* ಭಾರತಕ್ಕಿಂತ ೮೬ ಪಟ್ಟು ಚಿಕ್ಕದಾಗಿರುವ ಭೂತಾನವು ಪ್ರವಾಸೋದ್ಯಮದ ಬೆಳವಣಿಗೆಗಲ್ಲ, ನಿಸರ್ಗ ರಕ್ಷಣೆಗೆ ಮತ್ತು ಆ ಮಾರ್ಗದ ಮೂಲಕ ಜನರ ಆನಂದಕ್ಕೆ ಪ್ರಾಧಾನ್ಯತೆಯನ್ನು ನೀಡುತ್ತದೆ. ವಾಸ್ತವದಲ್ಲಿ ಇದೇ ಶ್ರೀಮಂತಿಕೆಯಾಗಿದೆ ! ತದ್ವಿರುದ್ಧ ಭಾರತದಲ್ಲಿ ವಿಕಾಸದ ಹೆಸರಿನಲ್ಲಿ ನಿಸರ್ಗವನ್ನು ನಾಶ ಮಾಡಲಾಗುತ್ತಿದೆ ! ಭಾರತಕ್ಕೆ ಇದು ಅತ್ಯಂತ ಲಜ್ಜಾಸ್ಪದವಾಗಿದೆ.
* ನಿಸರ್ಗದ ರಕ್ಷಣೆಯನ್ನು ಮಾಡಲು ಭಾರತವು ಭೂತಾನದ ಆದರ್ಶವನ್ನು ತೆಗೆದುಕೊಳ್ಳಬೇಕು !
ಜಗತ್ತಿನ ಆನಂದೀ ದೇಶಗಳಲ್ಲಿ ೮ ನೆ ಸ್ಥಾನದಲ್ಲಿರುವ ಭೂತಾನ ದೇಶದ ಆನಂದೀ ಮಕ್ಕಳ ಒಂದು ಸಂಗ್ರಹ ಛಾಯಾಚಿತ್ರ ಈ ಹಿಂದೆ ಭೂತಾನದ ಬಗ್ಗೆ `ದ ಹಿಂದೂ’ ವರ್ತಮಾನ ಪತ್ರಿಕೆಯಲ್ಲಿ ಒಂದು ಸುದ್ದಿಯನ್ನು ಓದಿದ್ದೆ. ಅದರಸಾರಾಂಶ ಮುಂದೆ ಕೊಡುತ್ತಿದ್ದೇನೆ. `ಸಸ್ಟೇನೆಬಲ್ ಡೆವಲ್ಪಮೆಂಟ್’ (ಶಾಶ್ವತ ವಿಕಾಸ) ಅಂದರೆ ಏನುಎಂಬುದನ್ನು ಭಾರತವು ಭೂತಾನ ದಂತಹ ಚಿಕ್ಕ ಮತ್ತು ನಿರ್ಧನ ದೇಶದಿಂದ ಕಲಿಯಬೇಕು. ಭೂತಾನದÀ ಪ್ರಧಾನಮಂತ್ರಿ ಡಾ. ಲೋಟೆ ತ್ಶೆರಿಂಗ್ ಇವರು ಭಾರತ, ನೇಪಾಳ,ಬಾಂಗ್ಲಾದೇಶ ಮತ್ತು ಭೂತಾನ ಈ ದೇಶಗಳಲ್ಲಿನ `ಮೋಟಾರ್ ವೆಹಿಕಲ್ ಎಗ್ರಿಮೆಂಟ್’ನಿAದ (ಮೋಟಾರ್ ವಾಹನ ಒಪ್ಪಂದದಿಂದ) ಹೊರಗೆ ಬಂದರು ಮತ್ತು ಅವರು ಈಗ ಕೇವಲ ಮೂಕ ಪ್ರೇಕ್ಷಕರಾದರು. ಈ ಒಪ್ಪಂದ ಆಗುತ್ತಿದ್ದರೆ ಭಾರತದಿಂದ ಮತ್ತು ಇತರ ಅಕ್ಕಪಕ್ಕದ ದೇಶಗಳಿಂದ ಭೂತಾನಕ್ಕೆ ತಮ್ಮ ತಮ್ಮ ದೇಶಗಳ ಖಾಸಗಿ ವಾಹನಗಳನ್ನು ತೆಗೆದುಕೊಂಡು ಹೋಗಬಹುದಾಗಿತ್ತು. ಇದರಿಂದ ಭೂತಾನದಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗ ಬಹುದಿತ್ತು ಮತ್ತು ಅಲ್ಲಿನ ಆರ್ಥಿಕ ವ್ಯವಸ್ಥೆಯೂ ಹೆಚ್ಚುತ್ತಿತ್ತು; ಆದರೆ ಭೂತಾನದ ಪ್ರಧಾನಮಂತ್ರಿಗಳು ಈ ಒಪ್ಪಂದದಿಂದ ಹೊರಗೆ ಬರುವ ಯೋಗ್ಯ ನಿರ್ಣಯವನ್ನು ತೆಗೆದುಕೊಂಡರು.
