ವಕ್ಫ್ ಬೋರ್ಡ್ ಕಾನೂನು : ಹಿಂದೂಗಳ ಭೂಮಿ ಅಪಾಯದಲ್ಲಿ !

ಜಗತ್ತಿನಾದ್ಯಂತ ಮುಸಲ್ಮಾನ ಧರ್ಮದವರ ಒಂದು ಘೋಷಣೆಯು ನಿಶ್ಚಿತವಾಗಿದೆ, ಅದೆಂದರೆ `ಇಸ್ಲಾಮ್ ಖತರೆಮೆಂ ಹೈ’ (ಇಸ್ಲಾಂ ಅಪಾಯದಲ್ಲಿದೆ). ಈ ಘೋಷಣೆಯ ಮೂಲಕ ಮೂಲಭೂತವಾದದ ಪ್ರಸಾರವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಇದರಲ್ಲಿ `ಸ್ಟುಡಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ’ (ಸಿಮಿ) ಮತ್ತು `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.) ಇವುಗಳಂತಹ ಗುಂಪುಗಳು ಮುಂಚೂಣಿಯಲ್ಲಿವೆ. ಅದರಂತೆ ದೇಶಾದ್ಯಂತದ ಮದರಸಾಗಳಲ್ಲಿಯೂ ಮತಾಂಧತೆಯನ್ನು ಹೆಚ್ಚಾಗಿ ಕಲಿಸುವುದು ಆಗಾಗ ಎದುರು ಬಂದಿದೆ. ಅಂದರೆ `ಪಿ.ಎಫ್.ಐ.’ನಂತಹ ಮೂಲಭೂತವಾದಿ ಗುಂಪುಗಳನ್ನು ಬಗ್ಗುಬಡಿಯುವ ಪ್ರಕ್ರಿಯೆ ಆರಂಭಿಸಿರುವುದು ಸದ್ಯ ಕಂಡು ಬರುತ್ತಿದೆ; ಆದರೆ ಈ ಮೂಲಭೂತವಾದಕ್ಕಾಗಿ ಹಣದ ಪೂರೈಕೆಯನ್ನು ತಡೆಗಟ್ಟುವುದು ಸಹ ಒಂದು ದೊಡ್ಡ ಸವಾಲಾಗಿದೆ. ಅದರೊಂದಿಗೆ ಮೂಲಭೂತವಾದಿಗಳ ಬಳಿಯಿರುವ ಸ್ಥಿರಾಸ್ತಿ, `ವಕ್ಫ್’ ಕಾನೂನಿಯ ದುರ್ಬಳಕೆಯನ್ನು ತಡೆಗಟ್ಟುವ ಅವಶ್ಯಕತೆಯೂ ಇದೆ; ಏಕೆಂದರೆ `ವಕ್ಫ್’ ಕಾನೂನಿನ ಹೆಸರಿನಲ್ಲಿ ದೇಶದಾದ್ಯಂತದ ಭೂಮಿಯನ್ನು ಕಬಳಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದನ್ನು ನೋಡುವುದು ಆವಶ್ಯಕವಾಗಿದೆ. ಇಲ್ಲದಿದ್ದರೆ ಹಿಂದೂಗಳು `ಭೂಮಿ ಅಪಾಯದಲ್ಲಿ’, ಎಂದು ಕೂಗುವ ಪ್ರಮೇಯ ಎದುರಾಗಬಹುದು.

