೧. `ಜೀವನದ ಈ ಸಾಧನೆಯ ಪ್ರಯಾಣದಲ್ಲಿ ಎಲ್ಲಿ ದೇವರು ಸಿಗುತ್ತಾನೆಯೋ, ಅಲ್ಲಿ ಇತರ ಇನ್ನೇನನ್ನು ಪಡೆಯುವ ಆಸೆ-ಆಕಾಂಕ್ಷೆಗಳು ಉಳಿಯುವುದಿಲ್ಲ. ದೇವರ ಈ ವಿಶ್ವವು ತುಂಬಾ ಸುಂದರ ಮತ್ತು ಅದ್ಭುತವಾಗಿದೆ. ಅದರಲ್ಲಿ ಏಕರೂಪವಾದರೆ, ಯಾವುದರ ನೆನಪು ಸಹ ಬರುವುದಿಲ್ಲ.
೨. ಭಾವಜಾಗೃತಿಗಾಗಿ ಪ್ರಯತ್ನಿಸಿದರೆ ನಿಮಗೆ ದೇವರ ಜಗತ್ತಿನಲ್ಲಿ ವಿಹರಿಸಬಹುದು. ದೇವರ ಜಗತ್ತು ನಿಮಗೆ ನಿರಂತರ ಆನಂದವನ್ನು ನೀಡುತ್ತದೆ.
೩. ಅಧ್ಯಾತ್ಮವು ಸುಂದರವಾಗಿದೆ. ಅದನ್ನು ಜೀವಿಸುವುದು ಮತ್ತು ಅನುಭವಿಸುವುದು, ಎಂದರೆ ಸಾಕ್ಷಾತ್ ಈಶ್ವರನ ಅನುಭೂತಿಯನ್ನು ಪಡೆಯುವುದು!
೪. ಅಧ್ಯಾತ್ಮಶಾಸ್ತ್ರವು ವಿಶಾಲವಾದ ಸಮುದ್ರದಂತೆ ಅಪರಿಮಿತವಾಗಿದೆ. ಅಧ್ಯಾತ್ಮದಲ್ಲಿ ಕಲಿತಷ್ಟು ಕಡಿಮೆಯೇ ಇದೆ. ಕಲಿಯಲು ಅನೇಕ ಜನ್ಮಗಳಿದ್ದರೂ ಕಡಿಮೆಯೇ ಬೀಳುತ್ತವೆ. ಆದುದರಿಂದ ಅಧ್ಯಾತ್ಮವನ್ನು ಬುದ್ಧಿಯಿಂದ ಅಧ್ಯಯನ ಮಾಡುವುದಕ್ಕಿಂತ ಅದರಲ್ಲಿನ ತತ್ತ್ವವನ್ನು ಗುರುತಿಸಿ ಅದರ ಹಿಂದಿನ ಶಾಸ್ತ್ರವನ್ನು ತಿಳಿದುಕೊಳ್ಳಬೇಕು.
೫. ಅಧ್ಯಾತ್ಮದಲ್ಲಿ ಕಲಿತುದುದನ್ನು ತಕ್ಷಣ ಕೃತಿಯಲ್ಲಿ ತರುವುದೇ `ಅಧ್ಯಾತ್ಮವನ್ನು ತಿಳಿದುಕೊಳ್ಳುವುದು ಮತ್ತು ಜೀವಿಸುವುದಾಗಿದೆ’ !ಈಶ್ವರನ ಬಗೆಗಿನ ಭಾವದಿಂದಲೇ ಅಧ್ಯಾತ್ಮಶಾಸ್ತ್ರವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ (೧.೫.೨೦೨೦)