ಶೇ. ೫೭ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಮೈಸೂರಿನ ಕು. ಖುಷಿ ಮೃತ್ಯುಂಜಯ ಕುರವತ್ತಿ (ವಯಸ್ಸು ೧೧ ವರ್ಷ) !

ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿ ದೈವೀ (ಸಾತ್ತ್ವಿಕ) ಬಾಲಕರೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು ಮುನ್ನಡೆಸುವ ಪೀಳಿಗೆಯಾಗಿದೆ

ಕು. ಖುಷಿ ಕುರವತ್ತಿ

ಕಾರ್ತಿಕ ಶುಕ್ಲ ಅಷ್ಟಮಿ (೧.೧೧.೨೦೨೨) ಯಂದು ಮೈಸೂರಿನ ಕು. ಖುಶಿ ಮೃತ್ಯುಂಜಯ ಕುರವತ್ತಿ ಇವಳ ೧೧ ನೇಯ ಹುಟ್ಟುಹಬ್ಬವಿದೆ. ಆ ನಿಮಿತ್ತವಾಗಿ ಅವಳ ತಂದೆ ಶ್ರೀ. ಮೃತ್ಯುಂಜಯ  ಕುರವತ್ತಿ ಮತ್ತು ತಾಯಿ ಸೌ. ಸ್ವಪ್ನಾ ಕುರವತ್ತಿ ಇವರಿಗೆ ಗಮನಕ್ಕೆ ಬಂದ ಅವಳ ಗುಣವೈಶಿಷ್ಟ್ಯಗಳನ್ನು ಕೊಡಲಾಗಿದೆ.

ಶ್ರೀ. ಮೃತ್ಯುಂಜಯ ಕುರವತ್ತಿ
ಸೌ. ಸ್ವಪ್ನಾ ಕುರವತ್ತಿ
ಪಾಲಕರೇ, ಇದನ್ನು ಗಮನದಲ್ಲಿರಿಸಿ

ನಿಮ್ಮ ಮಕ್ಕಳಲ್ಲಿ ಇಂತಹ ರೀತಿಯ ವೈಶಿಷ್ಟ್ಯಗಳಿದ್ದಲ್ಲಿ ಅವರು ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ್ದಾರೆ ಎಂಬುದನ್ನು ಗಮನದಲ್ಲಿರಿಸಿ ಅವರು ಮಾಯೆಯಲ್ಲಿ ಸಿಲುಕಲಾರರು, ಬದಲಾಗಿ ಅವರಲ್ಲಿ ಸಾಧನೆಗೆ ಪೂರಕವಾದಂತಹ ಸಂಸ್ಕಾರ ಮಾಡಿ. ಇದರಿಂದ ಅವರ ಜನ್ಮದ ಕಲ್ಯಾಣವಾಗುವುದು ಮತ್ತು ನಿಮ್ಮ ಸಾಧನೆಯೂ ಆಗುವುದು’ – (ಪರಾತ್ಪರ ಗುರು) ಡಾ. ಆಠವಲೆ

ಸನಾತನದಲ್ಲಿ ಬಂದ ದೈವೀ ಬಾಲಕರಿಂದಾಗಿ ನಾನು ಸಾಧಕರನ್ನು ರೂಪಿಸಿದೆ’, ಎಂಬ ಅಹಂಭಾವ ನನ್ನಲ್ಲಿ ಉತ್ಪನ್ನವಾಗಲಿಲ್ಲ.’ – (ಪರಾತ್ಪರ ಗುರು) ಡಾ. ಆಠವಲೆ

ಕು. ಖುಷಿ ಕುರವತ್ತಿಗೆ ೧೧ ನೇಯ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಶುಭ ಆಶೀರ್ವಾದಗಳು !

೧. ಜನ್ಮಕ್ಕೂ ಮೊದಲು

`ನಾನು ಸೂಕ್ಶ್ಮದಿಂದ ಪ್ರತಿದಿನ ಗಂಗಾ ನದಿಯಲ್ಲಿ ಸ್ನಾನ ಮಾಡಿ ಶಿವಾಲಯದಲ್ಲಿ ಗಂಗಾಭಿಷೇಕ ಮಾಡುತ್ತಿದ್ದೆ.

೨. ಜನ್ಮದಿಂದ ೧ ವರ್ಷ

೨ ಅ. ಹುಟ್ಟಿದಾಗಿನಿಂದಲೇ ಮಗುವಿನ ಮುಖವು ಬಹಳ ತೇಜಸ್ವಿಯಾಗಿತ್ತು.