೧. ಭಾರತೀಯ ಸೇನೆ ಮತ್ತು ರೈಲ್ವೆಯ ನಂತರ `ವಕ್ಫ್ ಬೋರ್ಡ್’ ಬಳಿ ಅತ್ಯಧಿಕ ಭೂಮಿ ಇರುವುದು

ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಇವರು ವಕ್ಫ್’ ಕಾನೂನಿನ ವಿರುದ್ಧ ಅರ್ಜಿಯನ್ನು ಸಲ್ಲಿಸಿದ್ದಾರೆ. ಅದೇ ರೀತಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರೂ ತಮ್ಮ ರಾಜ್ಯದ `ವಕ್ಫ್’ ಆಸ್ತಿಗಳ ಸಮೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಹೀಗಿದ್ದರೂ ಮೊತ್ತಮೊದಲು `ವಕ್ಫ್’ ಕಾನೂನು ಮತ್ತು ಅದರ ಅಸ್ಪಷ್ಟ ನಿಬಂಧನೆಗಳನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಭಾರತೀಯ ಸೇನೆ ಮತ್ತು ರೇಲ್ವೆಯ ನಂತರ `ವಕ್ಫ್ ಬೋರ್ಡ್’ ಬಳಿ ಅತ್ಯಧಿಕ ಭೂಮಿ ಇದೆ. ಭಾರತದ `ವಕ್ಫ್’ ಆಡಳಿತ ವ್ಯವಸ್ಥೆಗನುಸಾರ ದೇಶದ ಎಲ್ಲ ವಕ್ಫ್ ಬೋರ್ಡ್ಗಳು ಒಟ್ಟು ೮ ಲಕ್ಷ ಎಕರೆಗಿಂತ ಹೆಚ್ಚು ಭೂಮಿಯಲ್ಲಿ ಹಬ್ಬಿರುವ ಒಟ್ಟು ೮ ಲಕ್ಷ ೫೪ ಸಾವಿರದ ೫೦೯ ಆಸ್ತಿಪಾಸ್ತಿಯನ್ನು ಹೊಂದಿವೆ. ಸೇನೆಯು ಸುಮಾರು ೧೮ ಲಕ್ಷ ಎಕರೆ ಭೂಮಿಯನ್ನು ಹೊಂದಿದ್ದು, ರೇಲ್ವೆ ಸುಮಾರು ೧೨ ಲಕ್ಷ ಎಕರೆ ಭೂಮಿಯ ಮೇಲೆ ಆಸ್ತಿಯನ್ನು ಹೊಂದಿದೆ. ೨೦೦೯ ರಲ್ಲಿ `ವಕ್ಫ್ ಬೋರ್ಡ್’ನ ಆಸ್ತಿಪಾಸ್ತಿ ೪ ಲಕ್ಷ ಎಕರೆ ಭೂಮಿಯ ಮೇಲೆ ವ್ಯಾಪಿಸಿತ್ತು. ಕಳೆದ ೧೩ ವರ್ಷಗಳಲ್ಲಿ `ವಕ್ಫ್ ಬೋರ್ಡ್’ನ ಆಸ್ತಿಪಾಸ್ತಿ ದ್ವಿಗುಣಗೊಂಡಿರುವುದು ಸ್ಪಷ್ಟವಾಗಿದೆ.

೨. ಯಾವ ಆಸ್ತಿಪಾಸ್ತಿ ತನ್ನದು ಮತ್ತು ಖಾಸಗಿ ? ಎಂದು ನಿರ್ಧರಿಸುವ ಅಧಿಕಾರ ವಕ್ಫ್ ಬೋರ್ಡ್ಗೆ ಇದೆ