೧. ಪ್ರವಾಸೋದ್ಯಮಕ್ಕಿಂತ ಉತ್ತಮ ಪರಿಸರ ಮತ್ತು ಪ್ರವಾಸೋದ್ಯಮದ ಗುಣಮಟ್ಟಕ್ಕೆ ಮಹತ್ವ ಕೊಡುವ ಭೂತಾನ !
ಭೂತಾನದಲ್ಲಿ ಪ್ರತಿವರ್ಷ ಬರುವ ೨.೭೪ ಲಕ್ಷ ಪ್ರವಾಸಿಗರ ಪೈಕಿ ೧.೮ ಲಕ್ಷ ಪ್ರವಾಸಿಗರು ಭಾರತೀಯರಾಗಿರುತ್ತಾರೆ. ಈ ಮೋಟಾರು ವಾಹನ ಒಪ್ಪಂದ ಆಗಿದ್ದರೆ ಇನ್ನೂ ಹೆಚ್ಚು ಪ್ರವಾಸಿ ಗರು ಭೂತಾನಕ್ಕೆ ಹೋಗುತ್ತಿದ್ದರು. ಇಷ್ಟು ದೊಡ್ಡ ನಷ್ಟವನ್ನು ಭೂತಾನದಂತಹ ಚಿಕ್ಕ ದೇಶ ಸಹಿಸಬಹುದೇ ?’ ಎಂಬ ಪ್ರಶ್ನೆಗೆ ಭೂತಾನ್‌ದ ಪ್ರಧಾನಮಂತ್ರಿಗಳು, ನಾವು ಪ್ರವಾಸೋದ್ಯಮವನ್ನು ಕಡಿಮೆ ಮಾಡುತ್ತಿಲ್ಲ, ತದ್ವಿರುದ್ಧ ಹೆಚ್ಚಿಸುತ್ತಿದ್ದೇವೆ. ಹೆಚ್ಚು ಪ್ರವಾಸಿಗರನ್ನು ಕರೆದು ಪ್ರವಾಸೋದ್ಯಮದ ಗುಣಮಟ್ಟವನ್ನು ಕಡಿಮೆ ಮಾಡಿ ನಮಗೆ ನಮ್ಮ ವಿಕಾಸವನ್ನು ಸಾಧಿಸಬೇಕಾಗಿಲ್ಲ. ತದ್ವಿರುದ್ಧ ನಾವು ಭಾರತ, ಬಾಂಗ್ಲಾದೇಶ, ನೇಪಾಳ ದಂತಹ ದೇಶಗಳಿಂದ ಬರುವ ಪ್ರವಾಸಿಗರ ಮೇಲೆ `ಸಸ್ಟೆನೆಬಲ್ ಡೆವಲ್ಪಮೆಂಟ್ ಫಂಡ್’ (ಶಾಶ್ವತ ವಿಕಾಸ ನಿಧಿ) ಹೆಸರಿನ ತೆರಿಗೆಯನ್ನು ವಿಧಿಸುವವರಿದ್ದೇವೆ. ಭೂತಾನದ ಒಟ್ಟು ೨೦ ರಾಜ್ಯಗಳ ಪೈಕಿ ೧೧ ರಾಜ್ಯಗಳಲ್ಲಿ ಈ ತೆರಿಗೆಯನ್ನು ವಿಧಿಸುವುದಿಲ್ಲ; ಆದರೆ ಇತರ ರಾಜ್ಯಗಳಿಗೆ ಹೋದರೆ ಈ ತೆರಿಗೆಯನ್ನು ಭರಿಸಬೇಕಾಗುವುದು.
