ಈಗ ಅಮೇರಿಕಾದಲ್ಲಿ ಗಾಂಜಾ ಉಪಯೋಗಿಸಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ !

ಗಾಂಜಾದ ಪ್ರಕರಣದಲ್ಲಿ ಕಾರಾಗೃಹದಲ್ಲಿದ್ದ ಎಲ್ಲರ ಬಿಡುಗಡೆ !

ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೇನ್

ವಾಷಿಂಗ್ಟನ (ಅಮೇರಿಕ) – ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೇನ್ ಇವರು ಒಂದು ಐತಿಹಾಸಿಕ ಘೋಷಣೆ ಮಾಡಿದ್ದಾರೆ. ಅವರು ಗಾಂಜಾ ಉಪಯೋಗಿಸುವವರಿಗೆ ಅಪರಾಧಿ ಎಂದು ಪರಿಗಣಿಸಿದ್ದ ಸಾವಿರಾರು ನಾಗರೀಕರನ್ನು ನಿರಪರಾಧಿ ಎಂದು ಅವರನ್ನು ಆದಷ್ಟು ಬೇಗನೆ ಕಾರಾಗೃಹದಿಂದ ಬಿಡುಗಡೆಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಗಾಂಜಾ ಉಪಯೋಗಿಸಿರುವವರನ್ನು ಸೆರೆಮನೆಯಲ್ಲಿ ಹಾಕಲಾಗುತ್ತದೆ. ಅಮೇರಿಕಾದಲ್ಲಿ ಕೂಡ ಇದೇ ಕಾನೂನು ಇತ್ತು; ಆದರೆ ಈಗ ಅದು ರದ್ದುಪಡಿಸಲಾಗಿದೆ. ಅಮೇರಿಕಾದಲ್ಲಿ ೧೯೭೦ ರಲ್ಲಿ ಗಾಂಜಾದ ವಿರುದ್ಧ ಕಾನೂನು ಮಾಡಲಾಗಿತ್ತು. ಅದರ ಪ್ರಕಾರ ಇಲ್ಲಿಯವರೆಗೆ ಸಾವಿರಾರು ನಾಗರೀಕರ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ರಾಷ್ಟ್ರಾಧ್ಯಕ್ಷ ಬಾಯಡೆನ ಇವರು, ಗಾಂಜಾದ ಮಾರಾಟ ಮತ್ತು ಅದರ ಉಪಯೋಗ ಮಾಡುವುದರಿಂದ ಅಪರಾಧಿ ಎಂದು ಹೇಳಲಾಗಿರುವ ನಾಗರೀಕರು ಕಾರಾಗೃಹದಲ್ಲಿ ಇದ್ದಾರೆ. ಅವರನ್ನು ಕ್ಷಮಿಸಲಾಗಿದೆ. ಇನ್ನು ಮುಂದೆ ಎಲ್ಲರಿಗೂ ಗಾಂಜಾ ಉಪಯೋಗಿಸಲು ಮತ್ತು ತಮ್ಮ ಹತ್ತಿರ ಇಟ್ಟುಕೊಂಡರೆ ಅವರನ್ನು ಕಾರಾಗೃಹಕ್ಕೆ ಅಟ್ಟಲಾಗುವುದಿಲ್ಲ; ಆದರೆ ಚಿಕ್ಕ ಮಕ್ಕಳಿಗೆ ಗಾಂಜಾದ ಕಳ್ಳ ಸಾಗಾಣಿಕೆ ಮತ್ತು ಮಾರಾಟದ ಮೇಲೆ ಬಂಧನ ಇಡಲಾಗಿದೆ, ಎಂದು ಬಾಯಡೆನ್ ಇವರು ಸ್ಪಷ್ಟಪಡಿಸಿದ್ದಾರೆ.