ಅಮೇರಿಕಾ-ಯುರೋಪ್‌ನಲ್ಲಿ ಹೆಚ್ಚಿದ ಆಯೋಡಿನ್ ಔಷಧಗಳ ಬೇಡಿಕೆ

ನವದೆಹಲಿ – ರಶ್ಯಾ ಅಣುಬಾಂಬ್ ಹಾಕುವುದಾಗಿ ಪರೋಕ್ಷವಾಗಿ ಬೆದರಿಕೆಯನ್ನು ನೀಡಿದನಂತರ ಅಮೇರಿಕಾ ಸರಕಾರವು ಅಲ್ಲಿನ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ಸಲ ೨ ಸಾವಿರದ ೩೮೯ ಕೋಟಿ ರೂಪಾಯಿಗಳ ಆಯೋಡಿನ್ ಔಷಧಗಳನ್ನು ಖರೀದಿಸುವ ಘೋಷಣೆ ಮಾಡಿದೆ. ಈ ವಿಷಯದಲ್ಲಿ ಸರಕಾರವು ರಾಸಾಯನಿಕ, ಜೈವಿಕ, ರೆಡಿಓಲಾಜಿಕಲ್ ಮತ್ತು ಅಣ್ವಿಕ ಆಕ್ರಮಣದಿಂದ ರಕ್ಷಿಸಿಕೊಳ್ಳಲು ಈ ಔಷಧಗಳನ್ನು ಖರೀದಿಸಲಾಗಿದೆ ಎಂದು ಹೇಳಿದೆ. ಯುರೋಪ್‌ನಲ್ಲಿಯೂ ಕಿರಣೋತ್ಸರ್ಗನಿರೋಧಕ ಔಷಧಗಳ ಮಾರಾಟ ರಭಸದಿಂದ ಹೆಚ್ಚುತ್ತಿದೆ.

ಅಣುಬಾಂಬ್‌ನಿಂದಾಗುವ ಕಿರಣೋತ್ಸರ್ಗದಿಂದ ರಕ್ಷಿಸಿಕೊಳ್ಳಲು ಆಯೋಡಿನ್ ಔಷಧಗಳು ಮಹತ್ವದ್ದೆಂದು ಪರಿಗಣಿಸಲಾಗುತ್ತದೆ. ಪೊಟೇಶಿಯಮ್ ಮತ್ತು ಆಯೋಡಿನ್ ಈ ಎರಡು ರಸಾಯನಗಳ ಮಿಶ್ರಣ ಮಾಡಿ ಈ ಔಷಧವನ್ನು ಸಿದ್ಧಪಡಿಸಲಾಗುತ್ತದೆ. ಅದಕ್ಕೆ ಪೊಟೇಶಿಯಮ್ ಆಯೋಡಾಯಿಡ್’ ಎಂದು ಕೂಡ ಹೇಳುತ್ತಾರೆ. ಈ ಔಷಧವನ್ನು ತೆಗೆದುಕೊಂಡಾಗ ಅದು ಹೆಚ್ಚು ಆಯೋಡಿನ್ ಶರೀರದೊಳಗೆ ಹೋಗದಂತೆ ತಡೆಯುತ್ತದೆ. ಅಣುಸ್ಫೋಟದ ನಂತರ ಗಾಳಿಯಲ್ಲಿ ತೇಲುವ ಕಣಗಳು ಶರೀರಕ್ಕೆ ಹೋದರೆ ಅದು ಥಾಯಿರೋಯಿಡ್ ಗ್ರಂಥಿಯಲ್ಲಿನ ಕಣಗಳಾಗುತ್ತವೆ. ಈ ಔಷಧವು ಅದನ್ನು ನಷ್ಟಗೊಳಿಸುತ್ತದೆ. ಹಾಗೂ ಈ ಔಷಧ ಈ ಕಣಗಳಿಂದ ನಿರ್ಮಾಣವಾಗುವ ಟ್ಯೂಮರ್(ಗಡ್ಡೆ) ನಷ್ಟಗೊಳಿಸುವ ಕಾರ್ಯವನ್ನು ಮಾಡುತ್ತದೆ. ಈ ಔಷಧವು ಕಿರಣೋತ್ಸರ್ಗವುಳ್ಳ ಆಯೋಡಿನ್ ಶರೀರದೊಳಗೆ ಪ್ರವೇಶಿಸುವಂತಹ ಅಪಾಯದಿಂದ ಜನರ ಪ್ರಾಣವನ್ನು ರಕ್ಷಿಸುತ್ತದೆ. ಆದರೆ ಅಣುಸ್ಫೋಟದನಂತರ ಆಗುವ ಕಿರಣೋತ್ಸರ್ಗದಿಂದ ಅದು ರಕ್ಷಿಸುವುದಿಲ್ಲ.