ಮನುಷ್ಯನಿಗೆ ಕೆಟ್ಟ ಶಕ್ತಿಗಳ ತೊಂದರೆ ರಾತ್ರಿಯ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಆಗುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಶ್ರೀ. ರಾಮ ಹೊನಪ

‘ಪೃಥ್ವಿಯ ಮೇಲೆ ಯಾವ ಭಾಗದ ಮೇಲೆ ಸೂರ್ಯನ ಪ್ರಕಾಶ ಬೀಳುತ್ತದೆಯೋ, ಆ ಸಮಯದಲ್ಲಿ ಮತ್ತು ಅನಂತರ ಕೆಲವೊಂದು ಸಮಯ ವಾತಾವರಣದಲ್ಲಿನ ಸೂರ್ಯನ ಪರಿಣಾಮವು ಸೂಕ್ಷ್ಮ ರೂಪದಲ್ಲಿ ಉಳಿದಿರುತ್ತದೆ; ಏಕೆಂದರೆ ಸೂರ್ಯಪ್ರಕಾಶದಲ್ಲಿ ದೈವೀ ಅಸ್ತಿತ್ವವಿದೆ. ಆದ್ದರಿಂದ ಸೂಕ್ಷ್ಮ ಕೆಟ್ಟ ಶಕ್ತಿಗಳಿಗೆ ಸೂರ್ಯಪ್ರಕಾಶವಿರುವ ಭೂಭಾಗದ ಮೇಲೆ ಕಾರ್ಯ ಮಾಡಲು ಕಠಿಣವಾಗುತ್ತದೆ. ರಾತ್ರಿಯ ಸಮಯದಲ್ಲಿ ಸೂರ್ಯಪ್ರಕಾಶದ ಪರಿಣಾಮ ಮುಗಿದಿರುತ್ತದೆ. ಇದರ ಪರಿಣಾಮದಿಂದ ಮನುಷ್ಯನಿಗೆ ರಾತ್ರಿಯ ಸಮಯದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯನ್ನು ಹೆಚ್ಚು ಪ್ರಮಾಣದಲ್ಲಿ ಅನುಭವಿಸಬೇಕಾಗುತ್ತದೆ. ಅದರ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧. ಕಾಲ ಮತ್ತು ಸೂರ್ಯಪ್ರಕಾಶದಿಂದ ವಾತಾವರಣದಲ್ಲಿ ಪ್ರಕ್ಷೇಪಣೆಯಾಗುವ ಪ್ರಧಾನ ಗುಣ

ಟಿಪ್ಪಣಿ : ರಾತ್ರಿ ಭೂಭಾಗದ ಮೇಲಿನ ಸೂರ್ಯಪ್ರಕಾಶ ಮತ್ತು ಅದರ ಪರಿಣಾಮ ಮುಗಿದಿರುತ್ತದೆ, ಆಗ ವಾತಾವರಣದಲ್ಲಿ ತಮೋಗುಣ ಕಾರ್ಯನಿರತವಾಗಿರುತ್ತದೆ.

೨. ಕಾಲ ಮತ್ತು ವ್ಯಕ್ತಿಯ ಮನಸ್ಸಿನ ಮೇಲಾಗುವ ಸೂರ್ಯಪ್ರಕಾಶದ ಪರಿಣಾಮ

ಟಿಪ್ಪಣಿ : ರಾತ್ರಿ ತಮೋಗುಣ ಹೆಚ್ಚಾಗುವುದರಿಂದ ಮನುಷ್ಯನ ಮನಸ್ಸಿನಲ್ಲಿನ ಭಾವನೆ ಮತ್ತು ಇಚ್ಛೆಯ ಪ್ರಮಾಣ ಹೆಚ್ಚಾಗಿ, ಮನುಷ್ಯನ ತನ್ನ ಮೇಲಿನ ನಿಯಂತ್ರಣ ಕಡಿಮೆಯಾಗುತ್ತದೆ.

