ಪುನಃ ತನ್ನ ನರಿಬುದ್ಧಿ ತೋರಿಸಿದ ಅಮೇರಿಕಾ !
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ವಿದೇಶಾಂಗ ಇಲಾಖೆಯಿಂದ ಅಕ್ಟೋಬರ್ ೧೭ ರಂದು, ಅಣ್ವವಸ್ತ್ರಗಳ ಸುರಕ್ಷೆಯ ಸಂದರ್ಭದಲ್ಲಿ ನಮಗೆ ಪಾಕಿಸ್ತಾನದ ಕ್ಷಮತೆಯ ಬಗ್ಗೆ ವಿಶ್ವಾಸವಿದೆ; ಆದರೆ ಅವರ ಬಳಿ ಯಾವುದೇ ಸಾಮರಸ್ಯವಿಲ್ಲದೇ ಈ ಶಸ್ತ್ರಾಸ್ತ್ರಗಳು ಇರುವುದು. ಅಮೇರಿಕ ವಿದೇಶಾಂಗ ಇಲಾಖೆಯ ಉಪ ವಕ್ತಾರರಾದ ವೇದಾಂತ ಪಟೇಲ್ ಇವರು ಒಂದು ಪತ್ರಕರ್ತರ ಪರಿಷತ್ತಿನ ಮೂಲಕ ಅಮೆರಿಕಾದ ಅಭಿಪ್ರಾಯ ಮಂಡಿಸಿದರು. ಅವರು ತಮ್ಮ ಮಾತು ಮುಂದುವರಿಸಿ, ಸುರಕ್ಷಿತತೆ ಮತ್ತು ಸಮೃದ್ಧ ಪಾಕಿಸ್ತಾನ ಇದು ಅಮೇರಿಕಾದ ಹಿತದ ದೃಷ್ಟಿಯಿಂದ ಬಹಳ ಮಹತ್ವಪೂರ್ಣವಾಗಿದೆ ಎಂದು ನಾವು ತಿಳಿದಿದ್ದೇವೆ.
‘Confident’ Of Pakistan’s Ability: US Makes A U-turn After Joe Biden’s Remark On ‘Dangerous’ Islamabad.#TNDIGITALVIDEOS pic.twitter.com/2yYMjzq9mU
— TIMES NOW (@TimesNow) October 18, 2022
ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರು ಕೆಲವು ದಿನಗಳ ಹಿಂದೆಯೇ ಪಾಕಿಸ್ತಾನ ಇದು ಜಗತ್ತಿನಲ್ಲಿನ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿಕೆ ನೀಡಿದ್ದರು. ಪಾಕಿಸ್ತಾನದಲ್ಲಿರುವ ಅಣ್ವಸ್ತ್ರಗಳ ಮೇಲೆ ಯಾರದೇ ನಿಯಂತ್ರಣವಿಲ್ಲ.’ ಹೀಗೇ ಕೂಡ ಅವರು ಹೇಳಿದ್ದರು. ಈಗ ವಿದೇಶಾಂಗ ಸಚಿವಾಲಯ ನೀಡಿರುವ ಈ ಹೊಸ ಹೇಳಿಕೆಯಿಂದ ಅಮೆರಿಕ ಅಭಿಪ್ರಾಯ ತಿರುಚುತ್ತಿದೆ’, ಎಂದು ಹೇಳಲಾಗುತ್ತಿದೆ.
ಕಳೆದ ತಿಂಗಳಲ್ಲಿ ಅಂದರೆ ಸಪ್ಟೆಂಬರ್ ೮ ರಂದು ಅಮೇರಿಕಾವು ಎಫ್ ೧೬ ಈ ಯುದ್ಧ ವಿಮಾನದ ನಿರ್ವಹಣೆಗಾಗಿ ಪಾಕಿಸ್ತಾನಕ್ಕೆ ೪೫೦ ದಶಲಕ್ಷ ಡಾಲರ್ಸ್ ಎಂದರೆ ೩ ಸಾವಿರ ೫೮೧ ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಕಳೆದ ೪ ವರ್ಷದಲ್ಲಿ ಇಸ್ಲಾಮಾಬಾದಿಗೆ ನೀಡಿರುವ ಇದು ಎಲ್ಲಕ್ಕಿಂತ ದೊಡ್ಡ ಸುರಕ್ಷೆ ಸಹಾಯವಾಗಿದೆ.
ಸಂಪಾದಕೀಯ ನಿಲುವುಪಾಕಿಸ್ತಾನ ಇದು ಜಿಹಾದಿ ಭಯೋತ್ಪಾದಕರ ಕಾರ್ಖಾನೆಯಾಗಿದ್ದರಿಂದ ಅದರ ಮೇಲೆ ವಿಶ್ವಾಸ ಇಡುವುದು ಇದು ಆತ್ಮಹತ್ಯೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಇವರು ಜಿಹಾದಿ ಭಯೋತ್ಪಾದಕರ ವಿಷಯವಾಗಿ ಸ್ಪಷ್ಟ ಅಭಿಪ್ರಾಯ ಮಂಡಿಸಿ ಜಗತ್ತಿಗೆ ಕರೆ ನೀಡಿರುವಾಗ ಅಮೇರಿಕಾದ ಈ ರೀತಿಯ ದಿಕ್ಕಿಲ್ಲದ ನಿಲುವಿನ ಬಗ್ಗೆ ಭಾರತ ಅದಕ್ಕೆ ಸ್ಪಷ್ಟ ಉತ್ತರ ಕೇಳಲು ಅಗತ್ಯವಾಗಿದೆ ! |