ದೇಶದಾದ್ಯಂತ ಎಲ್ಲೆಲ್ಲಿ ವಕ್ಫ್ ಬೋರ್ಡ್ ಸ್ಮಶಾನಭೂಮಿಗೆ ಬೇಲಿಯನ್ನು ಹಾಕುತ್ತದೋ ಆಗ ಅಲ್ಲಿನ ಅಕ್ಕಪಕ್ಕದ ಭೂಮಿಯನ್ನೂ ತಮ್ಮ ಆಸ್ತಿಪಾಸ್ತಿಯೆಂದು ಘೋಷಿಸುತ್ತದೆ. ಆದುದರಿಂದಲೇ ದೇಶದಲ್ಲಿ ಸದ್ಯ ಅನಧಿಕೃತ ಗೋರಿ, ಹೊಸ ಮಸೀದಿಗಳು ಸಿದ್ಧವಾಗುತ್ತಿವೆ; ಏಕೆಂದರೆ ಈ ಮಜಾರಗಳು ಮತ್ತು ಮಸೀದಿಗಳ ಅಕ್ಕ ಪಕ್ಕದ ಭೂಮಿಗಳು `ವಕ್ಫ್ ಬೋರ್ಡ್’ನ ಅಧೀನದಲ್ಲಿದೆ. ೧೯೯೫ ನೇ `ವಕ್ಫ್’ ಕಾನೂನಿಗನುಸಾರ `ವಕ್ಫ್ ಬೋರ್ಡ್’ಗೆ ಯಾವುದೇ ಭೂಮಿಯು ವಕ್ಫ್ನ ಆಸ್ತಿಯಾಗಿದೆ, ಎಂದೆನಿಸಿದರೆ, ಅದನ್ನು ಸಿದ್ಧ ಮಾಡುವುದು ಬೋರ್ಡ್ನ ಜವಾಬ್ದಾರಿಯಾಗಿರದೇ ಆ ಭೂಮಿ ವಕ್ಫ್ಗೆ ಹೇಗೆ ಸೇರುವುದಿಲ್ಲ ? ಎಂದು ತೋರಿಸುವ ಜವಾಬ್ದಾರಿಯು ಆ ಭೂಮಿಯ ನಿಜವಾದ ಮಾಲೀಕನಿಗಿದೆ’ ಎಂದು ಹೇಳಲಾಗಿದೆ. `ವಕ್ಫ್ ಬೋರ್ಡ್ ಯಾವುದೇ ಖಾಸಗಿ ಆಸ್ತಿಯ ಮೇಲೆ ಹಕ್ಕನ್ನು ನಡೆಸಲು ಸಾಧ್ಯವಿಲ್ಲ’, ಎಂದು ೧೯೯೫ ರ ಕಾನೂನು ಖಂಡಿತವಾಗಿಯೂ ಹೇಳುತ್ತದೆ; ಆದರೆ `ಯಾವ ಆಸ್ತಿ ಖಾಸಗಿಯಾಗಿದೆ ?’, ಎಂದು ನಿಶ್ಚಯಿಸುವ ಅಧಿಕಾರವನ್ನೂ ಒಂದು ರೀತಿಯಲ್ಲಿ ವಕ್ಫ್ ಬೋರ್ಡ್ಗೆ ನೀಡಲಾಗಿದೆ. ಯಾವುದೇ ಆಸ್ತಿಪಾಸ್ತಿ `ವಕ್ಫ್’ಗೇ ಸೇರಿದೆ’, ಎಂದು ವಕ್ಫ್ ಬೋರ್ಡ್ಗೆ ಅನಿಸುತ್ತಿದ್ದರೆ ಅದಕ್ಕಾಗಿ ಯಾವುದೇ ಕಾಗದಪತ್ರಗಳನ್ನು ಅಥವಾ ದಾಖಲೆಗಳನ್ನು ಮಂಡಿಸುವ ಅವಶ್ಯಕತೆ ಇಲ್ಲ. ಇಲ್ಲಿಯವರೆಗೆ ಹಕ್ಕುದಾರರಾಗಿರುವ ವ್ಯಕ್ತಿಗೆ ಎಲ್ಲ ಕಾಗದಪತ್ರಗಳನ್ನು ಮತ್ತು ದಾಖಲೆಗಳನ್ನು ನೀಡಬೇಕಾಗುತ್ತದೆ. ಅನೇಕ ಕುಟುಂಬಗಳ ಕಡೆಗೆ ಅವರ ಪಿತ್ರಾರ್ಜಿತ ಭೂಮಿಯ ಮೂಲ ದಾಖಲೆಗಳು ಇರುವುದಿಲ್ಲ, ಇದೇ ವಿಷಯ ಹೆಚ್ಚಿನ ಬಾರಿ ವಕ್ಫ್ ಬೋರ್ಡ್ನ ಮಾರ್ಗದಲ್ಲಿ ಬರುತ್ತವೆ.