೩. ಭೂಭಾಗದ ಮೇಲೆ ಬೀಳುವ ಸೂರ್ಯಪ್ರಕಾಶದಿಂದ, ಆಯಾ ಸ್ಥಳದ ಕೆಟ್ಟ ಶಕ್ತಿಗಳ ಮೇಲಾಗುವ ಪರಿಣಾಮ

ಅ. ಸೂರ್ಯಪ್ರಕಾಶದಲ್ಲಿ ಕೆಟ್ಟ ಶಕ್ತಿಗಳ ಸೂಕ್ಷ್ಮದೇಹಕ್ಕೆ ಅಗ್ನಿಯಲ್ಲಿ ಸುಟ್ಟುಕೊಂಡಂತೆ ವೇದನೆಗಳಾಗುತ್ತವೆ. ಆದ್ದರಿಂದ ಕೆಟ್ಟ ಶಕ್ತಿಗಳು ಬೆಳಕಿರುವಾಗ ವೃಕ್ಷಗಳ ನೆರಳಿನಲ್ಲಿ ಅಥವಾ ಕತ್ತಲೆಯಿರುವ ಸ್ಥಳದಲ್ಲಿ ಆಶ್ರಯ ಪಡೆಯುತ್ತವೆ.

ಆ. ಸೂರ್ಯಪ್ರಕಾಶದ ತೇಜದಿಂದ ಕೆಟ್ಟ ಶಕ್ತಿಗಳ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಕೆಲವು ಕೆಟ್ಟ ಶಕ್ತಿಗಳು ಸೂರ್ಯಪ್ರಕಾಶವಿರುವಾಗ ಮನುಷ್ಯನಿಗೆ ತೊಂದರೆಗಳನ್ನು ಕೊಡುವ ಬದಲು ಕತ್ತಲೆಯಲ್ಲಿದ್ದು ತಮ್ಮ ಸಾಧನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತವೆ.

ಇ. ಸೂರ್ಯಪ್ರಕಾಶದಲ್ಲಿ ಅನಂತ ದೈವೀ ಶಕ್ತಿಗಳ ಅಸ್ತಿತ್ವವಿರುತ್ತದೆ. ಆದ್ದರಿಂದ ಪಾತಾಳದಲ್ಲಿನ ಕೆಲವು ಕೆಟ್ಟ ಶಕ್ತಿಗಳು ಬೆಳಕಿರುವಾಗ ತಮ್ಮ ಕಾರ್ಯವನ್ನು ಮಾಡಲು ಪೃಥ್ವಿಯ ಮೇಲೆ ಬರದೆ ಪಾತಾಳದಲ್ಲಿದ್ದು ಪೃಥ್ವಿಯ ಮೇಲೆ ಆಕ್ರಮಣವನ್ನು ಮಾಡುತ್ತವೆ.

ಈ. ಮನುಷ್ಯನಿಗೆ ಸೂರ್ಯಪ್ರಕಾಶದಲ್ಲಿ ಭೂತಭಾದೆ ಅಥವಾ ಪಿಶಾಚಿಗಳ ಬಾಧೆಯ ಪ್ರಮಾಣ ಕಡಿಮೆಯಿರುತ್ತದೆ. ಅವು ಕತ್ತಲೆಯಲ್ಲಿ ಅಥವಾ ನೆರಳಿನಲ್ಲಿ ಮನುಷ್ಯನಿಗೆ ತೊಂದರೆಗಳನ್ನು ಕೊಡುತ್ತವೆ.

ಉ. ಹಗಲಿನಲ್ಲಿ ‘ಸೂರ್ಯಪ್ರಕಾಶದ ತೊಂದರೆಯಾಗಬಾರದೆಂದು’, ಕೆಟ್ಟ ಶಕ್ತಿಗಳು ಕತ್ತಲೆಯ ಸ್ಥಳಗಳನ್ನು ಅಥವಾ ಸುರಂಗ ಮಾರ್ಗವನ್ನು ಉಪಯೋಗಿಸುತ್ತವೆ. ಇದರಿಂದ ಕೆಟ್ಟ ಶಕ್ತಿಗಳಿಗೆ ಸೂರ್ಯನ ನೇರ ಸಂಬಂಧ ಬರುವುದಿಲ್ಲ.

