥೆಗನುಸಾರ ಯಾವುದೇ ಸಂಪತ್ತನ್ನು ವಕ್ಫನ ಸಂಪತ್ತು ಎಂದು ಘೋಷಿಸುವ ಮೊದಲು ಅದರ ಮಾಲೀಕರಿಗೆ ಸೂಚನೆ ಕೊಡುವ ಅವಶ್ಯಕತೆ ಇಲ್ಲ, ಅಂದರೆ ನಿಮ್ಮ ಚಬೂತರಾದ (ಚಬೂತರಾ ಅಂದರೆ, ಮೂರ್ತಿ ಅಥವಾ ಯಾವುದಾದರೊಂದು ಧರ್ಮದ ಪ್ರತೀಕವನ್ನು ಇಡುವ ಕಟ್ಟೆ) ಮೇಲೆ ಸಹಜವಾಗಿ ಯಾರಾದರೂ ನಮಾಜುಪಠಣ ಮಾಡಿದರೆ, ಮಜಾರವನ್ನು ನಿರ್ಮಿಸಿದರೆ ಅಥವಾ ಅಲ್ಲಿ ೭೮೬ ಬರೆದರೆ, ಆ ಸ್ಥಳವನ್ನು ವಕ್ಫನ ಸಂಪತ್ತೆಂದು ಘೋಷಿಸಬಹುದು ಮತ್ತು ಇದು ನಿಮಗೆ ತಿಳಿಯುವುದೂ ಇಲ್ಲ. ನಂತರ ಜಾಗದ ಮಾಲೀಕರಿಗೆ ‘ವಕ್ಫ್ ಕೌನ್ಸಿಲ್’ನಲ್ಲಿ ಖಟ್ಲೆಯನ್ನು ನಡೆಸುತ್ತಾ ಓಡಾಡಬೇಕಾಗುತ್ತದೆ. ಈ ಕೌನ್ಸಿಲ್ ಹೆಚ್ಚಿನ ಪ್ರಕರಣಗಳಲ್ಲಿ ವಕ್ಫ್ ಬೋರ್ಡ್ಗೇ ಸಹಾಯ ಮಾಡುತ್ತದೆ.
ಕಲಮ್ ೫೨ ಕ್ಕನುಸಾರ ವಕ್ಫನಲ್ಲಿ ನೋಂದಣಿಯಾಗಿರುವ ಭೂಮಿಯನ್ನು ಯಾರಾದರೂ ವಶಪಡಿಸಿಕೊಂಡರೆ, ವಕ್ಫವು ಜಿಲ್ಲಾಧಿಕಾರಿಗಳಿಗೆ ಆ ಭೂಮಿಯನ್ನು ಹಿಂತಿರುಗಿಸಲು ಹೇಳಬಹುದು ಮತ್ತು ಕಾನೂನು ಪ್ರಕಾರ ಜಿಲ್ಲಾಧಿಕಾರಿಗಳಿಗೆ ೩೦ ದಿನಗಳಲ್ಲಿ ಆ ಭೂಮಿಯನ್ನು ವಕ್ಫಗೆ ಹಿಂತಿರುಗಿಸಬೇಕಾಗುವುದು. ವಕ್ಫನ ಭೂಮಿಯ ಮೇಲೆ ಯಾರಾದರೂ ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸಿದರೆ, ಅವರ ರಕ್ಷಣೆಗಾಗಿ ಅನೇಕ ಕಾನೂನುಗಳಿವೆ; ವಕ್ಫ್ ಬೋರ್ಡ್ ಒಂದು ಸಲ ಯಾರದ್ದಾದರೂ ಭೂಮಿಯನ್ನು ವಶಪಡಿಸಿಕೊಂಡರೆ, ಅದನ್ನು ಹಿಂತಿರುಗಿ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಸರಳ ಭಾಷೆಯಲ್ಲಿ ಹೇಳಬೇಕಾದರೆ, ವಕ್ಫ್ ಬೋರ್ಡ್ ನಿಮ್ಮ ಆಸ್ತಿಯ ಕಾಗದಪತ್ರದ ಮೇಲೆ ತನ್ನ ಹೆಸರನ್ನು ಬರೆದರೆ, ಆ ಆಸ್ತಿ ಅವರದ್ದಾಗುತ್ತದೆ ಮತ್ತು ಒಮ್ಮೆ ಅದು ಅವರ ವಶಕ್ಕೆ ಹೋದರೆ ಅದು ನಿಮ್ಮದಾಗಲು ಸಾಧ್ಯವೇ ಇಲ್ಲ.