೩. ಭೂಮಿಯ ಮಾಲೀಕತ್ವ ಸಿಗುವ ಬಗ್ಗೆ ವಕ್ಫ್ ಬೋರ್ಡ್ನ ನಿಬಂಧನೆಗಳು

ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ವಕ್ಫ್ ಬೋರ್ಡ್ಗೆ ಇಂತಹ ಸೀಮಾತೀತ ಅಧಿಕಾರವನ್ನು ನೀಡಲಾಗಿತ್ತು ! ೧೯೯೫ ರಲ್ಲಿ ಪಿ.ವಿ. ನರಸಿಂಹ ರಾವ್ ಇವರ ಕಾಂಗ್ರೆಸ್ ಸರಕಾರವು `ವಕ್ಫ್ ಕಾನೂನು, ೧೯೫೪’ ರಲ್ಲಿ ತಿದ್ದುಪಡಿ ಮಾಡಿ ಹೊಸ ನಿಬಂಧನೆಗಳನ್ನು ಸೇರಿಸಿತು ಮತ್ತು ವಕ್ಫ್ ಬೋರ್ಡ್ಗೆ ಸೀಮಾತೀತ ಅಧಿಕಾರ ನೀಡಿತು. `ವಕ್ಫ್ ಕಾನೂನು, ೧೯೯೫’ರ `ಕಲಮ್ ೩ (ಆರ್)ಗನುಸಾರ `ಯಾವುದೇ ಆಸ್ತಿಪಾಸ್ತಿ, ಮುಸ್ಲಿಂ ಕಾನೂನಿಗನುಸಾರ ಪಾಕ್(ಪವಿತ್ರ), ಧಾರ್ಮಿಕ ಅಥವಾ ದತ್ತಿಯೆಂದು ಪರಿಗಣಿಸುವ ಯಾವುದೇ ಕಾರಣಕ್ಕಾಗಿ ಒಡೆತನದಲ್ಲಿದೆ ಎಂದು ಪರಿಗಣಿಸಲಾಗುತ್ತದೆ’, ಎಂದು ಹೇಳುತ್ತದೆ. `ವಕ್ಫ್ ಕಾನೂನು, ೧೯೯೫’ರ ಕಲಂ ೪೦’ ರಲ್ಲಿ ಭೂಮಿಯು ಯಾರ ಒಡೆತನದಲ್ಲಿದೆ, ಎಂದು ವಕ್ಫ್ನ ಸಮೀಕ್ಷಕರು ಮತ್ತು ಬೋರ್ಡ್ ನಿರ್ಧರಿಸುವುದು. ಈ ನಿರ್ಣಯಕ್ಕೆ ೩ ಕಾರಣಗಳಿವೆ-

ಅ. ಒಂದು ವೇಳೆ ಯಾರಾದರೂ ವಕ್ಫ್ ಹೆಸರಿನಲ್ಲಿ ತಮ್ಮ ಆಸ್ತಿಯನ್ನು ಹಸ್ತಾಂತರಿಸಿದ್ದರೆ.

ಆ ಒಂದು ವೇಳೆ ಮುಸಲ್ಮಾನ ಅಥವಾ ಮುಸಲ್ಮಾನ ಸಂಘಟನೆಯು ಈ ಭೂಮಿಯನ್ನು ಬಹಳ ಕಾಲ ಬಳಸುತ್ತಿದ್ದರೆ.

ಇ. ಸಮೀಕ್ಷೆಯಲ್ಲಿ ಈ ಭೂಮಿ ವಕ್ಫ್ನ ಆಸ್ತಿ ಇರುವುದಾಗಿ ಸಿದ್ಧವಾಗಿದ್ದರೆ.