೪. ಇತರ ದೇಶಗಳ ತುಲನೆಯಲ್ಲಿ ಭಾರತದಲ್ಲಿ ಸೂರ್ಯ ಪ್ರಕಾಶ ಹೇರಳವಾಗಿದ್ದರೂ ಸಾಧನೆ ಇಲ್ಲದಿರುವುದರಿಂದ ಸೂರ್ಯಪ್ರಕಾಶದಿಂದ ಮನುಷ್ಯನಿಗೆ ಆಧ್ಯಾತ್ಮಿಕ ಲಾಭವಾಗುವುದಿಲ್ಲ

ಸೂರ್ಯಪ್ರಕಾಶದಲ್ಲಿ ‘ತೇಜ ಮತ್ತು ಅನೇಕ ಪ್ರಕಾರದ ದೈವೀ ಶಕ್ತಿಗಳ ವಾಸವಿರುತ್ತದೆ. ಆ ದೈವೀ ಶಕ್ತಿಗಳು ಮನುಷ್ಯನಿಗೆ ಶರೀರ, ಮನಸ್ಸು, ಬುದ್ಧಿ ಮತ್ತು ಅಧ್ಯಾತ್ಮಿಕ ದೃಷ್ಟಿಯಲ್ಲಿ ಬಲ ಪ್ರಾಪ್ತ ಮಾಡಿಕೊಡುತ್ತವೆ. ಆದ್ದರಿಂದ ಸೂರ್ಯನಿಗೆ ‘ಬಲೋದೇವತಾ’, ಎಂದು ಹೇಳುತ್ತಾರೆ. ‘ಸೂರ್ಯನಿಂದ ಮನುಷ್ಯನಿಗೆ ಎಲ್ಲ ರೀತಿಯ ಲಾಭವಾಗಬೇಕು’, ಎಂದು ಸನಾತನ ಧರ್ಮದಲ್ಲಿ ಸೂರ್ಯನ ಉಪಾಸನೆಗೆ ತುಂಬಾ ಮಹತ್ವವನ್ನು ಕೊಡಲಾಗಿದೆ, ಉದಾ. ಸೂರ್ಯನಿಗೆ ನಮಸ್ಕಾರ ಮಾಡುವುದು, ಅವನಿಗೆ ಅರ್ಘ್ಯವನ್ನು ಕೊಡುವುದು ಮತ್ತು ಸೂರ್ಯದೇವತೆಯ ಜಪವನ್ನು ಮಾಡುವುದು ಇತ್ಯಾದಿ. ಸೂರ್ಯನ ಉಪಾಸನೆಯಿಂದ ಅವನಲ್ಲಿನ ಅನೇಕ ದೈವೀ ಶಕ್ತಿಗಳು ಮನುಷ್ಯನ ಜೀವನದಲ್ಲಿ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತವೆ. ಇತರ ದೇಶಗಳ ತುಲನೆಯಲ್ಲಿ ಭಾರತದಲ್ಲಿ ಸೂರ್ಯಪ್ರಕಾಶವು ಹೇರಳವಾಗಿದೆ; ಆದರೆ ಇಲ್ಲಿ ಹೆಚ್ಚಿನ ಜನರು ಉಪಾಸನೆ (ಸಾಧನೆ) ಮಾಡದಿರುವುದರಿಂದ ಅವರಿಗೆ ಸೂರ್ಯನ ಅಸ್ತಿತ್ವದ ಲಾಭವಾಗುವುದಿಲ್ಲ, ಅದೇ ರೀತಿ ಭಾರತದ ಜನರಿಗೆ ಆಧ್ಯಾತ್ಮಿಕ ತೊಂದರೆಯ ಪ್ರಮಾಣವೂ ಹೆಚ್ಚಿದೆ.

೫. ಸೂರ್ಯನ ಕೆಲವು ದೈವೀ ಶಕ್ತಿಗಳ ವೈಶಿಷ್ಟ್ಯಗಳು

ಸೂರ್ಯನಲ್ಲಿ ಅನಂತ ದೈವೀ ಶಕ್ತಿಗಳಿವೆ. ಅವುಗಳಲ್ಲಿನ ಕೆಲವು ದೈವೀ ಶಕ್ತಿಗಳ ಹೆಸರುಗಳನ್ನು ಮತ್ತು ಅವುಗಳ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ

