೨೦ ವರ್ಷಗಳಿಂದ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಕಾರ್ಯ ಮಾಡುತ್ತಿದೆ ! – ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಜನಜಾಗೃತಿ ಸಮಿತಿಯ ದ್ವಿದಶಕ ಅಭಿಯಾನದ ನಿಮಿತ್ತ ಆನೇಕಲ್‌ನಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಹಿಂದೂ ಸಂಘಟನಾ ಮೇಳ’

ಉಪಸ್ಥಿತರಿಗೆ ಮಾರ್ಗದರ್ಶನ ಮಾಡುತ್ತಿರುವ ಶ್ರೀ. ಮೋಹನ ಗೌಡ (ಗೋಲ ಮಾಡಿ ತೋರಿಸಲಾಗಿದೆ)

ಹಿಂದೂಗಳಿಗೆ ಶಾಲೆಗಳಲ್ಲಿ, ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಎಲ್ಲಿಯೂ ಧರ್ಮಶಿಕ್ಷಣ ಸಿಗುತ್ತಿಲ್ಲ. ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡಲು, ಹಿಂದೂಗಳ ರಕ್ಷಣೆಗಾಗಿ ಕಾನೂನು ಮಾರ್ಗದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಕಳೆದ ೨೦ ವರ್ಷಗಳಿಂದ ಭಾರತದಾದ್ಯಂತ ಅವಿರತವಾಗಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕೆಂದು ಕಾರ್ಯ ಮಾಡುತ್ತಿದೆ.  ಇದುವೇ ಹಿಂದೂ ಜನಜಾಗೃತಿ ಸಮಿತಿಯ ೨೦ ವರ್ಷಗಳ ಸಾಧನೆಯಾಗಿದೆ’ ಎಂದು ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ದ್ವಿದಶಕ ಅಭಿಯಾನದ ನಿಮಿತ್ತ ಆನೇಕಲ್‌ನಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಹಿಂದೂ ಸಂಘಟನಾ ಮೇಳ’ದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ದೀಪಪ್ರಜ್ವಲನೆಯ ಮೂಲಕ ಆರಂಭಿಸಲಾಯಿತು. ಹಿಂದೂ ನಾಯಕರಾದ ಶ್ರೀ. ವೆಂಕಟಸ್ವಾಮಿ ರೆಡ್ಡಿ ಇವರು ಮಾತನಾಡುತ್ತಾ, ನಾವೆಲ್ಲರೂ ಹಿಂದೂ ಧರ್ಮದ ಆಚರಣೆ ಮಾಡಬೇಕು, ಅದರಿಂದ ಭಾರತ ಪ್ರಗತಿ ಹೊಂದಲು ಸಾಧ್ಯ ಎಂದರು.