೪. `ವಕ್ಫ್ ನ್ಯಾಯಾಧಿಕರಣ’ಕ್ಕಿರುವ ಸೀಮಾತೀತ ಅಧಿಕಾರ : ಸರ್ವೋಚ್ಚ ನ್ಯಾಯಾಲಯವೂ ಅಸಮರ್ಥ ಎಲ್ಲಕ್ಕಿಂತ ಆಘಾತಕಾರಿ ಎಂದರೆ ಒಂದು ವೇಳೆ ಯಾರಾದರೊಬ್ಬ ವ್ಯಕ್ತಿಯ ಆಸ್ತಿಯು ವಕ್ಫ್ಗೆ ಸೇರಿದೆ ಎಂದು ಘೋಷಿತವಾಗಿದ್ದರೆ ಆ ವ್ಯಕ್ತಿಯು ಅದರ ವಿರುದ್ಧ ನ್ಯಾಯಾಲಯಕ್ಕೆ ಹೋಗುವಂತಿಲ್ಲ. ವಕ್ಫ್ ಬೋರ್ಡ್ನ ನಿರ್ಣಯ ವಿರುದ್ಧವಾದರೂ ನ್ಯಾಯಾಲಯಕ್ಕೆ ಹೋಗುವಂತಿಲ್ಲ. ಅನಂತರ `ವಕ್ಫ್ ನ್ಯಾಯಾಧಿಕರಣ’ ಬಳಿಯೇ ಹೋಗಬೇಕಾಗುತ್ತದೆ. ಈ ನ್ಯಾಯಾಧಿಕರಣದಲ್ಲಿ ಆಡಳಿತಾಧಿಕಾರಿಗಳಿರುತ್ತಾರೆ. ಅದರಲ್ಲಿ ಮುಸಲ್ಮಾನೇತರರು ಇರ ಬಹುದು; ಆದರೆ ಹೆಚ್ಚಿನ ಬಾರಿ ಯಾವ ಪಕ್ಷದ ರಾಜ್ಯಸರಕಾರವಿದೆ ಎಂಬುದರ ಮೇಲೆ `ನ್ಯಾಯಾಧಿಕರಣದಲ್ಲಿ ಯಾರು ಇರುತ್ತಾರೆ ಎಂಬುದು ಅವಲಂಬಿಸಿರುತ್ತದೆ. ನ್ಯಾಯಾಧಿಕರಣದಲ್ಲಿನ ಪ್ರತಿಯೊಬ್ಬರು ಮುಸಲ್ಮಾನರಿರುವ ಸಾಧ್ಯತೆಯೂ ಇರುತ್ತದೆ. ಅದರಂತೆ ಸರಕಾರವು ಆದಷ್ಟು ಮುಸಲ್ಮಾನರೊಂದಿಗೆ ನ್ಯಾಯ ಮಂಡಳಿ ಸ್ಥಾಪಿಸಲು ಪ್ರಯತ್ನಿಸುತ್ತದೆ. ವಕ್ಫ್ ಕಾನೂನಿನ `ಕಲಮ್ ೮೫’ ಕ್ಕನುಸಾರ ನ್ಯಾಯ ಮಂಡಳಿಯ ತೀರ್ಪನ್ನು ಯಾವುದೇ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ.

೫. ಸೀಮಾತೀತ ಅಧಿಕಾರವನ್ನು ದುರುಪಯೋಗಿಸಿ ವಕ್ಫ್ ಬೋರ್ಡ್ನಿಂದ ತಮಿಳುನಾಡಿನ ಒಂದು ದೇವಸ್ಥಾನ ಸಹಿತ ಗ್ರಾಮದ ಮೇಲೆ ತನ್ನ ಹಕ್ಕು ಸ್ಥಾಪನೆ

