ಪಾಕಿಸ್ತಾನದಲ್ಲಿ ಮೌಲಾನಾರಿಂದ ಹಿಂದೂ ಯುವಕನ ಬಲವಂತವಾಗಿ ಮತಾಂತರ !

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು !

(ಮೌಲಾನಾ ಅಂದರೆ ಇಸ್ಲಾಮಿಕ್ ಅಭ್ಯಾಸಕ)

ಕರಾಚಿ (ಪಾಕಿಸ್ತಾನ) – ಅಕ್ಟೋಬರ್ ೯ ರಂದು, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲಾರ್ಕಾನಾ ನಗರದಲ್ಲಿ, ಮೌಲಾನಾನು ಅಜಯ ಕುಮಾರ ಎಂಬ ಹಿಂದೂ ವ್ಯಕ್ತಿಯನ್ನು ಬಲವಂತವಾಗಿ ಮತಾಂತರಿಸಿದನು. ‘ಜಮೀಯತ್-ಉಲಮಾ-ಇ-ಸಿಂಧ್’ ನ ಪ್ರಧಾನ ಕಾರ್ಯದರ್ಶಿ ಮೌಲಾನಾ ರಾಶೀದ್ ಮಹಮೂದ್ ಸುಮರೊನು ಅಜಯ ಕುಮಾರ ಅವರನ್ನು ಲರಕಾನಾದ ಜಾಮಿಯಾ ಇಸ್ಲಾಮಿಯಾ ಮಸೀದಿಯಲ್ಲಿ ಮತಾಂತರಿಸಿದರು. ‘ಎ.ಎನ್.ಐ.’ ನೀಡಿದ ವಾರ್ತೆಗನುಸಾರ ಮತಾಂತರದ ಸಮಯದಲ್ಲಿ ಅಜಯ ಅವರ ಮುಖದ ಮೇಲೆ ದುಃಖವು ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಕಳೆದ ವರ್ಷ ಜುಲೈನಲ್ಲಿ, ಅಬ್ದುಲ್ ರವೂಫ್ ನಿಜಾಮಾನಿ ಎಂಬ ಮೌಲ್ವಿ (ಇಸ್ಲಾಂನ ಧಾರ್ಮಿಕ ನಾಯಕ) ಸಿಂಧ್ ಪ್ರಾಂತ್ಯದಲ್ಲಿ ೬೦ ಹಿಂದೂಗಳ ಸಾಮೂಹಿಕ ಮತಾಂತರವನ್ನು ಮಾಡಿದ್ದ.