`ಇದರ ಅರ್ಥ ನೀವು ತೆರಿಗೆಯನ್ನು ವಿಧಿಸಿ ಪ್ರವಾಸೋದ್ಯಮ ವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೀರೇನು ?’, ಎಂಬ ಪ್ರಶ್ನೆಗೆ ಡಾ. ಲೊಟೆ ತ್ಶೆರಿಂಗ್ ಇವರು, ನಾವು ಸಣ್ಣ ವಿಷಯಗಳಲ್ಲಿ ಬಹಳ ದೊಡ್ಡ ಮೌಲ್ಯವನ್ನು ನೋಡುವ ಮನುಷ್ಯರಾಗಿದ್ದೇವೆ, ಇದನ್ನು ನಾವು ನಮ್ಮ ನೇತಾರರಿಂದ ಕಲಿತಿದ್ದೇವೆ. ನಮ್ಮ ದೇಶವು ಆಕಾರದಲ್ಲಿ ಬಹಳ ಚಿಕ್ಕದಿದೆ. ಆದುದರಿಂದ ನಮ್ಮ ದೇಶದ ಪ್ರವಾಸಿಗರನ್ನು ಸಮಾವೇಶ ಮಾಡಿಕೊಳ್ಳುವ ಕ್ಷಮತೆಯೂ ಕಡಿಮೆ ಇದೆ. ನಮ್ಮ ದೇಶದ ರಸ್ತೆಗಳು ಮತ್ತು ಹೆದ್ದಾರಿಗಳೂ ತುಲನೆಯಲ್ಲಿ ಚಿಕ್ಕದಾಗಿವೆ. ಈ ಮೋಟಾರ ವಾಹನ ಒಪ್ಪಂದ ಆಗಿದ್ದರೆ ನಾವು ರಸ್ತೆಗಳನ್ನು ಅಗಲ ಮಾಡಬೇಕಾಗುತ್ತಿತ್ತು. ಅದರಿಂದ ನಮ್ಮ ದೇಶದಲ್ಲಿ ಪ್ರವಾಸಿಗಳ ದಟ್ಟಣೆ ಹೆಚ್ಚಾಗುತ್ತಿತ್ತು. ಇದರಿಂದ ನಾವು ಅವರಿಗೆ ಒಳ್ಳೆಯ ಸೇವೆಗಳನ್ನು ಕೊಡದೇ ಅತಿ ಕಡಿಮೆ ವೆಚ್ಚದ ಕೆಳಮಟ್ಟದ ಸೇವೆಗಳನ್ನು ಕೊಡಬೇಕಾಗುತ್ತಿತ್ತು. ತದ್ವಿರುದ್ಧ ನಾವು ಈ ಒಪ್ಪಂದದಿಂದ ಹೊರಗಿದ್ದು ನಮ್ಮ ದೇಶವನ್ನು ಹೆಚ್ಚಿನ ಪ್ರವಾಸಿಗರ ದಟ್ಟಣೆಯಿಂದ ಕಾಪಾಡುತ್ತಿದ್ದೇವೆ. ತೆರಿಗೆಯನ್ನು ವಿಧಿಸುವುದರಿಂದ ನಮ್ಮ ದೇಶಕ್ಕೆ ಕಡಿಮೆ ಪ್ರವಾಸಿಗರು ಬರುವರು; ಆದರೆ ನಮಗೆ ಹೆಚ್ಚು ಮೂಲ್ಯ (ಹಣ) ಸಿಗುವುದು. ಪ್ರವಾಸಿಗರುಕಡಿಮೆ ಸಂಖ್ಯೆಯಲ್ಲಿ ಬರುವುದರಿಂದ ನಮ್ಮ ದೇಶದಲ್ಲಿನ ರಸ್ತೆಗಳನ್ನು