ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಪೂ. ದೀಪಾಲಿ ಮತಕರ ಇವರಲ್ಲಿ ಸಂಚಾರವಾಣಿಯ ಮೂಲಕ ನಡೆದ ಆನಂದಮಯ ಭಾವಸಂವಾದ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಭಾದ್ರಪದ ಕೃಷ್ಣ ಪ್ರತಿಪದೆಯ ದಿನ (೨೧.೯.೨೦೨೧ ಈ ದಿನ) ಬೆಳಗ್ಗೆ ಎದ್ದಾಗಿನಿಂದಲೇ ನನಗೆ (ಮಹಾರಾಷ್ಟ್ರದ) ಸೊಲ್ಲಾಪೂರ ಸೇವಾಕೇಂದ್ರದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಅಸ್ತಿತ್ವವು ಬಹಳಷ್ಟು ಪ್ರಮಾಣದಲ್ಲಿ ಅರಿವಾಗುತ್ತಿತ್ತು. ಸೇವಾಕೇಂದ್ರದಲ್ಲಿ ಓರ್ವ ಸಾಧಕರು ದೇವಿಯ ಭಜನೆಯನ್ನು ಹಾಕಿದ್ದರು. ಆಗ `ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೈವೀ ಹೆಜ್ಜೆಗಳು ಸೇವಾಕೇಂದ್ರದಲ್ಲಿ ಎಲ್ಲ ಕಡೆಗೆ ಮೂಡುತ್ತಿವೆ’, ಎಂದು ನನಗೆ ಅರಿವಾಗುತ್ತಿತ್ತು. ಅದೇ ದಿನ ಮಧ್ಯಾಹ್ನ ನನಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಸಂಚಾರವಾಣಿ ಕರೆ ಬಂದಿತು. ಆಗ ನಮ್ಮಲ್ಲಿ ನಡೆದ ಆನಂದದಾಯಕ ಸಂವಾದವನ್ನು ಮುಂದೆ ಕೊಡುತ್ತಿದ್ದೇನೆ.   

(ಭಾಗ ೧)

ಪೂ. ದೀಪಾಲಿ ರಾಮಚಂದ್ರ ಮತಕರ

೧. ಪೂ. ದೀಪಾಲಿ ಮತಕರ ಇವರು, `ನಿಮ್ಮ ಅಸ್ತಿತ್ವ ಸೊಲ್ಲಾಪೂರ ಸೇವಾಕೇಂದ್ರದಲ್ಲಿ ಮತ್ತು ನನ್ನಲ್ಲಿಯೂ ಸತತವಾಗಿ ಅರಿವಾಗುತ್ತದೆ’, ಎಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಿಗೆ ಹೇಳುವುದು

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಹೇಗಿದ್ದಿಯಾ ?

ಪೂ. ದೀಪಾಲಿ ಮತಕರ : ಚೆನ್ನಾಗಿದ್ದೇನೆ. ಆನಂದದಿಂದ ಇದ್ದೇನೆ. ನೀವು ಹೇಗಿರುವಿರಿ ? ನಿಮ್ಮದು ತುಂಬ ನೆನಪಾಗುತ್ತದೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಹೌದು. `ಬಹಳ ನೆನಪಾಗುತ್ತದೆ’, ಎಂದು ಹೇಳುತ್ತೀ; ಆದರೆ ನನ್ನನ್ನು ಭೇಟಿಯಾಗಲು ಬಂದೇ ಇಲ್ಲವಲ್ಲ.

ಪೂ. ದೀಪಾಲಿ ಮತಕರ : ಶ್ರೀಸತ್‌ಶಕ್ತಿ (ಸೌ.) ಬಿಂದಾ ಅಕ್ಕ, ನಾನು ನಿಮ್ಮ ಚರಣಕಮಲಗಳ ಬಳಿಯೇ ಕುಳಿತಿರುತ್ತೇನೆ. ನೀವು ಯಾವಾಗಲೂ ನನ್ನೊಂದಿಗೆ ಸೊಲ್ಲಾಪೂರ ಸೇವಾಕೇಂದ್ರದಲ್ಲಿಯೇ ಇರುತ್ತೀರಿ. ಆದುದರಿಂದ ನಾನು ಅಲ್ಲಿ ಬಂದಿಲ್ಲ. ನಾನು ನಡೆಯುತ್ತಿರುವಾಗ ನನಗೆ ನಿಮ್ಮ ದೈವೀ ಹೆಜ್ಜೆಗಳೇ ಕಾಣಿಸುತ್ತವೆ. ನಾನು ಮಾತನಾಡುವಾಗ ನನಗೆ ನೀವೇ ಮಾತನಾಡುತ್ತಿರುವಿರಿ ಎಂದು ಅನಿಸುತ್ತದೆ. ಇಲ್ಲಿ ನನಗೆ ಯಾವಾಗಲೂ ನಿಮ್ಮ ಅಸ್ತಿತ್ವದ ಅರಿವೇ ಆಗುತ್ತಿರುತ್ತದೆ.

೨. ಪೂ. ದೀಪಾಲಿ ಇವರು, `ಸೊಲ್ಲಾಪುರನಲ್ಲಿ ತುಂಬಾ ಸೇವೆಗಳು ನಡೆದಿವೆ ಆದುದರಿಂದ ರಾಮನಾಥಿಗೆ ಹೋಗಬೇಕೆಂದು ಅನಿಸುವುದಿಲ್ಲ’ ಎಂದು ಹೇಳುವುದು ಮತ್ತು ಅದನ್ನು ಕೇಳಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ತುಂಬಾ ಆನಂದವಾಗುವುದು

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ನೋಡು, ಹೇಗೆ ವಿಷಯವನ್ನು ಬದಲಾಯಿಸುತ್ತಿ ? ವಿಷಯ ಬದಲಾಯಿಸ ಬೇಡ. `ನೀನು ಇಲ್ಲಿಗೆ ಯಾವಾಗ ಬರುತ್ತೀ ಎಂಬುದನ್ನು ಹೇಳು ?

ಪೂ. ದೀಪಾಲಿ ಮತಕರ : ನಿಜವಾಗಿಯೂ, ನೀವು ಇಲ್ಲಿಯೇ ಇರುತ್ತೀರಿ !  ನಾನು ನಿಮ್ಮ ಜೊತೆಗೇ ಇರುತ್ತೇನೆ. ಈಗ ಇಲ್ಲಿ ಸೇವೆಗಳೂ ಆರಂಭವಾಗಿವೆ. ಆದುದರಿಂದ ನನಗೆ `ರಾಮನಾಥಿಗೆ ಬರಬೇಕೆಂದು ಅನಿಸುವುದಿಲ್ಲ. ಸದ್ಗುರು ಸ್ವಾತಿ ಅಕ್ಕನವರೂ (ಸದ್ಗುರು ಸ್ವಾತಿ ಖಾಡಯೆಯವರೂ) ನಮ್ಮ ಜಿಲ್ಲೆಗೆ ಬರುವವರಿದ್ದಾರೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಬಹಳ ಚೆನ್ನಾಗಿದೆ ! ಇದೆಲ್ಲವನ್ನು ಕೇಳಿ ನನಗೆ ತುಂಬಾ ಆನಂದವಾಯಿತು. ನಿಮ್ಮ ಮನೆಯ ಸದಸ್ಯರು ಹೇಗಿದ್ದಾರೆ ?

ಪೂ. ದೀಪಾಲಿ ಮತಕರ : ತಂದೆ (ಶ್ರೀ. ರಾಮಚಂದ್ರ ಮತಕರ) ದೇವದ ಆಶ್ರಮದಲ್ಲಿದ್ದಾರೆ ಮತ್ತು ಕಿರಿಯ ಸಹೋದರ (ಶ್ರೀ. ನೀಲೇಶ ಮತಕರ) ಡೊಂಬಿವಲಿ(ಮುಂಬಯಿ)ಯಲ್ಲಿ ಮನೆಯಲ್ಲಿದ್ದಾನೆ.

೩. `ನನ್ನ ವಿವಾಹ ಶ್ರೀಕೃಷ್ಣನ ಜೊತೆಗೆ ಆಗಿದೆ, ಈಗ ಅವನ ಸಮಷ್ಟಿ ಸಂಸಾರವನ್ನು ಬಿಟ್ಟು ನನಗೆ ಬೇರೆ ಏನೂ ಬೇಡ’, ಎಂದು ಹೇಳುವ ಪೂ. ದೀಪಾಲಿ ಮತಕರ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ನಿನ್ನ ಮನೆಯ ಕುಟುಂಬದವರು ನಿನ್ನ ವಿವಾಹದ ಬಗ್ಗೆ ಕೇಳುವುದಿಲ್ಲವೇ ?

ಪೂ. ದೀಪಾಲಿ ಮತಕರ : ನಾನು ಕಳೆದ ೧೨ ವರ್ಷಗಳಿಂದ ಮನೆಗೆ ಹೋಗಿಯೇ ಇಲ್ಲ. ನಾನು ಮನೆಗೆ ಹೋಗದಿರುವುದರಿಂದ ನನಗೆ ಯಾರೂ ಏನೂ ಕೇಳುವುದೇ ಇಲ್ಲ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ನಿನ್ನ ಮದುವೆಯನ್ನು ಯಾವಾಗ ನಿಶ್ಚಯಿಸೋಣ ?

ಪೂ. ದೀಪಾಲಿ ಮತಕರ: ನನ್ನ ಮದುವೆ ಶ್ರೀಕೃಷ್ಣನೊಂದಿಗೆ ಯಾವಾಗಲೋ ಆಗಿದೆ. ಅವನ ಸಮಷ್ಟಿ ಸಂಸಾರವನ್ನು ಬಿಟ್ಟು ನಾನು ಬೇರೆ ಯಾವುದೇ ವಿಚಾರವನ್ನು ಮಾಡುವುದಿಲ್ಲ. ಶ್ರೀಕೃಷ್ಣನನ್ನು ಬಿಟ್ಟು ನಾನು ಬೇರೆ ಯಾರ ವಿಚಾರವನ್ನು ಎಂದಿಗೂ ಮಾಡಲು ಸಾಧ್ಯವೇ ಇಲ್ಲ ಮತ್ತು ಮಾಡುವುದೂ ಇಲ್ಲ. ಗುರುದೇವರು ಮತ್ತು ನೀವು ನನ್ನ ಮದುವೆಯನ್ನು ಶ್ರೀಕೃಷ್ಣನೊಂದಿಗೆ ಮಾಡಿಯೇ ನನ್ನನ್ನು ಸಮಷ್ಟಿಯಲ್ಲಿ ಕಳುಹಿಸಿರುವಿರಿ. ಆದುದರಿಂದ ನಾನು ಅವನ ಸಂಸಾರವನ್ನು ಹೇಗೆ ಮಾಡಬೇಕು ಎಂಬುದನ್ನು ಕಲಿಯುತ್ತಿದ್ದೇನೆ. ಶ್ರೀಕೃಷ್ಣನು ನನಗೆ ಜಿಲ್ಲೆಯಲ್ಲಿ ಮತ್ತು ಸೇವಾಕೇಂದ್ರದಲ್ಲಿ ಎಷ್ಟೋ ಚಿಕ್ಕ-ದೊಡ್ಡ ಮಕ್ಕಳನ್ನು ಕೊಟ್ಟಿದ್ದಾನೆ. ಓರ್ವ ಸ್ತ್ರೀಗೆ `ತಾಯಿ’ ಯಾಗಲು ಎಷ್ಟೊಂದು ಕಷ್ಟ ಪಡಬೇಕಾಗುತ್ತದೆ ! ಎಷ್ಟೊಂದು ತೊಂದರೆಗಳನ್ನು ಸಹಿಸಬೇಕಾಗುತ್ತದೆ ! ನನಗೆ ಎಷ್ಟು ಸಹಜತೆಯಿಂದ ಮಕ್ಕಳು ಸಿಕ್ಕಿದ್ದಾರೆ ! ಸನಾತನದ ಎಷ್ಟು ದೊಡ್ಡ ಕುಟುಂಬವಿದೆ ! ಆದುದರಿಂದ ಈ ಸಂಸಾರದ ಹೊರತು ನನಗೆ ಬೇರೆ ಏನೂ ಬೇಡ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಹೌದಲ್ಲ, ನಾನೇ ನಿನ್ನ ಮದುವೆಯನ್ನು ಶ್ರೀಕೃಷ್ಣನೊಂದಿಗೆ ಮಾಡಿಕೊಟ್ಟಿದ್ದೇನೆ ಮತ್ತು ಒಮ್ಮೆ ಮದುವೆಯಾದರೆ ಎರಡನೆ ಮದುವೆ ಇರುವುದೇ ಇಲ್ಲ !

