ಆಪತ್ಕಾಲವು ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಂದ ಸಂಕಲಿತ ಗ್ರಂಥಗಳ ಪ್ರಕಾಶನಕ್ಕಾಗಿ ಸಾಧಕರು ಬೇಕಾಗಿದ್ದಾರೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಆಪತ್ಕಾಲದ ಮೊದಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನ ಮಾಡಿದ ಗ್ರಂಥಗಳ ವಿಷಯದಲ್ಲಿ ಸಮಾಜದ ದೃಷ್ಟಿಯಿಂದ ಯೋಗದಾನ !

ಅ. `ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿನ ಜ್ಞಾನದಿಂದ ಸಮಾಜವು ಸಾತ್ತ್ವಿಕ (ಸಾಧಕ)ವಾಗಿ ಅದು ಹಿಂದೂ ರಾಷ್ಟ್ರಕ್ಕಾಗಿ ಪೂರಕವಾಗಲಿದೆ. ಇದರಿಂದಲೇ ಹಿಂದೂ ರಾಷ್ಟ್ರದ ನಿರ್ಮಿತಿಯಾಗಲಿದೆ.

ಆ. ನಾವು ಸಾಧನೆಯನ್ನು ಮಾಡಿದರೆ ಮಾತ್ರ ಭೀಕರ ಆಪತ್ಕಾಲದಲ್ಲಿ ಉಳಿಯಬಹುದು; ಏಕೆಂದರೆ ಸಾಧಕರ ಮೇಲೆ ದೇವರ ಕೃಪೆ ಇರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿ ಸುಯೋಗ್ಯ, ಸದ್ಯದ ವೈಜ್ಞಾನಿಕ ಯುಗದ ಪೀಳಿಗೆಗೆ ಸಹಜವಾಗಿ ಮನವರಿಕೆ ಯಾಗುವಂತಹ ವೈಜ್ಞಾನಿಕ ಪರಿಭಾಷೆಯಲ್ಲಿ ಮತ್ತು ಕಾಲಾನುಸಾರ ಆವಶ್ಯಕವಾಗಿರುವ ಸಾಧನೆಯ ಜ್ಞಾನವು ದೊರಕುತ್ತದೆ.

ಇ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ವಿವಿಧ ಅಂಗಗಳ ಬಗೆಗಿನ ಗ್ರಂಥಗಳನ್ನು ಸಂಕಲನ ಮಾಡುತ್ತಿರುವುದರಿಂದ ಆ ಮಾಧ್ಯಮದಿಂದ ಅನೇಕ ಜನರು ತಮ್ಮ ತಮ್ಮ ಪ್ರಕೃತಿ ಮತ್ತು ಆಸಕ್ತಿಗನುಸಾರ ಸಾಧನೆಯ ಕಡೆಗೆ ಬೇಗನೆ ಹೊರಳಬಹುದು.

ಈ. ಹಿಂದೂ ರಾಷ್ಟ್ರವು ಕೆಲವು ಸಾವಿರ ವರ್ಷಗಳ ಕಾಲ ಉಳಿಯುವುದು; ಆದರೆ ಗ್ರಂಥಗಳಲ್ಲಿನ ಜ್ಞಾನವು ಅನಂತ ಕಾಲದವರೆಗೆ ಉಳಿಯಲಿರುವುದರಿಂದ, ಹೇಗೆ ಹಿಂದೂ ರಾಷ್ಟçವು ಬೇಗನೆ ಬರುವುದು ಆವಶ್ಯಕವಾಗಿದೆಯೋ, ಅಷ್ಟೇ ಶೀಘ್ರ ಆಪತ್ಕಾಲವು ಮತ್ತು ಮೂರನೇಯ ಮಹಾಯುದ್ಧವು ಆರಂಭವಾಗುವ ಮೊದಲೇ ಈ ಗ್ರಂಥಗಳು ಪ್ರಕಾಶಿತವಾಗುವುದೂ ಆವಶ್ಯಕವಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಂಕಲನ ಮಾಡುತ್ತಿರುವ ಗ್ರಂಥಗಳ ಪೈಕಿ ಆಗಸ್ಟ್ ೨೦೨೨ ರ ವರೆಗೆ ೩೫೭ ಗ್ರಂಥ-ಕಿರುಗ್ರಂಥಗಳ ನಿರ್ಮಿತಿಯಾಗಿವೆ. ಇತರ ಸುಮಾರು ೫ ಸಾವಿರಗಳಿಗಿಂತ ಹೆಚ್ಚು ಗ್ರಂಥ-ನಿರ್ಮಿತಿಯ ಪ್ರಕ್ರಿಯೆಯು ಹೆಚ್ಚು ವೇಗದಿಂದಾಗಲು ಅನೇಕರ ಸಹಾಯದ ಆವಶ್ಯಕತೆಯಿದೆ. ತಮ್ಮ ಆಸಕ್ತಿ ಮತ್ತು ಕ್ಷಮತೆಗಳಿಗನುಸಾರ ಗ್ರಂಥನಿರ್ಮಿತಿಯ ಸೇವೆಯಲ್ಲಿ ಪಾಲ್ಗೊಂಡು ಈ ಸುವರ್ಣಾವಕಾಶದ ಹೆಚ್ಚೆಚ್ಚು ಲಾಭ ಪಡೆಯಿರಿ !’ – (ಪೂ.) ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು

೨. ಮುಂದಿನ ಪೈಕಿ ಯಾವುದೇ ಸೇವೆಯಲ್ಲಿ ಪಾಲ್ಗೊಳ್ಳಲು ಸಂಪರ್ಕಿಸಿ !

