ದೆಹಲಿಯಲ್ಲಿ ಚೀನಾದ ಮಹಿಳಾ ಗೂಢಚಾರಿಯ ಬಂಧನ

ಬೌದ್ಧ ಭಿಕ್ಕುವಿನ ವೇಷದಲ್ಲಿ ವಾಸಿಸುತ್ತಿದ್ದಳು !

(ಬೌದ್ಧ ಸನ್ಯಾಸಿಯರನ್ನು ಭಿಕ್ಕು ಅನ್ನುತ್ತಾರೆ. ಕೆಲವು ಕನ್ನಡ ದಿನಪತ್ರಿಕೆಗಳಲ್ಲಿಯೂ ಭಿಕ್ಕು ಎಂಬ ಪದವನ್ನು ಬಳಸಲಾಗಿದೆ)

ನವದೆಹಲಿ – ದೆಹಲಿ ಪೊಲೀಸರು ಇಲ್ಲಿನ ಮಜ್ನು ಕಾ ಟೀಲಾ ಪ್ರದೇಶದಿಂದ ಚೀನಾದ ಮಹಿಳಾ ಗೂಢಚಾರಿಯನ್ನು ಬಂಧಿಸಿದ್ದಾರೆ. ಈ ಮಹಿಳೆಯು ಇಲ್ಲಿ ಬೌದ್ಧ ಭಿಕ್ಕುವಿನ ವೇಷದಲ್ಲಿ ತಂಗಿದ್ದಳು. ಅವಳ ಹೆಸರು ಕಾಯ ರೂವೋ ಆಗಿದೆ. ಈ ಮಹಿಳೆಯು ನೇಪಾಳಿ ಪ್ರಜೆ ಎಂದು ಹೇಳಿಕೊಂಡು ದೆಹಲಿಯಲ್ಲಿ ವಾಸಿಸುತ್ತಿದ್ದಳು. ಪೊಲೀಸರು ಈಗ ಆಕೆಯ ಸಹಚರರನ್ನು ಹುಡುಕುತ್ತಿದ್ದಾರೆ.

ಈ ಮಹಿಳೆಯು ನೇಪಾಳದ ಮೂಲಕ ಭಾರತಕ್ಕೆ ಬಂದಿರುವ ಸಂದೇಹವಿದೆ. ಆಕೆ ತನ್ನ ಗುರುತಿನ ಚೀಟಿಯಲ್ಲಿ ತನ್ನ ಹೆಸರನ್ನು ಡೊಲ್ಮಾ ಲಾಮಾ ಎಂದು ಬರೆದಿದ್ದಳು ಹಾಗೂ ಕಠ್ಮಂಡು ವಿಳಾಸವನ್ನು ನೀಡಿದ್ದಳು. ಆದರೆ ವಿದೇಶಿ ನೋಂದಣಿ ಕಚೇರಿಯ ತನಿಖೆಯಲ್ಲಿ ಈ ಮಹಿಳೆಯು ಚೀನಾದ ಹೆನಾನ್ ಪ್ರಾಂತ್ಯದ ಪ್ರಜೆ ಎಂಬುದು ಸ್ಪಷ್ಟವಾಗಿದೆ. ಈ ಮಹಿಳೆಯು ೨೦೧೯ ರಲ್ಲಿ ಚೀನಾದ ಪಾಸ್‌ಪೋರ್ಟ್‌ನಲ್ಲಿ ಭಾರತಕ್ಕೆ ಬಂದಿದ್ದಳು. ಅವಳು ಆಂಗ್ಲ, ಚೈನೀಸ್ ಮತ್ತು ನೇಪಾಳಿ ಮಾತನಾಡುತ್ತಾಳೆ.

ಸಂಪಾದಕೀಯ ನಿಲುವು

ಇಂದಿರಾ ಗಾಂಧಿಯವರ ಕಾರ್ಯಕಾಲದಲ್ಲಿ ರಷ್ಯಾದ ಬೇಹುಗಾರಿಕಾ ಸಂಸ್ಥೆ ಕೆಜಿಬಿಯ ಏಜಂಟರು ದೇಶದಲ್ಲಿ ಸಕ್ರಿಯರಾಗಿದ್ದರು ಎಂದು ಹೇಳಲಾಗುತ್ತದೆ. ಈಗ ಪಾಕಿಸ್ತಾನದ ಏಜಂಟರ ಭಾರಿ ಓಡಾಟ ನಡೆಯುತ್ತಿರುವಾಗ ಚೀನಾದ ಗೂಢಚಾರರೂ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದನ್ನು ಕಂಡರೆ ‘ಭಾರತವು ಈ ದೇಶಗಳಿಗೆ ಧರ್ಮಶಾಲೆಯೇ ಆಗಿಬಿಟ್ಟಿದೆಯೇ ?’, ಎಂಬ ಪ್ರಶ್ನೆ ಮೂಡುತ್ತದೆ !