೧೯೪೭ ರಲ್ಲಿ ಭಾರತ ದೇಶ ವಿಭಜನೆಯಾಯಿತು. ಪಾಕಿಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರ ಎಂದು ರಚಿಸ ಲಾಯಿತು. ಆಗ ಉಳಿದ ರಾಷ್ಟ್ರವನ್ನು `ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕಿತ್ತು; ಆದರೆ ಹಾಗೆ ಆಗಲಿಲ್ಲ. ೧೯೭೬ ರಲ್ಲಿ, ೪೨ ನೇ ತಿದ್ದುಪಡಿಯ ಮೂಲಕ ದೇಶವನ್ನು `ಜಾತ್ಯತೀತ ರಾಷ್ಟ್ರ’ ಎಂದು ಘೋಷಿಸಲಾಯಿತು. ಜಗತ್ತಿನಲ್ಲಿ ೧೫೭ ಕೈಸ್ತರು, ೫೨ ಮುಸಲ್ಮಾನರು, ೧೨ ಬೌದ್ಧರು ಮತ್ತು ೧ ಯಹೂದಿಗಳ ರಾಷ್ಟ್ರವಿದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ. ೮೦ ರಷ್ಟು ಹಿಂದೂಗಳಿರುವಾಗ ಭಾರತವನ್ನು ಏಕೆ `ಹಿಂದೂ ರಾಷ್ಟ್ರ’ ಎಂದು ಘೋಷಿಸಲಾಗಿಲ್ಲ ? ಆದ್ದರಿಂದ ಈ ದೇಶವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವವರೆಗೆ ನಾವು ವಿರಮಿಸುವುದಿಲ್ಲ.