೨ ಅ. ಗ್ರಂಥನಿರ್ಮಿತಿಗೆ ಸಂಬಂಧಿಸಿದ ಸೇವೆ

೧. ಬರವಣಿಗೆಯನ್ನು ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವುದು, ಸಂಕಲನ; ಸಂಸ್ಕೃತ ಶ್ಲೋಕ ಮುಂತಾದವುಗಳನ್ನು ಪರಿಶೀಲಿಸುವುದು; ಗ್ರಂಥಗಳ ಅಂತಿಮ ಸಂಕಲನವನ್ನು ಮಾಡುವುದು

೨. ಗ್ರಂಥಗಳ ಸಂರಚನೆ ಮಾಡುವುದು ಮತ್ತು ಕೋಷ್ಟಕಗಳನ್ನು (ಟೇಬಲ್) ತಯಾರಿಸುವುದು

೩. ಮರಾಠಿ, ಹಿಂದಿ ಅಥವಾ ಆಂಗ್ಲ ಗ್ರಂಥಗಳನ್ನು ದೇಶಿ-ವಿದೇಶಿ ಭಾಷೆಗಳಲ್ಲಿ ಅನುವಾದಿಸುವುದು

ಮೇಲಿನ ಸೇವೆಗಳಿಗಾಗಿ ಗಣಕೀಯ ಸಾಮಾನ್ಯ ಜ್ಞಾನವಿರುವುದು, ಹಾಗೆಯೇ ಗಣಕೀಯ ಬೆರಳಚ್ಚು ಮಾಡಲು ಬರುವುದು ಆವಶ್ಯಕವಾಗಿದೆ. ಗ್ರಂಥನಿರ್ಮಿತಿಗೆ ಸಂಬಂಧಿಸಿದ ಸೇವೆಯನ್ನು ಕಲಿಯಲು ಇಚ್ಛಿಸುವವರು ಸನಾತನದ ಆಶ್ರಮದಲ್ಲಿ ೨ – ೩ ವಾರ ಉಳಿಯಬಹುದು. ಮುಂದೆ ಅವರು ಸನಾತನದ ಆಶ್ರಮದಲ್ಲಿದ್ದು ಅಥವಾ ಮನೆಯಲ್ಲಿದ್ದೂ ಸೇವೆಯನ್ನು ಮಾಡಬಹುದು.

೨ ಆ. ಮುದ್ರಣಕ್ಕೆ ಸಂಬಂಧಿಸಿದ ಸೇವೆ

೧. ಆಫ್‌ಸೆಟ್ ಪ್ರಿಂಟಿಂಗ್, ಮಲ್ಟಿಕಲರ್ ಪ್ರಿಂಟಿಂಗ್, ಸಿಂಗಲ್ ಕಲರ್ ಪ್ರಿಂಟಿಂಗ್ ಇತ್ಯಾದಿ ಸೇವೆಗಳು

೨. ಮುದ್ರಣಕ್ಕೆ ಸಂಬಂಧಿಸಿದ ವರದಿಯನ್ನು ತುಂಬುವುದು ಇವುಗಳಂತಹ ಗಣಕೀಯ ಸೇವೆಯನ್ನು ಮಾಡಲು ಓಪನ್ ಆಫೀಸ್, ಎಕ್ಸೆಲ್, ಕೊರಲ್ ಡ್ರಾ, ಇನ್‌ಡಿಝೈನ್, ಈ-ಮೆಲ್ ಮುಂತಾದ ಸಾಮಾನ್ಯ ಗಣಕೀಯ ಜ್ಞಾನವಿರಬೇಕು.

೩. ಗ್ರಂಥಗಳ ಮುದ್ರಣವು ಯೋಗ್ಯ ರೀತಿಯಲ್ಲಾದ ಬಗ್ಗೆ ಪರಿಶೀಲಿಸುವಂತಹ ಸೇವೆಯನ್ನು ಒಂದೆಡೆ ಕುಳಿತು ಮಾಡುವುದು.

೪. ಗ್ರಂಥಗಳ ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋಗುವುದು-ತರುವುದು ಇವುಗಳಂತಹ ಶಾರೀರಿಕ ಕ್ಷಮತೆಯ ಸೇವೆಯನ್ನು ಮಾಡುವುದು

೫. ದ್ವಿಚಕ್ರ ಅಥವಾ ಚತುಷ್ಚಕ್ರ ವಾಹನಗಳನ್ನು ನಡೆಸುವುದು ಮೇಲೆ ನೀಡಿದ ಸೇವೆಗಳನ್ನು ಮಾಡುವ ಕ್ಷಮತೆ ಇದೆ ಆದರೆ ಅದರ ಬಗ್ಗೆ ಮೇಲೆ ಕೊಟ್ಟಿರುವಂತಹ ಮಾಹಿತಿಯ ಜ್ಞಾನವಿಲ್ಲ; ಆದರೆ ಆಯಾ ಸೇವೆಯನ್ನು ಕಲಿಯುವ ಇಚ್ಛೆ ಇದೆ ಎಂದಾದರೆ, ಅಂತಹವರಿಗೂ ಸಂಬಂಧಿತ ಸೇವೆಯನ್ನು ಕಲಿಸಲಾಗುವುದು.

೩. ಸೇವೆಯನ್ನು ಮಾಡಲು ಇಚ್ಛಿಸುವವರು ನೀಡಬೇಕಾದ ಮಾಹಿತಿ