ಅಗಲ ಮಾಡಬೇಕಾಗುವುದಿಲ್ಲ. ಇದರ ಪರಿಣಾಮದಿಂದ ನಮ್ಮ ದೇಶದ ಅರಣ್ಯ, ಗುಡ್ಡಗಳನ್ನು ನಮಗೆ ಧ್ವಂಸ ಮಾಡಬೇಕಾಗುವುದಿಲ್ಲ. ನಮ್ಮ ದೇಶದ ಅರಣ್ಯಕ್ಷೇತ್ರವು ಜಗತ್ತಿನ ಇತರ ದೇಶಗಳಿಗಿಂತ ಅತ್ಯಧಿಕ, ಎಂದರೆ ಶೇ. ೭೨ ರಷ್ಟಿದೆ ಮತ್ತುನಮಗೆ ಅದನ್ನು ಇನ್ನಷ್ಟು ಬೆಳೆಸಬೇಕಿದೆ. ಇದರಿಂದ ನಮ್ಮ ಪ್ರವಾಸೋದ್ಯಮ ಕಡಿಮೆ ಆಗುವುದು ಎಂಬ ಯಾವುದೇ ಸಂದೇಹವೇ ಇಲ್ಲ. ತದ್ವಿರುದ್ದ ಅದು ಹೆಚ್ಚಾಗುವುದು, ಎಂಬ ನಿಶ್ಚಿತಿ ಇದೆ. ಕಡಿಮೆ ವಾಹನಗಳು ಬರುವುದರಿಂದ ಪ್ರವಾಸದಲ್ಲಿ ಅಪಘಾತಗಳಾಗುವುದು ಕೂಡ ತಪ್ಪುವುದು ಎಂದರು.
೨. `ಜಿಡಿಪಿ’ಗಿಂತ ದೇಶದಲ್ಲಿನ ನಾಗರಿಕರ ಆನಂದ (ಗ್ರಾಸ್ ನ್ಯಾಶನಲ್ ಹ್ಯಾಪಿನೆಸ್) ಮುಖ್ಯ !
ನೀವು ಭವಿಷ್ಯದಲ್ಲಿ ಪುನಃ ಈ ಒಪ್ಪಂದಕ್ಕೆ ಸಹಿ ಹಾಕುವಿರೇನು ಎಂದು ಕೇಳಿದಾಗ ಅವರು, ನಾನು ಸಹಿಹಾಕಿದರೆ ನಮ್ಮ ಆರ್ಥಿಕ ಪರಿಸ್ಥಿತಿ ಖಂಡಿತವಾಗಿಯೂ ಸುಧಾರಿಸುವುದು; ಆದರೆ ನಮ್ಮ ಗುಡ್ಡ ಮತ್ತು ನಮ್ಮ ಅರಣ್ಯಗಳು ಕಡಿಮೆಯಾಗುವವು. ನಾವು ಒಂದು `ಕಾರ್ಬನ್ ನೆಗೆಟಿವ್ ದೇಶ’ (ಯಾವ ದೇಶದಲ್ಲಿ `ಕಾರ್ಬನ್ ಡೈಯಾಕ್ಸೆöಡ್’ನ ಉತ್ಪಾದನೆಗಿಂತ ಮರಗಳ ಪ್ರಮಾಣ ಹೆಚ್ಚಿದ್ದು ಕಾರ್ಬನ್ ಡೈಯಾಕ್ಸೈಡ್ ನ್ನು ಹೆಚ್ಚು ಪ್ರಮಾಣದಲ್ಲಿ ಹೀರಿಕೊಳ್ಳಲಾಗುತ್ತದೆಯೋ, ಆ ದೇಶವನ್ನು `ಕಾರ್ಬನ್ ನೆಗೆಟಿವ್ ದೇಶವೆಂದು ತಿಳಿಯಲಾಗುತ್ತದೆ) ಆಗಿದ್ದೇವೆ. ನಾವು ನಮ್ಮನ್ನು `ಅಭಿವೃದ್ಧಿಯಾಗದ ದೇಶ’, ಎಂದು ಹೇಳಿಕೊಳ್ಳಬಹುದು; ಆದರೆ ಪರಿಸರವನ್ನು ರಕ್ಷಿಸುವುದು ನಮಗೆ ಎಲ್ಲಕ್ಕಿಂತ ಮಹತ್ವದ ವಿಷಯವಾಗಿದೆ. ಇದಕ್ಕಾಗಿ ನಾವು ಜನರ ಮತ್ತು ಇತರ ದೇಶಗಳ ಟೀಕೆಯನ್ನು ಸಹಿಸಿಕೊಳ್ಳಬೇಕಾಗಬಹುದು; ಆದರೆ ನಾವು ಅದಕ್ಕೆ ಸಿದ್ಧರಿದ್ದೇವೆ; ಏಕೆಂದರೆ ನಾವು ನಮ್ಮ ಮುಂದಿನ ಪೀಳಿಗೆಗಳಿಗೆ ಒಳ್ಳೆಯ ಗಾಳಿ, ಒಳ್ಳೆಯ ನೀರು ಮತ್ತು ಒಳ್ಳೆಯ ನಿಸರ್ಗವನ್ನು ಹಸ್ತಾಂತರಿಸಲು ಕಟಿಬದ್ಧರಾಗಿದ್ದೇವೆ. ನಾವು ನಮ್ಮ ದೇಶದ ವಿಕಾಸವನ್ನು `ಜಿಡಿಪಿ’ಯಂತಹ (ರಾಷ್ಟ್ರೀಯ ಒಟ್ಟು ಉತ್ಪನ್ನ) ನಿಯತಾಂಕಗಳನ್ನು ಬಳಸಿ ಎಂದಿಗೂ ಮಾಡುವುದಿಲ್ಲ, ಏಕೆಂದರೆ ಅದರಲ್ಲಿ ದೇಶದ ಜನರು ಬದುಕಿದ್ದಾರೆಯೋ, ಸತ್ತಿದ್ದಾರೆಯೋ ಅಥವಾ ಅವರ ಜೀವನವು ಎಷ್ಟು ದುಃಖಮಯ-ಕಷ್ಟಮಯ ವಾಗಿದೆ ಎಂಬುದರ ಬಗ್ಗೆ ಯಾವುದೇ ಕೊಡಕೊಳ್ಳುವಿಕೆ ಇರುವುದಿಲ್ಲ.
ಇದರ ವಿರುದ್ಧ ನಾವು ಜಿ.ಎನ್.ಎಚ್ ಅಂದರೆ `ಗಾçಸ್ ನ್ಯಾಶನಲ್ ಹ್ಯಾಪಿನೆಸ್’ನಂತಹ (ರಾಷ್ಟ್ರೀಯ ಒಟ್ಟು ಆನಂದ) ನಿಯತಾಂಕಗಳನ್ನು ಬಳಸಿ ನಮ್ಮ ದೇಶದ ಪ್ರಗತಿಯನ್ನು ಅಳೆಯು ತ್ತೇವೆ. (`ಗ್ರಾಸ್ ನ್ಯಾಶನಲ್ ಹ್ಯಾಪಿನೆಸ್’ ಈ ಸಂಜ್ಞೆಯನ್ನು ಭೂತಾನದ ನಾಲ್ಕನೇಯ ರಾಜನಾದ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಇವರು ೧೯೭೦ ರಲ್ಲಿ ಮಂಡಿಸಿದ್ದರು. ಇದರಲ್ಲಿ ಅವರು `ಶಾಶ್ವತ ವಿಕಾಸದಿಂದ ಪ್ರಗತಿಯ ಕಲ್ಪನೆಯ ಕಡೆಗೆ ಪೂರ್ಣ ದೃಷ್ಟಿಕೋನ ವಿಟ್ಟುಕೊಳ್ಳಬೇಕು ಮತ್ತು ಸಮಾಜದ ಸ್ವಾಸ್ಥ÷್ಯ ಮತ್ತು ಸಂತುಷ್ಟಿ ಈ ಆರ್ಥಿಕೇತರ ಅಂಶಗಳಿಗೂ ಪ್ರಾಮುಖ್ಯತೆಯನ್ನು ನೀಡಬೇಕು ಎಂದಿದ್ದರು.) ಇದರಲ್ಲಿ ನಾವು ಸಮಾಜದಲ್ಲಿನ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ, ನಿರ್ಧನರಿಂದ ಶ್ರೀಮಂತರವರೆಗೆ ಹೀಗೆ ಎಲ್ಲ ಘಟಕಗಳ ವಿಚಾರ ಮಾಡುತ್ತೇವೆ ಎಂದು ಹೇಳಿದರು. (ವಾಸ್ತವದಲ್ಲಿ ನಿಸರ್ಗಾನುಕೂಲ ಅಭಿವೃದ್ದಿಯನ್ನು ಸಾಧಿಸುವ ಸಂಸ್ಕೃತಿ ಯನ್ನು ಪಡೆದ ಭಾರತದಲ್ಲಿ ಇಂತಹ ವಿಚಾರ ಮತ್ತು ಕೃತಿಯಾಗುವುದು ಆವಶ್ಯಕವಾಗಿದೆ. ಧರ್ಮಾಚರಣೆಯನ್ನು ಮಾಡಿಯೇ ಮನುಷ್ಯನು ಆನಂದದಿಂದ ಇರಬಹುದು ಎಂದು ಹಿಂದೂ ಧರ್ಮವು ಹೇಳುತ್ತದೆ. ಈಗಲಾದರೂ ಭಾರತ ಸರಕಾರ ಈ ರೀತಿ ವಿಚಾರ ಮಾಡಿ `ಸಂಸ್ಕೃತಿ ಪಾಲನೆ ‘ ಅಂದರೆ `ನಾಗರಿಕರ ಆನಂದ’ ಈ ಮಾನದಂಡಕ್ಕೆ ಮಹತ್ವವನ್ನು ಕೊಡುವರೇ ? – ಸಂಪಾದಕರು)
೩. ಶಾಶ್ವತ ವಿಕಾಸದ ಹೆಸರಿನಲ್ಲಿ ಭಾರತದಲ್ಲಿನ ಗೊಂದಲ !
ಇದನ್ನು ಓದಿದ ಮೇಲೆ ನಮ್ಮ ದೇಶದಲ್ಲಿ `ಸಸ್ಟೇನೆಬಲ್ ಡೆªಲಪ್‌ಮೆಂಟ್’ನ ಹೆಸರಿನಲ್ಲಿ ಯಾವ ಗೊಂದಲ ನಡೆದಿದೆ, ಎಂಬುದು ಗಮನಕ್ಕೆಬರುತ್ತದೆ. ಚಾರಧಾಮ (ಬದರಿನಾಥ, ಪುರಿ, ರಾಮೇಶ್ವರಮ್, ದ್ವಾರಕಾ) ಯಾತ್ರೆಗಾಗಿ ಕಾಶ್ಮೀರ ದಿಂದ ಕನ್ಯಾಕುಮಾರಿಯವರೆಗೆ ದೊಡ್ಡ ಪ್ರಮಾಣದಲ್ಲಿ ಪ್ರವಾಸೋ ದ್ಯಮಕ್ಕೆ ಪ್ರೋತ್ಸಾಹ ನೀಡೋಣ ಎಂದು ಹೇಳಿ ಚತುಷ್ಪಥ ರಸ್ತೆಗಳ (೪ ಲೇನ್) ಮಾರ್ಗವನ್ನು ನಿರ್ಮಿಸಲಾಯಿತು. ಇದಕ್ಕಾಗಿ ಲಕ್ಷಗಟ್ಟಲೇ ವೃಕ್ಷಗಳನ್ನು ಕಡಿಯಲಾಯಿತು. ಎಷ್ಟೋ ಗುಡ್ಡಗಳನ್ನು ಒಡೆಯಲಾಯಿತು ಮತ್ತು ನದಿ, ಕೆರೆ, ತಗ್ಗುಗಳನ್ನು ಮುಚ್ಚಲಾಯಿತು. ಪ್ರವಾಸೋದ್ಯಮದ ಹೆಸರಿನಲ್ಲಿರಸ್ತೆಗಳನ್ನು ಅಗಲೀಕರಣಗೊಳಿಸುವಲ್ಲಿ ನಾವೆಷ್ಟು ತಲೆಕೆಡಿಸಿಕೊಂಡೆವು ಎಂದರೆ ಮುಂಬಯಿ-ಗೋವಾ ಮಹಾಮಾರ್ಗದ ಅಕ್ಕಪಕ್ಕದಲ್ಲಿರುವ ದಟ್ಟ ನೆರಳನ್ನು ಕೊಡುವ ದಟ್ಟ ಮರಗಳನ್ನು ಒಂದು ವರ್ಷದ ಕಾಲಾವಧಿಯಲ್ಲಿ ನೆಲಸಮಗೊಳಿಸಿದೆವು. ಪುನಃ ರಸ್ತೆಗಳ ಅಗಲೀಕರಣಕ್ಕಾಗಿ ಕೊಂಕಣದಲ್ಲಿ ಅಂದರೆ ಮಹಾರಾಷ್ಟ್ರ, ಕರ್ನಾಟಕ, ಕೇರಳ ಈ ರಾಜ್ಯಗಳಲ್ಲಿನ, ಅಂದರೆ ಪಶ್ಚಿಮ ಘಟ್ಟದಲ್ಲಿನ ಎಷ್ಟೋ ಗುಡ್ಡಗಳನ್ನು ಒಡೆದೆವು. ಇವುಗಳಲ್ಲಿ ವಾಸಿಸುವ ಲಕ್ಷಾಂತರ ಜೀವಗಳಿಗೆ ತಮ್ಮ ವಾಸಸ್ಥಳಗಳನ್ನು ಕಳೆದುಕೊಳ್ಳಬೇಕಾಯಿತು. ಇದರ ಪರಿಣಾಮದಿಂದ ಸಿಂಧುದುರ್ಗದಲ್ಲಿ ಆನೆಗಳು ಪ್ರವೇಶಿಸ ತೊಡಗಿದವು, ಕಾಝಿರಂಗದಲ್ಲಿನ ಆನೆಗಳು ಅಲ್ಲಿ ವೇಗವಾಗಿ ಚಲಿಸುವ ಸರಕುಸಾಗಾಟ ರೈಲುಗಳು ಮತ್ತು ವೇಗವಾಗಿ ಹೋಗುವ ವಾಹನಗಳಿಗೆ ಅಪ್ಪಳಿಸಿ ಪ್ರಾಣವನ್ನು ಕಳೆದುಕೊಂಡವು. `ಟ್ರಾಫಿಕ್‌ನ (ಸಾರಿಗೆಯ) ಸಮಸ್ಯೆಯನ್ನು ಬಿಡಿಸಲು ಮುಂಬಯಿಯಲ್ಲಿನ ಆರೆ ಎಂಬ ಅರಣ್ಯವನ್ನು ಕಡಿದುಹಾಕಲಾಯಿತು.
೪. ಭಾರತಕ್ಕೆ ನಿಜವಾದ ವಿಕಾಸವನ್ನು ಸಾಧಿಸಬೇಕಾಗಿದ್ದಲ್ಲಿ, `ಮನಸ್ಸಿನಿಂದ ಶ್ರೀಮಂತ’ ಆಗುವುದು ಆವಶ್ಯಕ !