೨ ಅ ೧. ಸಾತ್ತ್ವಿಕ ವಸ್ತುಗಳನ್ನು ಇಷ್ಟಪಡುವುದು : ಕು. ಖುಶಿ ೫ ತಿಂಗಳಿನವಳಾದ್ದಾಗ ನಾವು ಮನೆಯಲ್ಲಿ ಸತತವಾಗಿ ಪ.ಪೂ. ಭಕ್ತರಾಜ ಮಹಾರಾಜರ ಭಜನೆ ಮತ್ತು ದತ್ತಗುರುಗಳ ನಾಮಜಪವನ್ನು ಹಾಕುತ್ತಿದ್ದೆವು. ಇವೆಲ್ಲದ್ದಕ್ಕೂ ಅವಳು ಉತ್ತಮವಾಗಿ ಸ್ಪಂದಿಸುತ್ತಿದ್ದಳು.

೩. ೧ ರಿಂದ ೨ ವರ್ಷ

೩ ಅ. ಪ್ರೇಮಭಾವ : ಅವಳಿಗೆ ಕೊಟ್ಟ ತಿನಿಸನ್ನು ಅವಳು ಎಲ್ಲರಿಗೂ ಹಂಚಿ ಆಮೇಲೆ ತಾನು ತಿನ್ನುತ್ತಾಳೆ.

೩ ಆ. ಶಾಂತ ಮತ್ತು ಸಮಾಧಾನಿ : ಅವಳಿಗೆ ಶಾಂತ ವಾತಾವರಣ ಇಷ್ಟವಾಗುತ್ತಿತ್ತು. ಅವಳು ಶಾಂತ ಮತ್ತು ಸಮಾಧಾನಿಯಾಗಿರುತ್ತಾಳೆ. ಅವಳಲ್ಲಿ ಬಹಳ ಸ್ಥಿರತೆ ಇದೆ.

೩ ಇ. ಎಲ್ಲರನ್ನೂ ತಮ್ಮವರನ್ನಾಗಿ ಮಾಡಿಕೊಳ್ಳುವುದು : ಸಂಬಂಧಿಕರು ಅವಳನ್ನು ನೋಡಿದ ಕೂಡಲೆ ಅವಳನ್ನು ಕರೆದುಕೊಂಡು ಹೋಗುತ್ತಿದ್ದರು. “ಇವಳು ಕೃಷ್ಣನ ಹಾಗೆ ಇದ್ದಾಳೆ. ಇತರ ಮಕ್ಕಳಿಗಿಂತ ಪ್ರತ್ಯೇಕವಾಗಿದ್ದಾಳೆ’’, ಎಂದು ಸಂಬಂಧಿಕರು ಹೇಳುತ್ತಿದ್ದರು. ಎಲ್ಲ ಸಂಬಂಧಿಕರು ಅವಳನ್ನು ಬಹಳಷ್ಟು ಪ್ರೀತಿಸುತ್ತಿದ್ದರು. ಅವಳು ಎಲ್ಲರ ಜೊತೆಗೆ  ಆತ್ಮೀಯವಾಗಿದ್ದಳು.

೩ ಈ. ದೇವರನ್ನು ಇಷ್ಟಪಡುವುದು : ನಾವು `ಶ್ರೀರಾಮಸ್ತೋತ್ರ’ ಮತ್ತು `ಶ್ರೀಗುರುದೇವ ದತ್ತ|’ ಈ ನಾಮಜಪ ಮಾಡುತ್ತಿರುವಾಗ ಅವಳು ಗಮನವಿಟ್ಟು ಕೇಳುತ್ತಿದ್ದಳು ಮತ್ತು ತಾನೂ ಹೇಳಲು ಪ್ರಯತ್ನಿಸುತ್ತಿದ್ದಳು. ಶ್ರೀ ಕೃಷ್ಣನ ಚಿತ್ರ ನೋಡಿದ ಕೋಡಲೇ ಅವಳ ಮುಖದಲ್ಲಿ ಮಂದಹಾಸವಿರುತ್ತಿತ್ತು ಮತ್ತು ಅದನ್ನು ನೋಡಿ ಅವಳು ಆನಂದಾವಸ್ಥೆಯಲ್ಲಿರುತ್ತಿದ್ದಳು. ಮನೆಯಲ್ಲಿ ಯಾವುದೇ ವಸ್ತು ಸಿಕ್ಕರೂ ಅದನ್ನು ಅವಳು ಶ್ರೀಕೃಷ್ಣನ ಚಿತ್ರದ ಮುಂದೆ ನಿಂತು ಊದುಬತ್ತಿಯ ಹಾಗೆ ಭಾವಪೂರ್ಣವಾಗಿ ಬೆಳಗುತ್ತಿದ್ದಳು.

೪. ೨ ರಿಂದ ೧೦ ವರ್ಷ

೪ ಅ. ಸಾತ್ತ್ವಿಕ ವಸ್ತುಗಳ ಬಗ್ಗೆ ಆಸಕ್ತಿ : ನಾವು ಅಂಗಡಿಗೆ ಹೋದಾಗ ಅವಳು ಸಾತ್ತ್ವಿಕ ಉಡುಪುಗಳನ್ನು ಆಯ್ಕೆ ಮಾಡುತ್ತಿದ್ದಳು. ಚಿತ್ರ ಬಿಡಿಸುವಾಗಲೂ ಅವಳು ಸಾತ್ತ್ವಿಕ ಬಣ್ಣಗಳನ್ನೇ ಆಯ್ಕೆ ಮಾಡಿ ಒಳ್ಳೆಯ ಚಿತ್ರಗಳನ್ನು ಬಿಡಿಸುತ್ತಾಳೆ.

೪ ಆ. ಕುಶಾಗ್ರ ಬುದ್ಧಿ : ಹೇಳಿದ ವಿಷಯಗಳು ಅವಳಿಗೆ ಕೂಡಲೇ ತಿಳಿಯುತ್ತದೆ.

೪ ಇ. ಉತ್ತಮ ಸ್ಮರಣಶಕ್ತಿ ಮತ್ತು ಸ್ಪಷ್ಟ ಉಚ್ಚಾರ : ಅವಳ ಸ್ಮರಣಶಕ್ತಿಯು ಚೆನ್ನಾಗಿದ್ದು ಶ್ಲೋಕ ಮತ್ತು ಸ್ತೋತ್ರಗಳನ್ನು ಸ್ಪಷ್ಟ ಧ್ವನಿಯಲ್ಲಿ ಪಠಿಸುತ್ತಾಳೆ.

೪ ಈ. ಜಿಜ್ಞಾಸುವೃತ್ತಿ : ದೂರದರ್ಶನ ನೋಡುವಾಗ ಬರುವ ಪ್ರಶ್ನೆಗಳನ್ನು ಕೂಡಲೇ ಕೇಳಿ ತಿಳಿದುಕೊಳ್ಳುತ್ತಾಳೆ.

೪ ಉ. ದೂರದರ್ಶನ ನೋಡುವಾಗ ಸಂತರ ಕಥೆಗಳನ್ನು ಕೇಳುವ ಆಸಕ್ತಿ ಇರುವುದು : ಅವಳು ಸಂತರ ಬಗ್ಗೆ ತಿಳಿದುಕೊಳ್ಳುತ್ತಾಳೆ. ದೂರದರ್ಶನ ನೋಡುವಾಗ ಅವಳಿಗೆ ಅನೇಕ ಸಂತರು, ಮಹಾನ ಪುರುಷರು, ರಾಷ್ಟçಪುರುಷರು, ರಾಮಾಯಣ, ಮಹಾಭಾರತ ಮತ್ತು ವಿಷ್ಣುಪುರಾಣ ಇವುಗಳ ಕಥೆಗಳನ್ನು ನೋಡಲು ಇಷ್ಟವಾಗುತ್ತದೆ.

೪ ಊ. ಸೇವೆಯ ಆಸಕ್ತಿ : ಖುಶಿಗೆ ಸೇವೆಯಲ್ಲಿ ಬಹಳ ಆಸಕ್ತಿಯಿದ್ದು ಅವಳು ತಾಯಿಗೆ ಸೇವೆಯಲ್ಲಿ ಸಹಾಯ ಮಾಡುತ್ತಾಳೆ.

೪ ಎ. ಅವಳಿಗೆ ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಭಾವವಿದೆ.

ಸ್ವಭಾವದೋಷ : ಪ್ರತಿಷ್ಠೆ ಕಾಪಾಡುವುದು, ಅವ್ಯವಸ್ಥಿತ, ಸಿಟ್ಟುಬರುವುದು ಮತ್ತು ಭಯ.

ಶ್ರೀ. ಮೃತ್ಯುಂಜಯ ಕುರವತ್ತಿ ಮತ್ತು ಸೌ. ಸ್ವಪ್ನಾ ಕುರವತ್ತಿ (ಕು. ಖುಶಿಯ ತಂದೆ-ತಾಯಿ), ಮೈಸೂರು, (೨೫.೧೧.೨೦೨೧)