೫ ಅ. ‘ಸೂರ್ಯಪದ್ಮಿನಿ’ : ಇಲ್ಲಿ ಪದ್ಮಿನಿ ಶಬ್ದವು ‘ಪುಷ್ಪ’ ಈ ಅರ್ಥದಲ್ಲಿದೆ. ಸೂರ್ಯನ ಒಂದು ದೈವೀ ಶಕ್ತಿಯ ಆಕಾರವು ಹೂವಿನಂತಿದೆ. ಅದರ ಕಾರ್ಯವು ‘ಮನುಷ್ಯನಿಗೆ ಜೀವಿಸಲು ಪ್ರೇರಣೆ ಮತ್ತು ಉತ್ಸಾಹವನ್ನು ನೀಡುವುದು’. ಈ ದೈವೀ ಶಕ್ತಿಯ ನಿರ್ಮಾಣವು ಸೂರ್ಯನಿಂದ ಆಗಿದೆ. ಆದ್ದರಿಂದ ಅದಕ್ಕೆ ‘ಸೂರ್ಯಪದ್ಮಿನಿ’, ಎಂದು ಹೇಳುತ್ತಾರೆ.

೫ ಆ. ‘ಸೂರ್ಯದಾಮಿನಿ’ : ಇದರಲ್ಲಿನ ದಾಮಿನಿ ಶಬ್ದವು ‘ವಿಜಯಶ್ರೀ’ ಈ ಅರ್ಥದಲ್ಲಿದೆ. ಸೂರ್ಯನ ಒಂದು ದೈವೀ ಶಕ್ತಿಯು ಮನುಷ್ಯನಿಗೆ ವಿಜಯವನ್ನು ಪ್ರಾಪ್ತ ಮಾಡಿಕೊಡುತ್ತದೆ. ಅದಕ್ಕೆ ‘ಸೂರ್ಯದಾಮಿನಿ’, ಎಂದು ಹೇಳುತ್ತಾರೆ.

೫ ಇ. ‘ಸೂರ್ಯನಭಾ’ : ಇದರಲ್ಲಿನ ನಭಾ ಶಬ್ದವು ‘ವ್ಯಾಪಕ’ ಈ ಅರ್ಥದಲ್ಲಿದೆ. ಸೂರ್ಯನ ಒಂದು ದೈವೀ ಶಕ್ತಿಯು ವ್ಯಾಪಕ ಸ್ವರೂಪದಲ್ಲಿ ಕಾರ್ಯವನ್ನು ಮಾಡುತ್ತದೆ. ಆದುದರಿಂದ  ಅದಕ್ಕೆ ‘ಸೂರ್ಯನಭಾ’, ಎಂದು ಹೇಳುತ್ತಾರೆ.

೫ ಈ. ‘ಸೂರ್ಯಪ್ರಭಾ’ : ಇದರಲ್ಲಿನ ಪ್ರಭಾ ಈ ಶಬ್ದವು ‘ವಿಸ್ತಾರ ಮಾಡುವ’, ಈ ಅರ್ಥದಲ್ಲಿದೆ. ಸೂರ್ಯನ ಒಂದು ದೈವೀ ಶಕ್ತಿಯು ಅದರ ಕಾರ್ಯದ ವಿಸ್ತಾರವನ್ನು ಮಾಡುತ್ತದೆ. ಅದಕ್ಕೆ ‘ಸೂರ್ಯಪ್ರಭಾ’, ಎಂದು ಹೇಳುತ್ತಾರೆ.

೫ ಉ. ‘ಸೂರ್ಯಕಾಂತಿ’ : ಸೂರ್ಯನ ಯಾವ ದೈವೀ ಶಕ್ತಿಯು ಮನುಷ್ಯನ ಶರೀರವನ್ನು ಸೂರ್ಯನ ಹಾಗೆ ತೇಜಯುಕ್ತ ಅಥವಾ ಪ್ರಕಾಶಮಾನ ಮಾಡುತ್ತದೆಯೋ, ಅದಕ್ಕೆ ‘ಸೂರ್ಯಕಾಂತಿ’, ಎಂದು ಹೇಳುತ್ತಾರೆ. ಈ ದೈವೀ ಶಕ್ತಿಯು ‘ಪ್ರಾಣಿ ಮತ್ತು ಪಕ್ಷಿ’ಗಳ ಚರ್ಮದ ಪೋಷಣೆಯನ್ನು ಮಾಡುತ್ತದೆ.

