ಗಿಡಗಳಿಗೆ ಅತೀ ನೀರು ಹಾಕದೇ ಆವಶ್ಯಕತೆ ಇರುವಷ್ಟೇ ಹಾಕಿರಿ !

ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನ

 

ಸೌ. ರಾಘವಿ ಕೊನೆಕರ

‘ಕೇವಲ ನೀರು ಕೊಡುವ ಸಮಯವಾಯಿತೆಂದು ಗಿಡಗಳಿಗೆ ಪ್ರತಿದಿನ ನೀರು ಹಾಕುವುದಕ್ಕಿಂತ ಗಿಡಗಳ ಮತ್ತು ಮಣ್ಣಿನ ಪರೀಕ್ಷಣೆಯನ್ನು ಮಾಡಿ ಅವಶ್ಯಕತೆಯಿದ್ದರೆ ಮಾತ್ರ ನೀರು ಹಾಕಬೇಕು. ಕುಂಡಗಳಲ್ಲಿನ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಅದನ್ನು ಉಂಡೆಯ ಹಾಗೆ ಕಟ್ಟಲು ಬರುತ್ತದೆಯೇ ? ಎಂಬುದನ್ನು ನೋಡಿ. ಕಟ್ಟಲು ಬಂದರೆ, ‘ಮಣ್ಣಿನಲ್ಲಿ ಸಾಕಷ್ಟು ಆರ್ದ್ರತೆ (ಹಸಿ) ಇದೆ ನೀರಿನ ಅವಶ್ಯಕತೆ ಇಲ್ಲ’, ಎಂದು ತಿಳಿದುಕೊಳ್ಳಬೇಕು. (ಒಂದು ಸಲ ಅಂದಾಜು ಬಂದ ಮೇಲೆ ಪುನಃ ಪುನಃ ಮಣ್ಣು ತೆಗೆದು ನೊಡುವ ಆವಶ್ಯಕತೆ ಇರುವುದಿಲ್ಲ.) ಸಸಿಗಳ ತುದಿಗಳು (ಎಲೆಗಳು) ಬಾಡಿದ ಹಾಗೆ ಕಾಣಿಸುತ್ತಿದ್ದರೆ, ನೀರು ಕೊಡುವ ಅವಶ್ಯಕತೆಯಿದೆ ಎಂದು ತಿಳಿದುಕೊಳ್ಳಬೇಕು ಮತ್ತು ನೀರು ಹಾಕಬೇಕು. ಗಿಡಗಳಿಗೆ ಅತೀಯಾಗಿ ನೀರು ಹಾಕಬೇಡಿರಿ !

– ಸೌ. ರಾಘವಿ ಮಯೂರೇಶ ಕೊನೆಕರ, ಫೋಂಡಾ, ಗೋವಾ.