`ಇಂತಹ ಒಂದು ವಾರ ನನಗೆ ಶುಭವಾಗಿದೆ’, `ಇಂತಹ ಒಂದು ವಾರವು ನನ್ನ ಘಾತಕವಾರವಾಗಿದೆ (ಅಶುಭವಾಗಿದೆ)’, ಎಂಬ ಮಾತುಗಳನ್ನು ನಾವು ಅನೇಕ ಜನರಿಂದ ಕೇಳುತ್ತಿರುತ್ತೇವೆ. ವಾರಗಳು ಮತ್ತು ಅವುಗಳ ಮಹತ್ವವೇನು ? ಎಂಬುದನ್ನು ಸ್ವಲ್ಪದರಲ್ಲಿ ತಿಳಿದುಕೊಳ್ಳೋಣ.
೧. ಭಾನುವಾರ (ರವಿವಾರ)
`ಭಾನುವಾರ ಶುಭಕಾರ್ಯಕ್ಕಾಗಿ ಮಹತ್ವದ್ದಾಗಿದೆ ಎಂದು ನಂಬಲಾಗಿದೆ. ಈ ದಿನ ಭವ್ಯ ಸಮಾರಂಭಗಳನ್ನು, ರಾಜ್ಯಾಭಿಷೇಕ, ಲಾಭಪ್ರಾಪ್ತಿಗಾಗಿ ಪೂಜೆಅರ್ಚನೆ ಮಾಡುವುದು ಯೋಗ್ಯವಾಗಿದೆ. ಭಾನುವಾರ ಚಿನ್ನ, ತಾಮ್ರ ಇವುಗಳಂತಹ ಅಮೂಲ್ಯ ಧಾತುಗಳನ್ನು ಖರೀದಿಸಬೇಕು. ಈ ದಿನ ಹಸು, ಎತ್ತು, ಕುರಿ ಇಂತಹ ಪಶುಧನಗಳನ್ನು ಖರೀದಿ ಮಾಡುವುದರಿಂದ ಲಾಭವಾಗುತ್ತದೆ. ವಿಮಾನ ಪ್ರವಾಸ ಮತ್ತು ಆರೋಗ್ಯಪ್ರಾಪ್ತಿಗಾಗಿ ಔಷಧಿಗಳನ್ನು ಸೇವಿಸಲೂ ಭಾನುವಾರ ಫಲದಾಯಕವಾಗಿದೆ.
೨. ಸೋಮವಾರ
ವಿದ್ಯೆ ಅಧ್ಯಯನಕ್ಕೆ ಸಂಬಂಧಿತ ಕಾರ್ಯವನ್ನು ಸೋಮವಾರ ಮಾಡಬೇಕು. ಮಹಿಳೆಯರು ಈ ದಿನ ಹೊಸ ಬಟ್ಟೆಗಳನ್ನು, ಅಲಂಕಾರಗಳನ್ನು ಧರಿಸುವುದರಿಂದ ಪರಮಸೌಭಾಗ್ಯ ಪ್ರಾಪ್ತವಾಗುತ್ತದೆ. ಬಾವಿ ತೋಡುವುದು, ನೀರಿನ ಕಾಲುವೆಗಳನ್ನು ತೋಡುವುದು, ಕೆರೆ ತೋಡುವುದು ಇಂತಹ ನೀರಿಗೆ ಸಂಬಂಧಿತ ಕೆಲಸಗಳನ್ನು ಸೋಮವಾರದಂದು ಪ್ರಾರಂಭಿಸಬೇಕು.
೩. ಮಂಗಳವಾರ
ಮಂಗಳವಾರ ಸೈನ್ಯದಲವನ್ನು ಆರಂಭಿಸುವುದು ಅಥವಾ ಸೈನ್ಯಬಲವನ್ನು ಹೆಚ್ಚಿಸುವುದು ಯೋಗ್ಯವಾಗಿದೆ. ಮಂಗಳವಾರ ಅಗ್ನಿಪೂಜೆಯನ್ನು ಮಾಡುವುದರಿಂದ ಭಾಗ್ಯೋದಯವಾಗುತ್ತದೆ.