`ವಕ್ಫ್ ಬೋರ್ಡ್’ ತನ್ನ ಸೀಮಾತೀತ ಅಧಿಕಾರಗಳನ್ನು ಹೇಗೆ ದುರ್ಬಳಕೆ ಮಾಡುತ್ತದೆ, ಎಂಬುದರ ಅತ್ಯಂತ ಭಯಾನಕ ಉದಾಹರಣೆಯು ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಬಹಿರಂಗವಾಯಿತು. ರಾಜ್ಯದ ತಿರುಚಿರಾಪಲ್ಲಿ ಜಿಲ್ಲೆಯ ತಿರುಚೆಥುರಯಿ ಈ ಹಿಂದೂ ಬಹುಸಂಖ್ಯಾತ ಗ್ರಾಮದ ಮೇಲೆ `ವಕ್ಫ್ ಬೋರ್ಡ್’ ತನ್ನ ಒಡೆತನವನ್ನು ಘೋಷಿಸಿದೆ. ಆ ಗ್ರಾಮದಲ್ಲಿ ಹಿಂದೂ ಜನ ಸಂಖ್ಯೆಯು ಶೇ. ೯೫ ರಷ್ಟಿದ್ದು ಕೇವಲ ೨೨ ಮುಸಲ್ಮಾನರ ಕುಟುಂಬಗಳಿವೆ. ಆಶ್ಚರ್ಯವೆಂದರೆ ಅಲ್ಲಿನ ದೇವಸ್ಥಾನದ ಮೇಲೆಯೂ ವಕ್ಫ್ ತನ್ನ ಒಡೆತನವನ್ನು ಘೋಷಿಸಿದೆ. ಈ ದೇವಸ್ಥಾನವು ೧ ಸಾವಿರದ ೫೦೦ ವರ್ಷಗಳಷ್ಟು ಹಳೆಯ ಅಂದರೆ ಇಸ್ಲಾಮ್ ಜಗತ್ತಿಗೆ ಬರುವ ಮೊದಲೇ ಇರುವುದಾಗಿ ಗ್ರಾಮಸ್ಥರ ಹೇಳಿಕೆಯಿದೆ. ತಮಿಳುನಾಡಿನ ಈ ಪ್ರಕರಣವು ವಕ್ಫ್ ಬೋರ್ಡ್ನ ಸೀಮಾತೀತ ಅಧಿಕಾರಗಳ ಮತ್ತು ದುರುಪಯೋಗದ ಜ್ವಲಂತ ಉದಾಹರಣೆಯಾಗಿದೆ.

೬ ವಕ್ಫ್ ಬೋರ್ಡ್ ಕಾನೂನುಬಾಹಿರವಾಗಿ ಮತಾಂತರಗಳನ್ನು ನಡೆಸುತ್ತಿದೆ ಎಂದು ನ್ಯಾಯವಾದಿ (ಶ್ರೀ) ಅಶ್ವಿನಿ ಉಪಾಧ್ಯಾಯ ಇವರಿಂದ ಆರೋಪ