೬. ಭಾರತವನ್ನು ಇಸ್ಲಾಮೀಸ್ತಾನ ಆಗುವುದನ್ನು ತಡೆಯಲು ವಕ್ಫ್ ಕಾನೂನನ್ನು ರದ್ದುಪಡಿಸುವುದು ಆವಶ್ಯಕವಾಗಿದೆ !
ವಕ್ಫ್ ಕಾನೂನನ್ನು ಬೇಗನೇ ರದ್ದುಪಡಿಸದಿದ್ದರೆ, ಈ ಕಾನೂನು ಈ ದೇಶದಲ್ಲಿ ಶರಿಯತ್ ಕಾನೂನಿನ ಮಾರ್ಗವನ್ನು ಸುಲಭಗೊಳಿಸುವುದು. ನಮ್ಮ ತಲಾಠಿಗಳು ಮತ್ತು ಲೇಖಪಾಲರು ಸ್ವಲ್ಪ ಹಣಕ್ಕಾಗಿ ಯಾರ ಭೂಮಿಯನ್ನೂ ವಕ್ಫ್ ಬೋರ್ಡಿನ ಭೂಮಿ ಎಂದು ತೋರಿಸಬಹುದು ಮತ್ತು ನಿಜವಾದ ಮಾಲೀಕ ವರ್ಷಗಟ್ಟಲೆ ನ್ಯಾಯಾಲಯದಲ್ಲಿ ಹೋರಾಡುತ್ತಾ ಇರಬೇಕಾಗುವುದು. ಇಂದು ತಮಿಳುನಾಡಿನ ಹಿಂದೂಬಹುಸಂಖ್ಯಾತ ಗ್ರಾಮಗಳ ಮೇಲೆ ವಕ್ಫ್ ತನ್ನ ಅಧಿಕಾರವನ್ನು ಹೇಳುತ್ತಿದೆ. ನಾಳೆ ಒಂದು ವೇಳೆ ದೇಶದ ಒಂದು ದೊಡ್ಡ ಭಾಗ ಅವರ ವಶಕ್ಕೆ ಹೋದರೆ, ಆಗ ಅವರು ಈ ದೇಶವೇ ನಮ್ಮದಾಗಿದೆ, ಎಂದು ಹೇಳಬಹುದು; ಏಕೆಂದರೆ ಅವರು ಭಾರತದ ಗೊಂದಲಮಯ ಸಂವಿಧಾನದಿಂದಲೇ ಅವರ ಶರಿಯತ್ ಕಾನೂನಿನ ಮಾರ್ಗ ಸುಲಭವಾಗುವುದು. ‘ಯಾವನ ಭೂಮಿ ಅವನ ದೇಶ’, ಎನ್ನುವ ಹಾಗೆ ಇಂದು ತಮಿಳುನಾಡಿನ ರೈತರು ಅದಕ್ಕೆ ಬಲಿಯಾಗಿದ್ದಾರೆ. ನಾಳೆ ನೀವು ಕೂಡ ಬಲಿ ಆಗಬಹುದು.’
– ರಾಜೀವ ಚೌಧರಿ (ಆಧಾರ : ‘ರಂಗ ದೆ ಬಸಂತಿ’ ಯೂ ಟ್ಯೂಬ್ ವಾಹಿನಿ)