ಚೀನಾ ಪಾಕಿಸ್ತಾನಕ್ಕೆ ಮುಖಭಂಗ !
ಮಾಸ್ಕೋ (ರಷ್ಯಾ) – ರಷ್ಯಾದ ವಾರ್ತಾ ಸಂಸ್ಥೆ ’ ಸ್ಫೂಟಿನಿಕ ’ ವು ಶಾಂಘೈ ಸಹಕಾರಿ ಸಂಘಟನೆಯ ನಕ್ಷೆ ಜಾರಿಗೊಳಿಸಿದೆ. ಅದರಲ್ಲಿ ಅದು ಪಾಕಿಸ್ತಾನ ವ್ಯಾಪಿತ ಕಾಶ್ಮೀರ, ಆಕ್ಸಾಯಿ ಚೀನಾ ಇದರ ಜೊತೆಗೆ ಸಂಪೂರ್ಣ ಅರುಣಾಚಲ ಪ್ರದೇಶ ಇವು ಭಾರತದ ಅವಿಭಾಜ್ಯ ಅಂಗವಾಗಿವೆ ಎಂದು ತೋರಿಸಿದೆ. ಭಾರತದ ಸರಕಾರಿ ಸೂತ್ರಗಳ ಪ್ರಕಾರ ಶಾಂಘೈ ಸಹಕಾರ ಸಂಘಟನೆಯ ಸಂಸ್ಥಾಪಕ ಸದಸ್ಯ ಎಂಬ ಸಂಬಂಧದಿಂದ ರಷ್ಯಾ ಯೋಗ್ಯ ಪದ್ಧತಿಯಿಂದ ನಕ್ಷೆ ಪ್ರಕಾಶಿತಗೊಳಿಸಿದೆ, ಒಂದು ರೀತಿಯಿಂದ ಒಳ್ಳೆಯ ಪದ್ಧತಿ ಅಳವಡಿಸಿದೆ. ಎರಡು ಕ್ಷೇತ್ರಗಳು ಭಾರತದ ಭಾಗವೆಂದು ತೋರಿಸಿರುವುದು ಇದು ರಾಜನೈತಿಕ ದೃಷ್ಟಿಯಿಂದ ಸ್ವತಂತ್ರ ಭಾರತದ ಇತಿಹಾಸದಲ್ಲಿನ ಒಂದು ಅಭೂತಪೂರ್ವ ಘಟನೆ ಎಂದು ಹೇಳಲಾಗುತ್ತಿದೆ.
ಈ ಮೊದಲು ಚೀನಾ ಕೂಡ ಶಾಂಘೈ ಸಹಕಾರಿ ಸಂಘಟನೆಯ ನಕ್ಷೆ ಜಾರಿಗೊಳಿಸಿತ್ತು. ಅದರಲ್ಲಿ ಪಾಕ ವ್ಯಾಪಿತ ಕಾಶ್ಮೀರ ಮತ್ತು ಅಕ್ಸಾಯಿ ಚೀನಾ ಭಾರತದ ಭಾಗವೆಂದು ತೋರಿಸದೆ ಅನುಕ್ರಮವಾಗಿ ಪಾಕಿಸ್ತಾನ ಮತ್ತು ಚೀನಾದ ಭಾಗವಾಗಿದೆ ಎಂದು ರೇಖಾಂಕೀತಗೊಳಿಸಲಾಗಿತ್ತು. ಈಗ ಸ್ಪೂಟಿನಿಕ್ ನಿಂದ ಹೊಸ ನಕ್ಷೆಯ ಮೂಲಕ. ರಷ್ಯಾದಿಂದ ಚೀನಾ ಮತ್ತು ಪಾಕಿಸ್ತಾನಕ್ಕೆ ಕಪಾಳಮೋಕ್ಷ ಮಾಡಲಾಗಿದೆ .
रूस ने भारत संग फिर निभाई दोस्ती, नए नक्शे में PoK पर पाकिस्तान को लगेगी मिर्ची#RussiaUkraineNews https://t.co/wEXx0hEsOT
— TV9 Bharatvarsh (@TV9Bharatvarsh) October 20, 2022
ಏನಿದು ಶಾಂಘೈ ಸಹಕಾರಿ ಸಂಘಟನೆ ?ಶಾಂಘೈ ಸಹಕಾರಿ ಸಂಘಟನೆ ಇದು ಏಶಿಯಾ ಮತ್ತು ಯುರೋಪ್ ದಲ್ಲಿನ ಕೆಲವು ದೇಶಗಳಲ್ಲಿ ನ ರಾಜಕೀಯ ಮತ್ತು ಆರ್ಥಿಕ ಸಹಾಯವನ್ನು ಸುದೃಢಗೊಳಿಸಲು ಕಾರ್ಯನಿರತವಿರುವ ಸಂಘಟನೆಯಾಗಿದೆ. ಇದರಲ್ಲಿ ಭಾರತ, ರಷ್ಯಾ, ಚೀನಾ, ಪಾಕಿಸ್ತಾನ ಇವುಗಳ ಜೊತೆ ಒಟ್ಟು ೮ ಪೂರ್ಣ ಸದಸ್ಯ ದೇಶಗಳಿವೆ, ಹಾಗೂ ಇತರ ೧೩ ದೇಶಗಳು ನಿರೀಕ್ಷಕರು ಅಥವಾ ಸಂವಾದ ಪಾಲುದಾರರೆಂದು ಕಾರ್ಯನಿರತವಾಗಿವೆ. |