`ವಕ್ಫ್ ಬೋರ್ಡ್ ಈ ಅಧಿಕಾರಗಳನ್ನು ಬಳಸಿ ಅಕ್ರಮವಾಗಿ ಮತಾಂತರವನ್ನು ಮಾಡುತ್ತಿದೆ’, ಎಂದು ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಇವರು ಆರೋಪಿಸಿದ್ದಾರೆ. ವಕ್ಫ್ ಬೋರ್ಡ್ ಕಾನೂನಿನ ನಿಬಂಧನೆಗಳ ಆಧಾರ ಪಡೆದು ಪ್ರಮುಖವಾಗಿ ವನವಾಸಿ ಪ್ರದೇಶಗಳಲ್ಲಿ ಅಲ್ಲಿನ ನಾಗರಿಕರ ಭೂಮಿಯ ಮೇಲೆ ತನ್ನ ಒಡೆತನವಿರುವ ಬಗ್ಗೆ ಹೇಳುತ್ತದೆ. ಆ ರೀತಿಯ ನೋಟೀಸ್‌ಅನ್ನು ವನವಾಸಿ ನಾಗರಿಕರಿಗೆ ಕಳುಹಿಸಲಾಗುತ್ತದೆ ಮತ್ತು ಅನಂತರ ವನವಾಸಿ ನಾಗರಿಕರಿಗೆ `ಇಸ್ಲಾಮ್‌ಅನ್ನು ಸ್ವೀಕರಿಸಿದರೆ, ಮಾತ್ರ ನಿಮ್ಮ ಭೂಮಿಯು ನಿಮಗೆ ಪುನಃ ಸಿಗುವುದು’, ಎಂದು ಹೇಳು ತ್ತದೆ. ಇಂತಹ ಘಟನೆಗಳು ಮಹಾರಾಷ್ಟ್ರ, ಛತ್ತಿಸಗಡ ಮತ್ತು ಝಾರಖಂಡ ಈ ರಾಜ್ಯಗಳಲ್ಲಿನ ವನವಾಸಿ ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಘಟಿಸುತ್ತಿರುವುದಾಗಿ ಉಪಾಧ್ಯಾಯರು ಹೇಳಿದ್ದಾರೆ.

೭. ಕಾಂಗ್ರೆಸ್ ಮಾಡಿದ `ವಕ್ಫ್’ ಮತ್ತು `ಧಾರ್ಮಿಕ ಸ್ಥಳ’ ಇವೆರಡೂ ಅಯೋಗ್ಯ ಕಾಯದೆಗಳನ್ನು ಕೇಂದ್ರ ಸರಕಾರವು ಸರಿಪಡಿಸಬೇಕು !

ಇದರಿಂದಲೇ `ವಕ್ಫ್’ ಕಾನೂನು ದೇಶದ ಜಾತ್ಯತೀತತೆಗೆ ಸಂಪೂರ್ಣ ವಿರುದ್ಧವಾಗಿ ಕಾಣಿಸುತ್ತದೆ; ಆದರೆ ದೀರ್ಘಕಾಲದಿಂದ ಈ ಕಾನೂನು ದೇಶದಲ್ಲಿ ಅಸ್ತಿತ್ವದಲ್ಲಿದೆ. ಇದರಲ್ಲಿ ಮುಸಲ್ಮಾನರಿಗೆ ಸೀಮಾತೀತ ಅಧಿಕಾರವನ್ನು ನೀಡಲಾಗಿದ್ದು ಹಿಂದೂಗಳೊಂದಿಗೆ ಇತರ ಧರ್ಮೀಯರ ಮೇಲೆ ಸ್ಪಷ್ಟ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ಸರಕಾರವು `ಪ್ಲೆಸಸ್ ಆಫ್ ವರ್ಶಿಪ್ ಆ್ಯಕ್ಟ್’ ಮೂಲಕ (ಆರಾಧನಾ ಸ್ಥಳಗಳು, ಪೂಜಾ ಕಾನೂನಿನ ಮೂಲಕ) ಹಿಂದೂಗಳ ನ್ಯಾಯದ ಹಕ್ಕನ್ನು ನಿರಾಕರಿಸುವ ನಿಬಂಧನೆಗಳನ್ನು ಮಾಡಿದಂತೆಯೇ, `ವಕ್ಫ್ ಬೋರ್ಡ್’ಗೆ ಸೀಮಾತೀತ ಅಧಿಕಾರವನ್ನು ನೀಡುವ ಕೆಲಸವನ್ನು ಕಾಂಗ್ರೆಸ್ ಸರಕಾರವೇ ಮಾಡಿದೆ. ಇವೆರಡೂ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸುವ ಕೆಲಸ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅವಧಿಯಲ್ಲಿ ಆರಂಭವಾಗಿದೆ. – ಪಾರ್ಥ ಕಪೋಲೆ

(ಆಧಾರ : ದೈನಿಕ `ಮುಂಬಯಿ ತರುಣ ಭಾರತ’)