೪. ಪೂ. ದೀಪಾಲಿ ಇವರು ತಮ್ಮ ಭಾವಸ್ಥಿತಿಯನ್ನುಹೇಳಿದಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು `ಈಗ ನನಗೆ ಹಾಡಬೇಕೆನಿಸುತ್ತಿದೆ’ ಎಂದು ಆನಂದದಿಂದ ಹೇಳುವುದು

ಪೂ. ದೀಪಾಲಿ ಮತಕರ : ಶ್ರೀಸತ್‌ಶಕ್ತಿ ಬಿಂದಾ ಅಕ್ಕ, ಗುರುದೇವರು ನಮಗಾಗಿ ಎಷ್ಟೆಲ್ಲ ಮಾಡುತ್ತಾರೆ ! ನೀವು ಮತ್ತು ಗುರುದೇವರು ಸತತವಾಗಿ ನನ್ನೊಂದಿಗೇ ಇರುತ್ತೀರಿ. ನನಗೆ ನಿಮ್ಮ ಅಸ್ತಿತ್ವದ ಅರಿವು ಯಾವಾಗಲೂ ಆಗುತ್ತಿರುತ್ತದೆ. ಸತ್ಸಂಗ ತೆಗೆದುಕೊಳ್ಳುವಾಗ ಮತ್ತು ಸೇವೆಗಳನ್ನು ಮಾಡುವಾಗ ನನ್ನಿಂದ ತಾನಾಗಿಯೇ ಮುಂದಿನಂತೆ ಪ್ರಾರ್ಥನೆಯಾಗುತ್ತದೆ, `ನನ್ನ ಅಸ್ತಿತ್ವ ಬೇಡ. ನನ್ನ ಜಾಗದಲ್ಲಿ ನೀವೇ ಇರಬೇಕು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಅಕ್ಕ, ನನ್ನ ಬಾಯಿಯಿಂದ ನೀವೇ ಮಾತನಾಡಿರಿ, ನೀವೇ ನಗಬೇಕು. ನನ್ನ ಕಣ್ಣುಗಳಿಂದ ನೀವೇ ಎಲ್ಲವನ್ನೂ ನೋಡಿರಿ ಮತ್ತು ನನ್ನ ಕೈಗಳಿಂದ ನೀವೇ ಎಲ್ಲ ಸ್ಪರ್ಶವನ್ನು ಮಾಡಿರಿ. ಈ ಪ್ರಾರ್ಥನೆಯಿಂದ ನನಗೆ ನನ್ನ ಅಸ್ತಿತ್ವದ ಅರಿವೇ ಇರುವುದಿಲ್ಲ. ಎಲ್ಲವನ್ನೂ ನೀವೇ ಮಾಡುತ್ತೀರಿ ಮತ್ತು ನೀವೇ ನನ್ನ ಮಾಧ್ಯಮದಿಂದ ಮಾತನಾಡುತ್ತೀರಿ ಎಂದು ನನಗೆ ಅರಿವಾಗುತ್ತದೆ. ನನಗೆ ನಿಮ್ಮ ಧ್ವನಿಯೇ ಕೇಳಿಸತ್ತದೆ. ನಾನು ರಾತ್ರಿ ಮಲಗುವಾಗ ಅನ್ನಪೂರ್ಣಾಮಾತೆಯ ಚರಣಗಳಲ್ಲಿ ಮಾತೆ ನಿನ್ನಿಂದಾಗಿ ಸೇವಾಕೇಂದ್ರದ ಎಲ್ಲ ಸಾಧಕರು ತೃಪ್ತರಾದರು. ಅವರ ಸಾಧನೆಯಾಗಲಿ ಎಂದು ಕೃತಜ್ಞತೆಯನ್ನು ವ್ಯಕ್ತ ಪಡಿಸುತ್ತೇನೆ, ಆಗ ಅವಳ ಜಾಗದಲ್ಲಿ ನನಗೆ ನೀವೇ ಕೃಪಾಳು ದೃಷ್ಟಿಯಿಂದ ನನ್ನೆಡೆಗೆ ನೋಡುತ್ತಿರುವಂತೆ ಕಾಣಿಸುತ್ತದೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಎಷ್ಟು ಒಳ್ಳೆಯದು ! ದೀಪಾಲಿ, ನೀನು ಇದೇ ಸ್ಥಿತಿಯಲ್ಲಿರು. ಈ ಸ್ಥಿತಿಯಿಂದ ನೀನು ಎಂದಿಗೂ ಹೊರಗೆ ಬರಬೇಡ. ಬೇಗನೆ ಪ್ರಗತಿಯನ್ನು ಮಾಡಿಕೊ. ನಿನಗೆ ಯಾರ ದೃಷ್ಟಿಯೂ ತಾಗದಿರಲಿ. ಇಂದು ನಾನು ನಿನ್ನ ದೃಷ್ಟಿಯನ್ನು ತೆಗೆಯುತ್ತೇನೆ. ನೀನು ಇದೇ ಆನಂದ ಮತ್ತು ಆಧ್ಯಾತ್ಮಿಕ ಭಾವವಿಶ್ವದಲ್ಲಿರು. ನಿನ್ನ ಈ ಭಾವದ ಸ್ಥಿತಿಯನ್ನು ನೋಡಿ ನನಗೆ ಬಹಳ ಆನಂದವಾಗಿದೆ. ನೀನು ಆನಂದದ ಅಲೆಗಳ ಮೇಲೆಯೇ ತೇಲಾಡುತ್ತಿರುವೆ. ನಾನು ಗಾಯಕಿಯಾಗಿದ್ದರೆ, ಈಗ ಆನಂದಾಚೆ ಡೊಹಿ ಆನಂದಾಚ ತರಂಗ…. ಎಂದು ಹಾಡಲು ಪ್ರಾರಂಭಿಸುತ್ತಿದ್ದೆ.

(ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಜೋರಾಗಿ ನಕ್ಕರು).

ಪೂ. ದೀಪಾಲಿ ಮತಕರ : ಗಾಯಕಿ ಏನು  : ಶ್ರೀಸತ್‌ಶಕ್ತಿ ಬಿಂದಕ್ಕ, ನೀವು ಸಾಕ್ಷಾತ್ ಸರಸ್ವತಿಯೇ ಆಗಿರುವಿರಿ.

(ಮುಂದುವರಿಯುವುದು)

– (ಪೂ.) ಕು. ದೀಪಾಲಿ ಮತಕರ, ಸೊಲ್ಲಾಪೂರ (೩೦.೧೧.೨೦೨೧)