೫ ಊ. ‘ಸೂರ್ಯಕಲಾ’ : ಇದರಲ್ಲಿನ ‘ಕಲಾ’ ಶಬ್ದವು ‘ರಚನೆಗೆ’ ಸಂಬಂಧಿಸಿದೆ. ಸೂರ್ಯನ ರಚನೆ, ಎಂದರೆ ಸೂರ್ಯಕಿರಣಗಳ ಗತಿ (ವೇಗ), ಅದರ ಸ್ವರೂಪ ಮತ್ತು ಅದರಲ್ಲಿನ ಬಣ್ಣ ಇವುಗಳಿಗೆ ಸಂಬಂಧಿಸಿದೆ. ಸೂರ್ಯನ ಕಾರ್ಯಕ್ಕೆ ವಿಶಿಷ್ಟ ಸ್ವರೂಪವನ್ನು ಒದಗಿಸುವ ದೈವೀ ಶಕ್ತಿಗೆ ‘ಸೂರ್ಯಕಲಾ’, ಎಂದು ಹೇಳುತ್ತಾರೆ.

೬. ಸೂರ್ಯಪ್ರಕಾಶದಿಂದಾಗಿ ಕೆಟ್ಟ ಶಕ್ತಿಗಳ ಅಖಂಡ ನಡೆಯುತ್ತಿರುವ ಕಾರ್ಯದಲ್ಲಿ ಅಡಚಣೆ ನಿರ್ಮಾಣವಾಗುವುದು

ಕೆಟ್ಟ ಶಕ್ತಿಗಳಿಗೆ ಕಾರ್ಯವನ್ನು ಮಾಡಲು ಹಗಲು ಅಥವಾ ರಾತ್ರಿಯ ಬಂಧನವಿರುವುದಿಲ್ಲ. ಅವು ಅಖಂಡ ಕಾರ್ಯನಿರತವಾಗಿರುತ್ತವೆ. ಅವು ಮನುಷ್ಯನಿಗೆ ನಿರಂತರವಾಗಿ ತೊಂದರೆಗಳನ್ನು ಕೊಡುತ್ತವೆ; ಆದರೆ ಎಲ್ಲಿಯವರೆಗೆ ಸೂರ್ಯಪ್ರಕಾಶ ಮತ್ತು ಅದರ ಪರಿಣಾಮ ವಾತಾವರಣದಲ್ಲಿ ಇರುತ್ತದೆಯೋ, ಅಲ್ಲಿಯವರೆಗೆ ಕೆಟ್ಟ ಶಕ್ತಿಗಳಿಂದ ಮನುಷ್ಯನಿಗಾಗುವ ಆಧ್ಯಾತ್ಮಿಕ ತೊಂದರೆಗಳು ಸ್ವಲ್ಪಪ್ರಮಾಣದಲ್ಲಿ ಕಡಿಮೆಯಾಗುತ್ತವೆ.

೭. ಸಾಯಂಕಾಲದಿಂದ ಕೆಟ್ಟ ಶಕ್ತಿಗಳ ಕಾರ್ಯ ಪ್ರಭಾವಪೂರ್ಣವಾಗಿ ನಡೆಯುತ್ತದೆ

ಭೂಮಿಯ ಮೇಲಿನ ಸೂರ್ಯಪ್ರಕಾಶದ ಪ್ರಭಾವ ಸಾಯಂಕಾಲದ ನಂತರ ಕಡಿಮೆಯಾಗುತ್ತಾ ಹೋದಂತೆ ವ್ಯಕ್ತಿಯ ಮೇಲಿನ ಅದರ ಪ್ರಭಾವವೂ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ಆ ಸಮಯದಲ್ಲಿ ವ್ಯಕ್ತಿಯ ಮನಸ್ಸು ಹೆಚ್ಚೆಚ್ಚು ಚಂಚಲವಾಗುತ್ತದೆ. ಅವನ ಮನಸ್ಸಿನಲ್ಲಿ ಇಚ್ಛೆ ಮತ್ತು ವಾಸನೆಯ ಪ್ರಭಾವ ಹೆಚ್ಚಾಗಲು ಆರಂಭವಾಗುತ್ತದೆ. ಅದರಿಂದ ಕೆಟ್ಟ ಶಕ್ತಿಗಳಿಗೆ ಲಾಭವಾಗುತ್ತದೆ. ಕೆಟ್ಟ ಶಕ್ತಿಗಳು ಇಂತಹ ವ್ಯಕ್ತಿಗಳ ಮೇಲೆ ಸೂಕ್ಷ್ಮದಿಂದ ಸಹಜ ಆಕ್ರಮಣ ಮಾಡುತ್ತವೆ ಮತ್ತು ಆ ವ್ಯಕ್ತಿಯನ್ನು ತಮ್ಮ ನಿಯಂತ್ರಣದಲ್ಲಿ ತೆಗೆದುಕೊಳ್ಳುತ್ತವೆ.