ಈ ರೀತಿ ಎಷ್ಟೋ ಹುಚ್ಚುತನವನ್ನು ನಾವು ಮಾಡಿದ್ದೇವೆ, ಮಾಡುತ್ತಿದ್ದೇವೆ ಮತ್ತು ಮುಂದೆಯೂ ಮಾಡುವವರಿದ್ದೇವೆ ಮತ್ತು ನಮ್ಮ ಪರ್ವತಗಳು ನಾಶವಾಗುತ್ತಲೇ ಇರುವವು. ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ರಸ್ತೆಗಳ ಆವಶ್ಯಕತೆ ಇಲ್ಲವೇ ಇಲ್ಲ. ಇದಕ್ಕೆ ವಿರುದ್ಧ ಇರುವ ರಸ್ತೆಗಳನ್ನು ಕಡಿಮೆ ಮಾಡಿ, ಅರಣ್ಯ, ಹಸಿರು ಸೃಷ್ಟಿಯನ್ನು ಹೆಚ್ಚಿಸಿ ಪ್ರವಾಸೋದ್ಯಮವನ್ನು ಕಡಿಮೆ ಮಾಡುವುದು ಆವಶ್ಯಕವಾಗಿದೆ. ನಿರಾಡಂಬರ ಜೀವನವನ್ನು ನಡೆಸಿ ಭೂತಾನದಂತೆ `ಮನಸ್ಸಿನಿಂದ ಶ್ರೀಮಂತ’ ಆಗುವುದು ಆವಶ್ಯಕವಾಗಿದೆ. ನಮ್ಮ `ಜಿಡಿಪಿ’ಯ ಸಂಕಲ್ಪನೆಯನ್ನು ತ್ಯಜಿಸಿ ಎಲ್ಲರ ವಿಕಾಸ ಮತ್ತು ಎಲ್ಲರ ಬಗ್ಗೆ ವಿಚಾರ ಮಾಡುವ `ಗ್ರಾಸ್ ನ್ಯಾಶನಲ್ ಹ್ಯಾಪಿನೆಸ್ ( ರಾಷ್ಟ್ರೀಯ ಒಟ್ಟು ಆನಂದ) ಈ ಸಂಕಲ್ಪನೆಯನ್ನು ನಾವೂ ಸಹ ಅಳವಡಿಸಿಕೊಳ್ಳಬೇಕು. ಆದುದರಿಂದ ಕೊಂಕಣದಂತಹ ನಿಸರ್ಗಸಮೃದ್ಧ ಭಾಗದಲ್ಲಿ `ರಿಫೈನರಿ’ (ಎಣ್ಣೆ, ಚಿನ್ನ, ಸಕ್ಕರೆ ಇತ್ಯಾದಿಗಳ ಶುದ್ಧಿಕರಣದ ಕಾರಖಾನೆಗಳು) ಗಳನ್ನು ನಿರ್ಮಿಸಿ, ಡಹಾಣುದಂತಹ ಮೀನುಗಳ ಬೀಜನಿರ್ಮಿತಿ ಕೇಂದ್ರವನ್ನು ನಾಶಮಾಡಿ ಈ ಕೃತಿಗಳನ್ನು `ಗ್ರೀನ್ ರಿಫೈನರಿ’ (ಪರಿಸರ ಪೂರಕ ಶುದ್ಧಿಕರಣ ಕಾರಖಾನೆಗಳು), `ಗ್ರೀನ್ ಪೋರ್ಟ್’ (ಪರಿಸರಪೂರಕ ಬಂದರುಗಳು) ಎಂದು ಸಂಬೋಧಿಸುವುದು ಶಾಶ್ವತವಾಗಿ ನಿಲ್ಲುವುದು. ಇದರಿಂದ ಈ ದೇಶದಲ್ಲಿನ ಬಡಬಗ್ಗರ ನಿಜವಾದ ವಿಕಾಸವಾಗುವುದು.
– ಪ್ರಾ. ಭೂಷಣ ಭೋಯಿರ್, ಸಹಾಯಕ ಉಪನ್ಯಾಸಕರು, ಪ್ರಾಣಿಶಾಸ್ತç ವಿಭಾಗ, ಸೋನೊಪಂತ ದಾಂಡೇಕರ ಮಹಾವಿದ್ಯಾಲಯ, ಪಾಲಘರ.