೪. ಬುಧವಾರ
ಹೊಸ ಕೆಲಸವನ್ನು ಬುಧವಾರ ಆರಂಭಿಸಿದರೆ ವಿಶೇಷ ಶುಭವಾಗುತ್ತದೆ. ಈ ದಿನ ನೌಕರಿಯ ಶ್ರೀಗಣೇಶವನ್ನು ಮಾಡುವುದು ಶುಭವಾಗಿದೆ. ಶಿಲ್ಪಕಲೆ, ಕಲಾಕ್ಷೇತ್ರದಲ್ಲಿನ ತಮ್ಮ ಕಲೆಯ ಪ್ರದರ್ಶನವನ್ನು ಬುಧವಾರದಂದು ಮಾಡುವುದರಿಂದ ಜನರು ಆಕರ್ಷಿತರಾಗುತ್ತಾರೆ. ವ್ಯಾಪಾರ ಅಧ್ಯಯನದಲ್ಲಿನ ಹೊಸ ಉಪಕ್ರಮಗಳನ್ನು ಈ ದಿನ ಪ್ರಾರಂಭಿಸಬೇಕು.
೫. ಗುರುವಾರ (ಬೃಹಸ್ಪತಿ)
ಧಾರ್ಮಿಕ ಕಾರ್ಯಗಳು, ಅನುಷ್ಠಾನಗಳ ಪ್ರಾರಂಭಕ್ಕಾಗಿ ಈ ದಿನವನ್ನು ಶುಭವೆಂದು ನಂಬಲಾಗಿದೆ. ಯಜ್ಞ, ಮನೆ ಕಟ್ಟುವುದು, ಶುಭಕಾರ್ಯಗಳು, ವಿದ್ಯೆಯ ಅಧ್ಯಯನ, ಪ್ರವಾಸಕ್ಕೆ ಆರಂಭಿಸುವುದು ಇವುಗಳಿಗಾಗಿಯೂ ಈ ದಿನವು ಎಲ್ಲಕ್ಕಿಂತ ಶುಭವಾಗಿದೆ.
೬. ಶುಕ್ರವಾರ
ಸ್ತಿçಯರಿಗಾಗಿ ಈ ವಾರವು ಬಹಳ ಮಹತ್ವದ್ದಾಗಿದೆ ಎಂದು ನಂಬಲಾಗು ತ್ತದೆ. ಈ ದಿನ ಭೂಮಿಖರೀದಿ, ವ್ಯಾಪಾರವನ್ನು ಆರಂಭಿಸುವುದು, ಕೃಷಿಯ ಬಗೆಗಿನ ಕಾರ್ಯದ ಮುಹೂರ್ತವನ್ನು ಮಾಡುವುದರಿಂದ ಲಾಭ ವಾಗುತ್ತವೆ. ಸಂಪತ್ತು ಮತ್ತು ಹಣಕಾಸಿಗಾಗಿ ಹೊಸ ಉದ್ಯೋಗವನ್ನು ಪ್ರಾರಂಭಿಸಲು ಈ ದಿನಯೊಗ್ಯವಾಗಿದೆ. ಸ್ತಿçಯರಿಗೆ ಅಲಂಕಾರಗಳನ್ನು ಧರಿಸಲು ಶುಕ್ರವಾರ ಶುಭವಾಗಿದೆ.
೭. ಶನಿವಾರ
ಈ ದಿನ ದೀಕ್ಷೆಯನ್ನು ತೆಗೆದುಕೊಳ್ಳುವಂತಹ ಮಹತ್ವದ ಕೃತಿಗಳನ್ನು ಮಾಡುವುದರಿಂದ ಭಾಗ್ಯೋದಯವಾಗುತ್ತದೆ. ಈ ದಿನ ಧಾತುಗಳಿಗೆ (ಕಬ್ಬಿಣಕ್ಕೆ) ಸಂಬಂಧಿಸಿದ ಕೆಲಸಗಳನ್ನು ಮಾಡಬೇಕು, ಇದರಿಂದ ಲಾಭವಾಗುವುದು. ಗೃಹಪ್ರವೇಶ, ಸಾಕುಪ್ರಾಣಿಗಳಿಗೆ ಪ್ರಶಿಕ್ಷಣವನ್ನು ಕೊಡುವುದು ಈ ಕೆಲಸ ಗಳಿಗಾಗಿಯೂ ಈ ದಿನ ಶುಭವಾಗಿದೆ. ಶನಿದೇವರ ಶಾಸ್ತ್ರೋಕ್ತ ಪೂಜೆಯನ್ನು ಮಾಡುವುದರಿಂದ ಲಾಭವಾಗುತ್ತದೆ.’
(ಆಧಾರ : ಮಾಸಿಕ `ಶ್ರೀಮತ್ ಪೂರ್ಣಾನಂದಾಯ ನಮಃ’, ದೀಪಾವಳಿ ವಿಶೇಷಾಂಕ ೨೦೧೪)