೮. ದೇವತೆಗಳು, ಸೂಕ್ಷ್ಮರೂಪದಲ್ಲಿನ ಋಷಿಗಳು ಮತ್ತು ಮಹಾತ್ಮರ ಕಾರ್ಯ

ದೇವತೆಗಳ, ಋಷಿಗಳ ಮತ್ತು ಮಹಾತ್ಮರ ವಾಸವು ಸೂಕ್ಷ್ಮರೂಪದಲ್ಲಿ ಅಖಂಡವಾಗಿರುತ್ತದೆ. ಅವರು ಮನುಷ್ಯನಿಗೆ ಸಹಾಯ ಮಾಡಲು ಹಗಲಿರುಳು ತತ್ಪರರಾಗಿರುತ್ತಾರೆ; ಆದರೆ ಮನುಷ್ಯನ ಉಪಾಸನೆ (ಸಾಧನೆ) ಇಲ್ಲದ ಕಾರಣ ಅವನಿಗೆ ಅವರ ಆಧ್ಯಾತ್ಮಿಕ ಲಾಭವಾಗುವುದಿಲ್ಲ. ಅದರ ಪರಿಣಾಮದಿಂದ ವ್ಯಕ್ತಿಗೆ ಕೆಟ್ಟ ಶಕ್ತಿಗಳ ತೊಂದರೆಯನ್ನು ತೀವ್ರ ಸ್ವರೂಪದಲ್ಲಿ ಅನುಭವಿಸಬೇಕಾಗುತ್ತದೆ.

೯. ಸಾಧಕರಿಗೆ ನಿರಂತರವಾಗಿ ದೇವರ ಸಹಾಯ ಸಿಗುವುದರಿಂದ ಅವರಿಗೆ ಸೂರ್ಯಪ್ರಕಾಶ, ಸ್ಥಳ ಮತ್ತು ಕಾಲದ ಬಂಧನ ಇರುವುದಿಲ್ಲ

ಸೂರ್ಯಪ್ರಕಾಶದಿಂದಾಗಿ ಕೆಲವೊಂದು ಪ್ರಮಾಣದಲ್ಲಿ ಮನುಷ್ಯನ ರಕ್ಷಣೆಯಾಗುತ್ತದೆ. ಇಂತಹ ಮನುಷ್ಯನ ತೊಂದರೆಯ ತೀವ್ರತೆಯು ಹಗಲು-ರಾತ್ರಿಯ ನಿಸರ್ಗಚಕ್ರ, ಸ್ಥಳ ಮತ್ತು ಕಾಲವನ್ನು ಅವಲಂಬಿಸಿರುತ್ತದೆ. ತದ್ವಿರುದ್ಧ ಸಾಧಕರು ನಿರಂತರವಾಗಿ ದೇವರ ಅನುಸಂಧಾನದಲ್ಲಿ ಇರುವುದರಿಂದ ಅವರಿಗೆ ನಿರಂತರವಾಗಿ ದೇವರ ಸಹಾಯ ಮತ್ತು ಕೃಪೆ ಪ್ರಾಪ್ತವಾಗುತ್ತದೆ. ಇಂತಹ ಸಾಧಕರು ಸೂರ್ಯಪ್ರಕಾಶದಲ್ಲಿರಲಿ ಅಥವಾ ಇಲ್ಲದಿರಲಿ, ಅವರು ಯಾವುದೇ ದೇಶದಲ್ಲಿರಲಿ ಅಥವಾ ಯಾವುದೇ ಸಮಯವಿರಲಿ, ಅವನ ರಕ್ಷಣೆಯನ್ನು ಈಶ್ವರನೇ ಮಾಡುತ್ತಾನೆ.’

– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಸನಾತನ ಆಶ್ರಮ, ಗೋವಾ. (೨೫.೬.೨೦೨೨)

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.